ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ವರ್ಚುಯಲ್ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ ಬಿಟ್‌ಕಾಯಿನ್” ಕೂಡ ವರ್ಚುಯಲ್, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ. ಮೂಲತಃ ನಾಣ್ಯ- ನೋಟುಗಳಾವುದೂ ಇಲ್ಲದ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್ ಪ್ರಪಂಚಕ್ಕೆ ಸೀಮಿತ. ನಾವೆಲ್ಲ ಪರ್ಸಿನಲ್ಲಿ ದುಡ್ಡು ಇಟ್ಟುಕೊಳ್ಳುತ್ತೇವಲ್ಲ, ಬಿಟ್‌ಕಾಯಿನ್‌ಗಳನ್ನು ಕಂಪ್ಯೂಟರಿನಲ್ಲಿರುವ ಡಿಜಿಟಲ್ ವ್ಯಾಲೆಟ್‌ಗಳಲ್ಲಷ್ಟೆ ಇಟ್ಟುಕೊಳ್ಳುವುದು ಸಾಧ್ಯ

ಬಳಕೆದಾರರು ಹೇಳುವ ಪ್ರಕಾರ ಇದು ಒಂದು ಡಿಜಿಟಲ್ ಕರೆನ್ಸಿ. ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳಿಸಲು ಅಥವಾ ಪಡೆಯಲು ಬಳಸಬಹುದು. ಕೆಲವು ಕಡೆಗಳಲ್ಲಿ ಉತ್ಪನ್ನ ಮತ್ತು ಸೇವೆಗಳನ್ನು ಪಡೆಯಲು ಕೂಡ ಉಪಯೋಗಿಸಬಹುದು. ಷೇರು ಮತ್ತು ಚಿನ್ನದಲ್ಲಿ ಹೂಡಿಕೆ ಬೇಕಾದರೂ ಮಾಡಬಹುದು. ಆದರೆ ಇಲ್ಲಿ ವರ್ಗಾವಣೆಗಳೆಲ್ಲವೂ ಇಂಟರ್‌ನೆಟ್ ಮೂಲಕ ನಡೆಯುತ್ತದೆ. ಬಿಟ್‌ಕಾಯಿನ್‌ನ ಮೌಲ್ಯವನ್ನು ಕೊನೆಯಲ್ಲಿ ನಿಮ್ಮ ಆಯ್ಕೆಯ ಕರೆನ್ಸಿಗೆ ಪರಿವರ್ತಿಸಿಕೊಳ್ಳಬಹುದು.

ಬಿಟ್‌ಕಾಯಿನ್ ವ್ಯವಸ್ಥೆ ಪರಿಚಯವಾದದ್ದು 2009ರಲ್ಲಿ. ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿಯನ್ನು ಬಿಟ್‌ಕಾಯಿನ್ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತದೆ. ಆದರೆ, ಅದು ಯಾರಾದರೂ ನಿಜವಾದ ಹೆಸರೋ ಅಲ್ಲವೋ ಎನ್ನುವುದರ ಬಗ್ಗೆ ಸಾಕಷ್ಟು ಸಂದೇಹಗಳಿವೆ. ಅಷ್ಟೇ ಅಲ್ಲ, ಬಿಟ್‌ಕಾಯಿನ್ ಸೃಷ್ಟಿಯ ಹಿಂದೆ ದೊಡ್ಡದೊಂದು ತಂಡವೇ ಇರುವ ಸಂಶಯ ಕೂಡ ಇದೆ.
ಪ್ರತಿ ದೇಶದಲ್ಲೂ ಚಲಾವಣೆಯಲ್ಲಿರುವ ಕರೆನ್ಸಿಗಳಂತೆ ಬಿಟ್‌ಕಾಯಿನ್ ಅನ್ನು ಯಾವುದೇ ಬ್ಯಾಂಕ್ ಅಥವಾ ಸರಕಾರ ನಿಯಂತ್ರಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಬಿಟ್‌ಕಾಯಿನ್ ಕರೆನ್ಸಿಯನ್ನು ಗೊತ್ತುಗುರಿಯಿಲ್ಲದಂತೆ ಚಲಾವಣೆಗೆ ತರಲಾಗುತ್ತದೆ ಎಂದೇನೂ ಇಲ್ಲ, ಪೂರೈಕೆ ಹೆಚ್ಚಾಗಿ ಹಣದುಬ್ಬರ ಉಂಟಾಗದಂತೆ ತಡೆಯಲು ಪ್ರತಿ ಬಾರಿಯೂ ನಿರ್ದಿಷ್ಟ ಪ್ರಮಾಣದ ಬಿಟ್‌ಕಾಯಿನ್‌ಗಳಷ್ಟೆ ಹೊಸದಾಗಿ ಚಲಾವಣೆಗೆ ಬರುತ್ತವೆ.

