ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿರಿಯಾ’ ಇದು ನೈರುತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ.ಪಶ್ಚಿಮ ಏಷ್ಯಾದ ಸಿರಿಯಾ ಕಳೆದ ಏಳು ವರ್ಷಗಳಿಂದ ಆಂತರಿಕ ಕ್ಷೋಭೆಯಿಂದ ತತ್ತರಿಸುತ್ತಿದೆ. ಕಳೆದ 22 ತಿಂಗಳಿನಿಂದ ನಿರಂತರವಾಗಿ ಸಿರಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಿಂದಾಗಿ 60 ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಬಲಿಯಾಗಿದ್ದಾರೆ.

ಕಳೆದ 18 ವರ್ಷಗಳಿಂದ ಬಷರ್ ಅಲ್ ಅಸ್ಸಾದ್ ಅವರು ಸಿರಿಯಾ ಅಧ್ಯಕ್ಷರಾಗಿದ್ದಾರೆ. ಇವರು ಅಲ್ಪ ಸಂಖ್ಯಾತರಾಗಿರುವ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ಶಿಯಾ ಪ್ರತಿನಿಧಿಯೊಬ್ಬರು ತಮ್ಮ ದೇಶ ಆಳುವುದನ್ನು ಸಹಿಸದ ಬಹುಸಂಖ್ಯಾತ ಸುನ್ನಿ ಸಮುದಾಯಗಳು, ಸರ್ಕಾರದ ವಿರುದ್ಧವೇ ಸಮರ ಸಾರಿವೆ..

ನೆರೆ ದೇಶಗಳ ಬೆಂಬಲದಿಂದಾಗಿ ಎರಡೂ ಬಣಗಳ ನಡುವೆ ರಕ್ತದ ಒಕಳಿಯೇ ಹರಿಯುತ್ತದೆ.ಅಕ್ಷರಶಃ ಸಿರಿಯಾ ರಕ್ತಪಾತ ದೇಶವಾಗಿದೆ. 22 ತಿಂಗಳಲ್ಲಿ ಸರಕಾರಿ ಪಡೆಗಳು ಮತ್ತು ಬಂಡುಕೋರರ ಸೆಣಸಾಟಕ್ಕೆ ಅಮಾಯಕ ಪ್ರಜೆಗಳು ಮತ್ತು ಮಕ್ಕಳ ಸಾವಿನ ಸಂಖ್ಯೆ 60 ಸಾವಿರ ದಾಟಿದ್ದು ಸುಮಾರು 4 ಲಕ್ಷಕ್ಕಿಂತ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ.

ಪ್ರಾಣದ ಭಯದಿಂದಾಗಿ ಸಾವಿರಾರು ಮಂದಿ ದೇಶ ಬಿಟ್ಟು ಗಡಿ ಭಾಗದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.ಸುಮಾರು ಎರಡುವರೆ ಲಕ್ಷಕ್ಕಿಂತ ಹೆಚ್ಚು ಜನ ದೇಶ ಬಿಟ್ಟು ಈಗಾಗಲೇ ಪಕ್ಕದ ದೇಶಗಳಾದ ಟರ್ಕಿ, ಲೆಬೆನಾನ್, ಜೋರ್ಡಾನ್, ಇರಾನ್‌ದೇಶಗಳಿಗೆ ನುಗ್ಗಿದ್ದಾರೆ.
ಅಧ್ಯಕ್ಷ ಬಷರ್ ಅಲ್
ಸಿರಿಯಾ ಬಂಡುಕೋರರು

