ಗ್ಯಾಜೆಟ್

ಟ್ರೂ ಕಾಲರ್ ಆ್ಯಪ್‍’ನ ಹಿಂದಿನ ಕರಾಳ ಸತ್ಯ ಗೊತ್ತಾ ನಿಮ್ಗೆ?

2758

ಕೆಲವು ಅನಾಮಿಕ ವ್ಯಕ್ತಿಗಳು ನಮ್ಮ ಮೊಬೈಲ್’ಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಾರೆ.ಅವರು ಯಾರೂ ಎಂದು ನಮಗೆ ತಿಳಿಯುವುದಿಲ್ಲ.ಹಾಗಾಗಿ ನಾವು ಹೆಚ್ಚಾಗಿ ಈಗ ನಮ್ಮ ಮೊಬೈಲ್’ಗಳಲ್ಲಿ ಟ್ರೂ ಕಾಲರ್ ಆ್ಯಪ್‍’ನ್ನು ಬಳಸುವುದು ಹೆಚ್ಚು.ನಮ್ಮ ಮೊಬೈಲ್‍ನಲ್ಲಿ ನಂಬರ್ ಸೇವ್‍ ಆಗದೇ ಇದ್ದರೂ ಅಪರಿಚತರು ಕರೆ ಮಾಡಿದಾಗ ಅವರ ಹೆಸರು ನಮ್ಮ ಮೊಬೈಲ್‍ನಲ್ಲಿ ಕಾಣುತ್ತದೆ. ಹಾಗಾಗಿ ಅನಾಮಿಕ ಕರೆಗಳಿಂದ ಪಾರಾಗಬಹುದು ಎಂದು ನಾವು ಟ್ರೂ ಕಾಲರ್ ಆ್ಯಪ್‍ ಅನ್ನು ಮೊಬೈಲ್‍ಗೆ ಡೌನ್‍ಲೋಡ್ ಮಾಡಿಕೊಂಡಿರುತ್ತೇವೆ.

ನಿಜ ವಿಷಯ ಏನಪ್ಪಾ ಅಂದರೆ ಅನಾಮಿಕನ ಕರೆ ವಿವರ ನಮಗೆ ಲಭಿಸಿದಷ್ಟೇ ಮಾಹಿತಿ ಕರೆ ಮಾಡಿದವನಿಗೂ ಸಿಗುತ್ತದೆ. ಅಲ್ಲದೇ ನಮ್ಮ ಮೊಬೈಲ್‍ನಲ್ಲಿನ ಎಲ್ಲಾ ಮಾಹಿತಿ ಸೋರಿಕೆಯಾಗಿ ಮತ್ತೊಬ್ಬರ ಕೈಗೆ ಸಿಗುತ್ತಿದೆ. ಆದರೆ ಅದು ನಮಗೆಗೊತ್ತೇ ಆಗುವುದಿಲ್ಲ. ಹಾಗಾಗಿ ಟ್ರೂ ಕಾಲರ್ ಮೊಬೈಲ್ ಅಪ್ಲಿಕೇಶನ್‍ ಬಗ್ಗೆ ನಾವು ಎಚ್ಚರದಿಂದಿರುವುದು ಬಹಳ ಸೂಕ್ತ.

ನಮ್ಮ ಮೊಬೈಲ್ ನಲ್ಲಿ ಸೇವ್ ಆಗದೆ ಇರುವ ನಂಬರ್ ಗಳಿಂದ ನಮಗೇನಾದರೂ ಕರೆ ಬಂದರೆ ಕರೆ ಮಾಡಿದವರ ಹೆಸರು, ಮತ್ತು ಅದರಲ್ಲಿರುವ ಇತರ ಮಾಹಿತಿಗಳನ್ನು ನಮ್ಮ ಮೊಬೈಲ್ ಸ್ಕ್ರೀನ್ ಮೇಲೆ ತೋರಿಸುತ್ತದೆ. ಅದು ಹೇಗೆ ಅಂತ ಗೊತ್ತಾ? ‘ಟ್ರೂ ಕಾಲರ್ ಗೆ ಈ ಎಲ್ಲಾ ಮಾಹಿತಿಗಳು ಎಲ್ಲಿಂದ ಸಿಗುತ್ತವೆ’ ಎಂಬ ಸುಳಿವು ನಮಗೆ ದೊರೆತಿದೆಯೇ?

