ಸುದ್ದಿ

ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತ್ನಿಯನ್ನು ಕೊಂದ ಪತಿ…….!

81

ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ತಮಿಳು ನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.ನಂದಿನಿ(28) ಕೊಲೆಯಾದ ದುರ್ದೈವಿ. ನಂದಿನಿ ಪ್ರೈವೇಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕಟ್ಟಡ ನಿರ್ಮಾಣ ಕಾರ್ಮಿಕ ಕನಕ ರಾಜುನನ್ನು ಮದುವೆ ಆಗಿದ್ದಳು. ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಕೂಡ ಇದ್ದಾರೆ. ನಂದಿನಿ ಹಾಗೂ ಕನಕ ರಾಜು ಎರಡು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ನಂದಿನಿ ತನ್ನ ಪತಿ ಕನಕ ರಾಜುನಿಂದ ದೂರ ಆಗಿ ಟಿಕ್‍ಟಾಕ್‍ಗೆ ಅಡಿಕ್ಟ್ ಆಗಿ ಅದನ್ನು ಅಪ್ಲೋಡ್ ಮಾಡುತ್ತಿದ್ದಳು. ಇದನ್ನು ನೋಡಿದ ಆಕೆಯ ಪತಿ ಕನಕ ರಾಜು, ಟಿಕ್‍ಟಾಕ್ ವಿಡಿಯೋ ಅಪ್ಲೋಡ್ ಮಾಡದಂತೆ ಎಚ್ಚರಿಸಿದ್ದನು. ಅಲ್ಲದೆ ತನ್ನ ಮನೆಗೆ ಹಿಂದಿರುಗಿ ಕುಟುಂಬದ ಜೊತೆ ವಾಸಿಸಲು ಹೇಳಿದ್ದನು.

ಆದರೆ ನಂದಿನಿ ತನ್ನ ಪತಿಯ ಮಾತನ್ನು ಕೇಳಲಿಲ್ಲ. ನಂದಿನಿಗೆ ಕನಕ ರಾಜು ಸಾಕಷ್ಟು ಬಾರಿ ಕರೆ ಮಾಡಿದ್ದನು. ಆದರೆ ಆಕೆಯ ಮೊಬೈಲ್ ಬ್ಯುಸಿ ಬರುತ್ತಿತ್ತು. ಇದರಿಂದ ಕೋಪಗೊಂಡ ಕನಕ ರಾಜು ಕುಡಿದು ಪತ್ನಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಗಲಾಟೆ ಮಾಡಿದ್ದಾನೆ.ಈ ವೇಳೆ ನಂದಿನಿ ಹಾಗೂ ಕನಕ ರಾಜು ನಡುವಿನ ಜಗಳ ವಿಕೋಪಕ್ಕೆ ತಲುಪುತ್ತಿದ್ದಂತೆ ಕನಕ ರಾಜು ಪತ್ನಿ ನಂದಿನಿಯನ್ನು ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ನಂದಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ದೇಹದಿಂದ ತೀವ್ರ ರಕ್ತಸ್ತ್ರಾವ ಆಗುತ್ತಿತ್ತು.

ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ ನಂದಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಅಲ್ಲದೆ ಆರೋಪಿ ಕನಕ ರಾಜುನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಮನರಂಜನೆ

    ಕೊನೆಗೂ ಕಾಮನ್ ಮ್ಯಾನ್’ಗೆ ಸಿಗದ ಬಿಗ್ ಬಾಸ್ ಪಟ್ಟ..!ಕೇವಲ ಒಂದು ಲಕ್ಷ ಕೊಟ್ಟಿದ್ದು ಸರಿಯೇ..?ಏನಾಯ್ತು ಮುಂದೆ ನೋಡಿ…

    ಕೊನೆಗೂ ಬಿಗ್ ಬಾಸ್ ಕನ್ನಡ ಸಂಚಿಕೆ 5 ಕಾರ್ಯಕ್ರಮಕ್ಕೆ ಭರ್ಜರಿಯಾಗಿ ತೆರೆ ಬಿದ್ದಿದೆ.ಈ ಸಲದ ಬಿಗ್ ಬಾಸ್ ಸಂಚಿಕೆಯಲ್ಲಿ ಕಾಮಾನ್ ಮ್ಯಾನ್’ಗೂ ಕೂಡ ಕಲರ್ಸ್ ಕನ್ನಡ ವಾಹಿನಿಯವರು ಅವಕಾಷ ಕೊಟ್ಟಿದ್ದರು.ಕಾಮಾನ್ ಮ್ಯಾನ್’ಗಳಾಗಿ ದಿವಾಕರ್,ಸಮೀರ್ ಆಚಾರ್ಯ ಮತ್ತು ರಿಯಾಜ್ ರವರು ಭಾಗವಹಿಸಿ

