ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವು ಅನಾಮಿಕ ವ್ಯಕ್ತಿಗಳು ನಮ್ಮ ಮೊಬೈಲ್’ಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಾರೆ.ಅವರು ಯಾರೂ ಎಂದು ನಮಗೆ ತಿಳಿಯುವುದಿಲ್ಲ.ಹಾಗಾಗಿ ನಾವು ಹೆಚ್ಚಾಗಿ ಈಗ ನಮ್ಮ ಮೊಬೈಲ್’ಗಳಲ್ಲಿ ಟ್ರೂ ಕಾಲರ್ ಆ್ಯಪ್’ನ್ನು ಬಳಸುವುದು ಹೆಚ್ಚು.ನಮ್ಮ ಮೊಬೈಲ್‍ನಲ್ಲಿ ನಂಬರ್ ಸೇವ್ ಆಗದೇ ಇದ್ದರೂ ಅಪರಿಚತರು ಕರೆ ಮಾಡಿದಾಗ ಅವರ ಹೆಸರು ನಮ್ಮ ಮೊಬೈಲ್‍ನಲ್ಲಿ ಕಾಣುತ್ತದೆ. ಹಾಗಾಗಿ ಅನಾಮಿಕ ಕರೆಗಳಿಂದ ಪಾರಾಗಬಹುದು ಎಂದು ನಾವು ಟ್ರೂ ಕಾಲರ್ ಆ್ಯಪ್ ಅನ್ನು ಮೊಬೈಲ್‍ಗೆ ಡೌನ್‍ಲೋಡ್ ಮಾಡಿಕೊಂಡಿರುತ್ತೇವೆ.
ನಿಜ ವಿಷಯ ಏನಪ್ಪಾ ಅಂದರೆ ಅನಾಮಿಕನ ಕರೆ ವಿವರ ನಮಗೆ ಲಭಿಸಿದಷ್ಟೇ ಮಾಹಿತಿ ಕರೆ ಮಾಡಿದವನಿಗೂ ಸಿಗುತ್ತದೆ. ಅಲ್ಲದೇ ನಮ್ಮ ಮೊಬೈಲ್‍ನಲ್ಲಿನ ಎಲ್ಲಾ ಮಾಹಿತಿ ಸೋರಿಕೆಯಾಗಿ ಮತ್ತೊಬ್ಬರ ಕೈಗೆ ಸಿಗುತ್ತಿದೆ. ಆದರೆ ಅದು ನಮಗೆಗೊತ್ತೇ ಆಗುವುದಿಲ್ಲ. ಹಾಗಾಗಿ ಟ್ರೂ ಕಾಲರ್ ಮೊಬೈಲ್ ಅಪ್ಲಿಕೇಶನ್ ಬಗ್ಗೆ ನಾವು ಎಚ್ಚರದಿಂದಿರುವುದು ಬಹಳ ಸೂಕ್ತ.
ನಮ್ಮ ಮೊಬೈಲ್ ನಲ್ಲಿ ಸೇವ್ ಆಗದೆ ಇರುವ ನಂಬರ್ ಗಳಿಂದ ನಮಗೇನಾದರೂ ಕರೆ ಬಂದರೆ ಕರೆ ಮಾಡಿದವರ ಹೆಸರು, ಮತ್ತು ಅದರಲ್ಲಿರುವ ಇತರ ಮಾಹಿತಿಗಳನ್ನು ನಮ್ಮ ಮೊಬೈಲ್ ಸ್ಕ್ರೀನ್ ಮೇಲೆ ತೋರಿಸುತ್ತದೆ. ಅದು ಹೇಗೆ ಅಂತ ಗೊತ್ತಾ? ‘ಟ್ರೂ ಕಾಲರ್ ಗೆ ಈ ಎಲ್ಲಾ ಮಾಹಿತಿಗಳು ಎಲ್ಲಿಂದ ಸಿಗುತ್ತವೆ’ ಎಂಬ ಸುಳಿವು ನಮಗೆ ದೊರೆತಿದೆಯೇ?
