ಆರೋಗ್ಯ

ಒಂದೆಲಗದಲ್ಲಿ ಇರುವ ಮದ್ದಿನ ಗುಣಗಳನ್ನು ತಿಳಿಯಬೇಕೆ…..! ಹಾಗಾದ್ರೆ ಈ ಲೇಖನ ಓದಿ…..!

1280

ಒಂದೆಲಗ ಅಥವಾ ಬ್ರಾಹ್ಮೀ ಎಲೆ ಇದಕ್ಕೆ ದಕ್ಷಿಣ ಕನ್ನಡದ ಕಡೆ ತಿಮರೆ ಎಂದು ಕರೆಯುತ್ತಾರೆ. ಒಂದೆಲಗ ಎಂದರೆ ಒಂದು ಎಲೆ ಉಳ್ಳ ಸಸಿ ಎಂದರ್ಥ. ಇದರಲ್ಲಿರುವ ಮದ್ದಿನ ಗುಣ ಅಸಾಮಾನ್ಯವಾದದ್ದು. ಅದು ಏನೆಂದು ತಿಳಿದರೆ ನಿಮಗೆ ಆಗುತ್ತೆ ನೋಡಿ ಆಶ್ಚರ್ಯ.

ಮಕ್ಕಳ್ಳಿಗೆ ತೀಕ್ಷ್ಣ ಬುಧ್ದಿ ಬೆಳೆಯುವಲ್ಲಿ ಇದು ಸಹಕಾರಿ. ಮಕ್ಕಳಿಗೆ  ದಿನ ಬೆಳಗ್ಗೆ ಹಸಿ ಹೊಟ್ಟೆಗೆ ಒಂದು ಎಳೆಯನ್ನು ತಿಂದರೆ ಸಾಕು  ಅವರ ಜ್ಞಾಪಕ ಶಕ್ತಿಯು ವುಧ್ದಿಯಾಗುವುದು.

 

ಗರ್ಭಿಣಿ ಸ್ತ್ರೀಯರು ಇದರ ರಸವನ್ನು ದೀನ ನಿತ್ಯ ಸೇವಿಸಿದರೆ ಹುಟ್ಟುವ ಮಗುವಿನ ಆರೋಗ್ಯ  ಮತ್ತು ದೃಷ್ಟಿ ಶಕ್ತಿ ಯು    ಉತ್ತಮವಾಗುತ್ತದೆ.

ನಿದ್ರಾಹೀನತೆ ಯಿಂದ  ಬಳಲುತ್ತಿರುವವರು ರಾತ್ರಿ ಮಲಗುವ ಮುಂಚೆ ಬ್ರಾಹ್ಮೀ ಎಲೆಯ ಎಣ್ಣೆಯನ್ನು  ತಲೆಗೆ ಹಚ್ಚುವುದರಿಂದ    ಚೆನ್ನಾಗಿ ನಿದ್ರಿಸಬಹುದು.

ಅಧಿಕ ಒತ್ತಡ, ಆತಂಕ, ಕೆಲಸದಲ್ಲಿ ನಿರಾಸಕ್ತಿ ಇರುವವರು ತಮ್ಮ ದಿನನಿತ್ಯದ ಆಹಾರದಲ್ಲಿ ಈ ಎಲೆಯಿಂದ ತಯಾರಿಸಿದ ಚಟ್ನಿಯನ್ನು ಸೇವಿಸುವುದರಿಂದ ನಿವಾರಣೆ ಕಾಣಬಹುದು.

ಮಹಿಳೆಯರಿಗೆ ಕೂದಲು ಸೊಂಪಾಗಿ ಬೆಳೆಯಬೇಕಾದರೆ, ಒಂದೆಲಗದ ಎಲೆಗಳನ್ನು ಚೆನ್ನಾಗಿ ತೊಳೆದು ಅದರ ಪೇಸ್ಟ್ ನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಕಾಂತಿಯೊಂದಿಗೆ, ಕೂದಲು ಸೊಂಪಾಗಿ ಬೆಳೆಯುವುದು.

ಈ ಎಲೆಯು ಹಳ್ಳಿಗಳಲ್ಲಿ ಅಡಿಕೆ ತೋಟದ ಮಧ್ಯೆ , ಇಲ್ಲವೆ ಗದ್ದೆಗಳ ಬದಿಗಳಲ್ಲಿ ವಿಶಾಲವಾಗಿ ಹರಡಿಕೊಂಡಿರುತ್ತದೆ. ಪೇಟೆಯಲ್ಲಿ ಇದನ್ನು ಬೆಳೆಯಲು ಇಚ್ಚಿಸುವವರು ಚಟ್ಟಿಗಳಲ್ಲಿ ಹಾಕಿ ಬೆಳೆಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