ರಾಜಕೀಯ

ಚಾಮರಾಜ ಕ್ಷೇತ್ರದಿಂದ ಈ ಬಾರಿ ಹರೀಶ್ ಗೌಡರು!ಇದುವರೆಗೂ ನಡೆದ ಚುನಾವಣೆಯಲ್ಲಿ ಗೆದ್ದವರು,ಸೋತವರ ವಿವರ ಇಲ್ಲಿದೆ ನೋಡಿ…

334

ಚಾಮರಾಜ ನಗರ ಮತದಾರರ ಸಂಖ್ಯೆ:-

ಇದುವರೆಗೂ ನಡೆದ ಚುನಾವಣೆಯಲ್ಲಿ ಗೆದ್ದವರು,ಸೋತವರ ವಿವರ ಇಲ್ಲಿದೆ ನೋಡಿ…

ಈ ಕ್ಷೇತ್ರದಲ್ಲಿ  ಇದುವರೆಗೂ ಗೆಲುವನ್ನೇ ಕಾಣದ ಜೆಡಿಎಸ್, ಒಂದುಬಾರಿ ಬಿಜೆಪಿ , ಆಲಿ ಕಾಂಗ್ರೆಸ್ ಮದ್ಯೆ ತೀವ್ರ ಅನಾಹಣಿ ಇದೆ ಆದರೂ ಈ ಪಕ್ಷೇತರ ಅಭ್ಯರ್ಥಿ ಯಾರು ತಿಳಿಯಿರಿ:-

ಇತ್ತೀಚೆಗೆ #CHS ಸಮೀಕ್ಷೆ ಹೊರಬಂದಿದ್ದು ಈ ಸಮೀಕ್ಷೆಯಲ್ಲಿ ಮೈಸೂರಿನ #11_ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಾಗಿದೆ.

ಆ ಪ್ರಕಾರ ನೋಡುವುದಾದರೆ ಇಡೀ ಮೈಸೂರು ಜಿಲ್ಲೆಯಲ್ಲಿ ಪಕ್ಷೇತರವಾಗಿ ಹಾಗೂ ವೈಯುಕ್ತಿಕ ಹೆಚ್ಚು ವರ್ಚಸ್ಸು ಹೊಂದಿರುವ ಗೆಲ್ಲಬಲ್ಲ ವ್ಯಕ್ತಿ ಚಾಮರಾಜ ಅಭ್ಯರ್ಥಿ ಕೆ ಹರೀಶ್ ಗೌಡರು ಒಬ್ಬರೇ.. ಚಾಮರಾಜ ಕ್ಷೇತ್ರದಲ್ಲಿ ತನ್ನದೇ ಆದ ವೈಯಕ್ತಿಕ ಪ್ರಾಬಲ್ಯ ಹೊಂದಿರುವ ಕೆ ಹರೀಶ್ ಗೌಡರು ಸಮಾಜಸೇವೆ ಮೂಲಕ ಮನೆ ಮನೆ ಮಾತಾಗಿರುವವರು, ಕಳೆದ ಹನ್ನೆರಡು ವರ್ಷಗಳಿಂದಲೂ ಚಾಮರಾಜ ಕ್ಷೇತ್ರದ ಜನತೆಯ ಜೊತೆ ನಿರಂತರ ಸಂಪರ್ಕ ಹೊಂದಿ ಜನರ ಕಷ್ಟ ನೋವುಗಳಿಗೆ ನೆರವಾಗುತ್ತಾ ಜನಾನುರಾಗಿ ಮನ್ನಣೆ ಪಡೆದವರು… ಮೈಸೂರಿನ ಇನ್ಯಾವ ಕ್ಷೇತ್ರಗಳಲ್ಲೂ ಪಕ್ಷೇತರವಾಗಿ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿ ಇಲ್ಲ ಯಾಕೆಂದರೆ ಇನ್ನೆಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ತಮ್ಮ ಪ್ರಾಬಲ್ಯ ಹೊಂದಿವೆ… ಹೆಮ್ಮೆಯಿಂದ ಶೇರ್ ಮಾಡಿ ಚಾಮರಾಜ ಕ್ಷೇತ್ರದಲ್ಲಿ ಕೆ ಹರೀಶ್ ಗೌಡರ ಗೆಲ್ಲುವ ಖಚಿತ…

