ವಿಸ್ಮಯ ಜಗತ್ತು

ಕಾರ್ ಖರೀದಿಸಲು ಚೀಲಗಳಲ್ಲಿ ಹಣ ತುಂಬಿಕೊಂಡು ಬಂದ ಮಹಿಳೆ..! ಆ ಚೀಲಗಳಲ್ಲಿ ಎಷ್ಟು ಹಣ ಇತ್ತು ಗೊತ್ತಾ? ತಿಳಿಯಲು ಈ ಲೇಖನಿ ಓದಿ…

517

ಜಗತ್ತಿನಲ್ಲಿ ಎಂತಹ ವಿಚಿತ್ರ ಜನಗಳಿರುತ್ತಾರೆ ಎಂದ್ರೆ ಯಾವಾಗ ಏನ್ ಮಾಡ್ತಾರೆ ಅಂತ ಸ್ವತಃ ಅವರಿಗೆ ಗೊತ್ತಿರುವುದಿಲ್ಲ. ಯಾಕೆಂದ್ರೆ ನಮ್ಮ ದೇಶದಲ್ಲಿ ಈಗಾಗಲೇ ಕ್ಯಾಶ್ ಲೆಸ್ ವ್ಯವಹಾರ  ನಡೆಯುತ್ತಿದೆ. ಆದರೆ ಚೀನಾದಲ್ಲಿ ಮಹಿಳೆಯೊಬ್ಬರು ಕಾರೊಂದೊನ್ನು ಖರೀದಿಸಲು ಚೀಲದ ತುಂಬಾ ಹಣ ತುಂಬಿಕೊಂಡು ಹೋಗಿದ್ದಾರೆ.

ಹೌದು, ಚೀನಾದಲ್ಲಿ ಮಹಿಳೆಯೊಬ್ಬರು ನಾಲ್ಕು ಚೀಲದ ತುಂಬ ಹಣ ತುಂಬಿಕೊಂಡು ಕಾರ್ ಖರೀದಿಸಲು ಹೋಗಿ ಶೋರೂಂನಲ್ಲಿ ಕೆಲಸ ಮಾಡೋ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ.

ಕಳೆದ ವಾರ ಚೀನಾದ  ಶಾಂಡಾಂಗ್ ಪ್ರಾಂತ್ಯದ ನಿನ್‍ಝೋನಲ್ಲಿನ ಹೋಂಡಾ ಕಾರ್ ಡೀಲರ್‍ಶಿಪ್ ಶೋರೂಮಿನಲ್ಲಿ ಈ ಘಟನೆ ನಡೆದಿದೆ. ಮಹಿಳೆ ತಂದಿದ್ದ ಚೀಲಗಳ ತುಂಬಾ 1 ಯುವಾನ್ ಮುಖಬೆಲೆಯ ನೋಟುಗಳಿದ್ದು ಒಟ್ಟು 130,000 ಯುವಾನ್(ಅಂದಾಜು 12.50 ಲಕ್ಷ ರೂ.) ಹಣವಿತ್ತು. ಆದ್ರೆ ಚೀಲದಲ್ಲಿ ಎಷ್ಟು ಹಣ ಇದೆ ಎಂದು ಗೊತ್ತಾಗಬೇಕಲ್ಲ?

 

ಹಾಗಾಗಿ ಶೋರೂಮಿನಲ್ಲಿ ಕೆಲಸ ಮಾಡುವ ಸುಮಾರು 20 ಜನ ಚೀಲದಲ್ಲಿರುವ   ಹಣವನ್ನು ಗಂಟೆಗಟ್ಟಲೆ ಎಣಿಸಿದ್ದಾರೆ.

ಶೋರೂಮ್‍ನಲ್ಲಿ ಸಣ್ಣ ಮೊತ್ತದ ನೋಟುಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಸಂದೇಶವಿತ್ತು. ಆಗ ಕನ್‍ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದ   ಮಹಿಳೆ ಕಾರ್ ಖರೀದಿಸಲು ಚೀಲಗಳ ತುಂಬಾ ಹಣವನ್ನು ತೆಗೆದುಕೊಂಡು ಬಂದಿದ್ದಾರೆ.

ಶೋರೂಮಿನಲ್ಲಿ ಕೆಲಸ ಮಾಡುವ ನೌಕರನ ಮಾಹಿತಿ ಮೇರೆಗೆ, ಗ್ರಾಹಕರೊಬ್ಬರು ಕರೆ ಮಾಡಿ ಸಣ್ಣ ನೋಟುಗಳಿಂದ ಹಣ ನೀಡಬಹುದಾ ಎಂದು ಕೇಳಿದ್ರು.

ನಾನು ಖಂಡಿತವಾಗಿಯೂ ನೀಡಬಹುದು ಎಂದೆ. ನಂತರ ಆಕೆ ಹಣವನ್ನು ತೆಗೆದುಕೊಂಡು ಹೋಗಿ ಬನ್ನಿ ಎಂದು ಕರೆದರು. ನಾನು ಹೋಗಿ ಕಾರ್‍ನ ಡಿಕ್ಕಿ ತೆಗೆದಾಗ 1 ಯುವಾನ್ ನೋಟುಗಳ ನಾಲ್ಕು ಚೀಲಗಳನ್ನ ನೋಡಿದೆ ಎಂದು ನೌಕರರೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಹಣ ಎಣಿಸಲು ಪಜೀತಿ ಪಟ್ಟ ನೌಕರರು:-

ಹಣ ಎಣಿಸುವ ಕೆಲಸ ಜಾಸ್ತಿಯಾಗಿದ್ದರಿಂದ ಶೂರೂಮ್‍ನವರು ಕೊನೆಗೆ ಮೆಕ್ಯಾನಿಕ್‍ಗಳನ್ನೂ ಸಹಾಯಕ್ಕೆ ಕೆರೆದಿದ್ದಾರೆ. ಮಹಿಳೆ 200,000 ಯುವಾನ್(ಅಂದಾಜು 19.0 ಲಕ್ಷ ರೂ.) ಮೊತ್ತದ ಕಾರ್ ಖರೀದಿ ಮಾಡಿದ್ದು ಉಳಿದ ಹಣವನ್ನು ಮೊಬೈಲ್ ಬ್ಯಾಂಕಿಂಗ್ ಮೂಲಕ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