ಅವರು ಈ ಮಾಹಿತಿಗಳನ್ನೆಲ್ಲಾ ನಮ್ಮಿಂದಲೇ, ಅಂದರೆ ನಾವು ಯಾರೆಲ್ಲಾ ಟ್ರೂ ಕಾಲರ್ ಆ್ಯಪ್ ಉಪಯೋಗಿಸುತ್ತೀರೋ ಅವರಿಂದಲೇ ಪಡೆದಿರುತ್ತಾರೆ. ಈ ಆ್ಯಪ್ ಅನ್ನು ಉಪಯೋಗಿಸುವ ಮೂಲಕ ನಾವು ನಮ್ಮ ಬಗ್ಗೆ ಮಾಹಿತಿ ಅಷ್ಟೇ ಅಲ್ಲ, ಯಾರೆಲ್ಲ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇವ್ ಆಗಿದ್ದಾರೋ ಅವರ ಬಗ್ಗೆ ಮಾಹಿತಿಯನ್ನೂ ಈ ಸಂಸ್ಥೆಗೆ ನೀಡುತ್ತಿರುತ್ತೀವಿ. ಇಲ್ಲಿ ಓದಿ:-ನಿಮ್ಮ ಸ್ಮಾರ್ಟ್ ಫೋನ್’ನ ಈ 8 ಸೀಕ್ರೆಟ್ ಆಪ್ಷನ್ಸ್’ಗಳು ನಿಮ್ಗೆ ಗೊತ್ತಿದೆಯೇ?
ಟ್ರೂ ಕಾಲರ್ ಆಪ್ ಇನ್‌ಸ್ಟಾಲ್ ಮಾಡಿದ ನಮ್ಮ ಮೊಬೈಲ್‌ನಲ್ಲಿ ಸಂಗ್ರಹವಾಗಿರುವ ಸಂಪರ್ಕ ಸಂಖ್ಯೆಗಳ (ಕಾಂಟಾಕ್ಟ್ಸ್) ಒಳಪ್ರವೇಶಿಸಿಬಿಡುತ್ತದೆ ಮತ್ತು ಯಾವೆಲ್ಲಾ ಸಂಖ್ಯೆಗಳಿವೆಯೋ, ಅವನ್ನೆಲ್ಲಾ ಅನಾಮತ್ತಾಗಿ ಎತ್ತಿಕೊಂಡು, ತನ್ನ ಮೆಮೊರಿಗೆ ಅವುಗಳನ್ನು ಕಾಪಿ ಮಾಡಿಕೊಂಡುಬಿಟ್ಟಿರುತ್ತದೆ.ಇದರಿಂದ ಯಾರಾದರೂ ಒಂದು ಹೆಸರು ಅಥವಾ ನಂಬರ್ ಟ್ರೂ ಕಾಲರ್ ನಲ್ಲಿ ಸರ್ಚ್ ಮಾಡಿದಾಗ ನಮ್ಮ ಮತ್ತು ನಮ್ಮ ಸಂಪರ್ಕದಲ್ಲಿರುವವರ ಮಾಹಿತಿ ಅದೆಷ್ಟೋ ಜನರಿಗೆ ಸುಲಭವಾಗಿ ಸಿಗುತ್ತದೆ. ನಮಗೆ ಇದು ಸರಿ ಎನಿಸುತ್ತದೆಯೇ? ಅವರಲ್ಲಿ ಕೇಳದೇನೆ ನಾವು ನಮ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ತಪ್ಪಲ್ಲವೇ?
ಟ್ರೂ ಕಾಲರ್ ಹೇಗೆ ಕೆಲಸ ಮಾಡುತ್ತದೆ ಗೊತ್ತಾ?