ಬಿಟ್‌ಕಾಯಿನ್ ಸಂಪಾದಿಸಬೇಕು ಎನ್ನುವವರು ತಮ್ಮ ಕಂಪ್ಯೂಟರುಗಳಲ್ಲಿ ಒಂದು ವಿಶೇಷ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಬೇಕು. ಅನೇಕ ಜನರು ಹೀಗೆ ಸೇರಿದಾಗ ದೊರಕುವ ಸಂಸ್ಕರಣಾ ಸಾಮರ್ಥಯವನ್ನು ಬಳಸಿಕೊಂಡು ವಿಶ್ವದೆಲ್ಲೆಡೆ ಬಿಟ್‌ಕಾಯಿನ್ ಬಳಕೆದಾರರು ನಡೆಸುವ ವಹಿವಾಟನ್ನೆಲ್ಲ ಸಂಸ್ಕರಿಸುವ ಕೆಲಸ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಸಂಕೀರ್ಣ ಲೆಕ್ಕಾಚಾರಗಳನ್ನು ಕೈಗೊಳ್ಳಬೇಕಾದ್ದರಿಂದ ಅದು ಕ್ಲಿಷ್ಟವಷ್ಟೇ ಅಲ್ಲ, ನಿಧಾನವೂ ಹೌದು. ಈ ಪ್ರಕ್ರಿಯೆ ಮುಂದುವರಿಯುತ್ತ ಹೋದಂತೆ ಅದರಲ್ಲಿ ನೆರವಾದವರಿಗೆ ಬಿಟ್‌ಕಾಯಿನ್ ರೂಪದ ಹಣ ದೊರಕುತ್ತ ಹೋಗುತ್ತದೆ, ಆ ಮೂಲಕ ಚಲಾವಣೆಯಲ್ಲಿರುವ ಬಿಟ್‌ಕಾಯಿನ್‌ಗಳ ಪ್ರಮಾಣವೂ ಹೆಚ್ಚುತ್ತದೆ. ಬಳ್ಳಾರಿಯಲ್ಲಿ ಮಣ್ಣು ಬಗೆಯುವ ಬದಲು ಕಂಪ್ಯೂಟರಿನಲ್ಲಿ ಬಿಟ್‌ಕಾಯಿನ್ ಕೂಡಿಸುವ ಈ ಪ್ರಕ್ರಿಯೆಗೂ ಮೈನಿಂಗ್ ಎಂದೇ ಹೆಸರು. ಈಚೆಗೆ ಬಿಟ್‌ಕಾಯಿನ್ ಗಣಿಗಾರಿಕೆಯ ಈ ಕೆಲಸ ಸಾಧಾರಣ ಕಂಪ್ಯೂಟರುಗಳ ಸಾಮರ್ಥಯವನ್ನು ಮೀರಿ ಬೆಳೆದುಬಿಟ್ಟಿರುವುದರಿಂದ ಅದಕ್ಕೆಂದೇ ಮೈನರ್‌ಗಳೆಂಬ ವಿಶೇಷ ಯಂತ್ರಾಂಶಗಳೂ ತಯಾರಾಗುತ್ತಿವೆ.

