ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ. ಇಲ್ಲಿ ಕೊಲೆಸ್ಟ್ರಾಲ್ ಇದೆ ಎಂದರೆ ಮೂರೂ ಅಂಶಗಳ ಒಟ್ಟು ಪ್ರಮಾಣದಲ್ಲಿ ಎಲ್‌ಡಿಎಲ್ ಪ್ರಮಾಣ ಶೇಖಡಾವಾರು ಹೆಚ್ಚಿದ್ದು ವೈದ್ಯರು ಸೂಕ್ತ ಔಷಧಿ ಮತ್ತು ಆಹಾರದಲ್ಲಿ ಕಟ್ಟುಟ್ಟು ಸಾಧಿಸಲು ಸಲಹೆ ಮಾಡುತ್ತಾರೆ.
ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿದಷ್ಟು ಹೃದಯ ಸಂಬಂಧಿ ರೋಗಗಳಿಗೆ ಮುಕ್ತ ಆಹ್ವಾನ ನೀಡಿದಂತೆ. ಒಂದು ವೇಳೆ ಇದು ಗರಿಷ್ಠ ಮಟ್ಟವನ್ನು ದಾಟಿದರೆ ವೈದ್ಯರು ಅನಿವಾರ್ಯವಾಗಿ ಪ್ರಬಲ ಔಷಧಿ ಗಳನ್ನೂ ಕಟ್ಟುನಿಟ್ಟಿನ ಅಹಾರ ನಿಯಂತ್ರಣ ಮತ್ತು ಕಡ್ಡಾಯ ವ್ಯಾಯಾಮವನ್ನೂ ಸೂಚಿಸುತ್ತಾರೆ. ಸುಖಮಯ ಜೀವನ ನಡೆಸುತ್ತಾ ಬಂದಿರುವವರಿಗೆ ಇವು ಕಬ್ಬಿಣದ ಕಡಲೆಗಳಾಗಿ ಪರಿಣಮಿಸುತ್ತವೆ. ಈ ಕಬ್ಬಿಣದ ಕಡಲೆ ಜಗಿಯುವ ಬದಲು ನಿಸರ್ಗ ನಮಗೆ ಮೆತ್ತಗಿರುವುದನ್ನು ಜಗಿಯಲು ನೀಡಿದೆ. ಅದೇ ತಿನ್ನಲು ಕೊಂಚ ಒಗರಾಗಿರುವ, ಆದರೆ ಬಳಿಕ ನೀರು ಕುಡಿದರೆ ಸಿಹಿಯಾಗಿರುವ ನೆಲ್ಲಿಕಾಯಿ.
ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು, ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್ ಕಡೆಮೆಗೊಳಿಸಲು ನೆಲ್ಲಿಕಾಯಿಯ ಪೋಷಕಾಂಶಗಳು ಅತ್ಯುತ್ತಮವಾಗಿವೆ. ಇದರ ಆರೋಗ್ಯಕರ ಗುಣಗಳನ್ನು ಕಂಡುಕೊಂಡ ಆಯುರ್ವೇದ ನೂರಾರು ನೂರಾರು ವರ್ಷಗಳಿಂದ ಔಷಧಿ ರೂಪದಲ್ಲಿ ಬಳಸುತ್ತಾ ಬಂದಿದೆ.ಇದರಲ್ಲಿರುವ ವಿಟಮಿನ್ ಸಿ, ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಖನಿಜಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ.
ಆದರೆ ಇದರ ನಿಜವಾದ ಶಕ್ತಿ ಇರುವುದು ಕೊಲೆಸ್ಟ್ರಾಲ್ ಸಂಗ್ರಹವಾಗಲು ನೆರವಾಗುವ ಹೆಚ್.ಎಂ.ಜಿ. ಸಿಆರ್ ಕಿಣ್ವದ ಪ್ರಬಲತೆಯನ್ನು ತಗ್ಗಿಸುವುದರಲ್ಲಿ. ಅಲ್ಲದೇ ಆಹಾರದಿಂದ ಕೆಟ್ಟ ಕೊಲೆಸ್ಟ್ರಾಲ್ ಹೀರಿಕೊಳ್ಳದೇ ಇರಲು ನೆರವಾಗುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣದ ಹೊರತಾಗಿ ನೆಲ್ಲಿಕಾಯಿ ಮಧುಮೇಹಿಗಳಿಗೂ ಉತ್ತಮ ಔಷಧೀಯ ಆಹಾರವಾಗಿದೆ. ಇದರಲ್ಲಿರುವ ಮಧುಮೇಹಿ ವಿರೋಧಿ ಗುಣಗಳು ಅಧಿಕ ರಕ್ತದೊತ್ತಡವನ್ನುನಿಯಂತ್ರಿಸಲೂ ನೆರವಾಗುತ್ತವೆ.