ಅವರು ಈ ಮಾಹಿತಿಗಳನ್ನೆಲ್ಲಾ ನಮ್ಮಿಂದಲೇ, ಅಂದರೆ ನಾವು ಯಾರೆಲ್ಲಾ ಟ್ರೂ ಕಾಲರ್ ಆ್ಯಪ್ ಉಪಯೋಗಿಸುತ್ತೀರೋ ಅವರಿಂದಲೇ ಪಡೆದಿರುತ್ತಾರೆ. ಈ ಆ್ಯಪ್ ಅನ್ನು ಉಪಯೋಗಿಸುವ ಮೂಲಕ ನಾವು ನಮ್ಮ ಬಗ್ಗೆ ಮಾಹಿತಿ ಅಷ್ಟೇ ಅಲ್ಲ, ಯಾರೆಲ್ಲ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇವ್ ಆಗಿದ್ದಾರೋ ಅವರ ಬಗ್ಗೆ ಮಾಹಿತಿಯನ್ನೂ ಈ ಸಂಸ್ಥೆಗೆ ನೀಡುತ್ತಿರುತ್ತೀವಿ.   ಇಲ್ಲಿ ಓದಿ:-ನಿಮ್ಮ ಸ್ಮಾರ್ಟ್ ಫೋನ್’ನ ಈ 8 ಸೀಕ್ರೆಟ್ ಆಪ್ಷನ್ಸ್’ಗಳು ನಿಮ್ಗೆ ಗೊತ್ತಿದೆಯೇ?

ಟ್ರೂ ಕಾಲರ್ ಆಪ್ ಇನ್‌ಸ್ಟಾಲ್ ಮಾಡಿದ ನಮ್ಮ ಮೊಬೈಲ್‌ನಲ್ಲಿ ಸಂಗ್ರಹವಾಗಿರುವ ಸಂಪರ್ಕ ಸಂಖ್ಯೆಗಳ (ಕಾಂಟಾಕ್ಟ್ಸ್) ಒಳಪ್ರವೇಶಿಸಿಬಿಡುತ್ತದೆ ಮತ್ತು ಯಾವೆಲ್ಲಾ ಸಂಖ್ಯೆಗಳಿವೆಯೋ, ಅವನ್ನೆಲ್ಲಾ ಅನಾಮತ್ತಾಗಿ ಎತ್ತಿಕೊಂಡು, ತನ್ನ ಮೆಮೊರಿಗೆ ಅವುಗಳನ್ನು ಕಾಪಿ ಮಾಡಿಕೊಂಡುಬಿಟ್ಟಿರುತ್ತದೆ.ಇದರಿಂದ ಯಾರಾದರೂ ಒಂದು ಹೆಸರು ಅಥವಾ ನಂಬರ್ ಟ್ರೂ ಕಾಲರ್ ನಲ್ಲಿ ಸರ್ಚ್ ಮಾಡಿದಾಗ ನಮ್ಮ ಮತ್ತು ನಮ್ಮ ಸಂಪರ್ಕದಲ್ಲಿರುವವರ ಮಾಹಿತಿ ಅದೆಷ್ಟೋ ಜನರಿಗೆ ಸುಲಭವಾಗಿ ಸಿಗುತ್ತದೆ. ನಮಗೆ ಇದು ಸರಿ ಎನಿಸುತ್ತದೆಯೇ? ಅವರಲ್ಲಿ ಕೇಳದೇನೆ ನಾವು ನಮ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ತಪ್ಪಲ್ಲವೇ?

ಟ್ರೂ ಕಾಲರ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?

