ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ‘ಸುಕನ್ಯಾ ಸಮೃದ್ಧಿ’ ಹೆಸರಿನ ಉಳಿತಾಯ ಖಾತೆಯನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಆರ್ಥಿಕ ಸ್ವಾವಲಂಬನೆಗಾಗಿ ಒಂದು ಕುಟುಂಬ ಈ ಖಾತೆಯನ್ನು ತೆರೆಯಬಹುದಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಅಂಚೆ ಕಚೇರಿಗಳಲ್ಲಿ ತೆರೆಯಬೇಕು. ನವಜಾತ ಶಿಶುವಿನಿಂದ ಹಿಡಿದು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ‘ಸುಕನ್ಯಾ ಸಮೃದ್ಧಿ’ ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ.

ಈ ಖಾತೆ ಆರಂಭಗೊಂಡ ದಿನದಿಂದ 21 ವರ್ಷಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ. ಯಾರು ಖಾತೆ ತೆರೆಯಬಹುದು : ಸರ್ಕಾರಿ ಮತ್ತು ಖಾಸಗಿ ವಾಣಿಜ್ಯೋದ್ಯಮ ಸಂಸ್ಥೆಗಳ ನೌಕರರು, ವ್ಯಾಪಾರ, ಸ್ವಂತ ಉದ್ದಿಮೆ ಸೇರಿದಂತೆ ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.

ನವಜಾತ ಶಿಶುವಿನಿಂದ ಹಿಡಿದು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆಯುವ ಸಂದರ್ಭದಲ್ಲಿ ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ ಗುರುತಿನ ಚೀಟಿ, ವಿಳಾಸ ದೃಢೀಕರಣ ದಾಖಲೆಗಳು ಅಗತ್ಯವಾಗಿವೆ
21 ವರ್ಷ ಖಾತೆ ಇರುತ್ತದೆ .ಇದೊಂದು ದೀರ್ಘಕಾಲಿನ ಉಳಿತಾಯ ಖಾತೆಯಾಗಿದೆ. ಸುಕನ್ಯಾ ಸಮೃದ್ಧಿ ಉಳಿತಾಯ ಖಾತೆಯು ಆರಂಭಗೊಂಡ ದಿನದಿಂದ 21 ವರ್ಷದವರೆಗೂ ಚಾಲ್ತಿಯಲ್ಲಿರುತ್ತದೆ. ಯಾವ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಆಕೆಗೆ 18 ವರ್ಷ ಪೂರ್ಣಗೊಂಡ ನಂತರ, ಆಕೆಯು ತನ್ನ ಖಾತೆಯಲ್ಲಿ ಜಮಾ ಆದ ಹಣದಲ್ಲಿ ಅರ್ಧ ಭಾಗವನ್ನು ಉನ್ನತ ಶಿಕ್ಷಣ, ಮದುವೆಯ ಉದ್ದೇಶಕ್ಕೆ ಬಳಸಬಹುದು.

