ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಅಜ್ಜಿಗೆ ಬರೋಬ್ಬರಿ 80 ವರ್ಷ ವಯಸ್ಸು ಆದ್ರೂ ಇವರು ಛಲ ಬಿಡದೆ ಕೃಷಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇವರ ಒಂದು ಸಾಧನೆಯು ಪ್ರತಿಯೊಬ್ಬ ರೈತನಿಗೆ ಸ್ಫೂರ್ತಿ ಅನ್ನಬಹುದು .ಈ ಅಜ್ಜಿಯ ಹೆಸರು ಲಕ್ಷ್ಮೀಬಾಯಿ ಮಲ್ಲಪ್ಪ ಜುಲ್ಪಿ ಎಂಬುದಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದವರು ಇವರಿಗೆ 80 ವರ್ಷ ವಯಸ್ಸು. ಮತ್ತೆ ಇವರಿಗೆ ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಕ್ಕಳಿದ್ದಾರೆ. ಈ ವಯಸ್ಸಿನಲ್ಲೂ ಕೂಡ ಇವರ ಕಾರ್ಯ ವೈಖರಿಯನ್ನು ನೋಡಿದರೆ ಎಂತವರಿಗೂ ಕೂಡ ಅಚ್ಚರಿ ಮೂಡಿಸುತ್ತದೆ. ಆ ರೀತಿಯಲ್ಲಿ ಕೃಷಿ ಚಟುವಟಿಕೆಯ ಕೆಲಸವನ್ನು ಮಾಡುತ್ತಾರೆ ಈ ಲಕ್ಶ್ಮಿಬಾಯಿ.

ಲಕ್ಶ್ಮಿಬಾಯಿಯವರು ತಮ್ಮ ತವರುಮನೆಯ ಸೋರಗಾಂವಿ ಗ್ರಾಮದಿಂದ ದೇಶೀಯ ಬದನೆ ತಳಿಗಳನ್ನ ತಂದು ತಮ್ಮ ಗಂಡನ ಮನೆಯಲ್ಲಿ ಬೆಳೆಯುವ ಮೂಲಕ ಅದ್ಭುತ ಸಾಧನೆಯನ್ನ ಮಾಡಿದ್ದಾರೆ. ಇವರು ಬೆಳೆಯುವಂತ ದೇಶಿಯ ಬದನಕಾಯಿಗೆ ಉತ್ತಮ ಮಾರ್ಕೆಟಿಂಗ್ ಇದ್ದು ಸುತ್ತ ಮುತ್ತಲಿನ ರೈತರೆಲ್ಲರೂ ಇವರನ್ನು ನೋಡಿ ಪ್ರೇರೇಪಿತರಾಗಿದ್ದರೆ ಎನ್ನಲಾಗುತ್ತದೆ.

ದಿನಾ ಬೆಳಗಾದರೆ ಸಾಕು ಎದ್ದು ದನಕರುಗಳಿಗೆ ನೀರು ಹಾಕೋದು, ಹೊಲಗದ್ದೆಗಳಲ್ಲಿ ಬದನೆಕಾಯಿಗಳ ಬೆಳೆ ನೋಡಿಕೊಳ್ಳೋದು ಮತ್ತು ದೇಶಿಯ ಬೀಜಗಳನ್ನ ಸಂರಕ್ಷಣೆ ಮಾಡೋದು ಹಾಗು ನಿತ್ಯವೂ ಕೃಷಿ ಕಾರ್ಯದಲ್ಲಿ ತೊಡಗುವಂತ ಕೆಲಸವನ್ನು ಮಾಡುತ್ತಾರೆ.
ಹೊಲದಲ್ಲಿ ಬದನೆಕಾಯಿ ಹೆಚ್ಚೋದು, ಬೆಳೆಗೆ ನೀರುಣಿಸೋದು, ಕಸ ಕೀಳೋದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿರುತ್ತಾರೆ. ಅಲ್ಲದೆ ಹೊಲದಲ್ಲಿ ಕೆಲ್ಸ ಮಾಡೋರನ್ನ ತಮ್ಮ ಮಕ್ಕಳಂತೆ ನೋಡಿಕೊಳ್ತಾರೆ.

ಲಕ್ಷ್ಮೀಬಾಯಿಯವರು ಬೀಜ ಬ್ಯಾಂಕನ್ನು ತಮ್ಮ ಮನೆಯಲ್ಲಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಜಾತಿಯ ದೇಶಿಯ ತಳಿಗಳ ಬೀಜಗಳನ್ನ ಮಣ್ಣಿನ ಮಡಿಕೆಗಳಲ್ಲಿಟ್ಟು ಸಂರಕ್ಷಿಸಿ ಇತರರಿಗೆ ಮಾದರಿಯಾಗಿದ್ದಾರೆ. ಇನ್ನು ಕೃಷಿ ಸಾಧನೆ ಮಾಡಿರೋ ಕುಟುಂಬದಲ್ಲಿ ಪತಿ ಮಲ್ಲಪ್ಪಗೆ ರಾಜ್ಯ ಪ್ರಶಸ್ತಿ, ಪುತ್ರ ರುದ್ರಪ್ಪಗೆ ಮಹಿಂದ್ರಾ ನ್ಯಾಷನಲ್ ಅವಾರ್ಡ, ಐಎಆರ್ಐ ಪ್ರಶಸ್ತಿಗಳು ಬಂದಿದ್ದು, ಇಡಿ ಕುಟುಂಬ ಕೃಷಿ ಸಾಧಕ ಕುಟುಂಬವಾಗಿ ಹೆಸರುವಾಸಿಯಾಗಿದೆ.