ನಾವು ಟ್ರೂ ಕಾಲರ್ ಆ್ಯಪ್ ಅನ್ನು ನಮ್ಮ  ಫೋನ್ ನಲ್ಲಿ ಇನ್ಸ್ಟಾಲ್ ಮಾಡಿದಾಗ ಅದು ಸುಲಭವಾಗಿ ನಮ್ಮ ಫೋನ್ ನಲ್ಲಿರುವ ಪ್ರತಿಯೊಂದು ಕಾಂಟ್ಯಾಕ್ಟ್ ನಂಬರ್ ಮತ್ತು ಇತರ ಮಾಹಿತಿಗಳನ್ನು ತನ್ನ ಸರ್ವರ್ ಗೆ ರವಾನೆ ಮಾಡುತ್ತದೆ. ಯಾರಾದರೂ ಒಂದು ಮೊಬೈಲ್ ನಂಬರ್ ಅಥವಾ ಒಂದು ಹೆಸರನ್ನು ಸರ್ಚ್ ಮಾಡಿದಾಗ ಟ್ರೂ ಕಾಲರ್ ನಮ್ಮಿಂದ ಪಡೆದುಕೊಂಡ ಮಾಹಿತಿಗಳನ್ನು, ನಂಬರ್ ಗಳನ್ನು ಹುಡುಕುವವರಿಗೆ ರಿಸಲ್ಟ್ ಆಗಿ ಕೊಡುತ್ತದೆ. ಟ್ರೂ ಕಾಲರ್ ಕೆಲಸ ಮಾಡುವುದೇ ಹೀಗೆ… ಪ್ರಪಂಚಾದಾದ್ಯಂತ  ಇರುವ ಎಲ್ಲಾ ಫೋನ್ ನಂಬರ್ ಗಳನ್ನು, ಹೆಸರು ಸಮೇತ ಪಡೆದುಕೊಂಡು ಅದನ್ನೇ ಇನ್ನೊಂದು ರೂಪದಲ್ಲಿ ನಮಗೆ ಒದಗಿಸುತ್ತದೆ.

ನಾವು ಟ್ರೂ ಕಾಲರ್ ಆ್ಯಪ್ ನಮ್ಮ ಫೋನ್ ನಲ್ಲಿ ಇನ್ ಸ್ಟಾಲ್ ಮಾಡದೇ ಇದ್ದರೂ, ನಾವು ಟ್ರೂ ಕಾಲರ್ ವೆಬ್ ಸೈಟ್ ನಲ್ಲಿ ಯಾವುದಾದರೂ ಹೆಸರು ಮತ್ತು ನಂಬರ್ ಹುಡುಕಲು ಹೋದರೆ ಅದು ನಮ್ಮನ್ನು ಫೇಸ್ ಬುಕ್, ಗೂಗಲ್, ಯಾಹೂ ಅಥವಾ ಮೈಕ್ರೋಸಾಫ್ಟ್ ಖಾತೆಗಳ ಮೂಲಕ ಸೈನ್ ಇನ್ ಆಗಲು ಸೂಚಿಸುತ್ತದೆ. ಯಾಕೆಂದರೆ ಹೆಚ್ಚಿನ ಜನರು ತಮ್ಮ ಫೋನ್ ನಂಬರ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುತ್ತೇವೆ. ಹೀಗೆ ನಾವು ನಮ್ಮ ಸಾಮಾಜಿಕ ಪ್ರೊಫೈಲ್ ಗಳ ಮೂಲಕ ಟ್ರೂ ಕಾಲರ್ ವೆಬ್ ಸೈಟ್ ಗೆ ಹೋದಾಗ ಅದು ನಮ್ಮ ಮತ್ತು ನಿಮ್ಮ ಗೆಳೆಯರ ನಂಬರ್ ಮತ್ತು ಹೆಸರುಗಳನ್ನೂ ಕಸಿದುಕೊಳ್ಳುತ್ತದೆ.

ಯಾಕೆ ಉಪಯೋಗಿಸಬಾರದು?

ಈ ಆ್ಯಪ್ ಅನಗತ್ಯ ಸ್ಪ್ಯಾಮ್ ಕಾಲ್ ಗಳನ್ನು ತಡೆಗಟ್ಟುವುದು ತಮ್ಮ ಪ್ರಥಮ ಕೆಲಸ ಎಂದು ಹೇಳಿಕೊಳ್ಳುತ್ತದೆ. ಆದರೆ ನಿಜವಾದ ವಿಷಯ ಏನೆಂದರೆ, ಈ ಆ್ಯಪ್ ಬಳಸಿದರೆ, ಅನಗತ್ಯ ಕರೆಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ಆ್ಯಪ್ ಬಳಸದೇ ಇದ್ದರೂ ನೀಮಗೆ ಅಪರಿಚಿತ ಕರೆ ಬರುತ್ತಿದ್ದರೆ, ನಿಮ್ಮ ಕಾಲ್ ಲಿಸ್ಟ್‍ ನಲ್ಲಿರುವ ಗೆಳೆಯರು ಈ ಆ್ಯಪ್ ಬಳಸುತ್ತಿದ್ದಾರೆ. ಅದು ಪರಿಣಾಮ ಇದು ಎಂದು ನೀವು ಅರಿತುಕೊಳ್ಳಬೇಕು.

