ಸುದ್ದಿ

ಶೀಘ್ರದಲ್ಲೇ ಇನ್ಮುಂದೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಬಿಸಿ ಬಿಸಿ ಟೀ ಲಭ್ಯ…!

115

ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ

ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ಗೆ ಪತ್ರ ಬರೆದಿದ್ದೇನೆ,”ಎಂದು ಗಡ್ಕರಿ ಹೇಳಿದ್ದಾರೆ.  ಪ್ರಸ್ತುತ ವಾರಾಣಸಿ ಮತ್ತು ರಾಯ್‌ ಬರೇಲಿಯ ಎರಡು ರೈಲ್ವೆ ನಿಲ್ದಾಣಗಳಲ್ಲಿ ಜೇಡಿ ಮಣ್ಣಿನಿಂದ ಮಾಡಿದ ಲೋಟಗಳು, ಕುಡಿಕೆಗಳು ಮತ್ತು ತಟ್ಟೆಗಳನ್ನು ಬಳಸಲಾಗುತ್ತಿದೆ. ಇದನ್ನು ದೇಶದ ಇತರೆ ರೈಲ್ವೆ ನಿಲ್ದಾಣಗಳಿಗೂ ವಿಸ್ತರಿಸಬೇಕು ಎನ್ನುವುದು ಗಡ್ಕರಿ ಅವರ ಸಲಹೆ. 

”ಏರ್‌ಪೋರ್ಟ್‌ಗಳು ಮತ್ತು ರಾಜ್ಯ ಸಾರಿಗೆ ಸಂಸ್ಥೆಗಳ ಅಧೀನದಲ್ಲಿ ಬರುವ ಬಸ್‌ ಡಿಪೋಗಳಲ್ಲಿನ ಟೀ ಸ್ಟಾಲ್‌ಗಳಲ್ಲಿ ಮಣ್ಣಿನ ಲೋಟಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು. ನಾವು ಮಾಲ್‌ಗಳಲ್ಲೂ ಇಂಥ ವ್ಯವಸ್ಥೆಗೆ ಉತ್ತೇಜನ ನೀಡಬೇಕು,”ಎಂದು ಗಡ್ಕರಿ ಹೇಳಿದ್ದಾರೆ. ಇದೇ ವೇಳೆ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ(ಕೆವಿಐಸಿ) ನಿರ್ದೇಶನ ನೀಡಿದ್ದಾರೆ. 

ಉತ್ಪಾದಕತೆ ಹೆಚ್ಚಿಸುವ ಸಲುವಾಗಿ ಸರಕಾರವು ಸಶಕ್ತಿಕರಣ್‌ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್‌ ಚಕ್ರಗಳನ್ನು ವಿತರಿಸುತ್ತಿದೆ. ಮಡಿಕೆ ಉತ್ಪಾದಕರನ್ನು ಉತ್ತೇಜಿಸಲು2004ರಲ್ಲಿಯೇ ರೈಲ್ವೆ ಸಚಿವರು ಮಣ್ಣಿನ ಲೋಟಗಳನ್ನು ಬಳಸುವ ಪದ್ಧತಿಗೆ ಚಾಲನೆ ನೀಡಿದ್ದರು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಈಗ ಬಂದಿದೆ ಹೊಸ ಸ್ಫೋಟಗೊಳ್ಳದ ಪಾರದರ್ಶಕ ಗ್ಯಾಸ್ ಸಿಲಿಂಡರ್..!ತಿಲಿಯಲು ಈ ಲೇಖನ ಓದಿ..

    ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್‌ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.

  • ಸಿನಿಮಾ

    ಎಲ್ಲಾ ಕಾಲಕ್ಕೂ ಬ್ಲಾಕ್ ಬಸ್ಟರ್ ಚಿತ್ರವಾಗಿರುವ ‘ಓಂ’ನಲ್ಲಿ ಅವಕಾಶ ಕೊಟ್ಟಿದ್ದ ಉಪೇಂದ್ರರವರನ್ನೇ, ನಟಿ ಪ್ರೇಮಾ ದ್ವೇಷ ಮಾಡಿದ್ದು ಏಕೆ ಗೊತ್ತಾ.!?

