ಆರೋಗ್ಯ, ಉಪಯುಕ್ತ ಮಾಹಿತಿ

ಕ್ಯಾನ್ಸರ್ ಚಿಕಿತ್ಸೆಯಿಂದ ನಿಮ್ಮ ಕೂದಲು ಉದುರುತ್ತಿದಿಯೇ -ಏನು ಮಾಡಬೇಕು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

560

ಕಿಮೊಥೆರಪಿ ಹಾಗು ರೇಡಿಯೇಶನ್ ಥೆರಪಿ ಮಾಡಿಸಿಕೊಂಡಲ್ಲಿ ಕೂದಲು ಉದುರುವಿಕೆ ಅಥವಾ ಅಲೋಪಿಶಿಯಾವು ಒಂದು ಪ್ರಧಾನ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕೂದಲು ಉದುರುವಿಕೆಯು ಭಾಗಶಃ ಕಾಣಿಸಿಕೊಳ್ಳಬಹುದು ಅಥವಾ ಮುಖ, ಕೈ, ತಲೆ, ಕಾಲು, ಕಂಕುಳು ಹಾಗು ಜನನಾಂಗದ ಭಾಗದ ಮೇಲಿರುವ ಕೂದಲುಗಳೆಲ್ಲಾ ಸಹ ಉದುರಲು ಆರಂಭಿಸಬಹುದು.

ಹಾಗೆಂದು ಕೂದಲು ಶಾಶ್ವತವಾಗಿ ಉದುರಿ ಹೋಗುತ್ತದೆ ಎಂದು ಭಾವಿಸಬೇಡಿ. ಇದು ಈ ಚಿಕಿತ್ಸೆಯನ್ನು ಪಡೆಯುವವರೆಗೆ ಮಾತ್ರ, ಚಿಕಿತ್ಸೆ ನಿಲ್ಲಿಸಿದ ಕೂಡಲೆ ಕೂದಲು ಬೆಳೆಯುವಿಕೆಯು ಮೊದಲಿನಂತಾಗುತ್ತದೆ. ಆದರೆ ಕೂದಲು ತೆಳ್ಳಗೆ ಇರುತ್ತದೆ ಅಷ್ಟೇ.

  1. ಕೂದಲು ಉದುರುವಿಕೆಯ ಕಾರಣಗಳು ಯಾವುವು

ಕೂದಲು ಉದುರುವಿಕೆಯು ಈ ಕೆಳಕಂಡ ಕಾರಣಗಳ ಸಲುವಾಗಿ ಕಾಣಿಸಿಕೊಳ್ಳಬಹುದು:

  • ಕಿಮೊಥೆರಪಿ: ಈ ಚಿಕಿತ್ಸೆಯಲ್ಲಿ ಔಶಧಿಗಳು ಬಹುತೇಕ ಬಾರಿ ಆರೋಗ್ಯಕರ ಹಾಗು ಕ್ಯಾನ್ಸರ್‌ಕಾರಕ ಕೋಶಗಳೆರಡರ ಮೇಲೆ ದಾಳಿ ಮಾಡುತ್ತವೆ. ಆ ಪ್ರಕ್ರಿಯೆಯಲ್ಲಿ ಇವು ಕೂದಲಿನ ಕೋಶಗಳ ಮೇಲೂ ಸಹ ದಾಳಿ ಮಾಡುತ್ತವೆ. ಹೀಗಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೂದಲು ಉದುರುತ್ತದೆ.

  • ರೇಡಿಯೇಶನ್ ಥೆರಪಿ: ರೇಡಿಯೇಶನ್ ಚಿಕಿತ್ಸೆಯನ್ನು ಯಾವ ಭಾಗದ ಮೇಲೆ ಕೊಡಲಾಗುತ್ತದೆಯೋ, ಅದರ ಆಧಾರದ ಮೇಲೆ ಕೂದಲು ಉದುರುವಿಕೆಯು ಕಾಣಿಸಿಕೊಳ್ಳುತ್ತದೆ. ಉದಾ> ಒಂದು ವೇಳೆ ರೇಡಿಯೇಶನ್ ಅನ್ನು ಮೆದುಳಿನಲ್ಲಿರುವ ಮೆಟಾಸ್ಟಾಸಿಸ್‌ಗೆ ನೀಡಿದಲ್ಲಿ, ತಲೆಯ ಭಾಗದಲ್ಲಿ ಸಂಪೂರ್ಣ ಕೂದಲು ಉದುರಬಹುದು.

