ಶಿಕ್ಷಣ

ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳು ಹಾಗೂ ತಯಾರಿಯ ಬಗ್ಗೆ ಈ ಲೇಖನಿ ಓದಿ…..

2622

ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ :-

1) ಪ್ರಾಚೀನ ಭಾರತದ ಇತಿಹಾಸ – ಭಾರತ ಸರ್ಕಾರದ ಪ್ರಚಾರ ವಿಭಾಗ

2) ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಮಗ್ರ ಇತಿಹಾಸ – ಎಚ್.ಎನ್.ಬಸವರಾಜ

3) ಸಮಗ್ರ ಭಾರತದ ಇತಿಹಾಸ – ಡಾ|| ಕೆ.ಸದಾಶಿವ

4) ಕರ್ನಾಟಕ ಪರಂಪರೆ ಭಾಗ -೧

5) ಕರ್ನಾಟಕ ಪರಂಪರೆ ಭಾಗ -೨ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಪ್ರಕಟಿತ)

6) ಸ್ವತಂತ್ರ ಭಾರತ -1942 ರಿಂದ 2010 – ಪಾಲಾಕ್ಷ

7) ಆಧುನಿಕ ಭಾರತದ ಇತಿಹಾಸ – ಲೇ : ಕೆ.ನಾರಾಯಣ (ಬೆಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪುಸ್ತಕ)

8) ಕರ್ನಾಟಕ ಇತಿಹಾಸ – ಕೆ.ನಾರಾಯಣ

9) ಸ್ವತಂತ್ರ ಭಾರತ – ಕೆ.ನಾರಾಯಣ

10) ಕರ್ನಾಟಕ ಇತಿಹಾಸ – ಕ್ರಿ.ಶ. 1800-1956

11) ನಮ್ಮ ನಾಡು ಕರ್ನಾಟಕ – ಎಚ್.ಎಸ್.ಗೋಪಾಲರಾವ್12 ಸಮಗ್ರ ಕರ್ನಾಟಕ – ಪಾಲಾಕ್ಷ

13) ಕರ್ನಾಟಕ ಪ್ರವಾಸಿ ತಾಣಗಳು – ಶೇಷುನಾಥನ್ (ಸಾಧನಾ ಪ್ರಕಾಶನ ಬೆಂಗಳೂರು)

14) ಕರ್ನಾಟಕ ಕೈಗನ್ನಡಿ – ಸೂರ್ಯನಾಥ ಕಾಮತ್

15) ಪೂರ್ವ ಇತಿಹಾಸ – ಇರ್ಫಾನ್ ಹಬೀಬ್ (ಚಿಂತನ ಪ್ರಕಾಶನ, ಶಿರಸಿ)

16) ಸಾಮಾನ್ಯ ಭಾರತದ ಅರ್ಥಶಾಸ್ತ್ರ – ನೇ.ತಿ. ಸೋಮಶೇಖರ (ಬೆಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪುಸ್ತಕ)

