ಆರೋಗ್ಯ, ಉಪಯುಕ್ತ ಮಾಹಿತಿ

ಕೆಮ್ಮನ್ನು ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ತಯಾರಿಸುವುದು ಹೇಗೆ.?ಎಲ್ಲರಿಗೂ ಶೇರ್ ಮಾಡಿ ಉಪಯೋಗವಾಗಲಿ…

912

ಕೆಮ್ಮು ವಾಸ್ತವವಾಗಿ ಒಂದು ಕಾಯಿಲೆಯಲ್ಲ, ಒಂದು ರೋಗ ನಿರೋಧಕ ವ್ಯವಸ್ಥೆ. ಗಂಟಲಿನ ತೇವದಲ್ಲಿ ವೈರಸ್ಸುಗಳು ಮನೆ ಮಾಡಿದಾಗ ಇದನ್ನು ಕೆರೆದು ಹೊರ ಹಾಕುವ ಕ್ರಿಯೆಯೇ ಕೆಮ್ಮು. ಈ ಕೆಮ್ಮನ್ನು ಎರಡೇ ದಿನದಲ್ಲಿ  ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ನೀವೆ ಸುಲಭವಾಗಿ ಮನೆಯಲ್ಲಿಯೇ ಸಿಗುವ ಸುಲಭ ಸಾಮಾಗ್ರಿಗಳಿಂದ ತಯಾರಿಸಬಹುದು.

ಕೆಮ್ಮು ಮತ್ತು ಸಾವು ಯಾರನ್ನೂ ಕೇಳಿ ಬರುವುದಿಲ್ಲ ವಂತೆ. ಯಾವುದೋ ಮುಖ್ಯ ಕಾರ್ಯದಲ್ಲಿದ್ದಾಗ ಕೆಮ್ಮು ಕಾಡಿದರೆ ಆಗ ಎದು ರಾಗುವ ತಾಪತ್ರಯ ಒಂದೆರ ಡಲ್ಲ. ಅದರಲ್ಲೂ ಕೆಮ್ಮು ಸತತವಾದರೆ ಮುಖ್ಯ ಕಾರ್ಯದ ನಡುವೆ ಎದ್ದು ಹೊರ ಹೋಗಲೇ ಬೇಕಾದ ಅನಿವಾರ್ಯತೆ ಉಂಟಾಗು ತ್ತದೆ. ಇದು ತೀವ್ರ ಮುಜುಗರ ತರಿಸುವ ವಿಷಯವೂ ಹೌದು. ನೋವುಕಾರಕವೂ ಹೌದು. ಈ ಕೆಮ್ಮು ಹಲವಾರು ದಿನಗಳವರೆಗೆ ಕಾಡಿದರೆ ಕಾಯಿಲೆ ಅಂಟಿದೆ ಎಂದೇ ಅರ್ಥ. ಕೆಮ್ಮು ಎರಡೇ ದಿನದಲ್ಲಿ ಕೆಮ್ಮನ್ನು ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ಎಂದು ಸುಮ್ಮನೇ ಇರುವ ಹಾಗಿಲ್ಲ, ಇದು ದೇಹದ ಶಕ್ತಿಯನ್ನೆಲ್ಲಾ ಹೀರಿ ನಿತ್ರಾಣವಾಗಿಸುತ್ತದೆ.

ಕೆಮ್ಮು ವಾಸ್ತವವಾಗಿ ಒಂದು ಕಾಯಿಲೆಯಲ್ಲ, ಒಂದು ರೋಗ ನಿರೋಧಕ ವ್ಯವಸ್ಥೆ. ಗಂಟಲಿನ ತೇವದಲ್ಲಿ ವೈರಸ್ಸುಗಳು ಮನೆ ಮಾಡಿದಾಗ ಇದನ್ನು ಕೆರೆದು ಹೊರ ಹಾಕುವ ಕ್ರಿಯೆಯೇ  ಕೆಮ್ಮು. ಇದಕ್ಕೆ ವೈರಸ್ಸಿನ ಸೋಂಕು, ಅಲರ್ಜಿ, ಅಸ್ಥಮಾ ಮತ್ತು ಕೆಲವು ವಿಪರೀತ ಸಂದರ್ಭ ಗಳಲ್ಲಿ ಕ್ಷಯ ಹಾಗೂ ಶ್ವಾಸ ಸಂಬಂಧಿ ತೊಂದರೆಗಳು ಕಾರಣವಾಗುತ್ತವೆ. ಕೆಲವೊಮ್ಮೆ ತಣ್ಣೀರು ಕುಡಿ ದಾಗಲೂ ಕೆಮ್ಮು ಆವರಿಸಿ ನಮ್ಮ ಚಟುವಟಿಕೆಗಳಿಗೆ ಬಾಧೆ ತರುವುದುಂಟು. 