ಇತ್ತೀಚೆಗೆ ಒಂದು ಬಿಟ್‌ಕಾಯಿನ್‌ನ ಬೆಲೆ 10,000 ಡಾಲರ್‌ನಷ್ಟು ಏರಿರುವುದು ವಿಶ್ವದೆಲ್ಲೆಡೆ ಆತಂಕಕ್ಕೆ ಕಾರಣವಾಗಿದ್ದು, ಇದನ್ನು ಷೇರು ಮಾರುಕಟ್ಟೆ ಜೂಜು ಎಂದು ಕರೆಯುತ್ತಿದ್ದಾರೆ. ಕೇವಲ 4 ತಿಂಗಳಿನಲ್ಲಿ 6 ಲಕ್ಷ ಬೆಲೆ ಏರಿಕೆಯಾಗಿರುವುದು ಇದಕ್ಕೆ ಉದಾಹರಣೆಯಾಗಿದ್ದು, ಇಷ್ಟೆಲ್ಲ ದುಡ್ಡು ಯಾಕೆ ಸುರಿಯುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.!!

ಇದರ ಅನುಕೂಲಗಳು ಮತ್ತು ಅನಾನುಕುಲಗಳ ಬಗ್ಗೆ ತಿಳಿಯಿರಿ…

ಹಣದ ತ್ವರಿತ ವರ್ಗಾವಣೆಗೆ ಇಲ್ಲಿ ಸಂಸ್ಕರಣೆ ಶುಲ್ಕ ಇರುವುದಿಲ್ಲ. ಇದ್ದರೂ ಅತ್ಯಲ್ಪ. ವಿಶ್ವಾದ್ಯಂತ ಚಲಾವಣೆ ಮಾಡಬಹುದು. ಆದರೆ ಚೀನಾ ಇತ್ತೀಚೆಗೆ ತನ್ನ ಬ್ಯಾಂಕಿಂಗ್ ವಲಯದಲ್ಲಿ ಬಳಕೆಯನ್ನು ನಿಷೇಧಿಸಿದೆ. ಉತ್ಪನ್ನ, ಸೇವೆಗಳ ಖರೀದಿಗೆ ಬಳಸಬಹುದು. ಒಂದು ವೇಳೆ ನಷ್ಟವಾದರೆ ತಡೆದುಕೊಳ್ಳಬಲ್ಲೆ ಎಂಬ ನಂಬಿಕೆ ಇದ್ದರೆ ಹೂಡಿಕೆಯನ್ನೂ ಮಾಡಬಹುದು. ವರ್ಡ್‌ಪ್ರೆಸ್, ರೆಡಿಟ್, ನೇಮ್‌ಚೀಪ್ ಮತ್ತು ಫ್ಲಾಟ್ಟರ್ ಮುಂತಾದ ಆನ್‌ಲೈನ್ ತಾಣಗಳು ಬಿಟ್‌ಕಾಯಿನ್‌ಗಳನ್ನು ನೇರವಾಗಿ ಸ್ವೀಕರಿಸುತ್ತವೆ.

ಬಿಟ್‌ಕಾಯಿನ್‌ಗಳು ಅಪರಾಧಿಗಳಿಗೆ ಆರ್ಥಿಕ ಅಪರಾಧಗಳನ್ನು ಎಸಗಲು ಹಾದಿ ಮಾಡಿಕೊಟ್ಟಿದೆ. ಮಾದಕ ದ್ರವ್ಯಗಳ ಕಳ್ಳಸಾಗಣೆದಾರರಿಗೆ ಹಣ ವರ್ಗಾವಣೆಗೆ ಬಿಟ್‌ಕಾಯಿನ್‌ಗಳು ಬಳಕೆಯಾಗುತ್ತದೆ. ಯಾಕೆಂದರೆ ಇಲ್ಲಿ ಹಣದ ವರ್ಗಾವಣೆ ಯಾರು ಯಾರಿಗೆ ಮಾಡಿದರು ಎಂಬ ವಿವರವನ್ನು ಪತ್ತೆ ಹಚ್ಚಲಾಗುವುದಿಲ್ಲ. ಇದರ ಬೆಲೆ ಕೂಡ ಕ್ಷಣ ಕ್ಷಣಕ್ಕೆ ತೀವ್ರ ಏರಿಳಿತವಾಗುತ್ತಿರುವುದರಿಂದ ಹೂಡಿಕೆದಾರರಿಗೆ ಯಾವಾಗ ಬೇಕಾದರೂ ಭಾರಿ ನಷ್ಟವಾಗಬಹುದು. ಅಲ್ಲದೆ ಬಳಕೆದಾರರು ಹೆಚ್ಚಿದಂತೆ ಲಭ್ಯತೆ ಕಡಿಮೆಯಾಗುತ್ತದೆ.

