ಕರ್ನಾಟಕ

ಗೋವಾ ನಿರಾಶ್ರಿತ ಕನ್ನಡಿಗರಿಗೆ, ರಾಜ್ಯದಿಂದ ಸಿಕ್ಕ ಭಾಗ್ಯ ಏನು ಗೊತ್ತಾ..?

130

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ನಿವೇಶನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರ‌ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಬೈನಾ ಬೀಚ್‌ನಲ್ಲಿ  ಜೆಸಿಬಿ, ಟಿಪ್ಪರ್‌ಗಳೊಂದಿಗೆ  ಸ್ಥಳೀಯಾಡಳಿತದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, 55 ಮನೆ ಹಾಗೂ ಗುಡಿಸಲುಗಳನ್ನು ತೆರವು ಮಾಡಿದ್ದರು, ಗೋವಾ ಸರ್ಕಾರದ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಕನ್ನಡಿಗರನ್ನು ರಕ್ಷಿಸುವಂತೆ ಮನವಿ ಮಾಡಿದ್ದವು.

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರ ಸಂಖ್ಯೆ ಎಷ್ಟು, ಎಲ್ಲರಿಗೂ ನಿವೇಶನ ಒದಗಿಸಲು ಬೇಕಾದ ಭೂಮಿ ಮತ್ತಿತರ ವಿಷಯಗಳನ್ನು ಒಳಗೊಂಡಂತೆ ಮೂರು ದಿನದಲ್ಲಿ ವರದಿ ನೀಡಲು ಗಡಿ ಅಭಿವೃದ್ಧಿ  ಪ್ರಾಧಿಕಾರದ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ಮರು ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಮೊದಲ ಹಂತದಲ್ಲಿ ಅವರಿಗೆ ನಿವೇಶನದ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಅ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ , ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….

    ನಿತ್ಯ ಭವಿಷ್ಯ………… ಮೇಷ ರಾಶಿ ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ವೃಷಭ ರಾಶಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು.  ದೂರದೂರಿನ ಬಂಧುಗಳಿಂದ ಕಿರಿಕಿರಿ ಮಾತುಗಳು ಎದುರಾಗುವ ಸಂಭವವಿದೆ. ನೀವು ಮಾಡದೇ ಇರುವ ತಪ್ಪಿಗೆ ಮುನಿಸಿಕೊಳ್ಳುವ ಸಂದರ್ಭವಿದೆ. ಇದಕ್ಕೆ ಹೆಚ್ಚಿನ…

  • ಸುದ್ದಿ

    ಫೋನ್ ಪೇ, ಗೂಗಲ್ ಪೇ ಅಂಥಾ ಆನ್ ಲೈನ್‌ನಲ್ಲೇ ವ್ಯವಹಾರ ಮಾಡುವವರು ಎಚ್ಚರ.. ಎಚ್ಚರ…ಯಾಕೆ ಗೊತ್ತ ಇದನ್ನು ಓದಿ…?

    ರಾಜಧಾನಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದ್ದರೆ ಮತ್ತೊಂದೆಡೆ ಸ್ಮಾರ್ಟ್ ಖದೀಮರು ಹೆಚ್ಚಾಗಿದ್ದಾರೆ. ಕೋಟಿ ಕೋಟಿ ಲೂಟಿಯ ಐಎಂಎ ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಚ್ಚಿಬೀಳುವಂತ ಘಟನೆ ಇದಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಾಗ ಆರೋಪಿಗಳು ನೆಲಮಂಗಲ ಪೊಲೀಸರ ಅತಿಥಿಗಳಾಗಿದ್ದಾರೆ. ಆನ್ ಲೈನ್‌ನಲ್ಲಿ ಅಕೌಂಟ್‌ಗೆ ಸಂಬಂಧಪಟ್ಟ ಮೊಬೈಲ್ ನಂಬರ್ ಚೇಂಜ್ ಮಾಡಿ ಬರೋಬ್ಬರಿ 3ಕೋಟಿ ಹಣವನ್ನು ಡ್ರಾ ಮಾಡಿದ್ದ ಆರೋಪಿಗಳು, ಆ ಹಣವನ್ನು ಬ್ಯಾಂಕ್‌ನಲ್ಲಿ ಜಮೆ…

  • ಇತಿಹಾಸ

    ರಾಣಿ ಪದ್ಮಿನಿಗೂ ಮತ್ತು ಅಲ್ಲಾವುದ್ದೀನ್ ಖಿಲ್ಜಿಗೂ ಇದ್ದ ನಿಜವಾದ ಸಂಬಂದ ಏನು ಗೊತ್ತಾ..?ಪದ್ಮಾವತಿಯು ಬೆಂಕಿಗೆ ಹಾರಿ ಸತ್ತಿದ್ದು ಏಕೆ?ರೋಚಕವಾಗಿದೆ ರಾಣಿ ಪದ್ಮಿನಿಯ ರಿಯಲ್ ಸ್ಟೋರಿ…

    ರಾಣಿ ಪದ್ಮಿನಿ 13ನೇ ಶತಮಾನದ ರಾಜಸ್ಥಾನದ ಮೇವಾಡ್ ಸಂಸ್ಥಾನ (ಈಗಿನ ಚಿತ್ತೋಡಗಢ, ರಾಜಸ್ಥಾನ) ರಾಜ ರಾವಲ್ ರತನ ಸಿಂಗ್ ನ ರಾಣಿಯಾಗಿದ್ದಳು.ರಾಣಿ ಪದ್ಮಿನಿಯು ತುಂಬಾ ಸೌಂದರ್ಯವತಿಯಾಗಿದ್ದಳು ಕೂಡ. ಆಗ ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ದೊರೆಯಾಗಿ ದೆಹಲಿಯನ್ನಾಳುತ್ತಿದ್ದ, ಆತನೊಬ್ಬ ಹಿಂದೂ ವಿರೋಧಿ, ವಿಕೃತ ಕಾಮಿ & ಸಲಿಂಗಕಾಮಿಯೂ ಆಗಿದ್ದ.