17) ಭಾರತ ಸಂವಿಧಾನ – ಯಡಿಯೂರಪ್ಪ ತುಮಕೂರು

18) ಭಾರತ ಸಂವಿಧಾನ ಮತ್ತು ರಾಜಕೀಯ – ಎಚ್.ಎಮ್. ರಾಜಶೇಖರ

19) ನಮ್ಮ ನ್ಯಾಯಾಂಗ – ಬಿ.ಆರ್.ಅಗರವಾಲ್

20) ನಮ್ಮ ಸಂಸತ್ತು – ಸುಭಾಶ ಕಶ್ಯಪ್

21) ಭಾರತದ ಆರ್ಥಿಕ ಭೂಗೋಳಶಾಸ್ತ್ರ – ಪಿ.ಮಲ್ಲಪ್ಪ

22) ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ – ರಂಗನಾಥ

23) ಭೂಗೋಳ ವಿಶ್ವಕೋಶ – ಮೈಸೂರು ವಿಶ್ವವಿದ್ಯಾಲಯ

24) ಇತಿಹಾಸ ವಿಶ್ವಕೋಶ – ಮೈಸೂರು ವಿಶ್ವವಿದ್ಯಾಲಯ

25) ಕರ್ನಾಟಕ ವಿಶ್ವಕೋಶ ಭಾಗ -1

26) ಕರ್ನಾಟಕ ವಿಶ್ವಕೋಶ ಭಾಗ -2ಮೈಸೂರು ವಿಶ್ವವಿದ್ಯಾಲಯ

27) ಭಾರತದ ಆರ್ಥಿಕ ವ್ಯವಸ್ಥೆ – ಎಚ್.ಆರ್. ಕೃಷ್ಣೇಗೌಡ

28) ಕರ್ನಾಟಕದ ಆರ್ಥಿಕತೆ – ನೀ.ತಿ.ಸೋಮಶೇಖರ

29) ಕರ್ನಾಟಕ ಭೂಗೋಳ – ಪಿ.ಮಲ್ಲಪ್ಪ

30) ವಿಜ್ಞಾನ ಕಲಿಯೋಣ ಭಾಗ -1,2,3,4 – ಸಿ.ಎನ್.ಆರ್.ರಾವ್ ಮತ್ತು ಇಂದುಮತಿ ರಾವ್ – ನ್ಯಾಷನಲ್ ಬುಕ್ ಟ್ರಸ್ಟ್

31) ಜ್ಞಾನ ವಿಜ್ಞಾನ ಕೋಶ – ನವಕರ್ನಾಟಕ ಪ್ರಕಾಶನ

32) ನವಕರ್ನಾಟಕ ವಿಜ್ಞಾನ ಮಾಲಿಕೆಗಳು – 14 ಸರಣಿ

33) ಇದು ನಮ್ಮ ಕರ್ನಾಟಕ – ಚಾಣಕ್ಯ ಪ್ರಕಾಶನ

34) ಕನ್ನಡ ಕನ್ನಡಿಗ ಕರ್ನಾಟಕ – ಎಂ.ಚಿದಾನಂದ ಮೂರ್ತಿ

(dont buy all books, see the syllabus and according to that buy which ever you want)

Also refer:-                                                                                                  

NCRET and DCRET text books internet/web portals,

Kannada & English news papers,

Manorama, Indian year books, etc… yojana,

chronicle like magazines, some notes prepared by coaching institutes

 

2017ನೆ ಸಾಲಿನ ಕೆ.ಎ.ಎಸ್.(KAS) ಟಾಪರ್ ಐಶ್ವರ್ಯ ರವರ ಸಂಗ್ರಹ ಚಿತ್ರ.

ಕೆ.ಎ.ಎಸ್.(KAS) ಪರೀಕ್ಷೆಯ ತಯಾರಿಗಾಗಿ ಅಭ್ಯರ್ಥಿಯಲ್ಲಿ ಈ ಕೆಳಗಿನ ಗುಣಗಳು ಇರಬೇಕು :-

* ಕೆ.ಎ.ಎಸ್. ಅಧಿಕಾರಿಯಾಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು.

* ಪರೀಕ್ಷೆ ತಯಾರಿ ಮಾಡುವುದು ಬೇರೆ. ಅದರಲ್ಲಿ ಇಳಿಯುವುದು ಬೇರೆ. ಇಲ್ಲಿ ಪರೀಕ್ಷೆಗಾಗಿ ಆಳವಾದ ಅಧ್ಯಯನ ಮಾಡಬೇಕು. ಸಮುದ್ರ ಮೇಲ್ಗಡೆ ತೆರೆಗಳು ಹೆಚ್ಚಾಗಿ ಇರುವುವು. ಆದರೆ ಒಳಗೆ ಹೋದಂತೆ ಅಲ್ಲಿ ಪ್ರಶಾಂತತೆ ಇರುವುದು. ಅದೇ ರೀತಿ ಮೇಲ್ನೋಟಕ್ಕೆ ತಯಾರಿ ನಡೆಸಿದಾಗ ಮೈಂಡ್ ಡಿಸ್ಟರ್ಬ್ ಜಾಸ್ತಿ ಇರುವುದು. ಅದರಲ್ಲಿ ಆಳವಾಗಿ ತೊಡಗಿದಾಗ ನಮ್ಮ ಓದಿಗೆ ಡಿಸ್ಟರ್ಬ್ ಕಡಿಮೆಯಾಗುವುದು.