ಈಗ ಬೇರೊಬ್ಬರ ಬಿಟ್‌ಕಾಯಿನ್‌ಗಳನ್ನು ಕದ್ದು ಬಳಸುವ ವಂಚಕರೂ ಹುಟ್ಟಿಕೊಂಡಿದ್ದಾರೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಬಳಕೆದಾರರ ಸಾವಿರಾರು ಬಿಟ್‌ಕಾಯಿನ್‌ಗಳು ಕಳ್ಳತನವಾದ ಅನೇಕ ಘಟನೆಗಳು ವರದಿಯಾಗಿವೆ. ಅಂತರಜಾಲದಲ್ಲಿರುವ ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳಿಗೂ ಹಲವುಬಾರಿ ಕನ್ನಹಾಕಿದ ಕಳ್ಳರು ಅಲ್ಲೂ ತಮ್ಮ ಕೈಚಳಕ ತೋರಿಸಿದ್ದರು. ಅಂತಹ ಒಂದು ಸಂದರ್ಭದಲ್ಲಿ ಉಂಟಾದ ಗೊಂದಲ ಎಷ್ಟರಮಟ್ಟಿಗಿತ್ತು ಎಂದರೆ ಬಿಟ್‌ಕಾಯಿನ್‌ಗಳ ವಿನಿಮಯ ದರ ಒಮ್ಮೆಲೇ ಹತ್ತಾರು ಪಟ್ಟು ಕುಸಿದು ಅವುಗಳ ಅಸ್ತಿತ್ವಕ್ಕೇ ಸಂಚಕಾರ ಬರುವಂತಹ ಪರಿಸ್ಥಿತಿ ಉಂಟಾಗಿತ್ತು.