    ‘ಓಂ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಚಿತ್ರವಾಗಿದೆ. ಶಿವರಾಜ್ ಕುಮಾರ್ ಅಭಿನಯದ ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮಾ ಅಭಿನಯಿಸಿದ್ದಾರೆ. ಶಿವಣ್ಣ ಜೊತೆಗೆ ‘ಸವ್ಯಸಾಚಿ’ ಚಿತ್ರದಲ್ಲಿ ಅಭಿನಯಿಸಿದ್ದ ಪ್ರೇಮಾ ‘ಓಂ’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಆದರೆ, ಈ ಚಿತ್ರದ ಚಿತ್ರೀಕರಣದ ವೇಳೆ ಉಪೇಂದ್ರ ಮೇಲೆ ಅವರು ಕೋಪ ಮಾಡಿಕೊಂಡಿದ್ದರು. ‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ ಉಪೇಂದ್ರ ಮೇಲೆ ಮುನಿಸಿಕೊಂಡಿದ್ದ ಕಾರಣವನ್ನು ಪ್ರೇಮಾ ಹೇಳಿದ್ದಾರೆ. ಮೊದಲ ಸಿನಿಮಾ ಮುಗಿದ ಬಳಿಕ ‘ಓಂ’ ಚಿತ್ರಕ್ಕೆ ಆಯ್ಕೆಯಾದೆ. ಉಪೇಂದ್ರ ಅವರಿಗೆ ಹೆಣ್ಣು ಮಕ್ಕಳ…

  • ವಿಜ್ಞಾನ

    12 ವರ್ಷದ ಈ ಹಳ್ಳಿಹುಡುಗನ ಆವಿಷ್ಕಾರಕ್ಕೆ ವಿಜ್ಞಾನಿಗಳೇ ಶಾಕ್ ಆಗಿದ್ದಾರೆ..!ಈ ಲೇಖನ ಓದಿ ಶಾಕ್ ಆಗ್ತೀರಾ..!

    ಉತ್ತರ ಕನ್ನಡ ಜೆಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಡ್ಡೆ ಸರಕಾರಿ ಶಾಲೆಯ ಈ ಹುಡ್ಗಾ ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕಾರ ಮಾಡಿದ್ದು, ಈ ಚಿಕ್ಕ ವಯಸ್ಸಿನಲ್ಲಿಯೇ ಈತನ ಪ್ರತಿಭೆ ಮೆಚ್ಚವಂತದ್ದು.

  • ದೇಶ-ವಿದೇಶ

    ಇದು ಪ್ರಪಂಚದ ಮೊದಲ ಅರಣ್ಯ ನಗರ!ಎಲ್ಲಿದೆ ಗೊತ್ತಾ?ಈ ಲೇಖನಿ ಓದಿ …

    ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.

  • ಜ್ಯೋತಿಷ್ಯ

    ಶಿವರಾತ್ರಿಯ ಈ ಸುದಿನದಂದು ಶಿವನ ಕೃಪೆಯಿಂದ ನಿಮ್ಮ ರಾಶಿಗಳ ಶುಭಫಲ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(4 ಮಾರ್ಚ್, 2019) ಬಿಡುವಿಲ್ಲದ ಕೆಲಸಗಳ ಹೊರತಾಗಿಯೂ ನೀವು ಆಯಾಸವನ್ನು ನಿಭಾಯಿಸಲು ಶಕ್ತರಾಗಿರುತ್ತೀರಿ. ನೀವು ಇತರರ ಮಾತುಗಳನ್ನು…

  • ದೇವರು

    ಮನುಷ್ಯ ಮಾಡಿದ ತಪ್ಪಿಗೆ ದೇವರ ಮುಖಕ್ಕೂ ಬಿತ್ತು ಮಾಸ್ಕ್ …!

    ಪರಿಸರದ ಎದುರು ಯಾರೂ ದೊಡ್ಡವರಲ್ಲ. ಈ ಮಾತು ಮನುಷ್ಯರಿಗಲ್ಲ ದೇವರಿಗೂ ಅನ್ವಯಿಸುತ್ತೆ. ವಾಯು ಮಾಲಿನ್ಯಕ್ಕೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ಮನೆಯಿಂದ ಹೊರ ಬರುವುದಕ್ಕೂ ಮೊದಲು ಮುಖಕ್ಕೆ ಮಾಸ್ಕ್ಹಾಕಿಕೊಳ್ಳುವುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಉತ್ತರ ಭಾರತದಲ್ಲಂತೂ ಇದೊಂದು ಸಂಪ್ರದಾಯದಂತೆ ಆಗಿ ಬಿಟ್ಟಿದೆ. ಉತ್ತರ ಪ್ರದೇಶದಲ್ಲಿ ದೇವರಿಗೂ ಪರಿಸರ ಮಾಲಿನ್ಯದ ಪ್ರಭಾವ ತಟ್ಟಿದೆ. ಇಂಥದೊಂದು ಅನುಮಾನ ಹುಟ್ಟಿಕೊಳ್ಳಲು ಕಾರಣವಾಗಿದ್ದೇ ವಾರಣಾಸಿಯಲ್ಲಿ ನಡೆದಿರುವ ಈ ಘಟನೆ. ನವದೆಹಲಿಯಲ್ಲಿ ಪರಿಸರ ಹದಗೆಟ್ಟು ಹೋಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ದೆಹಲಿಯಲ್ಲಿ ಜನರು ಮುಖಕ್ಕೆ…