* ಪರೀಕ್ಷೆಗಾಗಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ಅದರಿಂದ ಹೊರಗೆ ಬರಬಾರದು. ಅದನ್ನು ದೃಢತೆ ಎನ್ನುವರು. ದೃಢವಾದ ಮನಸ್ಸು ಇಟ್ಟು ತಯಾರಿ ನಡೆಸಬೇಕು. ಕೆಲವರು ಕೆ.ಎ.ಎಸ್. ಪರೀಕ್ಷೆಗಾಗಿ ಪೂರ್ಣ ತಯಾರಿ ನಡೆಸಿದ್ದಾಗ, ಇನ್ನೊಂದು ಪರೀಕ್ಷೆ ಕಾಲ್ ಫಾರ್ಂ ಆದ ಕೂಡಲೇ ಕೆ.ಎ.ಎಸ್. ಅಲ್ಲೇ ಬಿಟ್ಟು ಇನ್ನೊಂದು ಪರೀಕ್ಷೆಗೂ ತಯಾರಿ ನಡೆಸುತ್ತಾರೆ. ಅದನ್ನು ಪೂರ್ಣಗೊಳಿಸದೆ, ಮತ್ತೊಂದು ಪರೀಕ್ಷೆಗೆ ಜಿಗಿಯುತ್ತಾರೆ. ಇಂಥವರು ಯಾವ ಪರೀಕ್ಷೆಯಲ್ಲಿಯೂ ಯಶಸ್ವಿಯಾಗುವುದಿಲ್ಲ.

* ಇಂಥ ಪರೀಕ್ಷೆ ತಯಾರಿ ನಡೆಸಿದಾಗ ನಿಮ್ಮ ಮನಸ್ಸನ್ನು ಆಕರ್ಷಣೆಯಿಂದ ದೂರ ಇಡಬೇಕು. ಆಕರ್ಷಣೆಗೆ ಒಳಗಾಗಿ ಓದುತ್ತಾ ಇದ್ದಾಗ ಅಭ್ಯಾಸ ಪರಿಪೂರ್ಣವಾಗುವುದಿಲ್ಲ. ಮುಗ್ಧ ಮನಸ್ಸು ಏಕಾಗ್ರತೆಗೊಳ್ಳುವುದಿಲ್ಲ. ಯಾವುದೋ ಭಾವಲೋಕದಲ್ಲಿ ಓದುತ್ತಾ ಇರುವುವರು ಅವರು ಎಷ್ಟೇ ಗಂಟೆ ಓದಿದರೂ ಕೂಡಾ, ತಾವು ಯಾವುದು ಓದಿದ್ದು ಎಂಬುದು ಗೊತ್ತಿರುವುದಿಲ್ಲ.

* ಈ ಪರೀಕ್ಷೆಗೆ ಏಷ್ಟು ಗಂಟೆ ತಯಾರಿ ನಡೆಸಬೇಕು ಎಂಬ ಪ್ರಶ್ನೆ ಬಹಳಷ್ಟು ಅಭ್ಯರ್ಥಿಗಳ ಪ್ರಶ್ನೆಯಾಗಿದೆ. ನನ್ನ ಪ್ರಕಾರ ಕನಿಷ್ಠ 12 ರಿಂದ 14ತಾಸು ಓದಬೇಕು. ಕೆಲವರಿಗೆ ಗಾಬರಿಯಾಗಬಹುದು. ಇದಕ್ಕಿಂತ ಕಡಿಮೆ ಅವಧಿಯನ್ನು ತೆಗೆದುಕೊಂಡರೆ, ವಿಷಯವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲವೆನೋ ಎಂದು ಕೆಲವರು ಹೇಳುವ ಪ್ರಕಾರ ಎಷ್ಟು ಗಂಟೆ ಓದುವುದು ಮುಖ್ಯವಲ್ಲ ಎಷ್ಟು ವಿಷಯ ತಿಳಿದುಕೊಂಡೆವು ಎಂಬುವುದು ಮುಖ್ಯವಾಗುತ್ತದೆ. ಆದರೆ, ಅಧ್ಯಯನಕ್ಕೆ ಕೂಡುವ ಅವಧಿ ಹೆಚ್ಚಿದಂತೆ, ಸಹಜವಾಗಿ ಏಕಾಗ್ರತೆ ಹಾಗೂ ಅರ್ಥ ಮಾಡಿಕೊಳ್ಳುವುದು.

* ಸಾಮಾನ್ಯವಾಗಿ ಯಾವ ಸಮಯದಲ್ಲಿ ಓದಬೇಕು ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಇಲ್ಲಿ ಯಾವ ಸಮಯದಲ್ಲಿ ಓದುತ್ತೇನೆ ಎಂಬುದು ಮುಖ್ಯವಲ್ಲ. ಯಾವುದೇ ಸಮಯದಲ್ಲಿ ಓದಿ ಆದರೆ, ಮನಸ್ಸು ಕೊಟ್ಟು ಅಧ್ಯಯನ ಮಾಡಿ. ಸಾಮಾನ್ಯವಾಗಿ ಇಂಥ ಪರೀಕ್ಷೆಗೆ ತಯಾರಿ ನಡೆಸುವವರು ರಾತ್ರಿಯೇ ಹೆಚ್ಚು ಅಧ್ಯಯನ ಮಾಡುತ್ತಾರೆ.

