ಆಧ್ಯಾತ್ಮ

ಗರುಡ ಪುರಾಣದ ಪ್ರಕಾರ ಈ ಮೂರನ್ನು ಬಿಟ್ಟರೆ???ನಿಮ್ಮ ಜೀವನ ಪಕ್ಕಾ ಸುಖಮಯ….

3831

ನಮ್ಮ  ಈ ಜೀವನದಲ್ಲಿ ಸುಖವಾಗಿರಬೇಕೆಂಬುದು ಎಲ್ಲರ ಮಹದಾಸೆ. ತಾವು ಹಾಯಾಗಿ ಜೀವನ ಕಳೆಯಬೇಕು ಎಂದು ಎಲ್ಲರೂ ಬಯಸುತ್ತಾರೆ. ದಿನನಿತ್ಯ ಬೆಳಗ್ಗೆ ಎದ್ದ ಕೂಡಲೆ ನಮ್ಮ ಜೀವನ ಶುರುವಾಗುತ್ತದೆ, ಎದ್ದೆನೋ ಬಿದ್ದೆನೋ ಎಂದು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ..              ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ಛಲ. ಇನ್ನೇನೋ ಪಡೆಯಬೇಕೆಂಬ ಹೋರಾಟ.

ಆದರೆ ಎಲ್ಲರೂ ಸಂತೋಷವಾಗಿ ಜೀವನ ನಡೆಸುತ್ತಿದ್ದಾರಾಯೇ? ಎಂದರೆ ಇದಕ್ಕೆ ಸರಿಯಾದ  ಉತ್ತರ ಸಿಗಲ್ಲ.

ಕಷ್ಟಪಟ್ಟು ಕೆಲಸ ಮಾಡಿದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಹಿರಿಯರು ಹೇಳುತ್ತಿರುತ್ತಾರೆ.

ಆದರೆ ಗರುಡ ಪುರಾಣದ ಪ್ರಕಾರ ಈ ಕೆಳಗೆ ತಿಳಿಸಿರುವಂತಹ ಮೂರು ವಿಷಯಗಳನ್ನು ನೀವು  ಬಿಟ್ಟು ಬಿಟ್ಟರೆ ಜೀವನ ಹಾಯಾಗಿ ಸುಖ ಸಂತೋಷದಿಂದ ಕಳೆದುಹೋಗುತ್ತದಂತೆ.

ಹಾಗಾದ್ರೆ ಆ 3 ವಿಷಯಗಳು ಏನು ಗೊತ್ತೇ?

  1. ಯಾರೇ ಆಗಲಿ ಕಷ್ಟಪಟ್ಟು ದುಡಿದು ಸಂಪಾದಿಸಿ ಜೀವನವನ್ನು ಹಾಯಾಗಿ ಕಳೆಯಬೇಕೆಂದು ಬಯಸುತ್ತಾರೆ. ಆದರೆ ಕೆಲವರು ಬಂಧು ಮಿತ್ರರಿಂದ ಸಾಲ ಮಾಡಿ ಅವರನ್ನು ವಂಚಿಸುತ್ತಾರೆ. ಎಲ್ಲಿ ಸಾಲಗಾರರು ತಮ್ಮ ಕಣ್ಣಿಗೆ ಬೀಳುತ್ತಾರೋ ಎಂದುಕೊಂಡು ತಲೆಮರೆಸಿಕೊಂಡು ತಿರುಗುತ್ತಿರುತ್ತಾರೆ. ಇದರಿಂದ ಜೀವನದಲ್ಲಿ ನೆಮ್ಮದಿ, ಸಂತೋಷ ಎಲ್ಲವೂ ದೂರವಾಗುತ್ತದೆ. ನಿತ್ಯ ಒತ್ತಡ, ಆತಂಕದಿಂದ ಬದುಕಬೇಕಾಗುತ್ತದೆ. ಹಾಗಾಗಿ ಆ ರೀತಿಯ ಮಸಸ್ಥಿತಿಯನ್ನು ಬಿಡಬೇಕು ಎಂದು ಗರುಡ ಪುರಾಣ ಹೇಳುತ್ತದೆ.

2. ಮಹಿಳೆಯರನ್ನು ಗೌರವಿಸದ ಪುರುಷರು ಸಹ ಸಂತೋಷವಾಗಿ ಇರಲ್ಲವಂತೆ. ಆ ರೀತಿ ಇರುವವರು ಯಾರ ಜತೆಗೂ ಸರಿಯಾದ ಸಂಬಂಧಗಳನ್ನು ಮುಂದುವರಿಸಲ್ಲವಂತೆ. ಮಹಿಳೆಯರನ್ನು ಅವಮಾನಿಸುವವರು ಜೀವನದಲ್ಲಿ ಮೇಲೆ ಬರಲ್ಲವಂತೆ. ಅಂತವರಿಗೆ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದಂತೆ. ಯಾರು ಮಹಿಳೆಯರಿಗೆ ಗೌರವ ಕೊಡುತ್ತಾರೋ ಅಂತಹವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ, ಸಂತೋಷವಾಗಿರುತ್ತಾರೆನ್ನುತ್ತದೆ ಗರುಡ ಪುರಾಣ.