ಸಿರಿಯಾದ ಅಧ್ಯಕ್ಷ ‘ಬಷರ್ ಅಲ್ ಅಸ್ಸಾದ್’ ಹಾಗೂ ಇವರ ಆಡಳಿತವನ್ನು ವಿರೋಧಿಸುವ ಕ್ರಾಂತಿಕಾರಿ ಸಂಘಟನೆಗಳ ನಡುವೆ ಭೀಕರ ಕದನ ನಡೆಯುತ್ತಿದೆ. ಇವರಿಬ್ಬರ ಹೊಡೆದಾಟಕ್ಕೆ ಅಮಾಯಕ ಪ್ರಜೆಗಳು ಬಲಿಯಾಗುತ್ತಿದ್ದಾರೆ. ಹೀಗೆ ಪ್ರಾಬಲ್ಯ ದೇಶಗಳ ಬೆಂಬಲದಿಂದಾಗಿ ಸಿರಿಯಾ ದೇಶವು ರಕ್ತಸಿಕ್ತಗೊಂಡಿದ್ದು ಬಾಂಬ್, ರಾಕೆಟ್ ದಾಳಿಯಿಂದ ದೊಡ್ಡ ದೊಡ್ಡ ನಗರಗಳು ಭೂಕಂಪ ಪೀಡಿತ ಪ್ರದೇಶಗಳಂತೆ ಕಾಣುತ್ತಿವೆ.

ಇದೆರೆಲ್ಲದರ ಪರಿಣಾಮ ಮಕ್ಕಳು ಸೇರಿದಂತೆ ನೂರಾರು ಮಂದಿ ಪ್ರಾಣ ತೆತ್ತಿದ್ದಾರೆ.ಸಿರಿಯಾದಲ್ಲಿನ ಮಕ್ಕಳ ಕಣ್ಣೀರು ಆಕ್ರಂದನ ಕೆಳುವವರಿಲ್ಲವಂತಾಗಿದೆ. ದಾಳಿಯಲ್ಲಿ ಗಾಯಗೊಂಡ ಪುಟ್ಟ ಪುಟ್ಟ ಕಂದಮ್ಮಗಳ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಸುದ್ದಿ ಮಾಡಿದೆ.
ಕದನ ವಿರಾಮ ಘೋಷಿಸಿ, ಅಧಿಕಾರವನ್ನು ಬಿಟ್ಟುಕೊಟ್ಟು, ದೇಶದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಎಂಬ ವಿಶ್ವ ಸಂಸ್ಥೆಯ ಕೋರಿಕೆಗೆ ಅಧ್ಯಕ್ಷ ‘ಬಷರ್ ಅಲ್ ಅಸ್ಸಾದ್’ ಒಪ್ಪಿಗೆ ಸೂಚಿಸಿಲ್ಲ.ತಮ್ಮ ಅಧಿಕಾರಕ್ಕಾಗಿ ಸಾವಿರಾರು ಜನರ ಮಾರಣ ಹೋಮ ನಡೆಯುತ್ತಿದ್ದರೂ ಈ ಅಧ್ಯಕ್ಷ ತಮ್ಮ ಅಧಿಕಾರದಿಂದ ಕೆಳಗಿಳಿಯಲು ಒಪ್ಪುತ್ತಿಲ್ಲ.

ಅತ್ತ ಕಡೆ ಸಿರಿಯಾ ಬಂಡುಕೋರರು ‘ಬಷರ್ ಅಲ್ ಅಸ್ಸಾದ್ ಅಧಿಕಾರದಿಂದ ಕೆಳಗಿಳಿಯುವವರೆಗೂ ಯುದ್ದ ನಿಲ್ಲಿಸುವ ಮಾತೇ ಇಲ್ಲ ಎಂದು ವಿಶ್ವಸಂಸ್ತೆಯ ಕೋರಿಕೆಯನ್ನು ತಿರಸ್ಕರಿಸಿದ್ದಾರೆ.ಇದೆರೆಲ್ಲದರ ನಡುವೆ ಅಲ್ಲಿನ ರಕ್ತಪಾತದಿಂದಾಗಿ ನರುಳುತ್ತಿರುವವರು ಸಿರಿಯಾದ ಜನ ಮತ್ತು ಸಿರಿಯಾ ದೇಶದ ಮುಂದಿನ ಪ್ರಜೆಗಲಾಗಬೇಕಾಗಿರುವ ಮುಗ್ದ ಕಂದಮ್ಮಗಳು ಮಾತ್ರ.
ನಮ್ಮ ಮನೆಗಳು ಬಾಂಬ್ ದಾಳಿಯಿಂದ ಚಿಂದಿಯಾಗಿವೆ, ಆಟವಿಲ್ಲ, ಊಟವಿಲ್ಲ, ಪಾಠವಿಲ್ಲ. ಕೊನೆಗೂ ನಿದ್ರೆಯೂ ಇಲ್ಲ, ಎಲ್ಲವನ್ನೂ ಕಂಡು ಕಾಣದಂತಿರುವ ದೇಶಗಳೇ ಎಚ್ಚೆತ್ತುಕೊಳ್ಳಿ ಇದು ಸಿರಿಯಾದ ಹುಡುಗನೊಬ್ಬ ಫೇಸ್‌ಬುಕ್‌ನಲ್ಲಿ ಇಡೀ ಪ್ರಪಂಚಕ್ಕೆ ಕೂಗಿ ಹೇಳಿರುವ ನುಡಿ.