ಈ ಡಿಜಿಟಲ್ ಕರೆನ್ಸಿಗೆ ದೇಶದಲ್ಲಿ ಕಾನೂನಿನ ಮಾನ್ಯತೆ ಇಲ್ಲ. ಇವುಗಳ ಖರೀದಿ ಮತ್ತು ವಹಿವಾಟಿನ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸದ್ಯ ಬಿಟ್‌ಕಾಯಿನ್ ಮೇಲೆ ಯಾವುದೇ ಸರಕಾರ ಅಥವಾ ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ವಿವಿಧ ಸರಕಾರಗಳು ಬಿಟ್‌ಕಾಯಿನ್ ಮೇಲೆ ನಿರ್ಬಂಧ ಹೇರಲು ಪ್ರಯತ್ನಿಸಬಹುದು ಎಂಬ ಊಹೆ ಕೂಡ ಇದೆ. ಹಣಕಾಸು ಸಂಸ್ಥೆಗಳು ಬಿಟ್‌ಕಾಯಿನ್ ವಹಿವಾಟಿನಲ್ಲಿ ತೊಡಗದಂತೆ ಕೆಲದಿನಗಳ ಹಿಂದೆ ಚೀನಾದಲ್ಲಿ ಘೋಷಣೆಯಾದ ನಿರ್ಬಂಧ ಇದಕ್ಕೊಂದು ಉದಾಹರಣೆ.
ಸದ್ಯ ಬಿಟ್‌ಕಾಯಿನ್ ಮೇಲೆ ಯಾವುದೇ ಸರಕಾರ ಅಥವಾ ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ವಿವಿಧ ಸರಕಾರಗಳು ಬಿಟ್‌ಕಾಯಿನ್ ಮೇಲೆ ನಿರ್ಬಂಧ ಹೇರಲು ಪ್ರಯತ್ನಿಸಬಹುದು ಎಂಬ ಊಹೆ ಇದೆ.ಬಿಟ್‌ಕಾಯಿನ್ ಮೌಲ್ಯದಲ್ಲಿ ಬಹಳ ಕ್ಷಿಪ್ರವಾಗಿ ಸಂಭವಿಸುವ ಏರಿಳಿತಗಳಿಂದ ಅವುಗಳ ಸ್ಥಿರತೆಯ ಬಗೆಗೂ ಅನುಮಾನ ಮೂಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು. ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು.
2ನೇ ಟೆಸ್ಟ್ ಪಂದ್ಯ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಕೆಎಲ್ ರಾಹುಲ್ ಈ ಪಂದ್ಯಕ್ಕೆ ನಾಯಕ. ಬೆನ್ನುನೋವಿನ ಸೆಳೆತದಿಂದ ವಿರಾಟ್ ಕೊಹ್ಲಿ ಅಲಭ್ಯ,ಹನುಮ ವಿಹಾರಿ ಕಣಕ್ಕೆ ಅಂತಿಮ 11ರ ಬಳಗ ಭಾರತ ಮಾಯಾಂಕ್ ಅಗರ್ವಾಲ್ ಕೆ ಎಲ್ ರಾಹುಲ್(ನಾಯಕ) ಚೇತೇಶ್ವರ ಪೂಜಾರಾ ಅಜಿಂಕ್ಯ ರಹಾನೆ ಹನುಮ ವಿಹಾರಿ ರಿಷಭ್ ಪಂತ್ (ವಿ.ಕೀ) ರವಿಚಂದ್ರನ್ ಅಶ್ವಿನ್ ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ಡೀನ್ ಎಲ್ಗರ್(ನಾಯಕ) ಐಡೆನ್…
![]()
ಮೇಷನಂಬಿಕೆಯೆ ದೇವರು. ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ಎಂಬ ದಾಸವಾಣಿಯನ್ನು ನಿಮ್ಮ ವ್ಯಾಪಾರ, ವ್ಯವಹಾರದ ಬಂಡವಾಳ ಮಾಡಿಕೊಳ್ಳಿ. ಹಾಗಾಗಿ ಕೆಲಸಗಾರರನ್ನು ನಂಬಿ. ಮತ್ತು ಅವರೂ ಕೂಡಾ ನಿಮ್ಮನ್ನು ನಂಬುವಂತೆ ಮಾಡಿ. .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121 ವೃಷಭನಿಮ್ಮ ಪಾಲುಗಾರಿಕೆ ವ್ಯವಹಾರದಲ್ಲಿ ಅತಿ ಹೆಚ್ಚಿನ ಲಾಭಾಂಶವನ್ನು ನಿರೀಕ್ಷಿಸಬಹುದು. ಪಾಲುದಾರರು ನಿಷ್ಠೆಯಿಂದ ಬಂದ ಲಾಭಾಂಶದಲ್ಲಿ ನಿಮ್ಮ ಪಾಲನ್ನು ನೀಡುವರು. ಇದರಿಂದ ಮುಂದಿನ ವ್ಯವಹಾರಗಳು ಸುಗಮವಾಗುವುದು. .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…
ಚುನಾವಣೆ ಹತ್ತಿರವಾದಂತೆ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ಬಿರುಸುಗೊಂಡಿವೆ. ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಸಾರಥ್ಯದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವು ಮೊದಲ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಪಾರರ್ದಶಕ ಹಾಗೂ ಸರಳ ಆಡಳಿತ ನಡೆಸುವ ಭರವಸೆಯನ್ನು ನೀಡಿದ್ದಾರೆ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(19 ಮಾರ್ಚ್, 2019) ಬಾಕಿಯಿರುವ ಮನೆಯ ಕೆಲಸ ಮುಗಿಸಲು ನಿಮ್ಮ ಸಂಗಾತಿಯ ಜೊತೆ ಏರ್ಪಾಡುಗಳನ್ನು ಮಾಡಿ. ನಾಳೆ…
ಇದೆಲ್ಲಾ ಕೇವಲ ನಮ್ಮ ದೇಶದಲ್ಲಿ ಮಾತ್ರ ನಡೆಯುತ್ತೆ. ಇದನ್ನೆಲ್ಲಾ ಓದಿದರೆ ನಾವು ಮಾಡುತ್ತಿರುವುದೆಲ್ಲ ನಿಜವೆನಿಸುತ್ತದೆ!!!