ಸುದ್ದಿ

ಐಟಿ ದಾಳಿಯಿಂದ ಬೇಸತ್ತು ಹೋಗಿದ್ದ ಸಿದ್ಧಾರ್ಥ್ : ರಾಜೇಗೌಡರ ಕಣ್ಣೀರು….!

49

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಉದ್ಯಮಿ ಸಿದ್ಧಾರ್ಥ್ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ಶೃಂಗೇರಿ ಶಾಸಕ ರಾಜೇಗೌಡ ಹೇಳಿದ್ದಾರೆ.

ಶಾಸಕರು ಕಾಫಿ ಡೇ ಎಂಡಿ ಸಿದ್ಧಾರ್ಥ್ ಅವರ ಆಪ್ತ ಸ್ನೇಹಿತ ಹಾಗೂ ಹಿತೈಷಿಯಾಗಿದ್ದಾರೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾರ್ಯಾಚರಣೆ ವೀಕ್ಷಿಸಿದರು. ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕರು, ಸಿದ್ಧಾರ್ಥ್ ಅವರು ಲಕ್ಷಾಂತರ ಜನರಿಗೆ ಆಸರೆ, ಬದುಕು ಕೊಟ್ಟಿದ್ದಾರೆ. ಅವರು ಯಾವುದಕ್ಕೂ ಹೆದರಿದವರೇ ಅಲ್ಲ ಎಂದು ಕಣ್ಣೀರು ಹಾಕಿದರು.

ದೇಶಕ್ಕಾಗಿ ದುಡಿದು, ತೆರಿಗೆ ಕಟ್ಟಿದರೂ ಬೆಲೆ ಇಲ್ಲ ಎಂಬುದು ಅವರ ಮನಸ್ಸಿಗೆ ಬಂದಿತ್ತು. ಸಿದ್ಧಾರ್ಥ್ ಶಿಸ್ತು ಸಂಯಮದ ವ್ಯಕ್ತಿ. ಬಹಳ ತಾಳ್ಮೆಯಿಂದ ವರ್ತಿಸುತ್ತಿದ್ದರು. ಗ್ರಾಮೀಣ ಮತ್ತು ಗುಡ್ಡಗಾಡು ಜನಕ್ಕೆ ಉದ್ಯೋಗ ಕೊಟ್ಟ ಮಹಾನೀಯ. ಐಟಿ ದಾಳಿಯ ನಂತರ ಸಿದ್ಧಾರ್ಥ ಕುಗ್ಗಿದ್ದರು. ಮನಸ್ಸಿಗೆ ಬಹಳ ನೋವು ಮಾಡಿಕೊಂಡಿದ್ದರು. ಸಿದ್ಧಾರ್ಥ್ ಅವರು ನಾಪತ್ತೆಯಾದ ಸುದ್ದಿ ಆಘಾತ ತಂದಿದೆ ಎಂದು ಶಾಸಕರು ತಿಳಿಸಿದರು.

ಸಿದ್ಧಾರ್ಥ್ ಅವರು ಸೋಮವಾರ ಸಂಜೆ 7 ಗಂಟೆ ಸುಮಾರಿನಿಂದ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದು, ಇದೀಗ ಅವರ ಹುಡುಕಾಟ ಕಾರ್ಯ ಭರದಿಂದ ಸಾಗುತ್ತಿದೆ. ಸ್ಥಳಕ್ಕೆ ರಾಜಕೀಯ ನಾಯಕರು, ಸಾರ್ವಜನಿಕರು, ಮುಳುಗುತ್ಞರು ಹಾಗೂ ಅಗ್ನಿಶಾಮಕ ದಳದವರು ದೌಡಾಯಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಿದ್ಧಾರ್ಥ್ ಪತ್ತೆಗಾಗಿ ಸೇನಾ ಹೆಲಿಕಾಪ್ಟರ್ ಕೂಡ ಬರುವ ಸಾಧ್ಯತೆಗಳಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದುಡ್ಡಿನ ಆಸೆಗಾಗಿ ಹೆಣ್ಣನ್ನು ಅಶ್ಲೀಲವಾಗಿ ತೋರಿಸ್ತೀರಾ…, ‘ಐ ಲವ್ ಯು’ ಟೀಂ ವಿರುದ್ಧ ವೆಂಕಟ್ ಕಿಡಿ…!