* ಈ ಪರೀಕ್ಷೆಗೆ ವಿಶೇಷ ತಯಾರಿ ಹಾಗೂ ಪರಿಶ್ರಮ ಬೇಕಾಗುವುದು. ಅದಕ್ಕಾಗಿ ಸಹನೆ ಇರಬೇಕು. ನಿರಂತರ ಓದುತ್ತಾ ಇದ್ದಾಗ, ಅದನ್ನು ಬಿಟ್ಟು ಓಡಿಹೋಗೋಣ ಎಂಬ ಮನಸ್ಸು ಬರುತ್ತದೆ. ಕೆಲವರು 11ಹೆಜ್ಜೆವರೆಗೆ ಬಂದಿರುತ್ತಾರೆ. ಇನ್ನೊಂದು ಹೆಜ್ಜೆ ಇಟ್ಟರೆ, ಗುರಿ ಮುಟ್ಟಲು ಸಾಧ್ಯವಿರುತ್ತದೆ. ಅದನ್ನು ಗುರ್ತಿಸದೆ, ಸಹನೆ ಕಳೆದುಕೊಂಡು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಾರೆ. ಓಡಿ ಹೋಗುತ್ತಾರೆ.

* ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ತಯಾರಿ ಮಾಡುವಾಗ ನಮ್ಮ ಓದು ಎಷ್ಟು ಮುಖ್ಯವಾಗಿರುತ್ತದೆ. ಅಷ್ಟೇ ಮುಖ್ಯ ನಮಗೆ ಪ್ರೇರಣೆ ಹಾಗೂ ಸ್ಫೂರ್ತಿ. ಅದಕ್ಕಾಗಿ ಈಗಾಗಲೇ ಯಶಸ್ವಿಯಾದವರ ಸಂದರ್ಶನ ಓದಿ ಹಾಗೂ ಕೆ.ಎ.ಎಸ್. ಪರೀಕ್ಷೆಗೆ ಸಂಬಂಧಪಟ್ಟ ಸೆಮಿನಾರ್‌ಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಮನಸ್ಸು ಗಟ್ಟಿಯಾಗುತ್ತದೆ. ನಮ್ಮ ಸ್ಪರ್ಧಾ ಚಾಣಕ್ಯ ಪತ್ರಿಕೆಯಲ್ಲಿ ಪ್ರತಿ ತಿಂಗಳು ಸಾಧಕರ ಬಗ್ಗೆ ಪ್ರಕಟಿಸಿದ್ದೇವೆ. ಒಮ್ಮೆ ಓದಿ ನೋಡಿ. ಸಾಧಿಸಲು ಅವರು ತೆಗೆದುಕೊಂಡ ಸಮಯ, ಯಶಸ್ಸಿಗಾಗಿ ಪಟ್ಟ ಪರಿಶ್ರಮ ಎಲ್ಲವೂ ಗೊತ್ತಾಗುತ್ತದೆ.

* ಓದುವಾಗ ಯಾವುದೇ ವಿಷಯ ತಿಳಿಯದಿದ್ದಾಗ ಗಾಬರಿಯಾಬೇಡಿ. ಎಲ್ಲರಿಗೂ ಎಲ್ಲಾ ವಿಷಯ ಗೊತ್ತಿರುವುದಿಲ್ಲ. ಯಾಕೆಂದರೆ ಯಾರೂ ಇಲ್ಲಿಯವರೆಗೆ 100ಕ್ಕೆ 100ಅಂಕಗಳನ್ನು ತೆಗೆದುಕೊಂಡ ಉದಾಹರಣೆ ಇಲ್ಲ. ಕೆಲವರು ಒಂದೂ ಪ್ರಶ್ನೆ ಬರದಿದ್ದಾಗ ನಾನು ದಡ್ಡನೆಂಬ ಭಾವನೆ ಬೆಳೆಸಿಕೊಂಡು ಉತ್ಸಾಹ ಕಳೆದುಕೊಳ್ಳುತ್ತಾರೆ.