ಸಾಮಾನ್ಯವಾಗಿ ಕೆಮ್ಮು ಕಾಡಿದಾಗ ವೈದ್ಯರು ಕೆಲವು ಕೆಮ್ಮಿ ಸಿರಪ್‌ಗಳನ್ನು ಶಿಫಾ ರಸ್ಸು ಮಾಡುತ್ತಾರೆ. ಆದರೆ ವಾಸ್ತವವಾಗಿ ಈ ಸಿರಪ್ಗಳಲ್ಲಿ ಕೊಂಚ ಪ್ರಮಾಣದ ಆಲ್ಕೋಹಾಲ್ ಇದ್ದು ನಿಜ ವಾಗಿಯೂ ಕೆಮ್ಮನ್ನು ಕಡಿಮೆ ಮಾಡುವ ಬದಲು ಕೊಂಚ ನಿದ್ದೆ ಬರಿಸಿ ಮನಸ್ಸನ್ನು ಕೆಮ್ಮಿ ನಿಂದ ಕೊಂಚ ಹೊರಳಿಸುವಂತೆ ಮಾಡಿ ಬಳಿಕ ನಿಧಾನ ವಾಗಿ ಕೆಮ್ಮಿಗೆ ಕಾರಣವಾದ ವೈರಸ್ಸಿನ ಮೇಲೆ ದೇಹದ ರೋಗ ನಿರೋಧಕ ಶಕ್ತಿ ಆಕ್ರಮಣ ಮಾಡಲು ಅನುವು ಮಾಡಿಕೊಡುತ್ತದೆ.

ಇದನ್ನೇ ನೆಪವಾಗಿಸಿ ಕೆಲ ವರು ಆಲ್ಕೋಹಾಲ್ ಬದಲಿಗೆ ಇಡಿಯ ಬಾಟಲಿ ಕೆಮ್ಮಿನ ಸಿರಪ್ ಕುಡಿಯುವುದುಂಟು. ಆದರೆ ಇದರ ಸೇವನೆಯಿಂ ದಲೂ ಕೆಲವು ಅಡ್ಡ ಪರಿಣಾಮಗಳಿವೆ. ಸುಸ್ತು, ತಲೆ ಭಾರ ವಾಗುವುದು, ಮಲಬದ್ಧತೆ, ಹಸಿವು ಹೆಚ್ಚುವುದು, ಹೊಟ್ಟೆ ಯಲ್ಲಿ ಉರಿ, ಹುಳಿತೇಗು ಇತ್ಯಾದಿ. ಆದ್ದರಿಂದ ಕೆಮ್ಮಿನ ಸಿರಪ್‌ಗಳು ತಾತ್ಕಾಲಿಕವಾಗಿ ಕೆಮ್ಮನ್ನು ಕಡಿಮೆ ಮಾಡಿದಂತೆ ಅನ್ನಿಸಿದರೂ ಪೂರ್ಣವಾಗಿ ಕೆಮ್ಮು ನಿವಾರಣೆಯಾಗುವುದಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಮನೆಯಲ್ಲಿಯೇ ಸಿಗುವ ಸುಲಭ ಸಾಮಾಗ್ರಿಗಳಿಂದ ತಯಾರಾದ ಈ ಪೇಯವೇ ಉತ್ತಮ.

ಅಗತ್ಯವಿರುವ ಸಾಮಾಗ್ರಿಗಳು:

* ಬಿಸಿಹಾಲು – ಒಂದು ಲೋಟ * ಕಾಳುಮೆಣಸಿನ ಪುಡಿ – 1/4 ಚಿಕ್ಕ ಚಮಚ (ತಾಜಾ ಕಾಳುಮೆಣಸನ್ನು ಕುಟ್ಟಿ ಪುಡಿ ಮಾಡಿದರೆ ಉತ್ತಮ) * ಜೇನು – ಎರಡು ದೊಡ್ಡ ಚಮಚ . 