  • Animals

    ಹೆಚ್ಚು ಬುದ್ಧಿಶಾಲಿಯಾಗಿರುವ ಜರ್ಮನ್ ಶೆಫರ್ಡ್

    ಜರ್ಮನ್ ಶೆಫರ್ಡ್: ಜರ್ಮನಿಯಲ್ಲಿ ಹುಟ್ಟಿದ ಮಧ್ಯಮದಿಂದ ದೊಡ್ಡ ಗಾತ್ರದ ಕೆಲಸ ಮಾಡುವ ನಾಯಿಯ ತಳಿಯಾಗಿದೆ. ಇಂಗ್ಲಿಷ್ ಭಾಷೆಯಲ್ಲಿ, ತಳಿಯ ಅಧಿಕೃತವಾಗಿ ಗುರುತಿಸಲ್ಪಟ್ಟ ಹೆಸರು ಜರ್ಮನ್ ಶೆಫರ್ಡ್ ಡಾಗ್ (ಜಿಎಸ್ಡಿ). ಈ ತಳಿಯನ್ನು ಅಧಿಕೃತವಾಗಿ ಯುಕೆ ನಲ್ಲಿ ಅಲ್ಸಟಿಯನ್ ಎಂದು ಕರೆಯಲಾಗುತ್ತಿತ್ತು, ಮೊದಲ ವಿಶ್ವಯುದ್ಧದ ನಂತರ 1977 ರವರೆಗೆ ಅದರ ಹೆಸರನ್ನು ಜರ್ಮನ್ ಶೆಫರ್ಡ್ ಎಂದು ಬದಲಾಯಿಸಲಾಯಿತು. ಅದರ ಪ್ರಾಚೀನ, ತೋಳದ ತರಹದ ನೋಟದ ಹೊರತಾಗಿಯೂ, ಜರ್ಮನ್ ಶೆಫರ್ಡ್ ತುಲನಾತ್ಮಕವಾಗಿ ಆಧುನಿಕ ತಳಿಯ ನಾಯಿಯಾಗಿದ್ದು, ಅವುಗಳ ಮೂಲವು 1899…

  • ಸ್ಪೂರ್ತಿ

    ಈ ಪುಟ್ಟ ಬಾಲಕ ಮನೆಯಲ್ಲೇ ಕೂತು ಸಂಪಾದಿಸುತ್ತಾನೆ ಲಕ್ಷ ಲಕ್ಷ.!ಅಷ್ಟಕ್ಕೂ ಇವನು ಮಾಡುವ ಕೆಲಸ ಏನ್ ಗೊತ್ತಾ.?ಇದನ್ನು ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ತಮ್ಮ ಕನಸು ಈಡೇರಿಸಿಕೊಳ್ಳಲು  ಇಡೀ ಜೀವನವನ್ನೇ ವ್ಯಯಿಸಬೇಕಾಗುತ್ತದೆ. ಮತ್ತು ಕೆಲವರಿಗೆ ತಮ್ಮ ಟ್ಯಾಲೆಂಟ್‍ನಲ್ಲಿತಮ್ಮೆಲ್ಲ ಕನಸ್ಸು ಬಹುಬೇಗನೆ ಈಡೇರಿ ಬಿಡುತ್ತದೆ. ಯಾವುದೇ ವ್ಯಕ್ತಿಯಲ್ಲಿ ಟ್ಯಾಲೆಂಟ್ ಇದ್ದರೆ ಅಂತಹವರನ್ನು ಯಾರಿಂದಲೂ ತಡೆಹಿಡಿಯಲು ಸಾಧ್ಯವಿಲ್ಲ. ಆರುವರ್ಷದ ಈ ಮಗು ಕೂಡಾ ಇದ್ದಾನೆ. ವಯಸ್ಸಿನಲ್ಲಿ ಕೇವಲ ಆರುವರ್ಷ ಮಾತ್ರ ಆತನಿಗೆ ಆಗಿದೆ.  ಅಷ್ಟರಲ್ಲಿಯೇ ಅವನು ಬಹಳಷ್ಟು ಸಂಪಾದಿಸಿದ್ದಾನೆ. ವೀಡಿಯೊ ಮಾಡಿ ಸ್ಟಾರ್ ಆದ:- ಈ ಮಗುವಿನ ಹೆಸರು ನಿಹಾಲ್ ರಾಜ್. ಕೊಚ್ಚಿಯಲ್ಲಿ ಅವನ ಮನೆಯಿದೆ. ನಿಹಾಲ್ …

  • ಸುದ್ದಿ

    Video Game; 4 ತಿಂಗಳಲ್ಲಿ 30 ಗೇಮ್‌ ರಚಿಸಿ ಅಚ್ಚರಿ ಮೂಡಿಸಿದ ಬಾಲಕ,.!!

