inspirational, ಸುದ್ದಿ

ಗಾಂಧಿಜಿ ಪ್ರತಿಮೆಯ ಮುಂದೆ ಧರಣಿಗೆ ಕುಳಿತ ಕಾಂಗ್ರೆಸ್ ಶಾಸಕರು….!

40

ಕರ್ನಾಟಕದ ಕಾಂಗ್ರೆಸ್ ನಾಯಕರು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ ಧರಣಿ ಆರಂಭಿಸಿದ್ದಾರೆ. ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ 8 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ದೂರು ನೀಡಲಾಗಿದೆ. ಮಂಗಳವಾರ ವಿಧಾನಸೌಧ, ವಿಕಾಸಸೌಧ ನಡುವಿ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ.

ಕರ್ನಾಟಕದ ಮೈತ್ರಿ ಸರ್ಕಾರವನ್ನು ಉರುಳಿಸಲು ‌ಮೋದಿ ಸಂಚು ಮಾಡಿದ್ದಾರೆ. ಮೋದಿ, ಅಮಿತ್ ಶಾ ನೇರವಾಗಿ ಆಪರೇಷನ್ ಕಮಲ ನಡೆಸಿದ್ದಾರೆ. ಹಣ ಬಲದಿಂದ ಸರ್ಕಾರ ಉರುಳಿಸುವ ಪ್ರಯತ್ನವನ್ನು ಮಾಡಲಾಗಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು.’ಆಪರೇಷನ್ ಕಮಲಕ್ಕೆ ಕೆಲವು ಶಾಸಕರು ಟ್ರ್ಯಾಪ್ ಆಗಿದ್ದಾರೆ. ಒಂದೇ ವಿಮಾನದಲ್ಲಿ ಮುಂಬೈಗೆ ಹೋಗಿದ್ದಾರೆ. ಅಲ್ಲಿ ಒಟ್ಟಿಗೆ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವುಗಳನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ರಾಜೀನಾಮೆ ನೀಡಿರುವ ಶಾಸಕರು ಗೈರು ವಿಧಾನಸೌಧದಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 10 ಶಾಸಕರು ಸಭೆಗೆ ಗೈರಾಗಿದ್ದರು. ಸಭೆಯ ಬಳಿಕ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಧರಣಿಯನ್ನು ನಡೆಸುತ್ತಿದ್ದಾರೆ.ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿದೆ. ಶಾಸಕರಿಗೆ ಹಣ, ಸ್ಥಾನಮಾನದ ಆಮಿಷವೊಡ್ಡಿ ಅವರನ್ನು ಖರೀದಿ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ.

ಒಂದು ಗಂಟೆಗಳ ಕಾಲ ಧರಣಿ ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆ ಖಂಡಿಸಿ ಕಾಂಗ್ರೆಸ್ ನಾಯಕರು 1 ಗಂಟೆಗಳ ಕಾಲ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಬಳಿಕ ಎಲ್ಲಾ ನಾಯಕರು ಧರಣಿ ಸ್ಥಳಕ್ಕೆ ಆಗಮಿಸಿದ್ದಾರೆ.ಸ್ಪೀಕರ್‌ರಿಂದ ರಾಜೀನಾಮೆ ಪರೀಶಿಲನೆ ಮತ್ತೊಂದು ಕಡೆ ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸೌಧದ ಕಚೇರಿಗೆ ಆಗಮಿಸಿದ್ದಾರೆ. ಕಾಂಗ್ರೆಸ್‌ನ 9, ಜೆಡಿಎಸ್‌ನ 3 ಶಾಸಕರು ನೀಡಿರುವ ರಾಜೀನಾಮೆಯನ್ನು ಅವರು ಪರಿಶೀಲನೆ ನಡೆಸುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೊಸ ಸಂಚಾರಿ ನಿಯಮದಡಿ ಎತ್ತಿನ ಗಾಡಿಗೂ ದಂಡ….!

    ಬೈಕಿನಲ್ಲಿ ಹೆಲ್ಮೆಟ್ ಹಾಕದೆ ಹೋಗುತ್ತಿದ್ದರೆ ಟ್ರಾಫಿಕ್ ಪೊಲೀಸರು ದಂಡ ಹಾಕಿದರೆ ಸರಿ, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೆ ದಂಡ ಬೀಳುತ್ತೆ…..ಅದು ಸಹ ಸರಿ. ಆದರೆ ತನ್ನದೇ ಹೊಲದಲ್ಲಿ ನಿಲ್ಲಿಸಿದ್ದ ಎತ್ತಿನ ಬಂಡಿಗೆ ದಂಡ ಹಾಕುವುದೆಂದರೆ…? ಅದೂ ಒಂದು ಸಾವಿರ ರೂಪಾಯಿ…! ಇಂಥದ್ದೊಂದು ಘಟನೆ ಉತ್ತರ ಪ್ರದೇಶದ ಡೆಡ್ರಾಡೂನ್ ವ್ಯಾಪ್ತಿಯ ಶಹಾಪುರ ಹೊರವಲಯದಲ್ಲಿರುವ ಚಾರ್ಬಾ ಗ್ರಾಮದ ಹಸನ್ ಎಂಬಾತನಿಗೆ ಒಂದು ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಸಬ್ ಇನ್ಸ್ ಪೆಕ್ಟರ್ ಪಂಕಜ್ ಕುಮಾರ್ ಮತ್ತವರ ತಂಡ ನೂತನ ಸಾರಿಗೆ…

  • ಸುದ್ದಿ

    ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು ಕಾರಣ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

    ವರ ಬೋಳುಮಂಡೆಯವನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.

  • Animals

    ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!

    ಕೋಲಾರದ ನಗರದಲ್ಲಿ ವಿದೇಶಿ ಎಚ್‌ಎ- ತಳಿಯ ಹಸುವೊಂದು ದಿಢೀರನೇ ಮೇವು ತಿನ್ನುವುದು ನಿಲ್ಲಿಸಿ ಹಾಲು ಇಳುವರಿಯನ್ನು ಕಡಿತಗೊಳಿಸಿತ್ತು. ಮೇವು ತಿನ್ನುವುದು ನಿಲ್ಲಿಸಿದ್ದರಿಂದ ಹಸು ಬಡಕಲಾಗುತ್ತಾ ಹೋಯಿತು. ಹೊತ್ತಿಗೆ ಸುಮಾರು 1೦ ಲೀಟರ್ ಹಾಲು ನೀಡಿದ್ದ ಹಸು ಕೇವ ಮೂರು ನಾಲ್ಕು ಲೀಟರ್ ಹಾಲು ನೀಡಲು ಶುರುವಿಟ್ಟುಕೊಂಡಿತ್ತು. ಹಸು ಸಾಕುತ್ತಿದ್ದ ಮನೆಯವರು ಹಸುವಿಗೆ ಸಾಕಷ್ಟು ಚಿಕಿತ್ಸೆ ಮಾಡಿಸಿದರೂ ಪ್ರಯೋಜನವಾಗಿರಲಿಲ್ಲ. ಇದೇ ಪರಿಸ್ಥಿತಿ ಕಳೆದರೆ ಹಸು ಪ್ರಾಣ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಇಂತ ಆತಂಕದ ಪರಿಸ್ಥಿತಿಯಲ್ಲಿ ಹಸುವಿನ ನೆರವಿಗೆ ಬಂದವರು…

  • ಸುದ್ದಿ

    ವೈರಲ್ ಆಯ್ತು ಧೋನಿ ತನ್ನ ಹೆಂಡತಿ ಸಾಕ್ಷಿಗೆ ಚಪ್ಪಲಿ ತೊಡಿಸುತ್ತಿರುವ ಈ ಫೋಟೋ..!

    ಹೊರಗಡೆ ಗಂಡನಾದವನು ಎಷ್ಟೇ ಫೇಮಸ್ ಆಗಿದ್ರೂ ಹೆಂಡತಿಗೆ ಮಾತ್ರ ಗಂಡನೇ ಎಂಬ ಗಾದೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹೊಸ ‘ಸಾಕ್ಷಿ’ಯಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕೂಲ್ ಕ್ಯಾಪ್ಟನ್ ಮಾತ್ರ ಅಲ್ಲ, ಹೆಂಡತಿಗೆ ಒಳ್ಳೆ ಪತಿ ಕೂಡ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕನಾದರೂ ಸಾರ್ವಜನಿಕ ಸ್ಥಳದಲ್ಲಿ ಪತ್ನಿ ಸಾಕ್ಷಿ ಕಾಲಿಗೆ ಚಪ್ಪಲಿ ತೊಡಿಸುವ ಮೂಲಕ ಧೋನಿ ಸರಳತೆ ಮೆರೆದಿದ್ದಾರೆ. ಧೋನಿ ಪತ್ನಿ ಕಾಲಿಗೆ ಚಪ್ಪಲಿ…

