ಜ್ಯೋತಿಷ್ಯ

ದಿನ ಭವಿಷ್ಯ ಬುಧವಾರ…ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

563

ಬುಧವಾರ, 21/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಮೇಲಾಧಿಕಾರಿಗಳೊಂದಿಗಿನ ಮಾತುಕತೆಯಿಂದ ಹೆಚ್ಚಿನ ಫಲ. ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಅನುಕೂಲ ಮತ್ತು ಲಾಭ ದೊರಕಲಿದೆ. ಅನಿರೀಕ್ಷಿತವಾಗಿ ಸಂಚಾರ ಒದಗಿ ಬಂದೀತು. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಸದ್ಯದಲ್ಲೇ ಶುಭವಾರ್ತೆ ಇದೆ. ಅತಿಥಿಗಳ ಆಗಮನವಿದೆ.

ವೃಷಭ:-

ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಪ್ರಯತ್ನಬಲಕ್ಕೆ ಒತ್ತು ನೀಡಿರಿ. ಆಗಾಗ ಕಿರಿಕಿರಿ ತೋರಿ ಬಂದರೂ ಕಾರ್ಯಸಾಧನೆಯಾಗುತ್ತದೆ.ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಸಾಧನೆ ಕಂಡು ಸಂತೋಷ ವಾಗಲಿದೆ. ಉನ್ನತ ವ್ಯಾಸಂಗದ ವಿಚಾರದಲ್ಲಿ ಚರ್ಚೆ, ಅನುಕೂಲಕರ ವಾತಾವರಣ ಮೂಡಲಿದೆ. ಸಂಪನ್ಮೂಲ ಕೂಡಿಬರಲಿದೆ.

ಮಿಥುನ:

ಹೊಸ ಮನೆ ಕಟ್ಟುವ ಯತ್ನ ಈಡೇರಲಿದೆ. ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುವ ನಿರ್ಧಾರ ಮಾಡಲಿದ್ದೀರಿ. ದೇವತಾ ದರ್ಶನಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುವುದು. ವೃತ್ತಿರಂಗದಲ್ಲಿ ಪ್ರಗತಿ ಮುನ್ನಡೆಯಲಿದೆ. ನವದಂಪತಿಗಳಿಗೆ ಹನಿಮೂನ್‌ ಭಾಗ್ಯ ವಿರುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಆದಾಯ ವಿರುತ್ತದೆ. ಭೂ, ಗೃಹ ಖರೀದಿಗಳಿಗೆ ಅನುಕೂಲವಾದೀತು.

ಕಟಕ :-

ವಿವಾಹ ಸಂಬಂಧಿ ವರಾನ್ವೇಷಣೆಗೆ ತೊಡಗುವುದಕ್ಕೆ ಸೂಕ್ತ ದಿನ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಾಧನೆಗೆ ಅವಕಾಶಗಳು ದೊರಕಲಿವೆ. ದೇವತಾನುಗ್ರಹದಿಂದ ಸರ್ವಕಾರ್ಯ ಸಿದ್ಧಿಯಾಗಲಿದೆ. ಮಿತ್ರರ ಸಹವಾಸದಿಂದ ಅಪವಾದ ಭೀತಿ ತಂದೀತು. ದಂಪತಿಗಳಿಗೆ ಸಂತಾನಕ್ಕೆ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ವ್ಯಾಪಾರ, ವ್ಯವಹಾರಗಳನ್ನು ಜಾಗ್ರತೆಯಿಂದ ವ್ಯವಹರಿಸಬೇಕಾಗುತ್ತದೆ.

 

 ಸಿಂಹ:

ಹಣದ ಹೂಡಿಕೆಯಲ್ಲಿ ಜಾಗ್ರತೆ ಇರಲಿ. ದಾಯಾದಿಗಳ ಕಿರಿಕಿರಿಯಿಂದ ಕೆಲಸಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ. ಸಮಾಜ ಸೇವೆಯಲ್ಲಿ ಧನವಿನಿಯೋಗವಾದೀತು. ದಿನಾಂತ್ಯ ಶುಭವಿದೆ. ಸಲಹೆ ಬಯಸಿ ಬಂದವರಿಗೆ ಉತ್ತಮ ಸಲಹೆಗಳನ್ನು ನೀಡಿ ಅನುಕೂಲ ಹೊಂದಲಿದ್ದೀರಿ. ಮನೆಯ ವಹಿವಾಟಿನತ್ತ ವಿಶೇಷ ಗಮನ ಹರಿಸಲಿದ್ದೀರಿ. ಪಿತ್ರಾರ್ಜಿತ ಆಸ್ತಿಯು ಲಭ್ಯವಾಗಲಿದೆ.