ವರ್ಗಾವಣೆಗೆ ಮಾಡಿಸಿಕೊಳ್ಳಬಹುದು :- ನೀವು ಖಾತೆ ತೆರೆದ ಊರಿನಿಂದ ಬೇರೆ ಊರಿಗೆ ವರ್ಗಾವಣೆಗೊಂಡರೆ ಖಾತೆಯನ್ನು ಆ ಊರಿಗೆ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಡಿ ಸಮೀಪದ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಬಹುದಾಗಿದೆ. ಯೋಜನೆಯ ಎಲ್ಲಾ ಮಾಹಿತಿ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಂದಿನ ಐದು ವರ್ಷ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಚಿಂತನೆ ನಡೆದಿದೆ ಎಂದು ಹೇಳುವ ಮೂಲಕ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಶಾಕ್ ನೀಡಿದ್ದಾರೆ. ನಗರದಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಸ್ಕೃತಿ ಹೆಚ್ಚುತ್ತಿದ್ದು, ಸಮಸ್ಯೆಗಳೂ ಬೆಳೆಯುತ್ತಿವೆ. ಕುಡಿಯುವ ನೀರಿನ ಸಮಸ್ಯೆ, ಒಳ ಚರಂಡಿ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಆಗುವುದಿಲ್ಲ. ಖಾಸಗಿಯವರು ಮೂಲ ಸೌಲಭ್ಯ ಒದಗಿಸುವ ಭರವಸೆ ನೀಡದೇ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿ, ಮಾರಾಟ ಮಾಡುತ್ತಾರೆ. ಈಗ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಐದು ವರ್ಷ…
ನಟ “ಸುದೀಪ್”ರವರು ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರು ಸದಾ ಸುದ್ದಿಯೇಲ್ಲಿರುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಅವರು ಹೆಚ್ಚಾಗಿ ಬಳುಸುವ ಸಾಮಾಜಿಕ ಜಾಲತಾಣ ಟ್ವಿಟ್ಟರ್. ಕನ್ನಡದ ಬೇರೆಲ್ಲಾ ನಟರಿಗಿಂತ ಸುದೀಪ್‌ರವರು ಟ್ವಿಟ್ಟರ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಗ್ರಾಹಕರೇ ಹುಷಾರಾಗಿರಿ. ಯಾಕೆಂದರೆ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ. ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಮಯ ಇಲ್ಲ. ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಬಹುತೇಕರು ಆನ್‍ಲೈನ್ ಫುಡ್ ತರಿಸೋ ಮೂಲಕ ಸಮಯ ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಮ್ಮೆ ನೀವು ಆರ್ಡರ್ ಮಾಡುವ ಆಹಾರ ತಯಾರಾಗುವ ಸ್ಥಳ ನೋಡಿದ್ರೆ ಬೇಡಪ್ಪ ಬೇಡ ಅನ್‍ಲೈನ್ ಅನ್ನೋದು ಗ್ಯಾರೆಂಟಿ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಕರಾವಳಿ…
ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸದ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದು, ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಚಾರ ಕಾರ್ಯದಲ್ಲೂ ಪಾಲ್ಗೊಂಡಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ರಾಜ್ಯ ರಾಜಕಾರಣದಿಂದ ದೂರವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ, ಮಂಡ್ಯ ಕ್ಷೇತ್ರದಲ್ಲಿ ಮತದಾನ ಮಾಡುವ ಗೋಜಿಗೂ ರಮ್ಯಾ ಹೋಗಿರಲಿಲ್ಲ. ಇದೀಗ ಗುರುವಾರದಂದು ರಾಜ್ಯದಲ್ಲಿ ಮೊದಲ ಹಂತದ…
ಮಾಂಸಪ್ರಿಯರಿಗೆ ನಾಟಿ ಕೋಳಿ ಮಾಂಸ ಎಂದರೆ ಬಾಯಿಯಲ್ಲಿ ನೀರು ಬರುವುದಂತು ಗ್ಯಾರಂಟಿ ಏಕೆಂದರೆ ಇದರ ಮಾಂಸದ ರುಚಿ ಅಂತಹುದು. ನಗರೀಕರಣ ಮತ್ತು ಮಾಂಸದ ಬೇಡಿಕೆಯ ಕಾರಣದಿಂದ ಫಾರಂ ಮತ್ತು ಬ್ರಾಯ್ಲರ್ ಕೋಳಿಗಳ ಸಾಕಾಣಿಕೆಯ ಕೇಂದ್ರಗಳು ತಲೆ ಎತ್ತಿವೆ. ಆದರೆ ಈ ಕೋಳಿಗಳ ಮಾಂಸ ನಾಟಿ ಕೋಳಿಯ ಮಾಂಸದ ರುಚಿಯಷ್ಟಿರುವುದಿಲ್ಲ. ನಗರಗಳಲ್ಲಿ ಜನರು ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ಹಣ ಖರ್ಚಾದರೂ ಕೂಡ ನಾಟಿ ಕೋಳಿಯನ್ನು ಕೊಳ್ಳುತ್ತಾರೆ. ಟರ್ಕಿ ಕೋಳಿಯನ್ನು ಕರ್ನಾಟಕದಲ್ಲಿ ತಿನ್ನುವುದು ಕಡಿಮೆ, ಆದರೆ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಗಂಡ_ಹೆಂಡತಿಯರ ಮುದ್ದಾದ ಸಂಸಾರ. ಹೆಂಡತಿ ಗರ್ಭವತಿಯಾಗಿದ್ದಳು ಹುಟ್ಟುವ ಮಗು ಗಂಡೋ ಅಥವ ಹೆಣ್ಣೋ ಎನ್ನುವ ಕುತೂಹಲ ಆಕೆಗೆ. ಗಂಡನನ್ನು ಕೇಳಿದಾಗ ಯಾವುದಾದರೂ ಹುಟ್ಟಲಿ ಬಿಡು. ನಮಗೆ ಗಂಡು ಮಗು-ಹೆಣ್ಣು ಮಗು ಎರಡೂ ಒಂದೇ ಅಲ್ಲವೆ ಎಂದನು. ಅದಕ್ಕೆ ಹೆಂಡತಿಯು ಹೌದು, ಆದರೆ ನಮಗೆ ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ ಅವನನ್ನು? ಎಂದು ಕೇಳಿದಳು. ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ..? ಗಂಡ ಕಿಟಕಿಯಿಂದ ಹೊರಗೆ…