  • ಸುದ್ದಿ

    ಪ್ರತಿದಿನ ಎದೆಗೆ ಗುದ್ದುತ್ತಿದ್ದ ಸಾಕುನಾಯಿಗಳು, ನೋವಿನಿಂದ ವೈದ್ಯರ ಬಳಿ ಹೋದ ಮಹಿಳೆಗೆ ಕಾದಿತ್ತು ಭಾರಿ ಶಾಕ್.​

    ತನ್ನ ಜೀವನದಲ್ಲಿ ಎದುರಾಗುತ್ತಿದ್ದ ಅಪಾಯಾಕಾರಿ ಕ್ಯಾನ್ಸರ್​ ರೋಗವನ್ನು ಪತ್ತೆ ಹಚ್ಚಿ ಜೀವ ಉಳಿಸಿದ ತನ್ನ ನಾಯಿಗಳಿಗೆ ಜೀವನವನ್ನೇ ಮುಡಿಪಾಗಿಟ್ಟಿರುವುದಾಗಿ ವೇಲ್ಸ್​ ಮೂಲದ ಶ್ವಾನ ಪ್ರೇಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವೇಲ್ಸ್​ನ ಬಾರ್ಗೋಡ್​ ನಿವಾಸಿಯಾಗಿರುವ​ ಲಿಂಡಾ ಮುಂಕ್ಲೆ(65) ವೇಲ್ಸ್​ ಆನ್​ಲೈನ್​ ಪತ್ರಿಕೆಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಬಳಿ ಐದು ವರ್ಷದ ಬಿಯಾ ಮತ್ತು ಅದರ ಮೂರು ವರ್ಷದ ಹೆಣ್ಣುನಾಯಿ ಎನ್ಯಾ ಸೇರಿದಂತೆ ಒಟ್ಟು ನಾಲ್ಕು ಜರ್ಮನ್​ ಶೆಫರ್ಡ್​ ನಾಯಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಎರಡು ನಾಯಿ ತನ್ನ ಬಳಿ…

  • ಸುದ್ದಿ

    ಎದೆಯುರಿ ಸಮಸ್ಯೆಯಿಂದ ಬಳಲಿತ್ತಿದ್ದೀರಾ ….ಅಗಾದರೆ ಇದನ್ನು ಒಮ್ಮೆ ಓದಿ ……!

    ಎದೆಯುರಿಯು ಸಾಮಾನ್ಯ ಜೀರ್ಣ ಸಮಸ್ಯೆಯಾಗಿದೆ. ಅದನ್ನು ಆಮ್ಲ ಹಿಮ್ಮುಖ ಹರಿವು ಎಂದೂ ಕರೆಯಲಾಗುತ್ತದೆ ಮತ್ತು ಜಠರಾಮ್ಲವು ಅನ್ನನಾಳದಲ್ಲಿ ದೂಡಲ್ಪಟ್ಟಾಗ ಈ ಸಮಸ್ಯೆಯು ಉದ್ಭವವಾಗುತ್ತದೆ. ನಿದ್ರೆಯ ಕೊರತೆ,ಸೂಕ್ತವಲ್ಲದ ಆಹಾರ,ಧೂಮ್ರಪಾನ,ಸೋಂಕು ಇತ್ಯಾದಿಗಳು ಎದೆಯುರಿಯನ್ನುಂಟು ಮಾಡುತ್ತವೆ. ಇದರಿಂದ ಪಾರಾಗಲು ಕೆಲವು ಸರಳ ಉಪಾಯಗಳಿಲ್ಲಿವೆ. ►ಆಗಾಗ್ಗೆ ಸಣ್ಣ ಊಟಗಳನ್ನು ಮಾಡಿ ಸಣ್ಣ ಊಟಗಳನ್ನು ಆಗಾಗ್ಗೆ ಮಾಡುವುದು ಎದೆಯುರಿಯಿಂದ ಪಾರಾಗಲು ಅತ್ಯಂತ ಸರಳ ಉಪಾಯವಾಗಿದೆ. ಏಕೆಂದರೆ ನಾವು ಒಂದೇ ಬಾರಿಗೆ ಅತಿಯಾಗಿ ಆಹಾರ ಸೇವಿಸುವುದರಿಂದ ಕೆಳ ಅನ್ನನಾಳದ ಭಾಗದಲ್ಲಿರುವ ಕವಾಟದಂತಹ ಸ್ನಾಯು ‘ಸ್ಫಿಂಕ್ಟರ್ (ಎಲ್‌ಇಎಸ್)…