    ಮಕ್ಕಳು ಮೊಬೈಲ್‌ ಹಿಡಿದುಕೊಂಡರೆ, ಮೊದಲು ಹುಡುಕುವುದು ಗೇಮ್ಸ್ ಇದೆಯೇ ಎಂದು! ಅದಾದ ಬಳಿಕ ವಿಡಿಯೋ, ಕ್ಯಾಮರಾ ಎಂದೆಲ್ಲ ವಿವಿಧ ಆಯ್ಕೆಗಳನ್ನು ಹುಡುಕುತ್ತಾರೆ. ಅಲ್ಲದೆ ಮೊಬೈಲ್, ಕಂಪ್ಯೂಟರ್ ಮತ್ತು ಟ್ಯಾಬ್ ಬಳಕೆಯನ್ನು ಕೂಡ ಬಹಳ ಬೇಗನೆ ಕಲಿತುಕೊಂಡು ಬಿಡುತ್ತಾರೆ. ಹೀಗೆ ಸ್ಮಾರ್ಟ್ ಆಗಿರುವ ನೈಜೀರಿಯಾದ 9 ವರ್ಷದ ಬಾಲಕನೊಬ್ಬ ನಾಲ್ಕೇ ತಿಂಗಳಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್‌ಗಳಿಗಾಗಿ 30 ಗೇಮ್‌ಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ಈ ಬಾಲಕನ ಹೆಸರು ಬೇಸಿಕ್‌ ಓಕ್ಪರಾ ಜ್ಯೂ. ಲಾಗೋಸ್‌ ನಿವಾಸಿಯಾಗಿರುವ…

  • ಆರೋಗ್ಯ

    ಗಂಟಲು ನೋವಿಗೆ ಮನೆಯಲ್ಲೇ ಔಷಧಿ ಸುಲಭವಾಗಿ ತಯಾರಿಸ ಬಹುದು ಈ ಲೇಖನ ಓದಿ ತಿಳಿಯಿರಿ….

    ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟ ವಾಗುತ್ತದೆ. ಆಹಾರ ಸೇವಿಸಲು ಸಹ ಕಷ್ಟ ವಾಗುತ್ತದೆ. ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮ ಮಾತುಗಳು ಕೇಳಿಸುವುದೇ ಇಲ್ಲ.

  • ಉಪಯುಕ್ತ ಮಾಹಿತಿ

    ಗ್ರೀನ್ ಟೀ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..!ತಿಳಿಯಲು ಈ ಲೇಖನ ಓದಿ ಮತ್ತು ಮರೆಯದೇ ಶೇರ್ ಮಾಡಿ ಬೇರೆಯವರಿಗೂ ಉಪಯೋಗವಾಗಲಿ…

    ಇಂದಿನ ದಿನಗಳಲ್ಲಿ ಆರೋಗ್ಯಕ್ಕೆ ಹಸಿರು ಟೀ ಅಥವಾ ಗ್ರೀನ್ ಟೀ ಅತ್ಯುತ್ತಮ ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ಈ ಟೀ ಸೇವನೆಯ ಮೂಲಕ ದೇಹಕ್ಕೆ ಹಲವು ವಿಧದ ಪೋಷಕಾಂಶಗಳು ಲಭ್ಯವಾಗುತ್ತದೆ, ಇವು ದೇಹವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಒಂದು ದಿನಕ್ಕೆ ಮೂರು ಕಪ್ ನಷ್ಟು ಹಸಿರು ಟೀ ಕುಡಿದರೆ ಹಲವಾರು ಕಾಯಿಲೆಗಳು ಬರುವುದರಿಂದ ತಪ್ಪಿಸಿಕೊಳ್ಳಬಹುದು. ಬೆಳಗಿನ ಉಪಹಾರದ ಜೊತೆ, ಒಂದು ಕಪ್ ‘ಗ್ರೀನ್ ಟೀ’ ಸೇವಿಸಿ… ಮಧುಮೇಹಿಗಳಿಗೂ ಹಸಿರು ಟೀ ಉತ್ತಮ ಆಯ್ಕೆಯಾಗಿದ್ದು ಇದರ ಸೇವನೆಯಿಂದ ರಕ್ತದಲ್ಲಿರುವ…