    ಐ ಲವ್ ಯು’ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ರಚಿತಾ ರಾಮ್ ಅವರ ಹಾಟ್ ದೃಶ್ಯದ ಸಾಂಗ್ ಬಗ್ಗೆ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ನಿರ್ದೇಶಕ ಆರ್. ಚಂದ್ರು ವಿರುದ್ಧ ಕಿಡಿಕಾರಿರುವ ಹುಚ್ಚ ವೆಂಕಟ್, ಹೆಣ್ಣನ್ನು ಅಶ್ಲೀಲವಾಗಿ ತೋರಿಸಿ ಅದರಿಂದ ಬರುವ ದುಡ್ಡಿನಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ? ನಿಮ್ಮ ಮನೆಯಲ್ಲಿನ ಹೆಣ್ಣುಮಕ್ಕಳನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೀರಿ. ಬೇರೆಯವರ ಮನೆಯ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ತೋರಿಸುತ್ತೀರಿ ಎಂದು ಹರಿಹಾಯ್ದಿದ್ದಾರೆ. ಆರ್. ಚಂದ್ರು ನಿರ್ದೇಶಿಸಿರುವ ‘ಐ ಲವ್ ಯು’ ಚಿತ್ರದಲ್ಲಿ ಉಪೇಂದ್ರ, ರಚಿತಾ…

  • ಜ್ಯೋತಿಷ್ಯ

    ಆಂಜನೇಯ ಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ರಾಜಯೋಗ ಕಟ್ಟಿಟ್ಟಬುತ್ತಿ,. ನಿಮ್ಮ ರಾಶಿ ಇದೆಯಾ….!

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಮನೆಯ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ನಂತರ ನೀವು ತೀರ್ಮಾನ ಕೈಕೊಂಡಲ್ಲಿ ಎಲ್ಲರೂ ನಿಮ್ಮ ತೀರ್ಮಾನವನ್ನು ಒಪ್ಪುವ ಸಾಧ್ಯತೆ ಇರುತ್ತದೆ. ಆದರೆ ಒಬ್ಬರ ವಿಚಾರ ಮತ್ತೊಬ್ಬರ…

  • ಕಾನೂನು

    ನಿಮ್ಮ ಜಮೀನು ವ್ಯವಹಾರಕ್ಕೆ ಇದು ಕಡ್ಡಾಯವಲ್ಲ..?ಇದು ಕೇವಲ ವದಂತಿ ಎಂದ ಕೇಂದ್ರ ಸರ್ಕಾರ..!

    ಆಸ್ತಿ ವಹಿವಾಟಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವೂ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

  • ಸುದ್ದಿ

    ಹೆಚ್ಚರಿಕೆ : ಮುಖಕ್ಕೆ ಕೇಕ್ ಹಚ್ಚಿದರೆ ಜೈಲೇ ಗತಿ…!

    ಇತ್ತೀಚಿನ ದಿನಗಳಲ್ಲಿ ಯಾವುದೆ ಹುಟ್ಟುಹಬ್ಬ,ಅನ್ನಿವೆರ್ಸೆರಿ ಅಥವಾ ಯಾವುಧೆ ಶುಭ ಸಮಾರಂಭಗಳಲ್ಲಿ ಕೇಕ್ಅನ್ನು ಕತ್ತರಿಸುವ ಮತ್ತು ಮುಕಕ್ಕೆ ಹಚ್ಚಿಕೊಳ್ಳುವ ಹೊಸ ಸಂಪ್ರದಾಯವನ್ನು ಅಳವಡಿಸಿಕೊಂಡಿದ್ದಾರೆ. ಇತ್ತೀಚಿನ ದಿನದಲ್ಲಿ ದೇಶದಲ್ಲಿ ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ಕೇಕ್ ಹಚ್ಚುವುದು, ಗಲಾಟೆ ಮಾಡುವುದನ್ನು ನೋಡಿರುವ‌ ಗುಜರಾತ್ ಪೊಲೀಸರು ಹೊಸ‌ ಕಾನೂನು ಜಾರಿಗೆ ತಂದಿದ್ದಾರೆ. ಹೌದು, ಸೂರತ್ ಪೊಲೀಸರು ಪಬ್ ಜೀ ಬ್ಯಾನ್ ಬಳಿಕ ಇದೀಗ ಸಾರ್ವಜನಿಕ ವಲಯದಲ್ಲಿ ಬರ್ತ್‌ ಡೇ ಕೇಕ್ ಕತ್ತರಿಸಿ ಮುಖಕ್ಕೆ ಮೆತ್ತುವುದನ್ನು ಬ್ಯಾನ್ ಮಾಡಿದೆ. ಒಂದು ವೇಳೆ ಈ ನಿಯಮ…

