ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸದ್ಯ ಭಾರತದಲ್ಲಿ ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಟೆಡ್ ಡಾಟಾ ಆಫರ್ ನೀಡವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು ರಿಲಯನ್ಸ್ ಜಿಯೋ ಸಂಸ್ಥೆ. ತನ್ನ ಜನಪ್ರಿಯ ಯೋಜನೆಯಾದ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಿ, ಇನ್ಮೇಲೆ ಜಿಯೋ ಫ್ರೀ ವಾಯ್ಸ್ ಕಾಲ್ ಅನ್ನು 300 ನಿಮಿಷಗಳಿಗೆ ನಿಗದಿಪಡಿಸಲು ಮುಂದಾಗಿದೆ.
ಯಾಕೆ ಈ ನಿರ್ಧಾರ..!ಯಾರಿಗೆಲ್ಲಾ ಅನ್ವಯಿಸುತ್ತೆ..?
ಹೌದು, ಜಿಯೋ ಗ್ರಾಹಕರು ಇನ್ಮೇಲೆ ದಿನಕ್ಕೆ 300 ನಿಮಿಷ ಮಾತ್ರ ಉಚಿತ ಕರೆ ಮಾಡಬಹುದು. ಇಷ್ಟಕ್ಕೂ ಜಿಯೋ ಸಂಸ್ಥೆಯ ಈ ಕಠಿಣ ನಿರ್ಧಾರಕ್ಕೆ ಕಾರಣ ಕೇಳಿದರೆ ಅಚ್ಚರಿಯಾಗುತ್ತದೆ. ಆದ್ರೆ ಈ ನಿಯಮ ಎಲ್ಲಾ ಜಿಯೋ ಗ್ರಾಹಕರಿಗೂ ಅನ್ವಯವಾಗುವುದಿಲ್ಲ. ಕೆಲವೊಂದು ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ. ಕೆಲ ಜಿಯೋ ಗ್ರಾಹಕರು ಸಂಸ್ಥೆಯ ಈ ಆಫರ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ವೈಯುಕ್ತಿಕ ಬಳಕೆ ನೀಡಲಾಗಿದ್ದ ಈ ಸೇವೆಯನ್ನು ಮುಂದಿಟ್ಟುಕೊಂಡು ಕೆಲ ಖಾಸಗಿ ಸಂಸ್ಥೆಗಳು ತಮ್ಮ ವಾಣಿಜ್ಯಾತ್ಮಕ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿವೆಯಂತೆ.
ಆಫರ್ ಹಿಂತೆಗೆದುಕೊಳ್ಳಲು ಪ್ರಮುಖ ಕಾರಣ…
ಅನ್ ಲಿಮಿಟೆಡ್ ಕಾಲಿಂಗ್ ಸೇವೆಯನ್ನು ಪಡೆದ ಈ ಖಾಸಗಿ ಸಂಸ್ಥೆಗಳು ತಮ್ಮ ಉತ್ಪನ್ನಗಳು ಮತ್ತು ತಮ್ಮ ಸಂಸ್ಥೆಯ ಯೋಜನೆಗಳನ್ನು ಪ್ರಮೋಷನ್ ಗೆ ಬಳಸಿಕೊಳ್ಳುತ್ತಿದ್ದಾರಂತೆ.. ಇದೇ ಕಾರಣಕ್ಕೆ ಇಂತಹ ವಂಚಕ ನಡೆಯನ್ನು ತಪ್ಪಿಸುವ ಉದ್ದೇಶದಿಂದಲೇ ಜಿಯೋ ಸಂಸ್ಥೆ ಈ ಕಠಿಣ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇನ್ನು ಮುಂದೆ ಎಷ್ಟು ಸಮಯ ಕರೆ ಮಾಡಬಹುದು?
ಸಂಸ್ಥೆಯ ಈ ನಿರ್ಧಾರದಿಂದಾಗಿ ಜಿಯೋ ಗ್ರಾಹಕ ಪ್ರತೀ ತಿಂಗಳು ಅಂದರೆ 28 ದಿನಗಳು, 3000 ನಿಮಿಷಗಳಷ್ಟು ಕರೆಗಳನ್ನು ಮಾತ್ರ ಮಾಡಬಹುದು. ಅಂದರೆ ಪ್ರತೀ ನಿತ್ಯ 300 ನಿಮಿಷದಂತೆ ಅಥವಾ 7 ದಿನಕ್ಕೆ 1200 ನಿಮಿಷಗಳಷ್ಟು ಮಾತ್ರ ಕರೆ ಮಾಡಬಹುದಾಗಿದೆ.