3. ಸಪ್ತ ವ್ಯಸನಗಳಲ್ಲಿ ಒಂದು ಜೂಜು. ಜೂಜಿನ ಚಟಕ್ಕೆ ಬಿದ್ದವರ ಜೀವನ ನರಕವಾಗಿ ಬದಲಾಗುತ್ತದೆ. ಇವರು ಎಂದಿಗೂ ಸಂತೋಷವಾಗಿ ಇರಲಾರರು. ಅಷ್ಟೇ ಅಲ್ಲದೆ ಇವರ ಜತೆ ಬದುಕುವವರೂ ಸಂತೋಷವಾಗಿರಲ್ಲ ಎಂದು ಗರುಡ ಪುರಾಣ ಹೇಳುತ್ತದೆ. ಜೂಜಿನಿಂದ ದೈಹಿಕ, ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಅವರು ನಿತ್ಯ ಕುಗ್ಗಿ ಹೋಗುತ್ತಾರೆಂದು, ಅಂತಹವರು ಇದರಿಂದ ದೂರ ಇರಬೇಕು ಎನ್ನುತ್ತದೆ ಗರುಡ ಪುರಾಣ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಹಳ್ಳಿ ಹುಡುಗಿ ದ್ವಿತೀಯ ಪಿಯುಸಿನಲ್ಲಿ ರಾಜ್ಯಕ್ಕೆ ಪ್ರಥಮ..!

    ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ ಚಿತ್ರದುರ್ಗ ಕೊನೆಯ ಸ್ಥಾನ ಪಡೆದು ಕಳಪೆ ಫಲಿತಾಂಶ ಪಡೆದ ಜಿಲ್ಲೆಯಾಗಿದೆ. ಈ ಸಲದ ದ್ವಿತೀಯ ಪರೀಕ್ಷೆಯಲ್ಲಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಎಂಬುವವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಬಳ್ಳಾರಿಯ ಕೊಟ್ಟೂರಿನಲ್ಲಿ ಸೈಕಲ್ ಶಾಪ್‌ನಲ್ಲಿ ನಡೆಸುತ್ತಿದ್ದ ದೇವೇಂದ್ರಪ್ಪ ಮತ್ತು ಜಯಮ್ಮ ಎಂಬುವವರ ಪುತ್ರಿ ಕುಸುಮಾ ಸೈಕಲ್ ಶಾಪ್‌ನಲ್ಲಿ ಪಂಕ್ಚರ್ ಹಾಕುವ ಕೆಲಸ…

  • KOLAR NEWS PAPER

    ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-2023

    ಕೋಲಾರ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ಮೇಳ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಚಾಲನೆ ನೀಡಿದರು. ಶುಕ್ರವಾರ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-೨೦೨೩ ಸಚಿವ ಮುನಿರತ್ನ ಉದ್ಘಾಟಿಸಿದರು. ಮೇಳದಲ್ಲಿ ಹೂ ಮತ್ತು ತರಕಾರಿಗಳಿಂದ…

  • ಆಧ್ಯಾತ್ಮ

    ಈ 5 ವಸ್ತುಗಳಿಂದ ಭಗವಾನ್ ಶಿವ ಲಿಂಗವನ್ನು ಎಂದಿಗೂ ಪೂಜಿಸಬಾರದು..!

    ಭಗವಾನ್ ಶಿವ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು, ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ. ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ

    ಕೋಲಾರ: ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯ, ರಾಯಲ್ಪಾಡು ಹೋಬಳಿ, ಎ.ಕೊತ್ತೂರು ಗ್ರಾಮದ ನವೀನ್ ಕುಮಾರ್ ಬಿನ್ ರವಣಪ್ಪ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಶ್ರೀನಿವಾಸಪುರ ಪೊಲೀಸ್ ಠಾಣೆ ನಿರೀಕ್ಷಕರಾದ ಸಿ.ರವಿಕುಮಾರ್ 6 ಮತ್ತು 16 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ವಿಚಾರಣೆ ನಡೆಸಿದ…

  • ಸುದ್ದಿ

    ನೀವು ನಿದ್ದೆ ಮಾಡುವಾಗ ಎಡಗೈ ಮೇಲೆ ಮಲಗುತ್ತೀರಾ ಹಾಗಾದರೆ ಇದನ್ನೊಮ್ಮೆ ತಪ್ಪದೆ ಓದಿ,.!

    ನಾವು ಮಧ್ಯಾಹ್ನ ಅಥವಾ ರಾತ್ರಿ  ಮಲಗುವಾಗ ನಮ್ಮ ಕೈ ಮೇಲೆ ತಲೆನ ಹಾಕಿಕೊಂಡು ಮಲಗುತ್ತೇವೆ ಅದು ನಿಮಗೂ ಗೊತ್ತು, ನಿದ್ದೆ ಮನುಷ್ಯನಿಗೆ ವರದಾನವಾಗಿದೆ, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕೆಲಸ ಮಾಡುವವರು ನಿದ್ರೆ ಕಡೆ ಗಮನ ಕೊಡುತ್ತಿಲ್ಲ ತುಂಬಾ ಕೆಲಸದ ಕಡೆ ಗಮನ ಕೊಡುತ್ತಿದ್ದಾರೆ ಇದರಿಂದ ನಮ್ಮ  ಆರೋಗ್ಯದ  ಮೇಲೆ ತುಂಬಾನೇ  ಪರಿಣಾಮ ಬೀರುತ್ತದೆ. ಇದರಿಂದ  ರಾತ್ರಿ ಮಲಗುವ  ನಿದ್ದೆ  ಸಾಕಾಗುವುದಿಲ್ಲ ಹಾಗಾಗಿ  ಮಧ್ಯಾಹ್ನವೂ ಕೂಡ ಮಲಗುತ್ತಾರೆ,  ಮತ್ತು  ಹೆಚ್ಚಾಗಿ ನಿದ್ರೆ ಮಾಡುವವರನ್ನು ಸೋಂಬೇರಿಗಳು ಅಂತಾನೂ  ಕರೆಯುತ್ತಾರೆ….

  • Village

    ನಿಮ್ಮ ಹಳ್ಳಿಯಲ್ಲಿ ಕರೊನಾ ಜಾಸ್ತಿ ಆಗಲು ಈ ಕಾರಣ ಇರಬಹುದು.

    ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.