ಮುಗ್ದ ಕಂದಮ್ಮಗಳ ಮಾರಣ ಹೋಮವನ್ನು ಜಗತ್ತಿನ ದೇಶಗಳು ನೋಡಿಯೂ ನೋಡದಂತೆ ಇವೆ.ಅಲ್ಲಿನ ಮುಗ್ದ ರಕ್ತಸಿಕ್ತ ಮಕ್ಕಳ ಚಿತ್ರಗಳನ್ನು ನೋಡಿದ್ರೆ ಕಲ್ಲು ಹೃದಯ ಇದ್ರೂ ಸಹ ಕಣ್ಣೀರು ಬರಿಸುವಂತಿದೆ.ಅಮೇರಿಕಾ ರಷ್ಯಾ ಸೇರಿದಂತೆ ಕೆಲವು ದೇಶಗಳು, ಏಕೆ ಹೀಗೆ ಮಕ್ಕಳ ಮತ್ತು ಅಲ್ಲಿನ ಜನರ ಜೀವನದಲ್ಲಿ ಆಟವಾಡುತ್ತಿವೆ ಗೊತ್ತಿಲ್ಲ.ಒಂದಂತೂ ಸತ್ಯ ಅಧಿಕಾರದ ಮೋಹದಿಂದ ಜಗತ್ತಿನ ಜನ ಏನೆಲ್ಲಾ ಮಾಡ್ತಾರೆ ಎನ್ನುವುದಕ್ಕೆ ಇದೊಂದು ಕಣ್ಣಿಗೆ ಕಾಣುವ ನಿದರ್ಶನ.










ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವು ಮಹಿಳೆಯರಿಗೆ ಹೆಚ್ಚು ಕಾಲ ಬೋಳಿಸದ ಗಡ್ಡದ ಪುರುಷರೇ ಹೆಚ್ಚು ಇಷ್ಟ. ಈ ಗಡ್ಡ ಚುಚ್ಚುತ್ತದೆ ಎಂದು ಉಳಿದ ಮಹಿಳೆಯರು ದೂರು ಸರಿದರು ಕೆಲವರಿಗೆ ಮಾತ್ರ ಈ ಚುಚ್ಚುವಿಕೆಯೇ ಹೆಚ್ಚು ಇಷ್ಟವಾಗುತ್ತದಂತೆ! ಈಗ ಬಹುತೇಕ ಪುರುಷರು ರಗಡ್ ಲುಕ್ ಎಂದು ಗಡ್ಡ ಮತ್ತು ಮೀಸೆಯನ್ನು ಉರಿಗೊಳಿಸುವುದನ್ನು ನೀವು ನೋಡಿರಬಹುದು.
ನಟ ರಾಕಿಂಗ್ ಸ್ಟಾರ್ ಯಶ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಯಶ್ ಅವರು ಹೊಂದಿರುವ ಕೊಠಡಿಯನ್ನು ಕೂಡ ಪರಿಶೀಲಿಸಿದ್ದಾರೆ. ಯಶ್ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದು, ಐಟಿ ದಾಳಿಯ ಮಾಹಿತಿ ತಿಳಿದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಯಶ್, ಅಲ್ಲಿಂದ ನೇರವಾಗಿ ಹೋಟೆಲ್ ಗೆ ತೆರಳಿದ್ದಾರೆ. ಯಶ್ ಅವರು…
ಟ್ಯಾಟೂ ಇತ್ತೀಚಿನ ದಿನಗಳಲ್ಲಿ ಹಾಕಿಸಿಕೊಳ್ಳುವುದು ಸಾಮಾನ್ಯಾವಾಗಿದೆ. ಅದರಲ್ಲೂ ಕೆಲ ವರ್ಷಗಳ ಹಿಂದೆ ಫ್ಯಾಷನ್ ಲೋಕದಲ್ಲಿ ಟ್ಯಾಟೂ ಹೊಸ ಟ್ರೆಂಡ್ ನ್ನೆ ಹುಟ್ಟುಹಾಕಿತ್ತು. ಟ್ಯಾಟೂವಿನ ಚಿತ್ರಗಳಿಗೆ ಜನ ಮಾರುಹೋಗಿದ್ದರು. ಇನ್ನೂ ಯುವ ಪೀಳೀಗೆಯಂತೂ ಟ್ಯಾಟೂಗಳ ವಿನ್ಯಾಸಕ್ಕೆ ಫುಲ್ ಫಿದಾ ಆಗಿದ್ದರು. ಅಲ್ಲದೆ ಯಾರ ಕೈ ನೋಡಿದರೂ ಕೂಡ ಟ್ಯಾಟೂ ಇರುತ್ತಿತ್ತು. ಇಂತಹ ಟ್ಯಾಟೂ ಪ್ರಿಯರಿಗೆ ಇದೀಗ ಬಿಗ್ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನಪ್ಪಾ ಅಂತೀರಾ ? ಮೊದಲು ಸೆಲೆಬ್ರೆಟಿಗಳಿಂದ ಶುರುವಾದ ಟ್ಯಾಟೂ ಕ್ರೇಜ್ ಬಳಿಕ ಜನ ಸಾಮಾನ್ಯರಿಗೂ…
ಕನ್ನಡ ಸಿನಿಮಾ ತಾರೆ ಮತ್ತು ಕಾಂಗ್ರೆಸ್ ಯುವ ನಾಯಕಿ ರಮ್ಯಾರವರು ತಮ್ಮ ಟ್ವಿಟ್ಟರ್’ನ ಟ್ವಿಟ್’ಗಳ ಮೂಲಕ ಪೇಚಿಗೆ ಸಿಲುಕುವುದು ಸಾಮಾನ್ಯ.
ಇಂದು ಭಾನುವಾರ, 18/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಕಾಶ್ಮೀರಿ ದ೦ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ೦ತ್ಯದ ಮೇಲೆ ನಿತ೦ತ್ರಣವನ್ನು ಹೊ೦ದಲು ಹವಣಿಸುತ್ತಿದೆ.ಅ೦ತರಾಜ್ಯ ಸಮಸ್ಯೆಗಳ೦ತೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರದ ಬಿಕ್ಕಟ್ಟು 1947 ರಿಂದ ಉದ್ಬವಿಸಿದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ೦ತೆಯು,ಕೆಲವು ಕಾಶ್ಮೀರಿಗಳೂ ತಾವೇ ಸ್ವತ೦ತ್ರರಾಗಲು ಹವಣೀಸುತ್ತಿದ್ದಾರೆ. ಆದ ಕಾರಣ ಭಾರತ ಸರ್ಕಾರ ಕಾಶ್ಮೀರದ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿಯೇ ಹಲವು ಕಾನೂನು ನಿಯಮಗಳನ್ನು ಜಾರಿಗೆ ತ೦ದಿದೆ. ಭಾರತದ ರಾಜ್ಯವಾಗಿ ಕಾಶ್ಮೀರ ಗುರುತಿಸಿಕೊಂಡಿದ್ದರೂ, ಈ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನವಿದೆ. ಭಾರತದ ಬೇರೆ ರಾಜ್ಯಗಳಿರುವ ಕಾನೂನು ಈ…