* ಈ ಮನೆಮದ್ದು ತುಂಬಾ ಸುಲಭವಾಗಿದ್ದು, ಕೇವಲ ಹಾಲು, ಕಾಳು ಮೆಣಸಿನ ಪುಡಿ ಮತ್ತು ಜೇನನ್ನು ಬಳಸಲಾಗಿದೆ. ಈ ಪೇಯದ ಸೇವನೆಯ ಬಳಿಕ ಒಂದೇ ರಾತ್ರಿಯಲ್ಲಿ ಕೆಮ್ಮು ಹತೋಟಿಗೆ ಬಂದಿರುವುದು ಕಂಡು ಬಂದಿದೆ. ಅಲ್ಲದೇ ಕೆಮ್ಮಿಗೆ ಕಾರಣವಾದ ಕಫವೂ ಸುಲಭವಾಗಿ ಮರುದಿನ ನಿವಾರಣೆಯಾಗುತ್ತದೆ.

 * ಬಿಸಿಹಾಲು ಗಂಟಲಿನ ಕೆರೆತ, ಉರಿಯನ್ನು ನಿವಾರಿಸಿ ಕೆಮ್ಮನ್ನು ಕಡಿಮೆಗೊಳಿಸಲು ನೆರವಾದರೆ ಜೇನಿನಲ್ಲಿರುವ ಬ್ಯಾಕ್ಟೀ ರಿಯಾ ನಿರೋಧಕ ಗುಣದಿಂದಾಗಿ ಗಂಟಲಲ್ಲಿ ಆಶ್ರಯ ಪಡೆದಿರು ಸೋಂಕು ಹರಡುವ ಕ್ರಿಮಿಗಳನ್ನು ಹೊರ ಹಾಕಲು ನೆರವಾಗುತ್ತದೆ. ಕಾಳುಮೆಣಸು ಕೊಂಚ ಪ್ರಚೋದನೆ ನೀಡಿ ಕಫ ಸಡಿಲಗೊಳ್ಳಲು ಮತ್ತು ಜೇನಿನ ಪ್ರಭಾವ ಹೆಚ್ಚಿಸಲು ನೆರವಾಗುತ್ತದೆ. 

* ಈ ಮೂರೂ ಘಟಕ ಗಳ ಮಿಶ್ರಣದಿಂದ ಗಂಟಲಿಗೆ ಆರಾಮ ದೊರಕುತ್ತದೆ. ಅಲ್ಲದೇ ಈ ಸೋಂಕಿನಿಂದ ಉಂಟಾಗಿದ್ದ ಗಂಟಲಬೇನೆ, ಊದಿಕೊಂಡಿರುವುದು, ಊದಿಕೊಂಡ ದುಗ್ಧ ಗ್ರಂಥಿ ಗಳು ಇತ್ಯಾದಿಗಳೂ ಬೇಗನೇ ಗುಣವಾಗುತ್ತದೆ.

ಈ ಪೇಯವನ್ನು ತಯಾರಿಸುವ ಬಗೆ

1) ಹಾಲನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಸಿ ಒಂದು ಲೋಟಕ್ಕೆ ಸುರುವಿಕೊಳ್ಳಿ 2) ಕಾಳುಮೆಣಸಿನ ಪುಡಿ ಮತ್ತು ಜೇನು ಸೇರಿಸಿ ಚೆನ್ನಾಗಿ ಕಲಕಿ. ಕೆಮ್ಮಿನ ಸಿದ್ಧೌಷಧ ಈಗ ತಯಾರಾಗಿದೆ. ರಾತ್ರಿ ಮಲಗುವ ಮುನ್ನ ಈ ಪೇಯವನ್ನು ಕುಡಿದು ಮಲಗಿ, ಬೆಳಗಾಗುವಷ್ಟರಲ್ಲಿ ಕೆಮ್ಮು ಬಹುತೇಕ ಇಲ್ಲವಾಗಿರುತ್ತದೆ. ಉತ್ತಮ ಪರಿಣಾಮಕ್ಕಾಗಿ ಸತತವಾಗಿ ಎರಡು ದಿನ ಕುಡಿಯಿರಿ. ಕೆಮ್ಮು ಎಲ್ಲೋ ಒಂದು ಸ್ವಲ್ಪ ಇದೆ ಎಂದು ಅನ್ನಿಸಿದರೂ ಮುಂದಿನ ಒಂದು ವಾರದ ಕಾಲ ಅರ್ಧಲೋಟದಷ್ಟು ಸೇವಿಸುತ್ತಾ ಬನ್ನಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವ್ಯಕ್ತಿ ವಿಶೇಷಣ

    ಭಗತ್ ಸಿಂಗ್’ರವರ ಬಾಲ್ಯದ, ಈ ರೋಚಕ ಕಥೆ ಓದಿದ್ರೆ ನೀವು ಶಾಕ್ ಆಗ್ತೀರಾ..!