ಇಲ್ಲಿ ಓದಿ…ರಾಜಕಾರಣಕ್ಕೆ ಎಂಟ್ರಿ ಕೊಟ್ರು, ದೇವೇಗೌಡರ ಈ ಪುತ್ರ…

ಮೂವತ್ತು ವರ್ಷಗಳ ಜೆಡಿಎಸ್ ಸೋಲು ಮುಂದುವರಿಯುತ್ತಾ? ಮೈಸೂರು ನಗರ ಪ್ರದೇಶದ ಹೃದಯ ಭಾಗ ಎಂದು ಕರೆಸಿಕೊಳ್ಳುವ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಳೆದ ಮೂವತ್ತೆರಡು ವರ್ಷಗಳಿಂದ ಗೆಲ್ಲಲು ಸಾಧ್ಯವಾಗಿಲ್ಲ, 1986 ರಲ್ಲಿ ನಡೆದ ಉಪಚುನಾವಣೆಯಲ್ಲಿ ಪಿ ಎಂ ಚಿಕ್ಕಬೋರಯ್ಯರವರು ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದಾರೆ ಜನತಾ ಪಕ್ಷ ಜನತಾದಳ ಆದ ನಂತರ ಒಮ್ಮೆಯೂ ಚಾಮರಾಜ ಕ್ಷೇತ್ರ ಜೆಡಿಎಸ್ ವಶವಾಗಿಲ್ಲ, ಮೂವತ್ತು ವರ್ಷಗಳ ಸೋಲಿಗೆ ಕಾರಣ ಹಲವಾರಿವೆ ಆದರೆ ಸೋಲನ್ನು ಮೆಟ್ಟು ನಿಂತು ಗೆಲ್ಲುವ ಕಡೆ ಜೆಡಿಎಸ್ ಪಕ್ಷವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ವ ರೀತಿಯಲ್ಲಿ ಶ್ರಮ ಹಾಕಿದ್ದು ಪಕ್ಷ ಕಟ್ಟಿದ್ದು ಜನರು ಜೆಡಿಎಸ್ ಪಕ್ಷದ ಹೆಸರು ಹೇಳುವಂತೆ ಮಾಡಿದ್ದು ಕೆ ಹರೀಶ್ ಗೌಡ…

ಜೆಡಿಎಸ್ ಪಕ್ಷ ನಿಂತಿರುವುದು ದೇವೇಗೌಡ್ರು ಹಾಗೂ ಕುಮಾರಣ್ಣರಿಂದ ಹಾಗೂ ಎರಡನೇ ಹಂತದ ನಾಯಕರು ಹಾಗೂ ಸಾವಿರಾರು ನಿಷ್ಟಾವಂತ ಕಾರ್ಯಕರ್ತರಿಂದ, ಪಕ್ಷ ಕಟ್ಟಲು ವರಿಷ್ಠರ ಶ್ರಮದ ಜೊತೆ ಎರಡನೇ ಹಂತದ ನಾಯಕರ ಶ್ರಮವೂ ಸಹಾ ಇರತ್ತೆ ಎಂಬುದನ್ನು ಮರೆಯಬಾರದು, ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ ಎಂಬುದಾದರೆ ಮೂವತ್ತೆರಡು ವರ್ಷದಿಂದ ಯಾಕೆ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಮೂಡತ್ತೆ?? ಒಂದು ವರ್ಷದ ಹಿಂದಿನಿಂದಲೂ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲತ್ತೆ ಎಂಬ ಪ್ರಬಲವಾದ ಮಾತಿತ್ತು ಕಾರಣ ಕೆ ಹರೀಶ್ ಗೌಡ ಅಭ್ಯರ್ಥಿಯಾಗುತ್ತಾರೆ ಹರೀಶ್ ಗೌಡ ಪಕ್ಷ ಸಂಘಟನೆ ಮಾಡಿದ್ದಾರೆ ಜನರ ಸೇವೆ ಮಾಡಿದ್ದಾರೆ, ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಹಾಗೂ ಕೆ ಹರೀಶ್ ಗೌಡ ಸ್ಥಳೀಯ ಅಭ್ಯರ್ಥಿ ಜನರ ನಾಡಿಮಿಡಿತ ಅರಿತಿದ್ದಾರೆ ಸಾವಿರಾರು ಜನ ಅಭಿಮಾನಿಗಳು ಬೆಂಬಲಿಗರು ಹೊಂದಿದ್ದಾರೆ.