  • ಹಾರ್ಮೋನ್ ಥೆರಪಿ: ಇದು ಕೂದಲನ್ನು ತೆಳ್ಳಗೆ ಮಾಡುತ್ತದೆ ಆದರೆ ಸಂಪೂರ್ಣ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ.
  1. ಯಾವಾಗ ಕೂದಲು ಬೆಳೆಯುತ್ತದೆ?

ಈ ಮೊದಲೇ ಹೇಳಿದಂತೆ, ಕೂದಲು ಉದುರುವಿಕೆಯು ಕ್ಯಾನ್ಸರ್‌ ಚಿಕಿತ್ಸೆಯ ಒಂದು ತಾತ್ಕಾಲಿಕ ಭಾಗವಾಗಿರುತ್ತದೆ.

  • ಒಂದು ವೇಳೆ ನೀವು ಕಿಮೊಥೆರಪಿಗೆ ಒಳಗಾದಲ್ಲಿ, ನಿಮ್ಮ ಕೂದಲು ಒಂದು ಇಂಚು ಬೆಳೆಯಲು 3-6 ತಿಂಗಳ ಕಾಲ ತೆಗೆದುಕೊಳ್ಳುತ್ತದೆ.

  • ಒಂದು ವೇಳೆ ನೀವು ರೇಡಿಯೇಶನ್ ಥೆರಪಿಯಿಂದ ಕೂದಲನ್ನು ಕಳೆದುಕೊಂಡಲ್ಲಿ, 4-6 ತಿಂಗಳ ನಂತರ ನಿಮ್ಮ ಕೂದಲು ಒಂದು ಇಂಚು ಬೆಳೆಯುತ್ತದೆ.
  1. ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೇಗೆ ತಡೆದುಕೊಳ್ಳುವುದು?

ಕೂದಲು ಉದುರುವಿಕೆಗೆ ಮೊದಲೇ ಅದನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಚಿಕಿತ್ಸೆ ನಡೆಯುವಾಗ ಮತ್ತು ನಡೆದ ಮೇಲೆ ಈ ಸಲಹೆಗಳನ್ನು ಅನುಸರಿಸಿ:-

a.ಚಿಕಿತ್ಸೆಗೆ ಮೊದಲು :-

ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ: ಚಿಕಿತ್ಸೆ ಪಡೆಯುವ ಮೊದಲೇ ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಆಗ ಕೂದಲು ಉದುರುವುದು ಮತ್ತು ಬೆಳೆಯುವುದು ನಿಮ್ಮ ಅರಿವಿಗೆ ಬರುವುದು ಕಡಿಮೆಯಾಗುತ್ತದೆ. ಪುರುಷರು ತಮ್ಮ ತಲೆಯನ್ನು ಬೋಳಿಸಿಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮಹಿಳೆಯರಿಗೆ ಇದು ಇಷ್ಟವಾಗದ ಸಲಹೆಯಾಗಿರುತ್ತದೆ.

ಕೋಲ್ಡ್ ಕ್ಯಾಪ್ ಥೆರಪಿ: ನಿಮಗೆ ಚಿಕಿತ್ಸೆ ನೀಡುವಾಗ ಕ್ಯಾಪ್ ಅಥವಾ ಕೋಲ್ಡ್ ಪ್ಯಾಕ್‌ಗಳನ್ನು ಧರಿಸಲು ಸಲಹೆ ಮಾಡಬಹುದು. ಕೂದಲು ಉದುರುವುದನ್ನು ತಪ್ಪಿಸಲು ಈ ತಂತ್ರವನ್ನು ಬಳಸಲಾಗುತ್ತದೆ. ಕೋಲ್ಡ್ ಪ್ಯಾಕ್ ತಲೆಯಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ಕಿಮೊಥೆರಪಿಯ ಔಷಧಿಗಳು ಕೂದಲಿನ ಬುಡಕ್ಕೆ ತಲುಪುವುದನ್ನು ತಡೆಯುತ್ತದೆ.

b.ಚಿಕಿತ್ಸೆ ಅವಧಿಯಲ್ಲಿ:-

  • ನಿಮ್ಮ ಕೂದಲನ್ನು ಪ್ರತಿದಿನ ತೊಳೆಯಲು ಹೋಗಬೇಡಿ.
  • ಯಾವಾಗಲೂ ಬೇಬಿ ಶಾಂಪೂವಿನಂತಹ ಮೃದುವಾದ ಶಾಂಪೂವನ್ನು ಬಳಸಿ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.

