ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹತ್ತನೇ ತರಗತಿ ಓದಿ, ಒಂದು ಡಿಗ್ರಿ ತಗೊಳಷ್ಟರಲ್ಲಿ ಸಾಕಾಗಿ ಹೋಗಿರುತ್ತೆ.ಆದ್ರೆ ಈ ವ್ಯಕ್ತಿ ಭಾರತದಲ್ಲಿರೋ ಹಲವಾರು ಡಿಗ್ರಿ (ಪದವಿ)ಗಳನ್ನು ಮಾಡಿ ಮುಗಿಸಿದ್ದಾರೆ.ಇವರು ಎಷ್ಟು ಓದಿದ್ದಾರೆಂದ್ರೆ ಇವರು ಹೆಸರು ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಆಗಿದೆ.
ಹೌದು, ಶ್ರೀಕಾಂತ್ ಜಿಕ್ಖರ್ರವರು ಭಾರತದ ಅತಿ ಹೆಚ್ಚಿನ ವಿದ್ಯಾರ್ಹತೆಯುಳ್ಳ ವ್ಯಕ್ತಿಯಾಗಿ ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಅನ್ನು ಹೊಂದಿದ್ದಾರೆ. ಎಮ್. ಬಿ. ಬಿ. ಎಸ್ ಮತ್ತು ಎಮ್. ಡಿ. ಇಂದ ಶುರು ಮಾಡಿದ ಇವರು ಎಲ್. ಎಲ್. ಬಿ ಮಾಡಿ ಕಾನೂನನ್ನು ಕೂಡ ಓದಿದ್ದಾರೆ. ನಂತರ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ(ಎಲ್. ಎಲ್. ಎಮ್) ಯನ್ನು ಪಡೆಯುತ್ತಾರೆ. ಹಾಗೂ ಇವರು ಬಿಸ್ನೆಸ್ ಆಡಳಿತ ಮತ್ತು ಪತ್ರಿಕೋದ್ಯಮದಲ್ಲಿಯು ಮಾಸ್ಟರ್ಸ್ ಅನ್ನು ಹೊಂದಿದ್ದಾರೆ .

ಎಂ. ಎ. ಸಾರ್ವಜನಿಕ ಆಡಳಿತ ,
ಎಂ. ಎ.ಸಮಾಜ ಶಾಸ್ತ್ರ ,
ಎಂ. ಎ. ಅರ್ಥ ಶಾಸ್ತ್ರ ,
ಎಂ. ಎ. ಸಂಸ್ಕೃತ,
ಎಂ. ಎ. ಇತಿಹಾಸ,
ಎಂ. ಎ. ಆಂಗ್ಲ ಸಾಹಿತ್ಯ ,
ಎಂ. ಎ. ತತ್ವ ಶಾಸ್ತ್ರ ,
ಎಂ. ಎ.ರಾಜ್ಯ ಶಾಸ್ತ್ರ ,
ಎಂ. ಎ.ಪ್ರಾಚೀನ ಭಾರತೀಯ ಇತಿಹಾಸ ,
ಸಂಸ್ಕೃತಿ ಮತ್ತು ಪುರಾತನ ಶಾಸ್ತ್ರ ,
ಎಂ. ಎ.ಮನೋವಿಜ್ಞಾನ . ಮತ್ತು ಇವರು ಯಾವುದೇ ಪದವಿಗಿಂತ ಉನ್ನತ ಪದವಿಯಾದ ಡಿ.ಲಿಟ್ (ಡಾಕ್ಟರ್ ಆಫ್ ಲೆಟರ್ಸ್) ಅನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಸಾಕಷ್ಟು ಪದವಿಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದ ಇವರು ಹಲವಾರು ಪದವಿಗಳಲ್ಲಿ ಪ್ರಥಮ ಶ್ರೇಣಿ /ಪ್ರಥಮ ದರ್ಜೆಯನ್ನು ಗಳಿಸಿದ ಹೆಮ್ಮೆ ಇವರದಾಗಿದೆ.

1978 ರಲ್ಲಿ ಅವರು ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ (IPS)ಯನ್ನು ಬರೆದು,ಇಂಡಿಯನ್ ಸಿವಿಲ್ ಸರ್ವಿಸ್ (ಐಪಿಎಸ್) ನಲ್ಲಿ ಆಯ್ಕೆಯಾದರು. ನಂತರ ಐಪಿಎಸ್ ಹುದ್ದೆಗೆ ರಾಜಿನಾಮೆ ನೀಡಿ,ಮತ್ತೆ 1980ರಲ್ಲಿ ಭಾರತೀಯ ಸಿವಿಲ್ ಸರ್ವೀಸ್ ಪರೀಕ್ಷೆ (IAS) ಪರೀಕ್ಷೆಯನ್ನು ಬರೆದ್ರು.ಅದರಲ್ಲೂ ಕೂಡ ಐಎಎಸ್ ಆಫಿಸರ್ ಆಗಿ ಆಯ್ಕೆ ಆದ್ರು.ಆದರೆ ನಾಲ್ಕು ತಿಂಗಳ ನಂತರ ತಮ್ಮ ಐಎಎಸ್ ಹುದ್ದೆಗೂ ರಾಜೀನಾಮೆ ನೀಡಿದ್ರು.