ನಾವೇನು ಮಾಡಬೇಕು?

ನಿಮ್ಮ ಮಾಹಿತಿಯನ್ನು ಆದಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಷೇರ್ ಮಾಡದೆ ಗುಪ್ತವಾಗಿಡುವುದು ಸುರಕ್ಷಿತ ವಿಧಾನ.ನೀವು ಅಂತರ್ಜಾಲದಲ್ಲಿ ಏನೆಲ್ಲಾ ಮಾಹಿತಿ ಹಾಕುತ್ತೀರೋ ಅದೆಲ್ಲಾ ಸಾರ್ವಜನಿಕವಾಗಿ ತಕ್ಷಣ ಅಥವಾ ಸ್ವಲ್ಪ ತಡವಾಗಿಯಾದರೂ ಬಹಿರಂಗವಾಗುತ್ತದೆ ಎಂದು ನೆನಪಿರಲಿ.

ಇಷ್ಟೆಲ್ಲಾ ತಿಳಿದ ಮೇಲೆ ನಿಮಗೇನಾದರೂ ಟ್ರೂ ಕಾಲರ್ ಆ್ಯಪ್ ನಿಂದ ಹೊರ ಬರಬೇಕು ಅನಿಸಿದರೆ, ತಡಮಾಡಬೇಡಿ ಟ್ರೂ ಕಾಲರ್ ಆ್ಯಪ್ ಗೆ ಹೋಗಿ ಅನ್-ಲಿಸ್ಟ್ ಗೆ ಕ್ಲಿಕ್ ಮಾಡಿ. ಅಷ್ಟೇ! ನೀವು ಅಲ್ಲಿಂದ ಹೊರ ಬಂದಾಯ್ತು.
 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ಶುಭಫಲಗಳ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದು ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(28 ಏಪ್ರಿಲ್, 2019) ಇತ್ತೀಚಿಗೆ ನಿಮಗೆ ಹತಾಶೆಯೆನಿಸುತ್ತಿದ್ದಲ್ಲಿ – ಇಂದು ಸರಿಯಾದ…

  • ಜ್ಯೋತಿಷ್ಯ

    ದಿನ ಭವಿಷ್ಯ ..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಎಲ್ಲಾ ಕಾಲದಲ್ಲೂ ನಿಮ್ಮ ಮಾತೇ ಅಂತಿಮ ಎನ್ನುವ ಧೋರಣೆ ಬಿಡಿ. ಇತರರ ಮಾತಿಗೂ ಬೆಲೆ ಕೊಡುವುದನ್ನು ಕಲಿತರೆ ಜೀವನ ಸುಂದರಮಯವಾಗಿರುತ್ತದೆ. ಸಂಗಾತಿಯು ಮಾತಾಡುವ ವಿಷಯಗಳಿಗೆ ಅಪಾರ್ಥ ಕಲ್ಪಿಸಕೊಳ್ಳದಿರಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • ಆರೋಗ್ಯ

    ನಮ್ಮ ಹಿರಿಯರು ಆಹಾರವನ್ನು ಸೇವಿಸುವಾಗ ಮಾತನಾಡಬಾರದು ಎಂದು ಹೇಳುತ್ತಾರೆ..!ಏಕೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ …

    ನಮ್ಮ ಹಿರಿಯರು ಊಟ ಮಾಡುವಾಗ ಹೆಚ್ಚು ಮಾತಾಡಬೇಡಿ ಎಂದು ಕೂಗಿ ಕೂಗಿ ಹೇಳಿದರು ನಮಗೆ ಕೇಳಿಸಿದರು ಕೇಳಿಸಲಿಲವೇನೋ ಇಲ್ಲ ಎಂಬಂತೆ ವರ್ತಿಸುತ್ತೇವೆ, ಆದರೆ ಹೀಗೆ ಊಟ ಮಾಡುವಾಗ ಮಾತಾಡಿ ಹಲವು ಬಾರಿ ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಸಂಗತಿಗಳು ಸಹ ನಡೆದಿರುತ್ತವೆ, ಆದರೂ ನಮಗೆ ಹೆಚ್ಚಾಗಿ ಊಟಕ್ಕೆ ಕುಳಿತಾಗಲೇ ಇಲ್ಲ ಸಲ್ಲದ ವಿಷಯಗಳು ನೆನಪಾಗುತ್ತವೆ.