ನಾವು ಟ್ರೂ ಕಾಲರ್ ಆ್ಯಪ್ ಅನ್ನು ನಮ್ಮ ಫೋನ್ ನಲ್ಲಿ ಇನ್ಸ್ಟಾಲ್ ಮಾಡಿದಾಗ ಅದು ಸುಲಭವಾಗಿ ನಮ್ಮ ಫೋನ್ ನಲ್ಲಿರುವ ಪ್ರತಿಯೊಂದು ಕಾಂಟ್ಯಾಕ್ಟ್ ನಂಬರ್ ಮತ್ತು ಇತರ ಮಾಹಿತಿಗಳನ್ನು ತನ್ನ ಸರ್ವರ್ ಗೆ ರವಾನೆ ಮಾಡುತ್ತದೆ. ಯಾರಾದರೂ ಒಂದು ಮೊಬೈಲ್ ನಂಬರ್ ಅಥವಾ ಒಂದು ಹೆಸರನ್ನು ಸರ್ಚ್ ಮಾಡಿದಾಗ ಟ್ರೂ ಕಾಲರ್ ನಮ್ಮಿಂದ ಪಡೆದುಕೊಂಡ ಮಾಹಿತಿಗಳನ್ನು, ನಂಬರ್ ಗಳನ್ನು ಹುಡುಕುವವರಿಗೆ ರಿಸಲ್ಟ್ ಆಗಿ ಕೊಡುತ್ತದೆ. ಟ್ರೂ ಕಾಲರ್ ಕೆಲಸ ಮಾಡುವುದೇ ಹೀಗೆ… ಪ್ರಪಂಚಾದಾದ್ಯಂತ ಇರುವ ಎಲ್ಲಾ ಫೋನ್ ನಂಬರ್ ಗಳನ್ನು, ಹೆಸರು ಸಮೇತ ಪಡೆದುಕೊಂಡು ಅದನ್ನೇ ಇನ್ನೊಂದು ರೂಪದಲ್ಲಿ ನಮಗೆ ಒದಗಿಸುತ್ತದೆ.
ನಾವು ಟ್ರೂ ಕಾಲರ್ ಆ್ಯಪ್ ನಮ್ಮ ಫೋನ್ ನಲ್ಲಿ ಇನ್ ಸ್ಟಾಲ್ ಮಾಡದೇ ಇದ್ದರೂ, ನಾವು ಟ್ರೂ ಕಾಲರ್ ವೆಬ್ ಸೈಟ್ ನಲ್ಲಿ ಯಾವುದಾದರೂ ಹೆಸರು ಮತ್ತು ನಂಬರ್ ಹುಡುಕಲು ಹೋದರೆ ಅದು ನಮ್ಮನ್ನು ಫೇಸ್ ಬುಕ್, ಗೂಗಲ್, ಯಾಹೂ ಅಥವಾ ಮೈಕ್ರೋಸಾಫ್ಟ್ ಖಾತೆಗಳ ಮೂಲಕ ಸೈನ್ ಇನ್ ಆಗಲು ಸೂಚಿಸುತ್ತದೆ. ಯಾಕೆಂದರೆ ಹೆಚ್ಚಿನ ಜನರು ತಮ್ಮ ಫೋನ್ ನಂಬರ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುತ್ತೇವೆ. ಹೀಗೆ ನಾವು ನಮ್ಮ ಸಾಮಾಜಿಕ ಪ್ರೊಫೈಲ್ ಗಳ ಮೂಲಕ ಟ್ರೂ ಕಾಲರ್ ವೆಬ್ ಸೈಟ್ ಗೆ ಹೋದಾಗ ಅದು ನಮ್ಮ ಮತ್ತು ನಿಮ್ಮ ಗೆಳೆಯರ ನಂಬರ್ ಮತ್ತು ಹೆಸರುಗಳನ್ನೂ ಕಸಿದುಕೊಳ್ಳುತ್ತದೆ.
ಯಾಕೆ ಉಪಯೋಗಿಸಬಾರದು?
