ಸಿನಿಮಾ

ಕನ್ನಡಕ್ಕೆ ಬಾಹುಬಲಿಯ “ಬಲ್ಲಾಳದೇವ”

147

ಜಗತ್ತಿನಾದ್ಯಂತ ದಾಖಲೆ ಕಲೆಕ್ಷನ್ ಮಾಡುತ್ತಿರುವ ಬಾಹುಬಲಿ ಚಿತ್ರದ ಖಳನಟ ಬಲ್ಲಾಳದೇವ ಪಾತ್ರದಲ್ಲಿ ಮಿಂಚಿದ ರಾಣಾ ದಗ್ಗುಬಾಟಿ ಕನ್ನಡ ಚಿತ್ರದಲ್ಲಿ ಅಭಿನಯಿಸಲಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

`ಸೈನೆಡ್‍’  ಅಟ್ಟಹಾಸ ಸೇರಿದಂತೆ ತಾಂತ್ರಿಕವಾಗಿ ಅದ್ಭುತ ಚಿತ್ರಗಳನ್ನು ‘ನೀಡಿದ ನಿರ್ದೇಶಕ ಎಎಂಆರ್‍ ಅವರು ರಾಜೀವ್‍ ಗಾಂಧಿ ಹತ್ಯೆ ಪ್ರಕರಣದ ಕುರಿತು ಮತ್ತೊಂದು ಚಿತ್ರದ ಸಿದ್ಧತೆಯಲ್ಲಿದ್ದು, ಬಹುಭಾಷೆಯಲ್ಲಿ ಚಿತ್ರ ತೆರೆಕಾಣಲಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸುವ ಸಾಧ್ಯತೆ ಇದ್ದು, ಮಾತುಕತೆ ನಡೆದಿದೆ.

ಎಎಂಆರ್‍ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ `ಆಸ್ಫೋಟ’ ಹೆಸರಿನ ಚಿತ್ರ ಇದಾಗಿದ್ದು, ರಾಜೀವ್‍ ಗಾಂಧಿ ಹತ್ಯೆ ನಂತರ ನಡೆದ ತನಿಖೆಗಳ ಕುರಿತು ಚಿತ್ರ ಹೊಂದಿದ್ದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸಿದ್ದ ಸಿಬಿಐ ಅಧಿಕಾರಿ ಡಿ.ಆರ್‍. ಕಾರ್ತಿಕೇಯನ್‍ ಪಾತ್ರದಲ್ಲಿ ರಾಣಾ ದಗ್ಗಬಾಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇಲ್ಲಿ ಓದಿರಿ :-“ಕುರುಕ್ಷೇತ್ರದಲ್ಲಿ ದರ್ಶನ್ ಫೋಟೋ ಸೃಷ್ಟಿಸಿದ ಹವಾ”  ‘ಆಸ್ಫೋಟ’ ಸಿನಿಮಾ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಕುರಿತು ನಿರ್ಮಾಣವಾಗತ್ತಿದೆ. ಈ ಚಿತ್ರವನ್ನ AMR ರಮೇಶ್ ನಿರ್ದೇಶನ ಮಾಡುತ್ತಿದ್ದು, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ನಮ್ಮ ಸರ್ಕಾರ ಇದೆ ಎಂದು ಧಮಕಿ ಹಾಕಿದ ಶಾಸಕನಿಗೆ ತಿರುಗೇಟು ನೀಡಿದ ದರ್ಶನ್…

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ವೇಳೆ ಜನಸಾಗರವೇ ಹರಿದು ಬಂದಿದ್ದು, ಶಕ್ತಿ ಪ್ರದರ್ಶನದ ಮೂಲಕ ಸುಮಲತಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಅದೂ ಆಗಲಿ, ಅದರಿಂದ ಖುಷಿ,…

