ಸರ್ಕಾರದ ಯೋಜನೆಗಳು

ಖಾತೆಯಲ್ಲಿ 10 ಸಾವಿರ ಇರುವವರು ಬಡವರಲ್ಲ..!ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

1090

ಮಿಶನ್‌ ಅಂತ್ಯೋದಯ ಯೋಜನೆ ಅಡಿ 50 ಸಾವಿರ ಗ್ರಾಮ ಪಂಚಾಯತ್‌ಗಳಲ್ಲಿ ಬಡತನ ನಿವಾರಣೆಗೆ ನಿರ್ಧರಿಸಿದ್ದು, ಇದರ ಅಡಿಯಲ್ಲಿ ಬಡತನದ ಮಾನದಂಡಗಳನ್ನು ಇದೀಗ ನಿಗದಿಸಲಾಗಿದೆ. ಒಂದು ಕುಟುಂಬದಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಬ್ಯಾಂಕ್‌ ಖಾತೆಯಲ್ಲಿ 10 ಸಾವಿರಕ್ಕಿಂತ ಹೆಚ್ಚು ಮೊತ್ತವನ್ನು ಇಟ್ಟುಕೊಂಡಿದ್ದರೆ, ಆ ಕುಟುಂಬ ಬಡತನ ಅನುಭವಿಸುತ್ತಿಲ್ಲ ಎಂದು ಪಂಚಾಯತ್‌ಗಳು ನಿರ್ಧರಿಸಬಹುದಾಗಿದೆ.

ಅಲ್ಲದೆ ಒಂದು ಗ್ರಾಮ ಪಂಚಾಯತ್‌ನಲ್ಲಿ ಎಷ್ಟು ಮಹಿಳೆಯರು ಉದ್ಯೋಗ ಹೊಂದಿದ್ದಾರೆ ಅಥವಾ ಸ್ವಯಂ ಉದ್ಯೋಗಿಗಳಾಗಿದ್ದಾರೆ ಮತ್ತು ಎಲ್‌ಪಿಜಿ ಸಂಪರ್ಕವನ್ನು ಎಷ್ಟು ಕುಟುಂಬಗಳು ಹೊಂದಿವೆ ಎಂಬುದನ್ನೂ ಪರಿಗಣಿಸಲಾಗುತ್ತದೆ. ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಟುಂಬಗಳ ಬಡತನ ಶ್ರೇಣಿ ಅಳೆಯಲು ಸುಮಾರು 21 ಮಾನದಂಡಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ನಿಗದಿಸಿದೆ.

ಸಾಲ, ಹೈನುಗಾರಿಕೆ, ಕೃಷಿಯೇತರ ಉದ್ಯೋಗ, ಮಾರುಕಟ್ಟೆ ಮತ್ತು ಬ್ಯಾಂಕ್‌ ಖಾತೆಗಳ ಸಂಖ್ಯೆಯ ಅಂಶಗಳನ್ನೂ ಇದರ ಅಡಿಯಲ್ಲಿ ಮೌಲೀಕರಿಸಲಾಗುತ್ತದೆ. ಕೂಲಿ ಅಥವಾ ಸ್ವಯಂ ಉದ್ಯೋಗ ಹೊಂದಿರುವ ಕುಟುಂಬವು ಒಂದು ಗ್ರಾಮ ಪಂಚಾಯಿತಿಯಲ್ಲಿ ಎಷ್ಟಿವೆ ಎಂಬುದನ್ನು ಆಧರಿಸಿ ಗ್ರಾಮ ಪಂಚಾಯತ್‌ಎಷ್ಟು ಉತ್ತಮವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಮಿಶನ್‌ ಅಂತ್ಯೋದಯ ಯೋಜನೆ ಅಡಿಯಲ್ಲಿ, ಗ್ರಾಮ ಪಂಚಾಯತ್‌ಗಳನ್ನು ಶ್ರೇಣೀಕರಿಸಲು ಮೂರು ಮೂಲ ಮಾನದಂಡ ಗಳಿಗೆ ಸಚಿವಾಲಯವು ಅನುಮೋದನೆ ನೀಡಿದೆ. ಮೂಲಸೌಕರ್ಯ, ಸಾಮಾಜಿಕ ಅಭಿವೃದ್ಧಿ ಮತ್ತು ರಕ್ಷಣೆ, ಆರ್ಥಿಕ ಅಭಿವೃದ್ಧಿ ಹಾಗೂ ಜೀವನಮಟ್ಟದ ವೈವಿಧ್ಯತೆಯನ್ನು ಈ ಮಾನದಂಡಗಳಿಗೆ ಸೂಕ್ತವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಪ್ರೇಮ, ಸ್ಪೂರ್ತಿ

