ಸಿನಿಮಾ

ದೊಡ್ಮನೆ ಅಮ್ಮ “ಪಾರ್ವತಮ್ಮ ರಾಜ್ ಕುಮಾರ್” ವಿಧಿವಶ

794

ವರನಟ ಡಾ. ರಾಜ್ ಕುಮಾರ್ ಅವರ ಪತ್ನಿ, ಕನ್ನಡ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ (77)ಅವರು ಬುಧವಾರ ಬೆಳಗ್ಗೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಬುಧವಾರ(ಮೇ 31) ಬೆಳಗ್ಗೆ 4.40ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಎಂಎಸ್ ರಾಮಯ್ಯ ಡಾ. ಸಂಜಯ್ ಕುಲಕರ್ಣಿ ಪ್ರಕಟಿಸಿದ್ದಾರೆ. ಕಳೆದ 16 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪಾರ್ವತಮ್ಮ ಅವರು ಕನ್ನಡ ಚಲನಚಿತ್ರರಂಗದ ವರನಟ ಡಾ. ರಾಜ್ ಕುಮಾರ್ ಅವರ ಪತ್ನಿಯಾಗಿ, ಚಿತ್ರರಂಗದ ಶಕ್ತಿಯಾಗಿ ಬೆಳೆದವರು. ಪಾರ್ವತಮ್ಮ ಅವರು ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್, ಇಬ್ಬರು ಪುತ್ರಿಯರಾದ ಪೂರ್ಣಿಮಾ, ಲಕ್ಷ್ಮಿ, ಸೋದರರಾದ ಎಸ್ಎ ಚಿನ್ನೇಗೌಡ, ಗೋವಿಂದರಾಜ್ ಹಾಗೂ ಶ್ರೀನಿವಾಸ್ ಸೇರಿದಂತೆ ಮೊಮ್ಮಕ್ಕಳು, ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ಪೂರ್ಣಿಮಾ ಎಂಟರ್ ಪ್ರೈಸರ್ ಮೂಲಕ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಲ್ಲದೆ, ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ರಕ್ಷಿತಾ, ರಮ್ಯಾ ಅವರನ್ನು ಚಿತ್ರರಂಗಕ್ಕೆ ಕರೆ ತಂದವರು.

ಸರಿ ಸುಮಾರು 80ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿದ್ದರು. ಡಾ. ರಾಜ್ ಅಭಿನಯದ ಹಾಲು ಜೇನು, ಕವಿರತ್ನ ಕಾಳಿದಾಸ, ಜೀವನ ಚೈತ್ರ , ಶಿವರಾಜ್ ಅಭಿನಯದ ಆನಂದ್, ಓಂ, ಜನುಮದ ಜೋಡಿ, ರಾಘವೇಂದ್ರ ರಾಜ್ ಕುಮಾರ್ ಅಭಿನಯದ ನಂಜುಂಡಿ ಕಲ್ಯಾಣ, ಪುನೀತ್ ಅಭಿನಯದ ಅಪ್ಪು, ಅಭಿ, ಹುಡುಗರು ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿದವರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಸೋಮವಾರ,ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(10 ಡಿಸೆಂಬರ್, 2018) ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ಕೆಲವರಿಗೆ ಕುಟುಂಬದಲ್ಲಿಒಂದು ಹೊಸ ಆಗಮನ ಸಂಭ್ರಮಾಚರಣೆ…

  • ಸ್ಪೂರ್ತಿ

    ಈ ಪುಟ್ಟ ಬಾಲಕ ಮನೆಯಲ್ಲೇ ಕೂತು ಸಂಪಾದಿಸುತ್ತಾನೆ ಲಕ್ಷ ಲಕ್ಷ.!ಅಷ್ಟಕ್ಕೂ ಇವನು ಮಾಡುವ ಕೆಲಸ ಏನ್ ಗೊತ್ತಾ.?ಇದನ್ನು ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ತಮ್ಮ ಕನಸು ಈಡೇರಿಸಿಕೊಳ್ಳಲು  ಇಡೀ ಜೀವನವನ್ನೇ ವ್ಯಯಿಸಬೇಕಾಗುತ್ತದೆ. ಮತ್ತು ಕೆಲವರಿಗೆ ತಮ್ಮ ಟ್ಯಾಲೆಂಟ್‍ನಲ್ಲಿತಮ್ಮೆಲ್ಲ ಕನಸ್ಸು ಬಹುಬೇಗನೆ ಈಡೇರಿ ಬಿಡುತ್ತದೆ. ಯಾವುದೇ ವ್ಯಕ್ತಿಯಲ್ಲಿ ಟ್ಯಾಲೆಂಟ್ ಇದ್ದರೆ ಅಂತಹವರನ್ನು ಯಾರಿಂದಲೂ ತಡೆಹಿಡಿಯಲು ಸಾಧ್ಯವಿಲ್ಲ. ಆರುವರ್ಷದ ಈ ಮಗು ಕೂಡಾ ಇದ್ದಾನೆ. ವಯಸ್ಸಿನಲ್ಲಿ ಕೇವಲ ಆರುವರ್ಷ ಮಾತ್ರ ಆತನಿಗೆ ಆಗಿದೆ.  ಅಷ್ಟರಲ್ಲಿಯೇ ಅವನು ಬಹಳಷ್ಟು ಸಂಪಾದಿಸಿದ್ದಾನೆ. ವೀಡಿಯೊ ಮಾಡಿ ಸ್ಟಾರ್ ಆದ:- ಈ ಮಗುವಿನ ಹೆಸರು ನಿಹಾಲ್ ರಾಜ್. ಕೊಚ್ಚಿಯಲ್ಲಿ ಅವನ ಮನೆಯಿದೆ. ನಿಹಾಲ್ …

  • ಸುದ್ದಿ

    ಕಣ್ಣಲ್ಲಿ ನೀರು ತುಂಬುತ್ತೆ ಆ ಪುಟ್ಟ ಬಾಲಕನ ಮನಕಲಕುವ ಕಥೆ…..!

    ಅನಾಥಶ್ರಮಗಳಲ್ಲಿ ಆಗುತ್ತಿರುವ ಅನಾಚಾರವನ್ನು ಬಯಲಿಗೆಳೆದ ಹಾಗೂ ಭಾರಿ ಹೋರಾಟದ ಬಳಿಕ ಡೌನ್ ಸಿಂಡ್ರೋಮ್ ಇರುವ ಬಾಲಕನನ್ನು ದತ್ತು ಪಡೆದ ಯುವಕನ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು, ಹ್ಯೂಮನ್ಸ್ ಆಫ್ ಮುಂಬೈ 26 ವರ್ಷದ ಆದಿತ್ಯ ತಿವಾರಿ‌ ಅವರ ಬಗ್ಗೆ ಪೋಸ್ಟ್ ಮಾಡಿದೆ. 2016ರಲ್ಲಿ ತಿವಾರಿ‌ 26ನೇ ವಯಸ್ಸಿಗೆ ಮಗುವನ್ನು ದತ್ತು ಪಡೆಯುವ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದಲ್ಲಿ ದತ್ತು ಪಡೆದ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿದರು. ಅಷ್ಟಕ್ಕೂ ಆದಿತ್ಯ ದತ್ತು ಪಡೆದ ಬಾಲಕ…

  • ಜ್ಯೋತಿಷ್ಯ

    ಬರೋಬ್ಬರಿ 75 ವರ್ಷಗಳ ನಂತರ ಭೇಟಿಯಾದ ಪ್ರೇಮಿಗಳು….!

    75 ವರ್ಷಗಳ ಬಳಿಕ 97 ವಯಸ್ಸಿನ ವೃದ್ಧ 92 ವರ್ಷದ ತನ್ನ ಪ್ರೇಯಸಿಯನ್ನು ಫ್ರಾನ್ಸ್ ನಲ್ಲಿ ಭೇಟಿ ಮಾಡಿದ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೇಟಿ ರಾಬಿನ್ಸ್ ಹಾಗೂ ಜೇನಿನ್ ಪಿಯರ್‍ಸನ್ 75 ವರ್ಷಗಳ ಬಳಿಕ ಭೇಟಿ ಆಗಿದ್ದಾರೆ. 75 ವರ್ಷದ ಬಳಿಕ ರಾಬಿನ್ಸ್ ಡಿ-ಡೇ ಲ್ಯಾಂಡಿಂಗ್ಸ್‍ನ 75ನೇ ವಾರ್ಷಿಕೋತ್ಸವ ಆಚರಿಸಲು ಫ್ರಾನ್ಸ್ ಗೆ ಬಂದಿದ್ದರು. ಈ ವೇಳೆ ರಾಬಿನ್ಸ್, ಜೇನಿನ್‍ರನ್ನು ಭೇಟಿ ಆಗಿದ್ದಾರೆ. ಪ್ರೀತಿ ಶುರುವಾಗಿದ್ದು ಹೇಗೆ? 1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ…

  • ಸುದ್ದಿ

    ಡೈನೋಸಾರ್ ಯುಗದ ತಿಮಿಂಗಿಲ ಪತ್ತೆ..!ಈ ವಿಚಿತ್ರ ಜೀವಿಯ ಬಗ್ಗೆ, ವಿಶ್ವದಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ…

    ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.

  • ಸುದ್ದಿ

    9ನೇ ತರಗತಿಗೆ ನೇರ ಪ್ರವೇಶ ಪಡೆದ 8 ವರ್ಷದ ಬಾಲಕ : ಕಾರಣವೇನು ಗೊತ್ತಾ ?

    ಅಗಾಧ ಬುದ್ಧಿ ಮತ್ತೆಯ ಎಂಟು ವರ್ಷದ ಬಾಲಕ ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣನಿಗೆ 9ನೇ ತರಗತಿಗೆ ನೇರವಾಗಿ ದಾಖಲಾಗಲು ಉತ್ತರಪ್ರದೇಶ ಶಿಕ್ಷಣ ಮಂಡಳಿ ವಿಶೇಷ ಅನುಮತಿ ನೀಡಿದೆ. 2021ರಲ್ಲಿ ತನ್ನ 10ನೇ ವಯಸ್ಸಿನಲ್ಲಿ ಲಕ್ನೊದ ನಖಾಸ್ ಪ್ರದೇಶದಲ್ಲಿರುವ ಎಂ.ಡಿ. ಶುಕ್ಲಾ ಇಂಟರ್ ಕಾಲೇಜಿನಿಂದ 10ನೇ ತರಗತಿ ಪರೀಕ್ಷೆ ಎದುರಿಸಲು ಆತ ಸಿದ್ಧತೆ ನಡೆಸುತ್ತಿದ್ದಾನೆ.ನಿಯಮದ ಪ್ರಕಾರ ಉತ್ತರಪ್ರದೇಶ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಕನಿಷ್ಠ 14 ವರ್ಷ ಆಗಿರಬೇಕು. ಆದರೆ, ರಾಷ್ಟ್ರಂಗೆ 10ನೇ ವಯಸ್ಸಿನಲ್ಲಿ…