ಕಳೆದ ಹಲವು ವರ್ಷಗಳ ಸಾಧನೆ ಮತ್ತು ಬದನೆ ಸಂಶೋಧನೆಗಾಗಿ ನ್ಯೂ ದೆಹಲಿಯ ನ್ಯಾಷನಲ್ ಇನೋವೇಷನ್ ಪೌಂಡೇಶನ್ ವತಿಯಿಂದ ಪ್ರಶಸ್ತಿಗೂ ಭಾಜನರಾಗಿದ್ದು, ದೇಶಿಯ ತಳಿ ಸಂರಕ್ಷಣೆಗಾಗಿ 2015ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂಜೂರ ಮನುಷ್ಯನ ದೇಹಕ್ಕೆ ತುಂಬಾನೇ ಸಹಕಾರಿಯಾಗಿದೆ. ಇದರ ಸೇವನೆಯನ್ನು ಮಾಡೋದ್ರಿಂದ ಸಿಗುವ ಆರೋಗ್ಯಕಾರಿ ಲಾಭಗಳು ಯಾವುವು ಅನ್ನೋದು ಮುಂದೆ ನೋಡಿ.
ಪರೀಕ್ಷೆ ಎಲ್ಲ ಮುಗಿಯಿತು. ಇನ್ನಿರುವುದು ಮುಂದಿನ ಆಯ್ಕೆ ಬಗ್ಗೆ. ಹಲವಾರು ಕೋರ್ಸ್ಗಳಿವೆ. ಆದರೆ ಸರಿಯಾದ ಆಯ್ಕೆ ಹೇಗೆ ಮಾಡಲಿ ಎಂಬ ಗೊಂದಲ ಮನದಲ್ಲಿ ಎದ್ದಾಗಿದೆ. ಹೆತ್ತವರ ಸಲಹೆ ಒಂದಾದರೆ, ಮಕ್ಕಳದ್ದು ಇನ್ನೊಂದು. ಈ ನಡುವೆ ಹುಟ್ಟಿದ ಹಲವಾರು ಅನುಮಾನಗಳು. ಯಾವುದು, ಎಲ್ಲಿ, ಏನು, ಹೇಗೆ…? ಇದಕ್ಕಾಗಿಯೇ ಒಂದಷ್ಟು ಮಾಹಿತಿ ಇಲ್ಲಿವೆ.
ಈ ಹಿಂದೆ ಮಹಿಳೆಯರ ಸುರಕ್ಷತೆಗಾಗಿ ಉತ್ತರ ಪ್ರದೇಶದಲ್ಲಿ ಪಿಂಕ್ ಬಸ್ ರೋಡಿಗೆ ಇಳಿದಿವೆ. ಬೆಂಗಳೂರಿನಲ್ಲಿ ಇಂದಿರಾ ಸಾರಿಗೆ ಆಯಿತು ಇದೀಗ ಪಿಂಕ್ ಆಟೋ ಮಹಿಳೆಯಾರ ಸುರಕ್ಷತೆಗಾಗಿ ರಸ್ತೆಗಿಳಿಯಲಿವೆ.
ನಾವು ನಮ್ಮ ಮನಸ್ಸನ್ನು ನಿರಂತರ ಭಗವಂತನನಲ್ಲಿ ನೆಲೆ ನಿಲ್ಲುವಂತೆ ಮಾಡಲು ‘ನಿರಂತರ ಮನನ’ ಅತ್ಯಂತ ಮುಖ್ಯ ಅಂಶ. ಸಾಮಾನ್ಯವಾಗಿ ನಮ್ಮ ಚಿತ್ತ ಬೇಡದ ವಿಷಯಗಳತ್ತ ಹರಿಯುತ್ತದೆ. ಆದರೆ ನಾವು ಅದನ್ನು ಕೇವಲ ಭಗವಂತನನ್ನು ಚಿಂತಿಸುವಂತೆ ತರಬೇತಿಗೊಳಿಸಬೇಕು. ಚಿತ್ತಕ್ಕೆ ಭಗವಂತನನ್ನು ಅನನ್ಯಗಾಮಿಯಾಗಿ ಚಿಂತನೆ ಮಾಡುವಂತೆ ನಿರಂತರ ಅಭ್ಯಾಸ ಮಾಡಿಸಬೇಕು. ನಮ್ಮ ಮನಸ್ಸು, ಬುದ್ಧಿ, ಚಿತ್ತ ಎಲ್ಲವೂ ನಾವು ಅಭ್ಯಾಸ ಮಾಡಿಸಿದಂತೆ ಕೆಲಸ ಮಾಡುತ್ತವೆ. ಅವುಗಳಿಗೆ ನಾವು ಭಗವಂತನ ಚಿಂತನೆಯ ಅಭ್ಯಾಸ ಮಾಡಿಸಬೇಕು. ಮನಸ್ಸು ಚಿತ್ತವನ್ನು ಮಣಿಸುವ ಏಕಮಾತ್ರ ಸಾಧನ…
ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗವಾಗಿದೆ.
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.