1980ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ,ತಮ್ಮ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಗೆದ್ದು, ತಮ್ಮ 26ನೇ ವಯಸ್ಸಿನಲ್ಲೇ,ಎಂಎಲ್ಎ ಆಗಿ ಆಯ್ಕೆ ಆದ್ರು.ಹಾಗೂ ಭಾರತದಲ್ಲೇ ಅತೀ ಕಿರಿಯ ವಯಸ್ಸಿನ ಎಂಎಲ್ಎ ಎಂಬ ಹೆಸರಿಗೆ ಪಾತ್ರರಾದ್ರು ಕೂಡ. ತರುವಾಯ ಆ ಸಮಯದಲ್ಲಿ 14 ಶಾಸಕಾಂಗಗಳನ್ನು ಹೊಂದಿರುವ ಸರ್ಕಾರದ, ಅತ್ಯಂತ ಶಕ್ತಿಶಾಲಿ ಸರ್ಕಾರಿ ಮಂತ್ರಿಯಾದರು.
ಭಾರತದಲ್ಲಿ 52,000 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯಗಳಲ್ಲಿ ಇವರದು ಒಂದು ವೈಯುಕ್ತಿಕ ಗ್ರಂಥಾಲಯ ಸೇರಿದೆ.ಶ್ರೀಕಾಂತ್ ಜಿಕ್ಖರ್ರವರು ಒಬ್ಬ ಶಿಕ್ಷಣತಜ್ಞ, ವರ್ಣಚಿತ್ರಕಾರ, ವೃತ್ತಿಪರ ಛಾಯಾಗ್ರಾಹಕ, ಮತ್ತು ನಟರು ಕೂಡ ಆಗಿದ್ದರುಇವರು 1992-98ರವರೆಗೆ ಭಾರತ ರಾಜ್ಯಾಂಗದ ಸದಸ್ಯರಾಗಿದ್ದರು. ಅವರು 1992 ರಲ್ಲಿ ನಾಗಪುರದಲ್ಲಿ ಸಂದಿಪಾನಿ ಎಂಬ ಶಾಲೆ ಸ್ಥಾಪಿಸಿದರು.ದುರದೃಷ್ಟಕರ ಎಂದರೆ ತಮ್ಮ 49ನೇ ವಯಸ್ಸಿನಲ್ಲಿ ಕಾರ್ ಅಪಘಾತವೊಂದರಲ್ಲಿ ತೀರಿಕೊಂಡ್ರು.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೋಕಸಭಾ ಚುನಾವಣೆಯಲ್ಲಿ ತಾವು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಬೇರೆಯವರಿಗೆ ಮಣೆ ಹಾಕಿರುವುದರಿಂದ ಹೈಕಮಾಂಡ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳದೆ ಕಳೆದ ಮೂರು ದಿನಗಳಿಂದ ಮನೆಯಲ್ಲಿಯೇ ಇದ್ದಾರೆಂದು ಹೇಳಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರ ಬದಲಿಗೆ ತೇಜಸ್ವಿ ಸೂರ್ಯ ಅವರಿಗೆ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ್ ಕತ್ತಿ ಅವರ ಬದಲಿಗೆ ಅಣ್ಣಾ ಸಾಹೇಬ ಜೊಲ್ಲೆಯವರಿಗೆ ಟಿಕೆಟ್ ನೀಡಿರುವುದು ಯಡಿಯೂರಪ್ಪನವರಿಗೆ…
ಜನವರಿ 8 ಮತ್ತು 9 ಭಾರತ ಬಂದ್ ನಡೆಯಲಿದೆ. ಕೇಂದ್ರ ಸರ್ಕಾರದ ವಿರದ್ಧ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಕೇಂದ್ರ ಸರ್ಕಾರವು ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಕಾರ್ಮಿಕ ಸಂಘಟೆಗಳು ಅಪಾದಿಸಿವೆ. ಇದಕ್ಕೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಸಹ ಬೆಂಬಲ ನೀಡಿದೆ ಎಂದು ತಿಳಿದುಬಂದಿದೆ.ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಮತ್ತು ಬ್ಯಾಂಕ್ ಎಂಫ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಅಸೋಸಿಯೇಷನ್ (ಬಿಇಎಫ್ಐಎ) ಸಂಘಟನೆಗಳು ಬ್ಯಾಂಕ್ ಆಫ್ ಇಂಡಿಯಾ…