ಕನ್ಯಾ :-

ಉದ್ಯೋಗದ ಸ್ಥಳದಲ್ಲಿ ಅಧಿಕಾರಿಗಳಿಂದ ಹೆಚ್ಚಿನ ಬೆಂಬಲ ದೊರೆತು ಕಾರ್ಯ ಸುಗಮವಾಗಲಿದೆ. ಪ್ರೀತಿಪಾತ್ರರೊಂದಿಗೆ ಅನಿಸಿಕೆಗಳನ್ನು ಹಂಚಿಕೊಳ್ಳುವಿರಿ. ಸಮಸ್ಯೆಗಳಿಂದ ಮುಕ್ತರಾಗಿ ನೆಮ್ಮದಿ ಹೊಂದುವಿರಿ. ವಿವಿಧ ರೀತಿಯಲ್ಲಿ ಧನಾಗಮನವಿದೆ. ಶುಭಮಂಗಲ ಕಾರ್ಯಗಳಿಗಾಗಿ ಆಗಾಗ ಸಂಭ್ರಮಿಸುವಂತಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಭವಿಷ್ಯಕ್ಕಾಗಿ ಪರದೇಶಕ್ಕೆ ಹೋಗುವ ಸಾಧ್ಯತೆ ಇದೆ.

ತುಲಾ:

ತನ್ನವರ ಅಭಿವೃದ್ಧಿ ಇದ್ದರೂ ಎಲ್ಲದರಲ್ಲೂ ಆಲಸ್ಯ, ನಿರಾಸಕ್ತಿ ಇರುವುದು. ಸಂಚಾರದಲ್ಲಿ ಆಗಾಗ ಅಡಚಣೆಗಳು ಕಂಡು ಬಂದಾವು. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಸಾರ್ಥಕ್ಯ ಪಡೆದಾರು. ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಕೊಳ್ಳುವಿರಿ. ಸ್ವಂತ ವ್ಯವಹಾರ ನಡೆಸಲು ತೀರ್ಮಾನ ಕೈಗೊಂಡು ಉದ್ಯುಕ್ತರಾಗುವಿರಿ. ತಂದೆ ಸಹಕಾರದಿಂದಾಗಿ ವ್ಯವಹಾರದಲ್ಲಿ ಯಶಸ್ಸನ್ನು ಹೊಂದುವಿರಿ.

ವೃಶ್ಚಿಕ :-

ಚಿತ್ರಕಲೆಯಲ್ಲಿ ತೊಡಗಿಕೊಂಡವರಿಗೆ ಸೃಜನಶೀಲತೆಯ ಉತ್ತುಂಗಕ್ಕೇರುವ ಅವಕಾಶ. ಮನಸ್ಸಿಗೆ ಮುದ ನೀಡುವ ಸಂಗತಿಗಳು ಜರುಗಲಿವೆ. ಜಟಿಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದೀರಿ. ವಾದೀತು. ಹಿಂದಿನಿಂದ ನಿಂದಿಸುವವರು ಇದ್ದರೂ ತಾಳ್ಮೆ-ಸಮಾಧಾನದಿಂದ ಮುಂದುವರಿಯಬೇಕಾದೀತು. ಮಾತಿನಿಂದ ಕಾರ್ಯಸಾಧಿಸಬೇಕಾಗುತ್ತದೆ. ಅಧಿಕಾರಿ ವರ್ಗದವರಿಗೆ ತುಸು ಸಮಾಧಾನಕರ

 

ಧನಸ್ಸು:

ಉನ್ನತ ಹುದ್ದೆಯ ಲಾಭ ಅಧಿಕಾರಿ ವರ್ಗದವರಿಗೆ ಸಿಗಲಿದೆ. ನ್ಯಾಯಾಲಯದ ಕೆಲಸಕಾರ್ಯಗಳು ಯಶಸ್ಸನ್ನು ತರಲಿವೆ. ಆಗಾಗ ದೇಹಾರೋಗ್ಯದ ಬಗ್ಗೆ ಗಮನ ಹರಿಸಿರಿ. ದಿನಾಂತ್ಯ ಸಿಹಿವಾರ್ತೆ ಇದೆ. ನಿತ್ಯದ ಕೆಲಸ ಕಾರ್ಯಗಳ ಬಗೆಗೆ ನಿಗಾ ವಹಿಸಲಿದ್ದೀರಿ. ನೆನೆಗುದಿಗೆ ಬಿದ್ದಿರುವ ಕೆಲಸವೊಂದು ಪೂರ್ಣಗೊಂಡು ನೆಮ್ಮದಿ. ಜೀವನದಲ್ಲಿ ಬದಲಾವಣೆ ನಿರೀಕ್ಷಿಸಬಹುದು.

ಮಕರ :-

ಕಾನೂನು ಕಾಯ್ದೆ ವಿಚಾರದಲ್ಲಿ ಯಶಸ್ಸು. ನೇರ ನಡೆ ನುಡಿಯಿಂದಾಗಿ ಇತರರ ಮನಗೆದ್ದು ಸಂತಸ ಅನುಭವಿಸಲಿದ್ದೀರಿ. ಹೆಣೆದಿರುವ ತಂತ್ರಗಾರಿಕೆ ಫಲ ನೀಡಲಿದೆ. ದೇವಾಲಯ ದರ್ಶನ ಸಾಧ್ಯತೆ. ಹಿತವಾದ ಮಾತಿನಿಂದ ಗೌರವವನ್ನು ಸಂಪಾದಿಸಲಿದ್ದೀರಿ. ಅನಾರೋಗ್ಯದ ಬಗ್ಗೆ ದೂರ ಸಂಚಾರದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ. ನಿರುದ್ಯೋಗಿಗಳಿಗೆ ಆಗಾಗ ಕಾಯುವ ಪರಿಸ್ಥಿತಿಯಿಂದ ಸಮಾಧಾನ ಸಿಗದು.

ಕುಂಭ:-

ಹಣಕಾಸು ಸಮಸ್ಯೆಗಳು ಪರಿಹಾರವಾಗುವ ಲಕ್ಷಣ ಗೋಚರವಾಗುತ್ತಿವೆ. ಕೂಡಿಟ್ಟ ಬಂಡವಾಳದಿಂದಾಗಿ ನಿರೀಕ್ಷೆ ಮೀರಿದ ಲಾಭ. ಸಂಗಾತಿಯೊಂದಿಗೆ ಸಂತಸ ಹಂಚಿಕೊಳ್ಳಲಿದ್ದೀರಿ. ಹಸಿರು ಬಣ್ಣ ಶುಭ ತರಲಿದೆ. ನಿಶ್ಶಕ್ತಿ ತೋರಿ ಬಂದರೂ ಆರೋಗ್ಯ ಭಾಗ್ಯ ಸುಧಾರಿಸಲಿದೆ. ದೂರ ಸಂಚಾರದಲ್ಲಿ ಕಾಳಜಿ ವಹಿಸಬೇಕು. ಹೆಂಡತಿಯಿಂದ ಶುಭವನ್ನು ಕೇಳುವಿರಿ. ಮಿತ್ರರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ.

ಮೀನ:-

ಕಚೇರಿಯಲ್ಲಿ ನಿಮ್ಮಮೇಲಿನ ಭರವಸೆಗಳನ್ನು ದೃಢಪಡಿಸುವಿರಿ. ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಸಂತಸ. ಆರೋಗ್ಯದ ನಿಮಿತ್ತ ದೇವರ ಆರಾಧನೆ ಮಾಡಲಿದ್ದೀರಿ. ಕುಲದೇವರ ದರ್ಶನ ಭಾಗ್ಯ. ಆರ್ಥಿಕ ಕೊರತೆಗಳು ಕಂಡು ಬಂದರೂ ಧನಾಗಮನದಿಂದ ಉಪಶಮನವಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲಕ್ಕೆ ವಿಶ್ವಾಸವಿಡಬೇಕಾಗುತ್ತದೆ. ಶ್ರೀದೇವತಾದರ್ಶನ ಭಾಗ್ಯವಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