    ತನ್ನ ಮರಿಗಾಗಿ ಈ ಕೋತಿ ಆಸ್ಪತ್ರೆಯ ಬಳಿ ಮಾಡಿದ ಕೆಲಸವನ್ನ ನೋಡಿದರೆ ಕಣ್ಣೀರು ಬರುತ್ತದೆ.

    ಸ್ನೇಹಿತರೆ ನಾವು ಮನುಷ್ಯತ್ವದ ಬಗ್ಗೆ ಮತ್ತು ಮನುಷ್ಯರು ಮಾಡುವ ಸಹಾಯದ ಬಗ್ಗೆ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ, ಆದರೆ ಪ್ರಾಣಿಗಳು ತೋರುವ ಪ್ರೀತಿಯ ಬಗ್ಗೆ ನಾವು ನೋಡಿರುವುದು ಮತ್ತು ಕೇಳಿರುವುದು ತುಂಬಾ ಕಡಿಮೆ. ಸ್ನೇಹಿತರೆ ನಿಮ್ಮ ಹೃದಯಕ್ಕೆ ಹತ್ತಿರವಾಗುವ ಘಟನೆಯೊಂದು ನಮ್ಮ ದೇಶದಲ್ಲಿ ನಡೆದಿದ್ದು ಅದನ್ನ ಕೇಳಿದ ಜನರ ಕಣ್ಣಲ್ಲಿ ಕೂಡ ನೀರು ಬಂದಿದೆ. ತುಂಬಾ ಜನರು ಅವರ ಕಷ್ಟಗಳನ್ನ ನಿವಾರಣೆ ಮಾಡಿಕೊಳ್ಳುವುದರಲ್ಲಿಯೇ ದಿನವನ್ನ ಕಳೆಯುತ್ತಾರೆ, ತಮ್ಮ ಕಷ್ಟಗಳನ್ನ ಬಗೆಹರಿಸಿಕೊಳ್ಳುವುದಕ್ಕೆ ಅವರಿಗೆ ಸಮಯ ಇರುವುದಿಲ್ಲ ಇಂತಹ ಸಮಯದಲ್ಲಿ ಬೇರೆಯವರ…

  • inspirational

    ಹಣ ಉಳಿಸುವ ಸುಲಭ ಮಾರ್ಗಗಳು

    ದುಡ್ಡಿನ ಅಗತ್ಯ ಯಾವಾಗ ಹೇಗೆ ಬೀಳುತ್ತದೆ ಎಂದು ಹೇಳಲು ಅಸಾಧ್ಯ. ಬದುಕಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ದುಡ್ಡಿನ ಅನಿವಾರ್ಯತೆ ಎದುರಾಗಬಹುದು. ಅದನ್ನು ಇಷ್ಟೇ ಅಂತ ಹೇಳಲು ಬರುವುದಿಲ್ಲ. ಹೀಗಾಗಿ ಎಲ್ಲಾ ಉಳಿಕೆ, ಹೂಡಿಕೆಗಳ ಬಳಿಕವೂ ತುರ್ತು ಸಂದರ್ಭದಲ್ಲಿ ಅನುಕೂಲವಾಗಲು ನಿಮ್ಮಲ್ಲಿ ಹಣ ಇರಲೇ ಬೇಕಾಗುತ್ತದೆ. ಆರೋಗ್ಯ ವಿಮೆ, ವಾಹನ ವಿಮೆಗಳನ್ನೆಲ್ಲಾ ಅಂದುಕೊಂಡ ಕಾಲಕ್ಕೆ ಪಾವತಿಯಾಗುವುದಿಲ್ಲವಾದದ್ದರಿಂದ ಟರ್ನ್ ಓರ್ವ ಮಾಡಲು ಸಾಧ್ಯವಾಗುವಂತಹ ಪ್ಲಾನ್ ಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಉಳಿಕೆಯನ್ನು ನಿರ್ದಿಷ್ಟವಾಗಿ ಇಷ್ಟೇ ಎಂದು ಹೇಳಲು…