  • ಸುದ್ದಿ

    ಅಣ್ಣನಿಗೆ ಬಿಸಿಲು ತಾಗಬಾರದೆಂದು ಮಂಟಪವನ್ನು ಕಟ್ಟಿಸಿದ ಧ್ರುವ ಸರ್ಜಾ.

    ನಟ ಚಿರು ಸರ್ಜಾ ಹಾಗೂ ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ಇದ್ದರು. ಆದರೆ ಚಿರು ಅಣ್ಣನ ಹಠಾತ್ ನಿಧನದಿಂದ ನೊಂದಿರುವ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ. ಇದೀಗ ತನ್ನ ಪ್ರೀತಿಯ ಅಣ್ಣನಿಗಾಗಿ ಮಂಟಪವನ್ನು ಕಟ್ಟಿಸಿದ್ದಾರೆ. ರಾಮನಗರ ಬಳಿ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಮಣ್ಣು ಮಾಡಲಾಗಿದೆ. ಈ ಫಾರ್ಮ್ ಹೌಸ್ ಧ್ರುವ ಸರ್ಜಾ ಅವರದ್ದು ಆದರೆ ಚೀರುಸರ್ಜಾ ಗೆ ಈ ಫಾರ್ಮ್ ಹೌಸ್ ತುಂಬಾ ಇಷ್ಟವಾಗಿತ್ತಂತೆ. ದ್ರುವ ಸರ್ಜಾ…

  • ಮನರಂಜನೆ

    ಕೊನೆಗೂ ಕಾಮನ್ ಮ್ಯಾನ್’ಗೆ ಸಿಗದ ಬಿಗ್ ಬಾಸ್ ಪಟ್ಟ..!ಕೇವಲ ಒಂದು ಲಕ್ಷ ಕೊಟ್ಟಿದ್ದು ಸರಿಯೇ..?ಏನಾಯ್ತು ಮುಂದೆ ನೋಡಿ…

    ಕೊನೆಗೂ ಬಿಗ್ ಬಾಸ್ ಕನ್ನಡ ಸಂಚಿಕೆ 5 ಕಾರ್ಯಕ್ರಮಕ್ಕೆ ಭರ್ಜರಿಯಾಗಿ ತೆರೆ ಬಿದ್ದಿದೆ.ಈ ಸಲದ ಬಿಗ್ ಬಾಸ್ ಸಂಚಿಕೆಯಲ್ಲಿ ಕಾಮಾನ್ ಮ್ಯಾನ್’ಗೂ ಕೂಡ ಕಲರ್ಸ್ ಕನ್ನಡ ವಾಹಿನಿಯವರು ಅವಕಾಷ ಕೊಟ್ಟಿದ್ದರು.ಕಾಮಾನ್ ಮ್ಯಾನ್’ಗಳಾಗಿ ದಿವಾಕರ್,ಸಮೀರ್ ಆಚಾರ್ಯ ಮತ್ತು ರಿಯಾಜ್ ರವರು ಭಾಗವಹಿಸಿ

  • ಸುದ್ದಿ

    ಇದೊಂದು ಭಯಾನಕ ಸುದ್ದಿ ; ನೀವು ಶೌಚಾಲಯಕ್ಕೆ ಹೋಗುವ ಮುನ್ನ ಇದನ್ನೊಮ್ಮೆ ಓದಿ…!

    ಇದೊಂದು ಭಯಾನಕ ಸುದ್ದಿ.  ಎಲ್ಲರೂ ಭಹಯಬೀಳುವಂತಹ  ಸುದ್ದಿಯೇ. ಹೆಬ್ಬಾವೊಂದು ಮನೆಯೊಳಗಿನ ಶೌಚಾಲಯದಲ್ಲಿ ಇಲಿ ಬೇಟೆಯಾಡಿದಂತಹ ದಿಗಿಲುಗೊಳ್ಳುವಂತಹ ಸಂಗತಿ. ಇದು ನಡೆದಿರುವುದು ಆಸ್ಟ್ರೇಲಿಯಾದ ಕೈನ್ಸ್‌ನಲ್ಲಿ. ಇಲ್ಲಿನ ಜನ್ನಾ ಎಂಗ್ಲರ್ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಇವರಿಗೆ ಶೌಚಾಲಯದೊಳಗೆ ಏನೋ ಶಬ್ದ ಆದಂತೆ  ಕಂಡಿತು. ತಕ್ಷಣ ಏನದು ಎಂದು ನೋಡಿದಾಗ ಅಲ್ಲಿನ  ದೃಶ್ಯವನ್ನು ಕಂಡು ಇವರು ಒಂದು ಕ್ಷಣ ಭಯಬೀತರಾಗಿದ್ದರು. ಯಾಕೆಂದರೆ, ಶೌಚಾಲಯದೊಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಇಲಿ ಬೇಟೆಯಲ್ಲಿ ತೊಡಗಿತ್ತು….