  • ಮೃದುವಾದ ಹೇರ್‌ಬ್ರಷ್ ಅನ್ನು ಬಳಸಿ ಹಾಗೂ ಬಿಗಿಯಾದ ಕ್ಲಿಪ್‌ಗಳನ್ನು ಬಳಸಿ ನಿಮ್ಮ ಕೂದಲಿನ ಸ್ಟೈಲ್ ಅನ್ನು ಮಾಡಬೇಡಿ.
  • ಬಿಸಿಲಿನಲ್ಲಿ ಹೋಗವಾಗ ನಿಮ್ಮ ತ್ವಚೆಗೆ ಸನ್‌ಸ್ಕ್ರೀನ್ ಲೋಶಹ್ ಮತ್ತು ತಲೆಗೆ ಸ್ಕಾರ್ಫ್ ಸುತ್ತಿಕೊಂಡು ಹೋಗುವುದನ್ನು ಮರೆಯಬೇಡಿ.
  • ಒಂದು ವೇಳೆ ನಿಮ್ಮ ಕೂದಲಿನಲ್ಲಿ ಹಕ್ಕಳೆಗಳು ಅಥವಾ ತುರಿಕೆಗಳು ಇದ್ದಲ್ಲಿ, ಅದು ಒಣ ತ್ವಚೆಯನ್ನು ಪ್ರತಿನಿಧಿಸುತ್ತದೆ. ಇದಕ್ಕೆ ಎಣ್ಣೆ ಅಥವಾ ಮೊಯಿಶ್ಚರೈಸರ್ ಅನ್ನು ಬಳಸಿ. ಆ್ಯಂಟಿ ಡೆಂಡ್ರಫ್ ಶಾಂಪೂವನ್ನು ಬಳಸಬೇಡಿ.

  • ಕರ್ಲಿಂಗ್, ಸ್ಟ್ರೈಟೆನಿಂಗ್ ಅಥವಾ ಕಲರಿಂಗ್ ಅನ್ನು ಮಾಡಿಸಬೇಡಿ.

c.ಚಿಕಿತ್ಸೆಯ ನಂತರ :-

ನಿಮ್ಮ ಸ್ವಾಭಾವಿಕ ಕೂದಲನ್ನು ಮೃದುವಾಗಿ ತೊಳೆಯಿರಿ, ಬಾಚಿರಿ ಅಥವಾ ಕಲರ್ ಮಾಡಿ. ಏಕೆಂದರೆ ಈ ಕೂದಲುಗಳು ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತವೆ:

  • ನಿಮ್ಮ ಕೂದಲನ್ನು ವಾರಕ್ಕೆ ಎರಡು ದಿನ ಮಾತ್ರ ತೊಳೆಯಿರಿ.
  • ತ್ವಚೆಯಲ್ಲಿ ಹಕ್ಕಳೆಗಳು ಹಾಗೂ ಒಣ ತ್ವಚೆಯನ್ನು ನಿವಾರಿಸಿಕೊಳ್ಳಲು ನೀವು ಕೂದಲಿನ ಮಸಾಜ್ ಅನ್ನು ಮಾಡಿಸಿಕೊಳ್ಳಬಹುದು.

ಆತುರಪಡಬೇಡಿ, ನೀವು ಕೂದಲು ಬೆಳೆಯುವುದನ್ನು ನೋಡಲು ಕಾತರದಿಂದ ಇರಬಹುದು. ಆದರೆ ಅದಕ್ಕೂ ಸ್ವಲ್ಪ ಸಮಯ ಬೇಕಾಗುತ್ತದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಳಿಯ ಚಿರು ಸರ್ಜಾ ಕುರಿತು ಅರ್ಜುನ್ ಸರ್ಜಾ ಅವರ ನೋವಿನ ಮಾತು.