  • ಸುದ್ದಿ

    ಲಿಂಗೈಕ್ಯರಾದ ಜಗದ್ಗುರು ಮಾತೆ ಮಹಾದೇವಿ…

    ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಸವ ಪೀಠದ ಅಧ್ಯಕ್ಷೆ 74 ವರ್ಷದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ. ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು…

  • ಆರೋಗ್ಯ

    ಪ್ರತಿದಿನ ಅರಿಶಿನವನ್ನು ಬಳಸುವುದರಿಂದ ಏನಾಗುತ್ತೆ ಗೊತ್ತಾ.!

    ನೀವು ರಾತ್ರಿಯಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದರೆ, ಅರಿಶಿನ ಹಾಲು ನಿಮ್ಮ ನಿದ್ರೆಗೆ ಸಹಾಯಕವಾಗಬಹುದು. ರಾತ್ರಿ ಊಟದ ನಂತರ ಮಲಗುವ ಮುನ್ನ ಅರ್ಧ ಲೋಟ ಹಾಲನ್ನು ಅರಿಶಿನೊಂದಿಗೆ ಕುಡಿಯಿರಿ ಮತ್ತು ನಂತರ ನೀವು ರಾತ್ರಿಯಲ್ಲಿ ಹೇಗೆ ಮಲಗುತ್ತೀರಿ ಎಂಬುದನ್ನು ನೋಡಿ. ಅರಿಶಿನದ ಬಳಕೆ ದೇಹವನ್ನು ಹೊಳೆಯುವಂತೆ ಮಾಡುತ್ತದೆ. ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಅರ್ಧ ಟೀ ಚಮಚ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹವು ಹೊಳಪನ್ನು ಹೊಂದುತ್ತದೆ. ಈ ರೀತಿ ಪ್ರತಿದಿನ ಅರಿಶಿನ ಸೇವನೆಯೊಂದಿಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ…

  • ತಂತ್ರಜ್ಞಾನ

    ಶೌಚಾಲಯಗಳ ಸ್ವಚ್ಛತೆಗೆ ರೈಲ್ವೆ ಇಲಾಖೆ 42 ಕೋಟಿ ಮೌಲ್ಯದ ಹಸುವಿನ ಬೆರಣಿ ಖರೀದಿಸ್ತಿ ಏಕೆ..?ತಿಳಿಯಲು ಇದನ್ನು ಓದಿ..

    ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.

  • ಸುದ್ದಿ

    ನಿವೃತ್ತಿ ವಯಸ್ಸಿನ ಗೊಂದಲಗಳಿಗೊಂದು ತೆರೆ : ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ…..!

    ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 33 ವರ್ಷ ಸೇವೆ ಸಲ್ಲಿಸಿದವರ ಅಥವಾ 60 ವರ್ಷ ತುಂಬಿದವರನ್ನು ಸೇವೆಯಿಂದ ನಿವೃತ್ತಿಗೊಳಿಸುವ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತ ಗೊಂದಲಗಳಿಗೆ ತೆರೆ ಬಿದ್ದಿದೆ. ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹ ಮತ್ತು ವದಂತಿಗಳು ಹರಡಿದ ಬಗ್ಗೆ ಕೇಂದ್ರ ಸರ್ಕಾರ…