ಆಧ್ಯಾತ್ಮ

ತುಳಸಿ ಗಿಡದಿಂದ ಮನೆಯಲ್ಲಿ ನಡೆಯಬಹುದಾದ, ಒಳ್ಳೆಯ ಮತ್ತು ಕೆಟ್ಟ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಂತೆ..!ಅದು ಹೇಗೆ ಗೊತ್ತಾ..?

1381

ತುಳಸಿ ಎಲೆಗಳಿಂದ ನಾವು ಹಲವು ರೋಗಗಳನ್ನು ಗುಣಪಡಿಸಬಹುದು. ಎಲೆಗಳಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ…

ಆಧ್ಯಾತ್ಮಿಕವಾಗಿಯೂ ತುಳಸಿ ಗಿಡ ಮನೆಯಲ್ಲಿದ್ದರೆ ಒಳ್ಳೆಯದೆಂದು ಅದರಿಂದ ನಮೆಗೆಲ್ಲವೂ ಒಳ್ಳೆಯದಾಗುತ್ತದಂತೆ. ಆದರೆ,ಒಮ್ಮೊಮ್ಮೆ ಮನೆಯಲ್ಲಿರುವ ತುಳಸಿ ಗಿಡದ ಸಹಜ ಬಣ್ಣದಲ್ಲಿ ಬದಲಾಣೆಯಾಗುವುದು, ಇಲ್ಲವೆ ಎಲೆಗಳು ಒಣಗಿ ಉದುರಿ ಹೋಗುವುದು ಮೊದಲಾದುವುಗಳನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ.

ಹೀಗೆ ಬೌತಿಕವಾಗಿ ನಡೆಯುವ ಪ್ರಕ್ರಿಯೆಗಳಿಂದಾಗಿ ಆ ಮನೆಯಲ್ಲಿ ನಡೆಯಬಹುದಾದ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಬಹುದಂತೆ.

ಈ ನಿಟ್ಟಿನಲ್ಲಿ ತುಳಸಿ ಗಿಡದಲ್ಲಾಗುವ ಬದಲಾವಣೆಗಳನ್ನು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಿಳಿದುಕೊಳ್ಳೋಣ.

1 ದಿನಾಲೂ ನೀರು ಹಾಕಿ ಚೆನ್ನಾಗಿ ಪೋಷಿಸುತ್ತಿದ್ದರೂ, ತುಳಸಿ ಗಿಡದ ಎಲೆಗಳು ಒಣಗಿಹೋಗುತ್ತಿದ್ದರೆ…. ಆ ಮನೆಯ ಯಜಮಾನ ಅನಾರೋಗ್ಯ ಪೀಡಿತರಾಗುತ್ತರಂತೆ. ಯಾವುದಾದರೂ ಒಂದು ಗಂಭೀರ ಕಾಯಿಲೆಗೆ ತುತ್ತಾಗುವ ಅವಕಾಶವಿರುತ್ತದಂತೆ.

2 ಇತರೆ ಕಾರಣಗಳಿಂದಾಗಿ ತುಳಸಿ ಗಿಡ ಒಣಗುತ್ತಿದ್ದರೆ,ಒಡನೆಯೇ ನೀರು ಹಾಕಿ ಚೆನ್ನಾಗಿ ಬೆಳೆಯುವಂತೆ ನೋಡಿಕೊಳ್ಳಬೇಕಂತೆ.ಹಾಗೆ ಮಾಡದಿದ್ದರೆ ಕೇಡು ಸಂಭವಿಸುತ್ತದಂತೆ.

3 ತುಳಸಿ ಗಿಡ ಹಚ್ಚ ಹಸಿರಾಗಿರುವ ಮನೆಯಲ್ಲಿ ಯಾವಾಗಲೂ ಸುಖ ಸಂತೋಷಗಳು ತುಂಬಿ ತುಳುಕಾಡುತ್ತಿರುತ್ತವಂತೆ.ಅಂತಹ ಮನೆಯವರಿಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲವಂತೆ…

4 ತುಳಸಿ ಗಿಡದ ಎಲೆಗಳ ಬಣ್ಣ ಒಮ್ಮೆಲೇ ಬದಲಾದರೆ… ಆ ಮನೆಯ ಪೈಕಿ ಯಾರೋ ಒಬ್ಬರು ಮಾಯ ಮಾಟದಂತಹ ಪ್ರಯೋಗಕ್ಕೆ ಈಡಾಗುತ್ತಾರೆಂಬುದನ್ನು ಸೂಚಿಸುತ್ತದೆ. ಹೀಗೆ ಪ್ರಯೋಗ ನಡೆಸಿ ಅವರನ್ನು ಹಾಳು ಮಾಡಬೇಕೆಂದುಕೊಂಡರೆ ಮಾತ್ರ ಈ ರೀತಿ ಎಲೆಗಳ ಬಣ್ಣ ಬದಲಾಗುತ್ತದಂತೆ.

5 ಒಂದು ವೇಳೆ ತುಳಸಿ ಗಿಡಕ್ಕೆ ನೀರೆರೆಯದಿದ್ದರೂ, ಎಲೆಗಳು ಹಸಿರಾಗಿ,ಚೆನ್ನಾಗಿ ಬೆಳೆಯುತ್ತಿದ್ದರೆ, ಆ ಮನೆಯವರಿಗೆಲ್ಲರಿಗೂ ಅದೃಷ್ಟ ಕೂಡಿಬರುತ್ತದಂತೆ. ಭವಿಷ್ಯದಲ್ಲಿ ಅಂತಹವರಿಗೆ ಹೇರಳವಾಗಿ ಸಂಪತ್ತು ಬರುತ್ತದಂತೆ.

6 ತುಳಸಿ ಗಿಡವನ್ನು ಬೆಳೆಸುತ್ತಿರುವ ಕುಂಡದಲ್ಲಿ, ಮತ್ತೊಂದು ಸಸಿ ತನ್ನಷ್ಟಕ್ಕೆ ತಾನೇ ಹುಟ್ಟಿದರೆ,ತಾವು ಅಂದುಕೊಂಡದ್ದನ್ನು ಸಾಧಿಸುತ್ತಾರಂತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