    ಸ್ವಾತಂತ್ರ್ಯ ಪೂರ್ವದ ಘಟನೆ. ಪಂಜಾಬಿನ ಒಂದು ಹಳ್ಳಿ. 3 ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ಅವನ ತಂದೆಯ ಮಿತ್ರರೊಬ್ಬರು ಇದ್ದರು. ಮೂವರೂ ಮಾತಾಡುತ್ತ ಮುಂದೆ ಮುಂದೆ ಹೋಗಿ ಅವರ ಊರಿನ ಗಡಿಯಾಚೆ ನಡೆದರು.

  • ಸುದ್ದಿ

    ದಂಡ ಪಾವತಿಸಿದವರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿ ಪ್ರೋತ್ಸಾಹಿಸಿದ ಪೊಲೀಸ್…!

    ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಾಗಿನಿಂದಲೂ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ದಂಡ ವಿಧಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲ ದಂಡದ ಮೊತ್ತ 80 ಸಾವಿರ ರೂ. ತಲುಪಿದ್ದು ಇದೆ. ಮೋಟಾರು ವಾಹನ ಕಾಯಿದೆ (ತಿದ್ದುಪಡಿ) 2019, ಜಾರಿಗೆ ಬಂದ ದಿನದಿಂದಲೂ ದೇಶಾದ್ಯಂತ ಸಂಚಾರ ಶಿಸ್ತು ಪಾಲನೆ ಮಾಡದ ಸವಾರರಿಗೆ ಭಾರೀ ಮೊತ್ತದ ದಂಡ ಪೀಕಿಸುತ್ತಿರುವ ಸುದ್ದಿಗಳೇ ಎಲ್ಲೆಲ್ಲೂ. ಇವುಗಳ ನಡುವೆ ಒಡಿಶಾ ರಾಜಧಾನಿ ಭುವನೇಶ್ವರದ…

  • ಪ್ರೇಮ, ಸ್ಪೂರ್ತಿ

    ಮನೆಯವರಿಗೆ ಗೊತ್ತಿಲ್ಲದೇ ಹಾಗೆ ತನ್ನ ಗೆಳತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಹುಡುಗ, ಕಾರಣ ಮಾತ್ರ ಶಾಕಿಂಗ್.

    ಕೇರಳ ರಾಜ್ಯಕ್ಕೆ ಸೇರಿದ ಸಚಿನ್ ಹಾಗೂ ಭವ್ಯಾ ಎಂಬುವವರು ಡಿಪ್ಲೋಮ ಓದುತ್ತಿದ್ದಾಗ ಇಬ್ಬರೂ ಒಳ್ಳೆಯ ಸ್ನೇಹಿತರಾಗುತ್ತಾರೆ, ಇವರ ಸ್ನೇಹ ತುಂಬಾ ಆತ್ಮೀಯವಾಗಿ 8 ತಿಂಗಳು ಮುಂದುವರೆದ ಕಾರಣ ಇವರ ಸ್ನೇಹವನ್ನ ಅಪಾರ್ಥ ಮಾಡಿಕೊಂಡ ಭವ್ಯಾ ಮನೆಯವರು ಸಚಿನ್ ಜೊತೆ ಮಾತನಾಡದೆ ಇರುವಂತೆ ಭವ್ಯಾಗೆ ಎಚ್ಚರಿಕೆಯನ್ನ ನೀಡುತ್ತಾರೆ. ಇನ್ನು ತಮ್ಮ ಮನೆಯವರ ಮಾತಿಗೆ ಬೆಲೆಕೊಟ್ಟ ಭವ್ಯಾ ಸಚಿನ್ ಜೊತೆ ಮಾತನಾಡುವುದನ್ನ ಬಿಟ್ಟು ಬಿಡುತ್ತಾಳೆ, ಇನ್ನು ಈ ಸಮಯದಲ್ಲಿ ನಮ್ಮಿಬ್ಬರ ನಡುವೆ ಇರುವುದು ಬರಿ ಸ್ನೇಹ ಅಲ್ಲ ಪ್ರೀತಿ ಅನ್ನುವುದು…

  • ಸುದ್ದಿ

    ಮೂತ್ರ ವಿಸರ್ಜನೆ ಮಾಡುವುದಕ್ಕಾಗಿ ಚಲಿಸುತ್ತಿದ್ದ ರೈಲನ್ನೇ ನಿಲ್ಲಿಸಿದ ಚಾಲಕ- ಕ್ರಮಕ್ಕೆ ಆಗ್ರಹ….!