ನೆಲ್ಲಿಕಾಯಿಯನ್ನು ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಳಸುವ ಬಗೆ:-
ನೆಲ್ಲಿಕಾಯಿಯ ಅತ್ಯುತ್ತಮ ಬಳಕೆ ಎಂದರೆ ಈಗ ತಾನೇ ಹಿಂಡಿ ತೆಗೆದ ರಸವನ್ನು ಕುಡಿಯುವುದು. ಪ್ರತಿದಿನ ಸುಮಾರು ಅರ್ಧ ಲೋಟದಷ್ಟು ನಲ್ಲಿಕಾಯಿ ಜ್ಯೂಸ್ ಕುಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ನಲ್ಲಿಕಾಯಿ ಜ್ಯೂಸ್ ತಯಾರಿಸುವ ವಿಧಾನ:-
* ಎರಡು ದೊಡ್ಡ ಗಾತ್ರದ ಅಥವಾ ನಾಲ್ಕು ಚಿಕ್ಕಗಾತ್ರದ ನೆಲ್ಲಿಕಾಯಿಗಳನ್ನು ಚಿಕ್ಕದಾಗಿ ಕತ್ತರಿಸಿ ಬೀಜವನ್ನು ನಿವಾರಿಸಿ. * ಬ್ಲೆಂಡರ್‌ನಲ್ಲಿ ಕೊಂಚ ನೀರಿನೊಂದಿಗೆ ತಿರುಳನ್ನು ಸೇರಿಸಿ ಅರೆಯಿರಿ.
* ಈ ನೀರನ್ನು ತೆಳ್ಳನೆಯ ಮಸ್ಲಿನ್ ಬಟ್ಟೆ ಅಥವಾ ಸೋಸುಕ ಬಳಸಿ ನೀರು ಸಂಗ್ರಹಿಸಿ.
*ಈ ನೀರಿಗೆ ಕೊಂಚ ಕಪ್ಪು ಉಪ್ಪು ಅಥವಾ ಕಲ್ಲುಪ್ಪು ಸೇರಿಸಿ ಕುಡಿಯಬಹುದು.
*ರುಚಿ ಇಷ್ಟವಾಗದಿದ್ದರೆ ಕೊಂಚ ಜೇನನ್ನು ಸೇರಿಸಿ ಕುಡಿಯಬಹುದು.
*ಮಧುಮೇಹಿಗಳಿಗೆ ಜೇನು ಸಲ್ಲದು. ಆದ್ದರಿಂದ ಮಧುಮೇಹಿಗಳು.
* ಉಪ್ಪು, ಜೇನು ಸೇರಿಸದ ರಸ ಕುಡಿಯುವುದು ಉತ್ತಮ”
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ…
ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳು ಪ್ರವಾದಿಂದ ತತ್ತರಿಸಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದೇ ಬೆನ್ನಲ್ಲೇ ರಾಜಧಾನಿ ಬೆಂಗಳೂರಿಗೆ ಕಾದಿದೆ ಅಪಾಯ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ 2 ಸೆ.ಮೀಟರ್ ನಿಂದ 6 ಸೆಂಟಿ ಮೀಟರ್ ವರೆಗೂ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು…
ಸಾರಾಹ್ ಇದು ಒಂದು ಅನಾಮಧೇಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು ಕಳೆದ ಒಂದು ವಾರದಿಂದ ಸಾರಾಹ್ ಅಪ್ಲಿಕೇಷನ್ ಅತಿ ವೇಗವಾಗಿ ತನ್ನ ನೆಲೆಯನ್ನು ಪಡೆಯುತ್ತಿದೆ, ಇದು ಕೆಲವೇ ವಾರಗಳಲ್ಲಿ ಇರುತ್ತೋ ಇಲ್ಲ ಹೋಗುತ್ತೋ ಅಂತ ಯಾರೂ ಯೋಚನೆ ಸಹ ಮಾಡಿರಲಿಲ್ಲ. ಆದ್ರೆ ಈಗ ಇದರ ಹವಾ ಹೇಗಿದೆ ಎಂದರೆ ನಿಮ್ಮ ಫೇಸ್ಬುಕ್ ನ್ಯೂಸ್ ಫೀಡ್’ನ್ನು ನೋಡುವುದು ಸಹ ಕಷ್ಟ ವಾಗಿದೆ.