  • ಜ್ಯೋತಿಷ್ಯ

    ಶುಕ್ರವಾರದ ಈ ಶುಭದಿನದಂದು ಈ ರಾಶಿಗಳಿಗೆ ಶುಭಯೋಗ… ನಿಮ್ಮ ರಾಶಿ ಇದೆಯಾ ನೋಡಿ

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮ ಸಾರ್ವಜನಿಕ ಜೀವನದ ಹೊಸ ಚೈತನ್ಯವು ಪ್ರಶಂಸೆ ಗಿಟ್ಟಿಸುತ್ತದೆ. ಇದರಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಹೊಸ ನೆಲೆ ಕಂಡುಕೊಳ್ಳುವಿರಿ. ಇದಕ್ಕಾಗಿ ಅಧಿಕ ಹಣ ಕೈಬಿಡುವ ಸಾಧ್ಯತೆ ಇದೆ.  .ನಿಮ್ಮ ಸಮಸ್ಯೆ.ಏನೇ…

  • ಜ್ಯೋತಿಷ್ಯ

    ಶಿವರಾತ್ರಿಯ ಈ ಸುದಿನದಂದು ಶಿವನ ಕೃಪೆಯಿಂದ ನಿಮ್ಮ ರಾಶಿಗಳ ಶುಭಫಲ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(4 ಮಾರ್ಚ್, 2019) ಬಿಡುವಿಲ್ಲದ ಕೆಲಸಗಳ ಹೊರತಾಗಿಯೂ ನೀವು ಆಯಾಸವನ್ನು ನಿಭಾಯಿಸಲು ಶಕ್ತರಾಗಿರುತ್ತೀರಿ. ನೀವು ಇತರರ ಮಾತುಗಳನ್ನು…

  • ಸ್ಪೂರ್ತಿ

    6 ನೇ ತರಗತಿ ಫೈಲ್ ಆಗಿದ್ದ ಈ ಹುಡುಗ ಈಗ ಕೋಟಿ ಕೋಟಿ ಅಧಿಪತಿ, ಮಾಡುವ ಕೆಲಸ ಏನು.

    ನಮಗೆ ಕೆಲವು ಸಮಯದಲ್ಲಿ ಧಿಡೀರನೆ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಕೆಲವೊಮ್ಮೆ ನಮ್ಮ ಜೀವನವನ್ನ ಬದಲಾಯಿಸಬಹುದು ಅನ್ನುವುದಕ್ಕೆ ಉತ್ತಮ ಉದಾಹರಣೆ ಇದಾಗಿದೆ. ಹೌದು ಕೆಲವೊಮ್ಮೆ ನಮ್ಮ ತಲೆಯಲ್ಲಿ ಬರುವ ಕೆಲವು ಯೋಚನೆಗಳು ಬೇರೆಯವರಿಗೆ ತಮಾಷೆ ಅನಿಸಿದರೂ ಅದೂ ಕೆಲವೊಮ್ಮೆ ನಮ್ಮ ಜೀವನದ ಹಾದಿಯನ್ನೇ ಬದಲಾಯಿಸಬಹುದು. ಹೌದು ಕೇರಳಕ್ಕೆ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ್ದ ಈ ಹುಡುಗನ ಹೆಸರು ಮುಸ್ತಫಾ, ಮುಸ್ತಫಾ ಅವರು ವಾಸವಿದ್ದ ಊರಿನಲ್ಲಿ ಸರಿಯಾದ ರಸ್ತೆ ಮತ್ತು ನೀರು ಇರಲಿಲ್ಲ ಮತ್ತು ಅವರ ಊರಿನಲ್ಲಿ ಕೇವಲ…