ಸುದ್ದಿ

ತಾನು ಜೀವಂತವಿರುವಾಗಲೇ ತನ್ನ ಸಮಾಧಿ ಸ್ಥಳ ಖರೀದಿಸಿದ ನಟಿ…ಯಾರು ಗೊತ್ತೇ,?

34

ಈ ನಟಿ ನಿಮಗೆ ನೆನಪಿದ್ದಾರಾ..? ಕನ್ನಡ ನನ್ನ ಶತ್ರು, ಪೂರ್ಣಚಂದ್ರ, ಪ್ರೇಮಖೈದಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ಅಂಬರೀಶ ಸಿನಿಮಾಗಳಲ್ಲಿ ನಟಿಸಿರುವ ಇವರು ಹೆಸರು ರೇಖಾ. ಇವರ ಮೊದಲ ಹೆಸರು ಜೋಸೆಫೆನ್. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದ ರೇಖಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸಿದ್ದಾರೆ.

ಈ ನಟಿ ಸಿನಿಮಾಗಳ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾವು ಬದುಕಿರುವಾಗಲೇ ತಮ್ಮ ಸಮಾಧಿ ಸ್ಥಳವನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಇಂತಹ ಘಟನೆಗಳು ಬಹಳ ಅಪರೂಪ ಬಿಡಿ. ಚೆನ್ನೈನ ಕಿಲ್ಪಾಕ್ ಎಂಬಲ್ಲಿ ತನ್ನ ತಂದೆ ಸಮಾಧಿ ಪಕ್ಕದಲ್ಲೇ ರೇಖಾ ಕೂಡಾ ತಮ್ಮ ಸಮಾಧಿ ಸ್ಥಳವನ್ನು ಖರೀದಿಸಿದ್ದಾರಂತೆ. ಹೀಗಂತ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಬಲವಾದ ಕಾರಣ ಕೂಡಾ ಇದೆ.

ರೇಖಾ, ತನ್ನ ತಂದೆ ವರದರಾಜ್ ಅವರನ್ನು ಬಹಳ ಇಷ್ಟಪಡುತ್ತಿದ್ದರಂತೆ. ತಂದೆ ಎಂದರೆ ಅವರಿಗೆ ಪ್ರಾಣ. ಆದರೆ ವರದರಾಜ್ ಅವರಿಗೆ ರೇಖಾ ಸಿನಿಮಾರಂಗಕ್ಕೆ ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ರೇಖಾ ಅವರು ನಟಿಸಿರುವ ಯಾವ ಸಿನಿಮಾವನ್ನು ಕೂಡಾ ತಂದೆ ನೋಡಿಲ್ಲವಂತೆ. ತಂದೆ ನನ್ನ ಸಿನಿಮಾಗಳನ್ನು ನೋಡಲಿಲ್ಲ ಎಂಬ ಬೇಸರ ಒಂದು ಕಡೆ ಆದರೆ, ತಂದೆ ಇಷ್ಟಕ್ಕೆ ವಿರುದ್ಧವಾದ ಕ್ಷೇತ್ರದಲ್ಲಿ ಮುಂದುವರೆದಿದ್ದಕ್ಕೆ ಅವರಿಗೆ ಪಶ್ಚಾತಾಪ ಕೂಡಾ ಇದೆಯಂತೆ.

ಆದರೆ ತನ್ನ ತಂದೆ ಸಮಾಧಿ ಪಕ್ಕದಲ್ಲೇ ತನ್ನ ಸಮಾಧಿ ಇರಬೇಕು ಎಂಬುದು ರೇಖಾ ಅವರ ಆಸೆಯಂತೆ. ಈಗಾಗಲೇ ಸೈಟ್ ಖರೀದಿಸಿದ್ದು, ತಾನು ಸತ್ತಾಗ ಅದೇ ಸ್ಥಳದಲ್ಲಿ ನನ್ನನ್ನು ಮಣ್ಣು ಮಾಡಬೇಕು ಎಂದು ಮನೆಯವರು ಹಾಗೂ ಸಂಬಂಧಿಕರ ಬಳಿ ರೇಖಾ ಮಾತು ಪಡೆದಿದ್ದಾರೆ ಎನ್ನಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನನಗೆ ಈಗ ಎಷ್ಟು ವಯಸ್ಸು ಅಂತ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಗಳು ಕೇಳಿದ್ದೇಕೆ..!

    ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದೇ ಭಕ್ತರು ಕರೆಯುತ್ತಾರೆ.ಮೊನ್ನೆಯಷ್ಟೇ ಸಿದ್ದಗಂಗಾ ಶ್ರೀ ಗಳನ್ನು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮಠದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ನಡೆದಾಡುವ ದೇವರು ಎಂದೇ ಕರೆಯುವ ಸಿದ್ದಗಂಗಾ ಶ್ರೀ ಗಳು ಕಿರಿಯಾ ಸ್ವಾಮೀಜಿಗಳಲ್ಲಿ ನನ್ನ ವಯಸ್ಸು ಎಷ್ಟು ಅಂತ ಕೇಳಿದ್ದಾರೆ! ಅದಕ್ಕೆ ಕಿರಿಯ ಶ್ರೀ ಗಳು 111 ವರ್ಷ ಆಗಿದೆ ಎಂದಾಗ ಬಹಳ ಆಯ್ತು ಎಂದು ಶಿವಕುಮಾರ ಸ್ವಾಮೀಜಿಗಳು ಹೇಳಿದ್ದಾರೆ. ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸಿದ್ದಗಂಗಾ ಮಠಕ್ಕೆ ಆಗಮಿಸಿದರು….

  • ವಿಸ್ಮಯ ಜಗತ್ತು

    7 ವರ್ಷದ ಈ ಪುಟ್ಟ ಪೋರ, ತನ್ನ ದೇಹವನ್ನು 8 ಪ್ಯಾಕ್ ಮಾಡಿದ್ದಾನೆ! ಇದು ತಮಾಷೆ ವಿಚಾರ ಅಲ್ಲ !!!

    ಈಗಂತೂ ಜಿಮ್’ಗೆ ಹೋಗಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸುವುದು ಸಾಮಾನ್ಯ. ಇದರಲ್ಲಿ 6 ಪ್ಯಾಕ್ ,8 ಪ್ಯಾಕ್ ಹೀಗೆ ಏನೇನೋ ಇದೆ. ಈ ವಿಷಯ ಯಾಕೆ ಈಗ ಅಂತೀರಾ! ವಿಷಯ ಇದೆ. ಏನು ಗೊತ್ತಾ? ಏಳು ವರ್ಷದ ಪುಟ್ಟ ಬಾಲಕನೊಬ್ಬ ತನನ ಚಿಕ್ಕ ವಯಸ್ಸಿನಲ್ಲೇ ತನ್ನ ದೇಹವನ್ನು 8 ಪ್ಯಾಕ್ ಮಾಡಿದ್ದಾನೆ. ಇದೇನಪ್ಪ ಏಳು ವರ್ಷದ ಪೋರ 8 ಪ್ಯಾಕ್ ಮಾಡೋದು ಅಂದ್ರೆ ಏನು ಸುಮ್ನೆ ತಮಾಷೆ ವಿಚಾರ ಅಲ್ಲ ಆದ್ರೂ ಈ ಪೋರ ಇಂತ ದಾಖಲೆ ಮಾಡಿ ವಿಶ್ವದ ಗಮನ ಸೆಳೆದ ಪುಟ್ಟ ಪೋರ ಯಾರು ಅಂತೀರಾ ಇಲ್ಲಿದೆ ನೋಡಿ.

  • karnataka

    ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

  • ಆಧ್ಯಾತ್ಮ

    ಈ 5 ವಸ್ತುಗಳಿಂದ ಭಗವಾನ್ ಶಿವ ಲಿಂಗವನ್ನು ಎಂದಿಗೂ ಪೂಜಿಸಬಾರದು..!

    ಭಗವಾನ್ ಶಿವ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು, ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ. ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.

  • ಸುದ್ದಿ, ಸ್ಪೂರ್ತಿ

    ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ 19ರ ಯುವಕ ಟ್ರಂಪ್ ಆಹ್ವಾನಿಸಿದರೂ ಅಮೆರಿಕಕ್ಕೆ ತೆರಳಲಿಲ್ಲ, ಭಾರತದಲ್ಲೇ ರಿಸರ್ಚ್ ಮಾಡ್ತೇನೆ ಎಂದ ಗೋಪಾಲ್.

    ಬಿಹಾರದ ಬಾಗಲ್‍ಪುರದ ಧ್ರುವಗಂಜ್ ಗ್ರಾಮದ 19 ವರ್ಷದ ಯುವಕ ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ್ದಾರೆ. ಅಲ್ಲದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಹ್ವಾನಿಸಿದರೂ ಭಾರತದಲ್ಲೇ ರಿಸರ್ಚ್ ಮಾಡುತ್ತೇನೆ ಎಂದು ಹೇಳುವ ಮೂಲಕ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ. 19 ವರ್ಷದ ಯುವಕ ಗೋಪಾಲ್ ಪ್ರತಿ ವರ್ಷ ದೇಶದ 100 ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. 2019ರಲ್ಲಿ ಗೋಪಾಲ್ ಈ ಕೆಲಸ ಶುರು ಮಾಡಿದ್ದು, ಈಗ 8 ಮಕ್ಕಳ ಆವಿಷ್ಕಾರಕ್ಕಾಗಿ ತಾತ್ಕಾಲಿಕ ಪೇಟೆಂಟ್ ಕೂಡ ಪಡೆದಿದ್ದಾರೆ….