ಲೋಳೆಸರ, ಇದು ಅಲೋವೇರ ಎಂದು ಕರೆಯುವ ಈ ಗಿಡದ ಮೂಲ ಸ್ಥಳ ಆಫ಼್ರಿಕಾ ಖಂಡ. ಅಲೋ ವೆರಾ ಎಂಬುದು ಅನ್ನಿಯ ಕುಲದ ಸಸ್ಯ ಜಾತಿಯಾಗಿದೆ.ಇದು ಪ್ರಪಂಚದಾದ್ಯಂತ ಉಷ್ಣವಲಯದ ಹವಾಮಾನಗಳಲ್ಲಿ ಕಾಡು ಬೆಳೆಯುತ್ತದೆ
ಈಗಿನ ಕಾಲದಲ್ಲಿ ಸ್ಮಾರ್ಟ್ ಫೋನ್ ಸರ್ವೇಸಾಮಾನ್ಯವಾಗಿ ಕಂಡುಬರುತ್ತಿದೆ.ಆದ್ದರಿಂದ, Whats App ಗುಂಪಿನಲ್ಲಿ ನೀವು ಯಾರನ್ನಾದರೂ ಟ್ಯಾಗ್ ಮಾಡಲು ಅಥವಾ ನಮೂದಿಸಬೇಕೆಂದು ಬಯಸಿದರೆ – ಗುಂಪಿನಲ್ಲಿರುವ ಒಬ್ಬ ವ್ಯಕ್ತಿ? ಇದನ್ನು ಹೇಗೆ ಮಾಡುತ್ತೀಯ? ಮತ್ತು, ಇದು ಹೇಗೆ ಹೋಗುತ್ತದೆ ಮತ್ತು ಸ್ವೀಕರಿಸುವವರ ಫೋನ್ನಲ್ಲಿ ಪ್ರತಿಬಿಂಬಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?
ಸ್ವೀಡನ್ ದೇಶಕ್ಕೆ ಸೇರಿದ ಲೀನಾ ಅನ್ನುವ ಮಹಿಳೆ 16 ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಇದ್ದಾಗ ತನ್ನ ಮದುವೆಯ ದಿನ ಗಂಡ ಕೊಡಿಸಿದ್ದ ಅಮೂಲ್ಯವಾದ ವಸ್ತುವನ್ನ ಕಳೆದುಕೊಳ್ಳುತ್ತಾಳೆ. ಇನ್ನು ಅದೂ ವೆಡ್ಡಿಂಗ್ ರಿಂಗ್ ಮತ್ತು ದುಬಾರಿ ಬೆಲೆಯ ವಜ್ರದ ಉಂಗುರ ಆದ್ದರಿಂದ ತುಂಬಾ ಬೇಜಾರು ಮಾಡಿಕೊಂಡು ಕಣ್ಣೀರು ಹಾಕುತ್ತ ಮಕ್ಕಳ ಜೊತೆ ಮನೆಯ ತುಂಬಾ ಹುಡುಕಿದಳು ಲೀನಾ, ಆದರೆ ಎಷ್ಟೇ ಹುಡುಕಿದರೂ ಕೂಡ ಆ ಉಂಗುರ ಮಾತ್ರ ಸಿಗಲೇ ಇಲ್ಲ. ಹೀಗೆ 16 ವರ್ಷ ಕಳೆದ ನಂತರ…