ಈ ಆ್ಯಪ್ ಅನಗತ್ಯ ಸ್ಪ್ಯಾಮ್ ಕಾಲ್ ಗಳನ್ನು ತಡೆಗಟ್ಟುವುದು ತಮ್ಮ ಪ್ರಥಮ ಕೆಲಸ ಎಂದು ಹೇಳಿಕೊಳ್ಳುತ್ತದೆ. ಆದರೆ ನಿಜವಾದ ವಿಷಯ ಏನೆಂದರೆ, ಈ ಆ್ಯಪ್ ಬಳಸಿದರೆ, ಅನಗತ್ಯ ಕರೆಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ಆ್ಯಪ್ ಬಳಸದೇ ಇದ್ದರೂ ನೀಮಗೆ ಅಪರಿಚಿತ ಕರೆ ಬರುತ್ತಿದ್ದರೆ, ನಿಮ್ಮ ಕಾಲ್ ಲಿಸ್ಟ್ ನಲ್ಲಿರುವ ಗೆಳೆಯರು ಈ ಆ್ಯಪ್ ಬಳಸುತ್ತಿದ್ದಾರೆ. ಅದು ಪರಿಣಾಮ ಇದು ಎಂದು ನೀವು ಅರಿತುಕೊಳ್ಳಬೇಕು.
ನಾವೇನು ಮಾಡಬೇಕು?
ನಿಮ್ಮ ಮಾಹಿತಿಯನ್ನು ಆದಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಷೇರ್ ಮಾಡದೆ ಗುಪ್ತವಾಗಿಡುವುದು ಸುರಕ್ಷಿತ ವಿಧಾನ.ನೀವು ಅಂತರ್ಜಾಲದಲ್ಲಿ ಏನೆಲ್ಲಾ ಮಾಹಿತಿ ಹಾಕುತ್ತೀರೋ ಅದೆಲ್ಲಾ ಸಾರ್ವಜನಿಕವಾಗಿ ತಕ್ಷಣ ಅಥವಾ ಸ್ವಲ್ಪ ತಡವಾಗಿಯಾದರೂ ಬಹಿರಂಗವಾಗುತ್ತದೆ ಎಂದು ನೆನಪಿರಲಿ.
ಇಷ್ಟೆಲ್ಲಾ ತಿಳಿದ ಮೇಲೆ ನಿಮಗೇನಾದರೂ ಟ್ರೂ ಕಾಲರ್ ಆ್ಯಪ್ ನಿಂದ ಹೊರ ಬರಬೇಕು ಅನಿಸಿದರೆ, ತಡಮಾಡಬೇಡಿ ಟ್ರೂ ಕಾಲರ್ ಆ್ಯಪ್ ಗೆ ಹೋಗಿ ಅನ್-ಲಿಸ್ಟ್ ಗೆ ಕ್ಲಿಕ್ ಮಾಡಿ. ಅಷ್ಟೇ! ನೀವು ಅಲ್ಲಿಂದ ಹೊರ ಬಂದಾಯ್ತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ಕಾರವು ಈಗಾಗಲೇ ಆರೋಗ್ಯ ಭಾಗ್ಯ,ಶಾದಿ ಭಾಗ್ಯ,ಜ್ಯೋತಿ ಭಾಗ್ಯ ಅನ್ನ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ಕೊಟ್ಟಿದೆ.ಈಗ ಇದಕ್ಕೆ ಮತ್ತೊಂದು ಭಾಗ್ಯ ಸೇರ್ಪಡೆಯಾಗಿದೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ, ಎಲ್ಲರಿಗೂ ಅವರ ಜೀವನದಲ್ಲಿ ಅವರದೇ ಆದ ಕೆಲವು ಬಿಟ್ಟುಕೊಡದ ರಹಸ್ಯಗಳಿರುತ್ತವೆ. ಆಯಾ ಕಾಲ, ಸಂದರ್ಭದಲ್ಲಿ ಪ್ರತಿಯೊಬ್ಬರೂ ಗುಟ್ಟು ಇಟ್ಟುಕೊಂಡಿರುತ್ತಾರೆ. ತಮ್ಮ ಪರಮಾಪ್ತರಲ್ಲಿ ಕೂಡ ಕೆಲವೊಂದನ್ನು ಹಂಚಿಕೊಳ್ಳುತ್ತಾರಷ್ಟೆ.