 

ಈ ಕಾರಣಕ್ಕಾಗಿ ಜೆಡಿಎಸ್ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಚಲವಾದ ನಂಬಿಕೆ ಇತ್ತು ಆದರೆ ಈಗ ನಂಬಿಕೆ ಹುಸಿಯಾಗಿದೆ ಜೆಡಿಎಸ್ ಪಕ್ಷ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುವಲ್ಲಿ ಎಡವಿದೆ, ಅಂಗೈಯಲ್ಲಿ ಗೆಲ್ಲುವ ಅಭ್ಯರ್ಥಿ ಇಟ್ಟುಕೊಂಡು ಕ್ಷೇತ್ರಕ್ಕೆ ಸಂಬಂಧ ಇಲ್ಲದವರಿಗೆ ರಾಜಕೀಯ ಗಂಧ ತಿಳಿಯದವರನ್ನು ಅಭ್ಯರ್ಥಿ ಮಾಡಲು ಹೊರಟಿದೆ ಆ ಮೂಲಕ ಜೆಡಿಎಸ್ ಪಕ್ಷ ಹಾಗೂ ನಿಷ್ಠಾವಂತ ಕಾರ್ಯಕರ್ತರ ನಡುವಿನ ಅವಿನಾಭಾವ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದೆ, ನಿಷ್ಠಾವಂತ ನಾಯಕ ಕೆ ಹರೀಶ್ ಗೌಡರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ನಿಷ್ಠಾವಂತರು ಪಕ್ಷದಿಂದ ದೂರ ಉಳಿದಿದ್ದಾರೆ ಹಾಗೂ ಕ್ಷೇತ್ರಾದ್ಯಂತ ಕೆ ಹರೀಶ್ ಗೌಡರ ಬೆಂಬಲಿಗರು ಹಿತೈಷಿಗಳು ಅಭಿಮಾನಿಗಳು ಕೆ ಹರೀಶ್ ಗೌಡರಿಗೆ ಅನ್ಯಾಯವಾಗಿದೆ ಅವರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿ ಈ ಭಾರಿ ಶಾಸಕರನ್ನಾಗಿ ಮಾಡಿಯೇ ತಿರುತ್ತೇವೆ ಎಂಬ ದೃಡಸಂಕಲ್ಪ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದಲೂ ಕ್ಷೇತ್ರದ ಎಲ್ಲಾ ವಾರ್ಡ್ ನಲ್ಲೂ ಹರೀಶ್ ಗೌಡರ ಹಿತೈಷಿಗಳ ಸಭೆ ನಡೆದಿದ್ದು ಎಲ್ಲಾ ಭಾಗದಲ್ಲೂ ಕೆ ಹರೀಶ್ ಗೌಡರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.. ಹನ್ನೆರಡು ವರ್ಷಗಳಿಂದ ಕ್ಷೇತ್ರದ ಜನರ ಜೊತೆ ನಿಕಟ ಸಂಬಂಧ ಹೊಂದಿರುವ ಹರೀಶ್ ಗೌಡರಿಗೆ ಪಕ್ಷೇತರವಾಗಿ ಚುನಾವಣೆ ಎದುರಿಸುವುದು ಕಷ್ಟವೇನಲ್ಲ ಎಂಬುದು ಸಾರ್ವಜನಿಕರ ಮಾತು.. ಯಾವ ಪಕ್ಷದಲ್ಲಿ ಯಾರು ಅಭ್ಯರ್ಥಿಯಾದರೂ ನಿಷ್ಠಾವಂತ ನಾಯಕ ಜನಾನುರಾಗಿ ಕೆ ಹರೀಶ್ ಗೌಡರನ್ನು ಗೆಲ್ಲಿಸಿಕೊಳ್ಳಬೇಕು ಅವರು ಜನರ ಕೆಲಸ ಮಾಡುತ್ತಾರೆ ಕೆ ಹರೀಶ್ ಗೌಡರಿಂದ ಚಾಮರಾಜ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಜನ ತಿರ್ಮಾನಿಸಿದ್ದಾರೆ.