ಲೋಕಸಭಾ ಚುನಾಣಾ ಫಲಿತಾಂಶ ಬಂದ ನಂತರದ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ, ರಾಜ್ಯದಲ್ಲಿ ಮೇ 23 ರಿಂದ 28ವರೆಗೆ ಕೇವಲ ಆರು ದಿನಗಳಲ್ಲಿ 72 ಪೈಸೆ ಪೇಟ್ರೊಲ್ ದರ ಏರಿಕೆ ಕಂಡಿತ್ತು. ಆದರೆ ಕಳೆದೆರಡು ದಿನಗಳಿಂದ ತೈಲ ದರ ಇಳಿಕೆಯೆತ್ತ ಮುಖ ಮಾಡಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕಂಡಾಗ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ದೇಶದ ಪ್ರಮುಖ ನಗರಗಳಲ್ಲಿ…
ಜೀ-ಕನ್ನಡದಲ್ಲಿ ಆರಂಭವಾಗಿರುವ ‘ಸರಿಗಮಪ’ 14ನೇ ಆವೃತ್ತಿ ಈಗಾಗಲೇ ಕರುನಾಡ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ನೀಡುವ ಮೂಲಕ ಜೀ-ವಾಹಿನಿ ಮತ್ತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಮಕ್ಕಳ ಸಿಂಗಿಂಗ್ ಶೋ ಎಷ್ಟೋ ಜನರಿಗೆ ವೀಕೆಂಡ್ ನಲ್ಲಿ ಮನರಂಜನೆಯ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನು ತರುತ್ತದೆ.. ಅದರಲ್ಲೂ ಕೆಲವು ಸ್ಪರ್ಧಿಗಳು ನಮ್ಮ ಮನೆಯ ಸದಸ್ಯರಂತಾಗುತ್ತಾರೆ.ಜೀ ಕನ್ನಡ ಟಿವಿ ರಿಯಾಲಿಟಿ ಸಿಂಗಿಂಗ್ ಸರಿಗಮಪ ಶೋ ನ ಲಕ್ಷ್ಮೀ ಕೂಡ ಇದಕ್ಕೆ ಹೊರತಾಗಿಲ್ಲ.. ಹಳ್ಳಿಯಿಂದ ಬಂದ ಪ್ರತಿಭಾನ್ವಿತ ಕಲಾವಿದೆ ಈ ಲಕ್ಷ್ಮಿರಾಮಪ್ಪ.ಇವರ…
ನವದೆಹಲಿ: ಪ್ರತಿ ದಿನ ಬೈಯುತ್ತಿದ್ದಾರೆ ಎಂದು ಕೋಪದಲ್ಲಿ ಮಗನೊಬ್ಬ ತನ್ನ ತಂದೆಯನ್ನು ಕೊಲೆಗೈದು ದೇಹವನ್ನು 25 ಪೀಸ್ ಮಾಡಿ ಬ್ಯಾಗಿನಲ್ಲಿ ತುಂಬಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಅಮನ್(22) ತಂದೆಯನ್ನೇ ಕೊಲೆ ಮಾಡಿದ ಮಗ. ಕೆಫೆ ಮಾಲೀಕನಾಗಿರುವ ಅಮನ್ ತಂದೆ ಸಂದೇಶ್ ಅಗರ್ ವಾಲ್(48) ದಿನ ಬೈಯುತ್ತಿದ್ದರು ಎಂದು ಕೊಲೆ ಮಾಡಿದ್ದಾನೆ. ಅಮನ್ ತನ್ನ ತಂದೆ ಸಂದೇಶ್‍ರನ್ನು ಕೊಲೆ ಮಾಡಿದ ನಂತರ ಅವರ ದೇಹವನ್ನು 25 ಪೀಸ್ ಮಾಡಿ ನಾಲ್ಕು ಬ್ಯಾಗ್‍ನಲ್ಲಿ ತುಂಬಿಸಿದ್ದಾನೆ. ಈ ವಿಷಯ ತಿಳಿದ ಪೊಲೀಸರು…
ಮೇಷ ರಾಶಿ ಭವಿಷ್ಯ (Saturday, December 4, 2021) ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರ ತೆಗೆದುಕೊಳ್ಳಿ ಇಂದು ನೀವು ನಿಮ್ಮ ಮನೆಯ ಸದಸ್ಯರನ್ನು ಎಲ್ಲಿಗಾದರೂ ಸುತ್ತಾಡಲು ಕರೆದುಕೊಂಡು ಹೋಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಖರ್ಚಾಗಬಹುದು ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆಯಿದೆ. ಇಂದು ಸಂವಹನ ನಿಮ್ಮ ಬಲವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಇಂದು ವಿಶೇಷ ಗಮನ ಪಡೆಯುತ್ತೀರಿ. ಬಹಳ ಸಮಯದ ನಂತರ…