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ತೆಲುಗು ಚಿತ್ರ ‘ಸೈರಾ ನರಸಿಂಹ ರೆಡ್ಡಿ’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಜಗಪತಿಬಾಬು, ಅನುಷ್ಕಾ ಶೆಟ್ಟಿ, ನಯನ ತಾರಾ, ತಮನ್ನಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ರಾಮ್ ಚರಣ್ ತೇಜ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸುಧೀಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ಈಗಾಗಲೇ ‘ಸೈರಾ ನರಸಿಂಹ…
ಮೇಷ ರಾಶಿ ಭವಿಷ್ಯ (Wednesday, December 8, 2021) ಮನರಂಜನೆ ಮತ್ತು ಮೋಜಿನ ಒಂದು ದಿನ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ನಿಮ್ಮ ವರ್ತನೆಯಲ್ಲಿ, ವಿಶೇಷವಾಗಿ ನಿಮ್ಮ ಸಂಗಾತಿಯ ಜೊತೆ, ತಾಳ ತಪ್ಪದಿರಲಿ. ಇಲ್ಲವಾದರೆ ಅದು ಮನೆಯಲ್ಲಿನ ಶಾಂತಿಯನ್ನು ಹಾಳಾಗಿಸಬಹುದು. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಯಾರಾದರೂ ಕೆಲಸದಲ್ಲಿ ನಿಮಗೆ ಅಡ್ಡಿ ಮಾಡಬಹುದು – ಆದ್ದರಿಂದ ಏನಾಗುತ್ತದೆ ಎನ್ನುವುದರ ಬಗ್ಗೆ ಗಮನವಿರಲಿ. ಹೆಚ್ಚು ಜನರನ್ನು ಭೇಟಿಯಾದಾಗ ಅಸಮಾಧಾನಗೊಳ್ಳುವಂತಹ ವ್ಯಕ್ತಿತ್ವ ನಿಮ್ಮದು ಮತ್ತು ನಿಮಗಾಗಿ ಸಾಮ್ಯವನ್ನು ತೆಗೆಯಲು ಪ್ರಯತ್ನಿಸುತ್ತೀರಿ. ಈ ಸಂದರ್ಭದಲ್ಲಿ…
ಆನ್‌ಲೈನ್ ನಲ್ಲಿ ಹುಡುಗಿ ಸಿಗುತ್ತಾಳೆ ಎಂದು ಹುಡುಗರು ಚಾಟ್ ಮಾಡುತ್ತಾ ಸ್ವಲ್ಪ ಯಾಮಾರಿದ್ರೂ ಲಕ್ಷ ಲಕ್ಷ ಹಣ ದೋಚುವವರು ಇದ್ದಾರೆ. ಇಂತಹ ಆನ್‌ಲೈನ್ ದೋಖಾ ಪ್ರಕರಣಗಳ ಉದಾಹರಣೆಗಳು ಸಾಕಷ್ಟಿದ್ದರೂ ಮತ್ತೆ ಕೆಲವರು ಆನ್‌ಲೈನ್ ನಲ್ಲಿ ಪರಿಚಯವಾದವರಿಂದ ಪದೇ ಪದೇ ಮೋಸ ಹೋಗುತ್ತಿರುತ್ತಾರೆ.
ಕೆಲ ದಿನಗಳ ಹಿಂದೆ ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಯಾರಾದರೂ ಸತ್ತರೆ ಪರೀಕ್ಷೆ ಮುಂದೂಡುತ್ತಾರೆಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತನ್ನದೇ ಶಾಲೆಯ ಪುಟ್ಟ ಬಾಲಕನನ್ನು ಹತ್ಯೆ ಮಾಡಿದ್ದ.