* ಕೆಲವರಿಗೆ ಈ ಪರೀಕ್ಷೆ ಎಂದರೆ ಪುಸ್ತಕಗಳನ್ನು ಸಂಗ್ರಹಿಸುವುದು ಎಂದು ತಿಳಿದುಕೊಂಡು ಎಲ್ಲಾ ಪುಸ್ತಕಗಳನ್ನು ಖರೀದಿಸುತ್ತಾರೆ. ಆದರೆ, ಯವುದನ್ನು ಪೂರ್ಣವಾಗಿ ಓದುವುದಿಲ್ಲ. ಉತ್ತಮ ಪುಸ್ತಕಗಳು ಇದ್ದರೆ ಸಾಕು. ಮುಂದಿನ ಸಂಚಿಕೆಯಲ್ಲಿ ಕೆ.ಎ.ಎಸ್. ಪರೀಕ್ಷೆ ತಯಾರಿಗೆ ಇರುವ ಉತ್ತಮ ಪುಸ್ತಕಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ.

* ಉನ್ನತ ಪರೀಕ್ಷೆ ಬರೆಯಬೇಕಾದರೆ ಅಧ್ಯಯನದ ಕೊಠಡಿಯು ಕೂಡ ಅಷ್ಟೇ ಉತ್ತಮವಾಗಿರಬೇಕು. ಅಲ್ಲಿಯ ವಾತಾವರಣ ಬಹಳ ಚೆನ್ನಾಗಿರಬೇಕು. ಒಂದು ವೇಳೆ ನೀವು ಇರುವ ರೂಮಿನಲ್ಲಿ ಎಲ್ಲರೂ ಕೆ.ಎ.ಎಸ್. ಆಕಾಂಕ್ಷಿಗಳು ಇದ್ದರೆ ಚೆಂದ. ಬೇರೆ ಪರೀಕ್ಷೆಗೆ ತಯರಾಗುವವರ ಜೊತೆ ಇರಬಾರದು. ಯಾಕೆಂದರೆ, ನಿಮ್ಮದೇ ಕೆ.ಎ.ಎಸ್. ವಾತಾವರಣ ಇರುವುದಿಲ್ಲ. ಹಾಗೂ ಸ್ಫೂರ್ತಿ ಉಂಟಾಗುವುದಿಲ್ಲ.

* ಬೇರೆಯವರು ಓದುವುದನ್ನು ನೋಡಿ, ಅವರ ಪುಸ್ತಕಗಳ ಸಂಗ್ರಹ ನೋಡಿ, ಅವರ ಚರ್ಚೆಯನ್ನು ನೋಡಿ ನೀವು ಗಾಬರಿಯಾಗಬೇಡಿ. ಯಾವತ್ತೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಓದುವಾಗ ನಿಮ್ಮದೇ ಶೈಲಿ ರೂಢಿಸಿಕೊಂಡು ಓದಬೇಕು.

* ಓದುವಾಗ ಮುಖ್ಯವಾದ ವಿಷಯಗಳನ್ನು ಕುರಿತು ನಿಮ್ಮದೇ ಆದ ನೋಟ್ಸ್ ಮಾಡಿಕೊಳ್ಳುವುದು ಉತ್ತಮ. ಸಮಯ ಇರದಿದ್ದಾಗ ಮಾತ್ರ ಪುಸ್ತಕದಲ್ಲಿ ಅಂಡರಲೈನ್ ಮಾಡಿಕೊಳ್ಳಿ. ಇದರಿಂದ ವೇಗವಾಗಿ ಪುನರ್ ಅಧ್ಯಯನ ಮಾಡಲು ಹಾಗೂ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ.

* ಇದಕ್ಕಾಗಿ ಗೆಳೆಯರ ಗುಂಪು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಏಕಾಂಗಿ ಓದಬೇಡಿ. ಗುಂಪು ಚರ್ಚೆ ಮಾಡುವಾಗ ಹೊಸ ಹೊಸ ವಿಷಯ ತಿಳಿಯುವುದು ಅಲ್ಲದೆ ಚರ್ಚೆ ಮಾಡಿದ ವಿಷಯವು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ.