 

ಚುನಾವಣೆ ಇನ್ನೂ ನೂರು ದಿನ ಇದೆ ಹನ್ನೆರಡು ವರ್ಷಗಳ ಕೆ ಹರೀಶ್ ಗೌಡರ ದುಡಿಮೆಗೆ ಬೆಲೆ ಕೊಡಬೇಕು, ಕೆ ಹರೀಶ್ ಗೌಡರ ವ್ಯಕ್ತಿತ್ವಕ್ಕೆ ಬೆಲ ಕೊಡಬೇಕು ಎಂದು ಮತದಾರ ಮನಸ್ಸು ಮಾಡಿದ್ದಾನೆ ಈ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದ ಜನತೆ ಜಾತಿ ಧರ್ಮ ಪಕ್ಷ ಮರೆತು ನಿಷ್ಠಾವಂತ ನಾಯಕನ ಉಳಿಸುತ್ತಾರೆ ಎಂಬ ಭರವಸೆ ನಮಗೂ ಇದೆ.. ಈಗಲೂ ಜೆಡಿಎಸ್ ಪಕ್ಷದಿಂದ ಕೆ ಹರೀಶ್ ಗೌಡರಿಗೆ ಟಿಕೆಟ್ ನೀಡಿದ್ದಲ್ಲಿ ಜೆಡಿಎಸ್ ಪಕ್ಷ ಮೂವತ್ತೆರಡು ವರ್ಷಗಳ ನಂತರ ಈ ಕ್ಷೇತ್ರದಲ್ಲಿ ಗದ್ದುಗೇರುವುದು ಖಚಿತ, ಈಗಲೂ ಕಾಲ ಮಿಂಚಿಲ್ಲ ವರಿಷ್ಠರು ಮತ್ತೊಮ್ಮೆ ಯೋಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿ.. ಕಾದು ನೋಡೋಣಾ‌. ಧನ್ಯವಾದಗಳು

 

About the author / 

admin

Categories

Date wise

 • ಕೆಂದೆಳನೀರು

  ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

 • ಸುದ್ದಿ

  BPL ಕಾರ್ಡ್ ಇದ್ದವರು ರೆಷೆನ್ ಬೇಕೆಂದರೆ ಜುಲೈ 31 ಒಳಗೆ ಈ ಕೆಲಸ ಮಾಡಬೇಕು…..!

  ಪಡಿತರ ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ತಡೆಯಲು ಆಹಾರ ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದ್ದು ನೈಜ ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಿಸಲು ಮುಂದಾಗಿದೆ. ಹೀಗಾಗಿ ನೀವು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದ್ದು ನಿಮಗೆ ಪಡಿತರ ಕೂಡ ಸಿಗುವುದಿಲ್ಲ. ಹೌದು, ಜುಲೈ 31ರ ಒಳಗೆ ನೀವು ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಬೇಕು. ಒಂದು ವೇಳೆ ನೀವು ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಮ್ಮ ಕಾರ್ಡ್ ರದ್ದಾಗಲಿದ್ದು, ಆಗಸ್ಟ್ ನಿಂದ ನಿಮಗೆ ರೇಷನ್ ಕೂಡ…

 • ಸುದ್ದಿ

  ಜಮ್ಮು- ಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಉಗ್ರರ ಹತ್ಯೆ, ಯೋಧ ಹುತಾತ್ಮ

  ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಪುಲ್ವಾಮ ಹಾಗೂ ಶೂಪಿಯಾನ್ ಬಳಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಮಂದಿ ಉಗ್ರರು ಹತ್ಯೆಯಾಗಿದ್ದಾರೆ. ಈ ಮಧ್ಯೆ ಯೋಧರು ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪುಲ್ವಾಮಾದಲ್ಲಿ ಮೂವರು ಜೈಷ್ -ಇ- ಮೊಹಮ್ಮದ್ ಸಂಘಟನೆ ಉಗ್ರರು ಹತ್ಯೆಯಾಗಿದ್ದರೆ, ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಮಧ್ಯೆ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಶೂಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್…

 • ಉಪಯುಕ್ತ ಮಾಹಿತಿ

  ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬಿಸಾಡುವ ಮುಂಚೆ ಈ ಲೇಖನ ಓದಿ

  ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್‌ ಎ, ಬಿ1, ಬಿ6, ವಿಟಮಿನ್‌ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ ಹಣ್ಣಿನ ತಿರುಳನ್ನು ಸೇವಿಸಿ ಬೀಜಗಳನ್ನು ಎಸೆಯುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿಯೂ ಆರೋಗ್ಯಕರ ಅಂಶಗಳಿವೆ. * ಕಲ್ಲಂಗಡಿ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. *ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನವಾಗಿಸುತ್ತದೆ. *ಮುಖದ ಮೇಲೆ ಮೂಡುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ…

 • Cinema

  ಇಷ್ಟೇನಾ ಕನ್ನಡ ಸೂಪರ್ ಸ್ಟಾರ್ ನಟರು ಓದಿರೋದು..!ಹಾಗಾದರೆ ಅವ್ರು ಓದು ನಿಲ್ಲಿಸಿದ್ದು ಏಕೆ?

  ನಮ್ಮ  ನೆಚ್ಚಿನ ಸ್ಟಾರ್ ನಟರು ಏನು ಓದಿದ್ದಾರೆ, ಏಕೆ ಅವರು ಮುಂದೆ ಓದಲಿಲ್ಲ ಎನ್ನುವ ಕುತೂಹಲ ಕೆಲವು ಅಭಿಮಾನಿಗಳಿಗೆ ಇರಬಹುದು. ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ನಟ ರಾಜ್ ಕುಮಾರ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್ ಈ ನಟರ ವಿದ್ಯಾಬ್ಯಾಸ ಹಾಗೂ ಅವರು ಓದು  ನಿಲ್ಲಿಸಲು ಕಾರಣವೇನು ಅಂತ ಇಲ್ಲಿದೆ ನೋಡಿ…. ಡಾ.ರಾಜ್ ಕುಮಾರ್..                 …

 • inspirational

  ಸೀತಾಫಲ ಹಣ್ಣನ್ನು ನೀವು ತಿಂದಿರಬಹುದು ಆದರೆ, ಇದರ ಅದ್ಬುತ ರಹಸ್ಯಗಳನ್ನು ನೋಡಿ.

  ಈ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣುಗಳು ಸಿಗುತ್ತದೆ ಮತ್ತು ಅದರಲ್ಲಿ ಕೆಲವು ಹಣ್ಣುಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದರೆ ಇನ್ನು ಕೆಲವು ಹಣ್ಣುಗಳು ಕೇವಲ ರುಚಿಯನ್ನ ಮಾತ್ರ ನೀಡುತ್ತದೆ. ಇನ್ನು ಸೀತಾಫಲ ಹಣ್ಣನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ, ಪ್ರತಿಯೊಬ್ಬರು ಕೂಡ ಒಮ್ಮೆಯಾದರೂ ಈ ಹಣ್ಣಿನ ರುಚಿ ನೋಡಿರುತ್ತೀರಿ, ಇನ್ನು ಈ ಹಣ್ಣಿನ ಜ್ಯೂಸ್ ಕೂಡ ಕುಡಿದಿರಬಹುದು ಆದರೆ ಈ ಹಣ್ಣಿನಲ್ಲಿರುವ ಕೆಲವು ಅದ್ಬುತ ರಹಸ್ಯಗಳ ಬಗ್ಗೆ ಮಾತ್ರ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಹೌದು ಸೀತಾಫಲ ಸಾಮಾನ್ಯವಾದ…