    ಮೂತ್ರ ವಿಸರ್ಜನೆ ಮಾಡಲು ಚಾಲಕನೊಬ್ಬ ರೈಲನ್ನೇ ನಿಲ್ಲಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಚಾಲಕ ಲೋಕಲ್ ರೈಲನ್ನು ನಿಲ್ಲಿಸಿ ಎಂಜಿನ್ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ರೈಲು ಚಾಲಕ ಮುಂಬಯಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಉಲ್ಲಾಸನಗರದಿಂದ ವಿತಲ್‌ವಾಡಿಗೆ ಸಂಚರಿಸುವ ದಾರಿ ಮಧ್ಯೆ ನಿಲ್ಲಿಸಿ, ರೈಲಿನಿಂದ ಕೆಳಗಿಳಿದು ಮೂತ್ರ ವಿಸರ್ಜಿಸಿದ್ದಾನೆ. ಸ್ಥಳೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು…

  • ಮನರಂಜನೆ

    ಬಿಗ್‍ಬಾಸ್ ಸೀಸನ್ 7 ಟಿಕೆಟ್ ಟು ರಲ್ಲಿ ಫಿನಾಲೆ ಗೆದ್ದ ವಾಸುಕಿ ವೈಭವ್.

    ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆದರೂ ಬಿಗ್‍ಬಾಸ್ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಒಂದು ಬಿಗ್ ಆಫರ್ ನೀಡಿದ್ದರು. ಈ ವಾರ ಅತಿ ಹೆಚ್ಚು ಪದಕ ಪಡೆಯುವ ಒಬ್ಬ ಸ್ಪರ್ಧಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಹಂತವನ್ನು ತಲುಪುವ ಅವಕಾಶವನ್ನು ಬಿಗ್‍ಬಾಸ್ ನೀಡಿದ್ದರು. ಇದೀಗ ‘ಬಿಗ್‍ಬಾಸ್ ಸೀಸನ್ 7’ ರ ಮೊದಲ ಫೈನಲಿಸ್ಟ್ ಆಗಿ ವಾಸುಕಿ ಆಯ್ಕೆಯಾಗಿದ್ದಾರೆ. ಈ ವಾರ ಟಿಕೆಟ್…

  • ಸುದ್ದಿ

    ಆಷಾಢದಲ್ಲೂ ಮದುವೆ ಸಂಬ್ರಮ ಹೊಸ ಜೀವನಕ್ಕೆ ಕಾಲಿಟ್ಟ 32 ನವಜೋಡಿಗಳು

    ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನ ವಿಫಲವಾಯಿತು. ಆದರೆ ಕೋಟೆನಾಡಿನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠ ಮಾತ್ರ ಮೌಢ್ಯ ನಿಷೇಧದ ವಿಚಾರದಲ್ಲಿ ತನ್ನ ಗುರಿಯನ್ನು ಮೊಟಕುಗೊಳಿಸದೇ ಆಷಾಢದಲ್ಲೂ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮೌಢ್ಯಾಚರಣೆ ವಿರುದ್ಧ ಸಮರ ಸಾರಿದೆ. ಮುರುಘಾ ಮಠದ ಆಶ್ರಯದಲ್ಲಿ ಅಲ್ಲಮಪ್ರಭು ಭವನದಲ್ಲಿ ಆಯೋಜಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಆಷಾಢ ಶುಕ್ರವಾರವಾದರೂ ಸಹ ಮುರುಘಾಮಠ ನುಡಿದಂತೆ ನಡೆಯುತ್ತಿದೆ. ಮೌಢ್ಯಾಚರಣೆ ನಿಷೇಧಕ್ಕಾಗಿ ಟೊಂಕಕಟ್ಟಿ ನಿಂತಿರುವ ಡಾ. ಶಿವಮೂರ್ತಿ ಮುರುಘಾ ಶರಣರು…