* ಚರ್ಚೆ ಹರಟೆಯಾಗಬಾರದು. ಓದು ಆಯಾಸವಾಗಬಾರದು ಹಾಗೂ ನಿರಂತರ ಉತ್ಸಾಹ ನಿಮ್ಮಲ್ಲಿ ಇರಬೇಕಾದರೆ, ಪ್ರತಿನಿತ್ಯ ಕನಿಷ್ಠ ಅರ್ಧಗಂಟೆಯಾದರೂ ಧ್ಯಾನ, ಪ್ರಾಣಾಯಾಮ ಹಾಗೂ ಯೋಗಾಸನ ಮಾಡಬೇಕು. ಇದರಿಂದ ನಮ್ಮ ದೇಹಕ್ಕೆ ಶುದ್ಧವಾದ ಆಮ್ಲಜನಕ ಪೂರೈಕೆಯಾಗುವುದಲ್ಲದೆ, ರಕ್ತ ಪರಿಚಲನೆ ನಿಯಮಿತಗೊಳ್ಳುವುದು. ಇದರಿಂದ ಉತ್ಸಾಹ ಹೆಚ್ಚಾಗುತ್ತದೆ. ಪ್ರಾಮಾಣಿಕವಾಗಿ ನಿಮ್ಮನ್ನು ಪರೀಕ್ಷೆಯಲ್ಲಿ ತೊಡಗಿಸಿಕೊಂಡರೆ, ನಿಮ್ಮ ತಯಾರಿ ಉತ್ತಮವಾಗಿರುತ್ತದೆ. ಯಾವುದೇ ಕಾರಣಕ್ಕೂ ಉತ್ಸಾಹ ಕಳೆದುಕೊಳ್ಳದೆ, ಒಂದೇ ಮನಸ್ಸಿನಿಂದ ತಯಾರಿಯಲ್ಲಿ ತೊಡಗಿಸಿಕೊಳ್ಳಿ. ನಿಲ್ಲಬೇಡಿ, ಮುನ್ನುಗ್ಗಿರಿ, ಯಶಸ್ಸು ಸಿಗಲಿ.

* ನಿಮ್ಮದೇ ಆದ ಟೈಮ್ ಟೇಬಲ್ ಹಾಕಿಕೊಳ್ಳಬೇಕು. ಪ್ರಾರಂಭದಲ್ಲಿ ಟೈಮ್ ಟೇಬಲ್ ಪಾಲನೆ ಮಾಡದೇ ಹೋಗಬಹುದು. ಆದರೆ, ನೀವು ನಿರಂತರವಾಗಿ ಪಾಲನೆ ಮಾಡಿದಂತೆ ರೂಢಿಯಾಗುತ್ತದೆ. ಟೈಮ್ ಟೇಬಲ್ ಇಲ್ಲದಿದ್ದರೆ, ಒಂದು ವಿಷಯ ಹೆಚ್ಚು ಓದುತ್ತೀರಿ, ಇನ್ನೊಂದು ವಿಷಯವನ್ನು ಕಡಿಮೆ ಓದುತ್ತೀರಿ. ನಾನು ಮಾಡೇ ಮಾಡ್ತೀನಿ ಎಂಬ ವಿಶ್ವಾಸ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಮ್ಮ ಮೇಲಿನ ನಂಬಿಕೆಯನ್ನು ಹಾಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟೀ ಕುಡಿಯಲು ದುಡ್ಡಿಲ್ಲದೆ ಪರದಾಡ್ತಿದ್ದ ನಟಿ ಮನೆಯಲ್ಲಿ ದೇವರ ಫೋಟೊ ಬದಲು ಸಲ್ಮಾನ್ ಫೋಟೋ..!ಯಾಕೆ ಗೊತ್ತಾ?

    ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಷಯರೋಗದಿಂದ ಬಳಲಿ ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಾದಾಗ ಕೇವಲ 23 ಕೆ.ಜಿಯಷ್ಟಿತ್ತು ಅವರ ತೂಕ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರ ಆರೋಗ್ಯ ಸುಧಾರಿಸಿದ್ದು ತೂಕದಲ್ಲೂ 20 ಕೆ.ಜಿಯಷ್ಟು ಹೆಚ್ಚಾಗಿದ್ದಾರೆ. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು. ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ….

  • ಸುದ್ದಿ

    ಮುಂದಿನ ಪ್ರಧಾನಿ ಯಾರು? ಉತ್ತರವನ್ನು ಹೇಳಿ ಬಂಪರ್ ಆಫರ್ ಗೆಲ್ಲಿ..!