  • ಸಿನಿಮಾ

    ಬಾಲಿವುಡ್’ನ ಸೆಕ್ಸಿ ನಟಿಯರ ಸೆಕ್ಸಿ ಲುಕ್’ಗೆ ಈ ‘ಹಾಟ್ ಯೋಗಿನಿ’ ಕಾರಣ..!ತಿಳಿಯಲು ಈ ಲೇಖನ

    ಬಾಲಿವುಡ್‍ನ ಅನೇಕ ಸ್ಟಾರ್‍ಗಳ ಚಿರಯೌವ್ವನದ ಗುಟ್ಟೇ ದೀಪಿಕಾ ಮೆಹ್ತಾ. ಐಶ್ವರ್ಯ ರೈ, ಪ್ರಿಯಾಂಕ ಚೋಪ್ರ, ಬಿಪಾಷ ಬಸು, ದೀಪಿಕಾ ಪಡುಕೋಣೆ, ವಿದ್ಯಾಬಾಲನ್, ಪ್ರೀತಿ ಜಿಂಟಾ ಸೇರಿದಂತೆ ಅನೇಕ ತಾರೆಯರ ಯೋಗ ಗುರು ಈಕೆ. 1997ರಲ್ಲಿ ಈಕೆ ಪರ್ವತಾರೋಹಣ ಮಾಡುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿ ತನಗೆ ಎದುರಾದ ಸವಾಲನ್ನು ಎದುರಿಸಲು ಈಕೆ ಕಂಡುಕೊಂಡ ಮಾರ್ಗ ಯೋಗ.

  • ವಿಸ್ಮಯ ಜಗತ್ತು

    30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿರುವ ಮಹಿಳೆ..!

    ಚಳಿಗಾಲದಲ್ಲಿ ಒಂದು ಕಪ್ ಬಿಸಿ ಬಿಸಿ ಟೀ ಕುಡಿಯುವುದಕ್ಕಿಂತ ಯಾವುದು ಹೆಚ್ಚು ಸುಖ ಕೊಡುವುದಿಲ್ಲ, ಆದರೆ ಕೇವಲ ಟೀ ಕುಡಿದೇ ಬದುಕಿರಲು ಸಾಧ್ಯವೇ?ಬೆಳಗ್ಗೆ, ಸಂಜೆ ಟೀ ಕುಡಿಯೋರನ್ನ ನೋಡಿರ್ತೀರಿ ಆದರೆ ಛತ್ತೀಸ್‍ಗಢದಲ್ಲಿ ಮಹಿಳೆಯೊಬ್ಬರು 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹೌದು, ಈ ವಿಷಯ ನೋಡಿದರೇ ಬರೀ ಟೀ ಕುಡಿದು ಬದುಕಿದ್ದಾರಾ ಅಂತ ಆಶ್ಚರ್ಯ ಆಗೋದು ಸಹಜ. ಹೌದು, ಛತ್ತೀಸ್ ಗಡದ ಕೊರಿಯಾ ಜಿಲ್ಲೆಯ ಮಹಿಳೆಯೊಬ್ಬರು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ,…

  • ಆರೋಗ್ಯ, ಉಪಯುಕ್ತ ಮಾಹಿತಿ

    ಚಳಿಗಾಲದಲ್ಲಿ ಗೋಡಂಬಿ ಸೇವನೆ ಮಾಡುವುದರಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ!

    ಚಳಿಗಾಲ ಬಂತೆಂದರೆ ಏನನ್ನಾದರೂ ತಿನ್ನುತ್ತಲೇ ಇರಬೇಕು ಎನಿಸದೇ ಇರದು. ಕಾಳು, ಹಣ್ಣುಗಳು, ತುಪ್ಪದಂತಹ ಪದಾರ್ಥಗಳು ದೇಹದ ಉಷ್ಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿ, ಹಾಗಾಗಿ ಈ ಬಗೆ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇದರಿಂದ ದೇಹದ ಉಷ್ಣತೆ ಕಾಪಾಡುವುದರ ಜತೆಗೆ ಕಾಯಿಲೆ ಬೀಳದಿರಲು ಇದೊಂದು ಒಳ್ಳೆಯ ಉಪಾಯವೂ ಹೌದು. ಶೇಂಗಾ ಮತ್ತು ದ್ವಿದಳ ಧಾನ್ಯಗಳು, ಬಾದಾಮಿ ಮತ್ತು ಗೋಡಂಬಿ ಮತ್ತು ಇವುಗಳಿಂದ ತಯಾರಿಸಿದ ಪದಾರ್ಥಗಳು ಉತ್ತಮ. ಅಲ್ಲದೆ ಇವು ದೇಹದೊಳಗಿನ ಕೊಲೆಸ್ಟ್ರಾಲ್​ನ್ನು ಹೆಚ್ಚಿಸುವುದಿಲ್ಲ. ಗೋಡಂಬಿ ಸೇವನೆಯಿಂದ ದೇಹದೊಳಗೆ ಕೊಲೆಸ್ಟ್ರಾಲ್​…