ಯಾರಿಗೆಲ್ಲಾ ಈ ಕಾಯಿದೆ ಅನ್ವಯಿಸುತ್ತೆ…
ಯಾರೆಲ್ಲಾ ಜಿಯೋದ ಈ ಅನ್ ಲಿಮಿಟೆಡ್ ಕಾಲ್ ಆಫರ್ ಅನ್ನು ಅತಿಯಾಗಿ ಬಳಸಿಕೊಳ್ಳುತ್ತಿದ್ದಾರೋ ಅವರಿಗೆ 300 ನಿಮಿಷಗಳ ಮಿತಿ ನಿಗದಿಪಡಿಸಲಾಗುತ್ತದೆ. ದಿನಕ್ಕೆ 10 ಗಂಟೆಗಳಷ್ಟು ಕಾಲ ಮಾತನಾಡುವವರಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಪರ್ಣಾ ಲವಕುಮಾರ್ ಈ ಹೆಸರು ನೀವೆಂದಾದರೂ ಕೇಳಿದ್ದೀರಾ? ಬಹುಶಃ ಕ್ಯಾನ್ಸರ್ ಪೀಡಿತರಿಗೆ ನೈಸರ್ಗಿಕ ಕೂದಲಿನ ವಿಗ್ ಮಾಡಿಸುವ ಸಲುವಾಗಿ ಈ ಪೊಲೀಸ್ ಹಿರಿಯ ಅಧಿಕಾರಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಸದ್ಯ ಇವರ ಈ ಮನವೀಯ ನಡೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಕೇರಳ ತ್ರಿಶೂರ್ ಜಿಲ್ಲೆಯ ಇರಿಂಜಲಕೂಡಾದ ನಿವಾಸಿಯಾಗಿರುವ ಅಪರ್ಣಾ ತಮ್ಮ ಮೊಣಕಾಲುದ್ದದ ಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ಬೋಳಿಸಿಕೊಂಡಿರುವುದು ನೆಟ್ಟಿಗರ ಮನ ಗೆದ್ದಿದೆ ಇನ್ನು ತಮ್ಮ ತಲೆ ಕೂದಲು ಬೋಳಿಸುವ ಮೊದಲು ಇವರು ಈ ಬಗ್ಗೆ…
ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.
ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲು ಅ.17ರಿಂದ ತೆರೆಯಲಿದ್ದು, ಭಕ್ತರಿಗೆ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ. ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದಲೂ ಸಹಸ್ತ್ರಾರು ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಕಲ್ಪಿಸಲು ಜಿಲ್ಲಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ನಾಗರಾಜ್, ತಹಸೀಲ್ದಾರ್…
ಸ್ಯಾಂಡಲ್ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಎಂದರೆ ನಮ್ಮೆಲ್ಲರ ಅಚ್ಚುಮೆಚ್ಚಿನ ಜೋಡಿ. ರಾಧಿಕಾ ಪಂಡಿತ್ ಅವರು ಇಂದು ಮುಂಜಾನೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಕುಟುಂಬದವರು ತಿಳಿಸಿದ್ದಾರೆ. ಸದ್ಯ ಮನೆಯಲ್ಲಿ ಜೂನಿಯರ್ ಯಶ್ ಆಗಮನದಿಂದ ಯಶ್ ಮನೆಯವರು ಮತ್ತು ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಇತ್ತೀಚೆಗೆ ರಾಧಿಕಾ ಪಂಡಿತ್…
ತಲೆ ನೋವು ಕಾಣಿಸಿಕೊಳ್ಳಲು ಕಾರಣ ಒಂದಾ ಅಥವಾ ಎರಡ ಅನೇಕ ಕಾರಣಗಳಿವೆ. ಅದರಲ್ಲಿಯೂ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತಾದೆ ಇಂತಹ ಸಂದರ್ಭದಲ್ಲಿ ಮಾತ್ರೆ ಬಳಸದೆ ಮುಕ್ತಿ ಪಡೆಯಬಹುದು. ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು 10 ಸುಲಭ ಪರಿಹಾರಗಳು 1) ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತಾದೆ. 2) ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು…
ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳ ಭಾವಪೂರ್ಣ ಅಭಿನಯದಿಂದಲೇ ಜನ ಮಾನಸವನ್ನು ಆವರಿಸಿಕೊಂಡಿರುವವರು ದಿವಂಗತ ಅಶ್ವತ್ಥ್. ಇಂಥಾ ಅಭಿಜಾತ ಕಲಾವಿದನ ಪುತ್ರ ಶಂಕರ್ ಅಶ್ವತ್ಥ್ ಕಷ್ಟ ನೀಗಿಕೊಳ್ಳಲು ಮೈಸೂರಿನಲ್ಲಿ ಊಬರ್ ಕ್ಯಾಬ್ ಡ್ರೈವರ್ ಆಗಿದ್ದಾರೆಂಬ ಸುದ್ದಿ ಈವತ್ತು ಎಲ್ಲೆಡೆ ಪ್ರಚಾರ ಪಡೆದುಕೊಂಡಿತ್ತಲ್ಲಾ? ಅದು ಗೊತ್ತಾದ ಕೂಡಲೆ ಕೆಲಸ ಕಾರ್ಯ ಬಿಟ್ಟು ಮೈಸೂರಿಗೆ ತೆರಳಿರೋ ಪ್ರಥಮ್ ತಮ್ಮ ‘ಬಿಲ್ಡಪ್ ಚಿತ್ರದಲ್ಲಿ ನಟಿಸೋ ಅವಕಾಶವನ್ನ ಶಂಕರ್ ಅಶ್ವತ್ಥ್ಗೆ ಕೊಟ್ಟು ಜೊತೆಗೆ ಅಡ್ವಾನ್ಸ್ ರೂಪದಲ್ಲಿ ಬ್ಲ್ಯಾಂಕ್ ಚೆಕ್ ಕೊಡೋ ಮೂಲಕ ಆಪತ್ಭಾಂಧವನಾಗಿದ್ದಾರೆ. ಈವತ್ತು…