    ಮೇ 23ರ ಗುರುವಾರದಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಮತಗಟ್ಟೆ ಸಮೀಕ್ಷೆಗಳು ಎನ್ಡಿಎ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದು, ಜನಸಾಮಾನ್ಯರಿಂದ ಹಿಡಿದು ಎಲ್ಲಾ ವರ್ಗಗಳಲ್ಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಮತಗಟ್ಟೆ ಸಮೀಕ್ಷೆ ಫಲಿತಾಂಶ ಷೇರುಪೇಟೆಯ ಮೇಲೆ ಪ್ರಭಾವ ಬೀರಿದ್ದು, ಹೂಡಿಕೆದಾರರು ಬೃಹತ್ ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಆಹಾರ ವಿತರಣಾ ಸಂಸ್ಥೆ ಜೋಮ್ಯಾಟೊ (Zomato) ಸಾರ್ವಜನಿಕರಿಗೆ ಭರ್ಜರಿ ಉಡುಗೊರೆ ನೀಡುವ ಘೋಷಣೆ ಮಾಡಿದೆ. ದೇಶದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂದು…

  • ಜ್ಯೋತಿಷ್ಯ

    ಮಂತ್ರಾಲಯದ ಶ್ರೀ ರಾಯರನ್ನು ನೆನೆಯುತ್ತ ನಿಮ್ಮ ಇಂದಿನ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Wednesday, December 1, 2021) ನೀವು ಚೈತನ್ಯದಿಂದ ತುಂಬಿರುತ್ತೀರಿ ಮತ್ತು ಇಂದು ಅಸಾಮಾನ್ಯವಾದದ್ದೇನಾದರೂ ಸಾಧಿಸುತ್ತೀರಿ. ನಿಮ್ಮ ಮೂಲಕ ಹಣವನ್ನು ಉಳಿಸಲು ಮಾಡಲಾಗಿರುವ ಪ್ರಯತ್ನವು ಇಂದು ವಿಫಲವಾಗಬಹುದು, ಹೇಗಾದರೂ, ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ, ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುತ್ತದೆ. ಪತ್ನಿಯೊಂದಿಗೆ ಜಗಳ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅನವಶ್ಯಕ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ಜೀವನದಲ್ಲಿ ಮಹತ್ವದ ವಿಷಯವೆಂದರೆ ನಾವು ಮಾರ್ಪಡಿಸಲು ಸಾಧ್ಯವಿಲ್ಲದ ವಿಷಯಗಳನ್ನು ಒಪ್ಪಿಕೊಳ್ಳಲು ಕಲಿಯುವುದಾಗಿದೆ. ನಿಮ್ಮ ಕಣ್ಣುಗಳು ಅದೆಷ್ಟು ಪ್ರಕಾಶಮಾನವಾಗಿವೆಯೆಂದರೆ ಅವು ನಿಮ್ಮ ಪ್ರೇಮಿಯ…

  • ಸುದ್ದಿ

    ಎಲ್ಲಿಯಾದರು ಹಾರಾಡುವ ರೆಸ್ಟೋರೆಂಟ್ ನೋಡಿದ್ದೀರಾ..!ಈ ಜಾಗದಲ್ಲಿದೆ ನೋಡಿ.?

    ವಿಮಾನದಲ್ಲಿ ಊಟ, ತಿಂಡಿ, ತಿನಿಸುಗಳನ್ನು ತಿನ್ನುವುದು ಸಾಮಾನ್ಯ. ಆದರೆ, ಉತ್ತರಪ್ರದೇಶದ ನೋಯ್ಡಾದಲ್ಲೊಂದು ಹಾರಾಡುವ ರೆಸ್ಟೋರೆಂಟ್ ಭಾರೀ ಜನಪ್ರಿಯಗೊಳ್ಳುತ್ತಿದೆ. ಭೂಮಿಯಿಂದ 160 ಅಡಿ ಎತ್ತರದ ಈ ರೆಸ್ಟೋರೆಂಟ್ ನಲ್ಲಿ ಸಾಹಸಮಯಿ ಜನರು ಊಟ ಮಾಡಿ ಸಂಭ್ರಮಿಸುತ್ತಿದ್ದಾರೆ. ಕ್ರೇನ್ ನ ಸಹಾಯದಿಂದ 160 ಅಡಿ ಎತ್ತರಕ್ಕೆ ಗ್ರಾಹಕರನ್ನು ಕರೆದೊಯ್ಯುವ ಈ ರೆಸ್ಟೋರೆಂಟ್ 24 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. ದುಬೈನಲ್ಲಿ ಇಂತಹದ್ದೇ ಅನುಭವವನ್ನು ಪಡೆದು ಬಂದಿರುವ ನಿಖಿಲ್ ಕುಮಾರ್ ಎಂಬುವರು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ರೆಸ್ಟೋರೆಂಟನ್ನು ಪರಿಚಯಿಸಿದ್ದಾರೆ.

  • ಸುದ್ದಿ

    ಮಾತು ಮಾತಿಗೂ ಹೆಚ್ಚು ಕೋಪ ಬರುತ್ತಿದೆಯೇ ಇಲ್ಲಿದೆ ನೋಡಿ ಅದಕ್ಕೆ ಮದ್ದು..!

    ಕೆಲವರು  ಮಾತು ಮಾತಿಗೆ ಕೋಪಗೊಳ್ತಾರೆ. ಈ ಕೋಪ ಸಂಬಂಧವನ್ನು ಹಾಳು ಮಾಡುವ ಜೊತೆಗೆ ಅವ್ರ ಆರೋಗ್ಯದ ಮೇಲೂ ಪ್ರಭಾವಬೀರುತ್ತದೆ. ಕೋಪ ಮನುಷ್ಯನ ಜೀವನವನ್ನು ಹಾಳು ಮಾಡುತ್ತದೆ.ಕೋಪವನ್ನು ನಿಯಂತ್ರಿಸಿಕೊಳ್ಳಲು ಕೆಲವರು ಅನೇಕ ಪ್ರಯತ್ನಗಳನ್ನು ಮಾಡ್ತಾರೆ. ಆದ್ರೆ ಯಾವುದೂ ಫಲ ನೀಡುವುದಿಲ್ಲ. ಕೆಲವೊಂದುವಾಸ್ತು ಉಪಾಯಗಳು ನಿಮ್ಮ ಕೋಪ ನಿವಾರಣೆಗೆ ಸಹಾಯಕವಾಗಲಿದೆ. ವಾಸ್ತು ಶಾಸ್ತ್ರದ ಪ್ರಕಾರ,ಯಾರಿಗೆ ಹೆಚ್ಚು ಕೋಪ ಬರುತ್ತದೆಯೋ ಅವ್ರು ಕೆಂಪು ಬಣ್ಣ ಬಳಕೆಯನ್ನು ಕಡಿಮೆ ಮಾಡಬೇಕು. ಮನೆಗೋಡೆ, ಬಾಗಿಲಿಗೆ ಬಣ್ಣ ಹಾಗೂ ಕಿಟಕಿ, ಬಾಗಿಲಿನ ಪರದೆ, ಕುಷನ್ ಗಳು…

  • ಸುದ್ದಿ

    ಚಂಧನ್ ಶೆಟ್ಟಿ ಮತ್ತು ನಿವೇದಿತಾಗೆ ಕುಟುಂಬದವರಿಂದ ಭರ್ಜರಿ ಉಡುಗೊರೆ. ಕಾರಿನ ಬೆಲೆ ಎಷ್ಟು ಗೊತ್ತಾ.

    ನಿನ್ನೆ ತಾನೇ ಚಂದನ್ ಶೆಟ್ಟಿ ಅವರು ತನ್ನ ಬಹುದಿನಗಳ ಪ್ರೇಯಸಿ ನಿವೇಧಿತಾ ಗೌಡ ಅವರನ್ನ ಗುರು ಹಿರಿಯರ ಸಮ್ಮುಖದಲ್ಲಿ ಮೈಸೂರಿನಲ್ಲಿ ಮದುವೆಯಾಗಿದ್ದು ನಿಮಗೆಲ್ಲ ಗೊತ್ತೇ. ಬಿಗ್ ಬಾಸ್ ನಲ್ಲಿ ಆರಂಭ ಆದ ಇವರಿಬ್ಬರ ಪ್ರೀತಿಗೆ ನಿನ್ನೆ ಒಂದು ಅರ್ಥ ಬಂತು ಹೇಳಿದರೆ ತಪ್ಪಾಗಲ್ಲ, ಹೌದು ಯುವದಸರ ವೇದಿಕೆಯ ಮೇಲೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಚಂದನ್ ಶೆಟ್ಟಿ ಅವರು ನಿವೇಧಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿ ಕೈಗೆ ರಿಂಗ್ ತೊಡಿಸಿದ್ದರು. ಇನ್ನು ಯುವದಸರ ವೇಧಿಕೆಯ ಮೇಲೆ ಕೊಟ್ಟ ಮಾತಿನಂತೆ…