  • ರಾಜಕೀಯ

    ಬಳ್ಳಾರಿ ಬ್ರದರ್ಸ್ಗೆ ಕೊಟ್ಟ ಮಾತಿನಂತೆ, ನಡೆಯದ ಸುಷ್ಮಾ ಸ್ವರಾಜ್..!ಏನು ಗೊತ್ತಾ…

    ಶ್ರಾವಣ ಶುಕ್ರವಾರ ನಡೆಯುವ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಬಳ್ಳಾರಿಗೆ ಬರುತ್ತಿದ್ದ ಭಾರತ ಸರಕಾರದ ಸಚಿವೆಯಾಗಿರುವ ಸುಷ್ಮಾ ಸ್ವರಾಜ್’ರವರು ಈ ವರ್ಷವಾದರೂ ಬಳ್ಳಾರಿಗೆ ಬರುತ್ತಾರೆಯೇ?

  • ಆರೋಗ್ಯ, ಉಪಯುಕ್ತ ಮಾಹಿತಿ

    ನೆನಸಿದ ಕಡಲೆಕಾಳು ತಿನ್ನೋದ್ರಿಂದ ಆಗೋ ಪ್ರಯೋಜನಗಳನ್ನ ಕೇಳಿದ್ರೆ, ಈಗ್ಲೇ ತಿನ್ನೋಕೆ ಸ್ಟಾರ್ಟ್ ಮಾಡ್ತೀರಾ..!

    ಕಡಲೆಯಿಂದ ನಾವು ಅನೇಕ ಅಡುಗೆಗಳನ್ನು ಮಾಡುತ್ತೇವೆ. ಇದರಲ್ಲಿ ಪಲ್ಯ ಮಾಡುತ್ತೇವೆ. ಕಾಳಿನಂತೆ ಬೇಯಿಸಿಕೊಂಡು ತಿನ್ನುತ್ತೇವೆ. ಹಲವು ಖಾದ್ಯಗಳನ್ನು ಮಾಡುತ್ತಾರೆ. ಅದೆಷ್ಟೋ ಆಹಾರದಲ್ಲಿ ಕಡಲೆ ಬಳಸುತ್ತಾರೆ. ಕಡಲೆ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ ಎಂಬುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತು. ದುಬಾರಿ ಬೆಲೆಯ ಬಾದಾಮಿ, ಒಣ ಹಣ್ಣುಗಳಿಗಿಂತ ಇದು ಬಹಳ ಒಳ್ಳೆಯದು. ನೆನಸಿದ ಕಡಲೆ ಕಾಳಿನಲ್ಲಿ ಪ್ರೋಟೀನ್, ಫೈಬರ್, ಮಿನರಲ್ ಹಾಗೂ ವಿಟಮಿನ್ ಬಹಳ ಪ್ರಮಾಣದಲ್ಲಿರುತ್ತದೆ. ನೆನಸಿದ ಕಡಲೆಕಾಳು ಸೇವನೆ ಮಾಡುವುದರಿಂದ ಅನೇಕ ರೋಗಗಳು ದೂರವಾಗುವ ಜೊತೆಗೆ ದೇಹಕ್ಕೆ ಹೆಚ್ಚಿನ…