  • ಸರ್ಕಾರಿ ಯೋಜನೆಗಳು

    ಇನ್ನು ಮುಂದೆ ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಇಂಟರ್ನೆಟ್ ಉಪಯೋಗಿಸಬಹುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಡಿಜಿಟಲ್‌ ಯುಗಕ್ಕೆ ತೆರೆದುಕೊಂಡಿರುವ ರಾಜಧಾನಿಯಲ್ಲಿ ಓಡಾಡುವ ಬಸ್‌ಗಳಲ್ಲಿ ಈವರೆಗೆ ವೈಫೈ ಸೇವೆ ಲಭ್ಯವಿರಲಿಲ್ಲ. ಕೆಲ ವರ್ಷಗಳಿಂದೀಚೆಗೆ ಲಗ್ಗೆ ಇಟ್ಟ ಟ್ಯಾಕ್ಸಿಗಳು ಗ್ರಾಹಕರಿಗೆ ಉಚಿತ ವೈಫೈ ಸೇವೆ ಒದಗಿಸಿ, ವೋಲ್ವೊ ಬಸ್‌ಗಳಿಗೆ ತೀವ್ರ ಪೈಪೋಟಿಯೊಡ್ಡಿವೆ. ಹೀಗಾಗಿ, ಬಿಎಂಟಿಸಿಯು ಪ್ರಯಾಣಿಕರಿಗೆ ಬೆರಳ ತುದಿಯಲ್ಲೇ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಡುತ್ತಿದೆ.

  • ಆರೋಗ್ಯ

    ಎಚ್ಚರ! ಹುಟ್ಟುವ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಕಣ್ಣಿನ ಕ್ಯಾನ್ಸರ್, ಇದರ ಲಕ್ಷಣಗಳೇನು?

    ಹುಟ್ಟುವ ಮಕ್ಕಳಲ್ಲಿ ಕಣ್ಣಿನ ಕ್ಯಾನ್ಸರ್ ಹೆಚ್ಚುತ್ತಿದೆ. ಪೋಷಕರು ಕ್ಯಾನ್ಸರ್‌ನ್ನು ಪತ್ತೆ ಹಚ್ಚಿ ತಕ್ಷಣವೇ ಮಗುವಿಗೆ ಚಿಕಿತ್ಸೆ ನೀಡಿದರೆ ಬದುಕುಳಿಯುವ ಸಾಧ್ಯತೆ ಇರುತ್ತದೆ. ಮಕ್ಕಳ ಕಣ್ಣಿನ ಕೆಳಭಾಗದಲ್ಲಿ ಬಿಳಿ ಮಚ್ಚೆ ಇದ್ದರೆ ಅಥವಾ ಮೆಳ್ಳಗಣ್ಣಿದ್ದರೆ ಎಲ್ಲಾ ಸಂದರ್ಭದಲ್ಲೂ ಅದು ಶುಭಶಕುನವಾಗಿರುವುದಿಲ್ಲ, ಸಮಸ್ಯೆಯೂ ಆಗಿರಬಹುದು ಹಾಗಾಗಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳಿತು. ನಿರ್ಲಕ್ಷಿಸಿದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ ಕ್ಯಾನ್ಸರ್ ಕಣ ಮೆದುಳಿಗೆ ವ್ಯಾಪಿಸಿ ಪ್ರಾಣವನ್ನೇ ಬಲಿತೆಗೆದುಕೊಳ್ಳುವ ಸಾಧ್ಯತೆಯೂ ಕೂಡ ಇರುತ್ತದೆ.ರೆಟಿನೊ ಬ್ಲಾಸ್ಟೋಮಾ ಎಂಬುದು…