    ನಟ ಚಿರಂಜೀವಿ ಸರ್ಜಾ ಅವರ ಹಠಾತ್‌ ನಿಧನದಿಂದ ಇಡೀ ಚಿತ್ರರಂಗವೇ ಕಂಬನಿಗರೆದಿದೆ. ಚಿಕ್ಕ ವಯಸ್ಸಿನಲ್ಲೇ ಅವರು ನಿಧನರಾಗಿದ್ದು ನಿಜಕ್ಕೂ ದುರದೃಷ್ಟಕರ. ಸರ್ಜಾ ಕುಟುಂಬದ ಮುದ್ದಿನ ಮಗನಾಗಿದ್ದ ಚಿರು ಅವರನ್ನು ಕಂಡರೆ ಅವರ ಮಾವ, ನಟ ಅರ್ಜುನ್ ಸರ್ಜಾ ಅವರಿಗೆ ಅಪಾರ ಪ್ರೀತಿ. ಇದೀಗ ತಮ್ಮ ಪ್ರೀತಿಯ ಅಳಿಯನ ಕುರಿತು ನೋವಿನ ಮಾತೊಂದನ್ನು ಹೇಳಿಕೊಂಡಿದ್ದಾರೆ ಅರ್ಜುನ್. ಜೂನ್‌ 7ರ ಭಾನುವಾರ ಮಧ್ಯಾಹ್ನ ಚಿರು ನಿಧನರಾದಾಗ ಅರ್ಜುನ್‌ ಚೆನ್ನೈನಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅವರು, ಕುಟುಂಬದೊಂದಿಗೆ ಹೊರಟು ಬಂದಿದ್ದರು. ತಮ್ಮ ಕಣ್ಣ ಮುಂದೆ ಬೆಳೆದಿದ್ದ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9 663218 892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9 66321 8892 ಮೇಷ ಸ್ನೇಹಿತರು ಜೊತೆಗಿನ ಚಟುವಟಿಕೆಗಳು ಆಹ್ಲಾದಕರವಾಗಿರುತ್ತವೆ – ಇಲ್ಲದಿದ್ದರೆ ನೀವು ಖಾಲಿ ಕೈಯಲ್ಲಿ ಜೊತೆ…

  • ಆರೋಗ್ಯ

    ನೀವು ಈ 6 ಆಹಾರ ಪಥ್ಯಗಳನ್ನು ಪಾಲಿಸಿದರೆ ಸಿಗರೆಟ್ ಸೇದೋ ಚಟ ಬಿಡಬಹುದು…….

    ಒಮ್ಮೆ ಸಿಗರೆಟ್ ಸೇದೋ ರುಚಿ ಕಂಡವರು ಇದನ್ನು ಬಿಡುವುದು ಕಷ್ಟ. ಒಂದು ವೇಳೆ ಇಂತಹ ಯಾವುದೋ ಕಾರಣಕ್ಕೆ ನೀವೂ ಧೂಮಪಾನಿಯಾಗಿದ್ದು ಇಂದು ಇದರಿಂದ ಹೊರಬರಲು ಸಾಧ್ಯವಾಗದೇ ಇದ್ದರೆ ಈ ಕೆಳಗಿನ

  • ಸುದ್ದಿ

    ಕಾಂಗ್ರೆಸ್‍ನ ಡಿಸಿಎಂ ಪರಮೇಶ್ವರ್ ಸೇರಿದಂತೆ ಎಲ್ಲ ಸಚಿವರಿಂದ ರಾಜೀನಾಮೆ….!

     ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಮಾಜಿ ಸಿಎಂ ಆಪ್ತರೆಲ್ಲ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಪರಮೇಶ್ವರ್ ಅವರು ಕರೆದ ಉಪಹಾರ ಕೂಟಕ್ಕೆ ಆಗಮಿಸಿದ್ದ ಎಲ್ಲ ಸಚಿವರು ತಮ್ಮ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯರಿಗೆ ರಾಜೀನಾಮೆ ನೀಡಿದ್ದಾರೆ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣೆಬೈರೇಗೌಡರು ಸೇರಿದಂತೆ ಎಲ್ಲ 22 ಸಚಿವರು ತಮ್ಮ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ. ಇತ್ತ ರಾಜೀನಾಮೆ ನೀಡಿ ಹೊರ ಬಂದು ಮಾತನಾಡಿದ ಸಚಿವ ರಹೀಂಖಾನ್, ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ…

  • ಹಣ ಕಾಸು

    ನಿಮ್ಗೆ ಗೊತ್ತಾ, ಎಟಿಎಂ ಮೂಲಕ ಈ 15 ಕೆಲಸಗಳನ್ನು ನೀವು ಸುಲಭವಾಗಿ ಮಾಡಬಹುದು!

    ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ಹಣ ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಇದೀಗ ಇನ್ನೂ ಅನೇಕ ವ್ಯವಹಾರಗಳನ್ನು ಎಟಿಎಂ ಯಂತ್ರಗಳ ಮೂಲಕ ಮಾಡಬಹುದಾಗಿದೆ

  • ಆರೋಗ್ಯ

    ಬೆಳ್ಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು. ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು.