ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಆದರೂ ಒಂದೇ ವರ್ಷದಲ್ಲಿ 7 ನೌಕರಿಗೆ ಅರ್ಹತೆ ಲಭಿಸಿತು. ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪಿಎಸ್ಐ ಹುದ್ದೆ! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಮುದೂರ ಗ್ರಾಮದ ಕಾನ ಗೌಡ ಪಾಟೀಲ ಎಂಬುವರ ಪುತ್ರ ಪ್ರಶಾಂತ ಪಾಟೀಲ (38) ಎಂಬುವರು 15 ದಿನಗಳ ಹಿಂದಷ್ಟೇ ಪ್ರೊಬೇಷನರಿ ಅವಧಿ ಪೂರೈಸಿ ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಎಸ್ಐ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಪ್ರಶಾಂತ 1985ರಿಂದ 1996ರವರೆಗೆ ಮುದ್ದೇಬಿ ಹಾಳದ ಎಂಜಿಎಂಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ ಮೈಸೂರಿನ ಎನ್ಟಿಟಿಎಫ್ನಲ್ಲಿ ಪಿಯುಸಿಗೆ ಪ್ರವೇಶ ಪಡೆದು 3ನೇ ಸೆಮ್ನಲ್ಲಿದ್ದಾಗ ಭಾರತೀಯ ನೌಕಾ ಸೇನೆಯ ಟೆಕ್ನಿಕಲ್ ವಿಭಾಗಕ್ಕೆ 1999ರಲ್ಲಿ ಸೇರಿದರು. 15 ವರ್ಷ ಕಾಲ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಸೇನೆಯು ಅವರಿಗೆ ಬಿಎ ಆನರ್ಸ್ ಗೌರವ ಪದವಿ ದಯಪಾಲಿಸಿತು.

ಪಿಎಸ್ಐ ಹುದ್ದೆಗೆ ನಿಗದಿಪಡಿಸಿದ್ದ ಪದವಿ ದೊರಕಿದ್ದರಿಂದ 2014ರಲ್ಲಿ ನಿವೃತ್ತಿ ನಂತರ ಒಂದು ವರ್ಷ ನಿರಂತರ ಅಧ್ಯಯನ ನಡೆಸಿ, ಸಿಂಡಿ ಕೇಟ್ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಇಸ್ರೋ, ಜೀವವಿಮಾ ಅಧಿಕಾರಿ, ಪಿಎಸ್ಐ ನೌಕರಿಗೆ ಅರ್ಹತೆ ಗಳಿಸಿದರು. ಕೊನೆಗೆ ತಮ್ಮ ಬಾಲ್ಯದ ಕನಸಿನಂತೆ ಪಿಎಸ್ಐ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು.

ಬಾಲ್ಯದಿಂದಲೂ ಪೊಲೀಸ್ ಅಧಿಕಾರಿ ಯಾಗುವ ಆಸೆ ಇತ್ತು. ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಪೊಲೀಸ್ ಅಧಿಕಾರಿ ಪಾತ್ರವನ್ನೇ ಮಾಡುತ್ತಿದ್ದೆ. 2015ರಲ್ಲಿ 7 ಪರೀಕ್ಷೆ ಎದುರಿಸಿ ಎಲ್ಲದರಲ್ಲೂ ಅರ್ಹತೆ ಗಳಿಸಿದೆ. ಆದರೆ ಕಠಿಣ ಎನ್ನಿಸಿದರೂ ಪಿಎಸ್ಐ ಹುದ್ದೆಯನ್ನೇ ಆಯ್ಕೆ ಮಾಡಿಕೊಂಡೆ. ಇದು ಹುದ್ದೆ ಅಥವಾ ನೌಕರಿ ಅಲ್ಲ, ಸೇವೆ. ಶೋಷಣೆಗೊಳಗಾದ ಬಡವರಿಗೆ ನ್ಯಾಯ ಒದಗಿಸಲು ಪಿಎಸ್ಐ ಆದೆ ಎಂದು ಹೇಳುತ್ತಾರೆ ಪ್ರಶಾಂತ ಪಾಟೀಲ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಧಾರ್ ನಲ್ಲಾದ ಈ ತಪ್ಪನ್ನು ತಿದ್ದಲು ನಿಮಗೆ ಇನ್ನೊಂದೇ ಅವಕಾಶ ಸಿಗಲಿದೆ. ಆಧಾರ್ ಕಾರ್ಡ್ ಸಿದ್ಧವಾಗಿದ್ದು, ಜನ್ಮ ದಿನಾಂಕ ತಪ್ಪಾಗಿದ್ದರೆ ಪದೇ ಪದೇ ಇದನ್ನು ಬದಲಿಸಲು ಸಾಧ್ಯವಿಲ್ಲ. ಒಮ್ಮೆ ಮಾತ್ರ ನೀವು ಜನ್ಮ ದಿನಾಂಕದಲ್ಲಿ ತಿದ್ದುಪಡಿ ಮಾಡಬಹುದು. ಇದನ್ನು ಯುಐಡಿಎಐ ಅಧಿಕೃತ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದೆ. ವಿಳಾಸ ಬಿಟ್ಟು ಆಧಾರ್ ನಲ್ಲಾಗಿರುವ ಯಾವುದೇ ತಪ್ಪನ್ನು ತಿದ್ದಲು ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಜನ್ಮ ದಿನಾಂಕವನ್ನು ಕೂಡ ಆಧಾರ್ ಕೇಂದ್ರಕ್ಕೆ ಹೋಗಿಯೇ ತಿದ್ದಬೇಕು. ಜನ್ಮ ದಿನಾಂಕ ತಿದ್ದುಪಡಿ ಮಾಡುವಾಗ ಸೂಕ್ತ…
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2018-19ನೇ ಸಾಲಿನ ಬಜೆಟ್ ಮಂಡಿಸಿದ್ದು,ಹಲವಾರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.ಇದರಲ್ಲಿ ರೈತರಿಗೂ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದು,ಕೃಷಿಗೆ ಹೆಚ್ಚು ಮಾನ್ಯತೆ ನೀಡಿದ್ದಾರೆ.
ಎಲ್ಲರಿಗೂ ರಕ್ಷಣೆಯೊದಗಿಸುವುದು ಪೊಲೀಸರ ಕರ್ತವ್ಯ… ಅದನ್ನು ನಮ್ಮ ಪೊಲೀಸರು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ… ತಾವು ಕಷ್ಟ ಅನುಭವಿಸಿದರೂ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಪೊಲೀಸರು… ಇಲ್ಲಿ ಎಂದಲ್ಲ ವಿಶ್ವದ ಯಾವ ಮೂಲೆಗೆ ಹೋದರೂ ಪೊಲೀಸರ ಕರ್ತವ್ಯ ನಿರ್ವಹಣೆ, ದ್ಯೇಯ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಆದರೆ, ಕೆಲವೊಮ್ಮೆ ಈ ಕರ್ತವ್ಯ ನಿರ್ವಹಣೆಯ ನಡುವೆ ಸಂಭವಿಸುವ ವಿದ್ಯಮಾನಗಳು ವಿಚಿತ್ರ ಮತ್ತು ವಿಶಿಷ್ಟವೆನಿಸುತ್ತವೆ. ಅಂತಹ ವಿಶಿಷ್ಟ ವಿದ್ಯಮಾನದಲ್ಲಿ ಇದೂ ಒಂದು. ಏವನ್ ಮತ್ತು ಸೋಮರ್ಸೆಟ್ ಕಾನ್ಸ್ಟಾಬ್ಯುಲರಿಯ ಅಧಿಕಾರಿಯೊಬ್ಬರು ಕೆಲಸ ನಿರ್ವಹಿಸಿ ಮನೆಗೆ ಹೋಗುವ…
ಕೋತಿ ಚೇಷ್ಟೆ ಬಗ್ಗೆ ನಿಮಗೆ ಹೆಚ್ಚು ಹೇಳಬೇಕಿಲ್ಲ. ಅದು ಚೇಷ್ಟೆಯಿಂದಲೇ ಗುರುತಿಸಿಕೊಳ್ಳುವಂತಹ ಪ್ರಾಣಿ. ತನ್ನ ಆಹಾರಕ್ಕಾಗಿ ಅಂಗಡಿಗಳಿಗೆ ನುಗ್ಗುವುದು, ಸಿಕ್ಕ ಸಿಕ್ಕ ಜನರ ಕೈಲಿರುವ ಆಹಾರ ಪೊಟ್ಟಣಗಳನ್ನು ಕಿತ್ತುಕೊಳ್ಳುವುದು ಮಾಡುತ್ತದೆ.
ಜನರ ತೆರಿಗೆ ಹೊರೆ ತಪ್ಪಿಸಲು ಗ್ರಾಹಕರ ಉತ್ಪನ್ನಗಳು ಹಾಗೂ ದಿನ ಬಳಕೆ ವಸ್ತುಗಳ ಮೇಲಿನ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್ಟ) ಕಡಿಮೆ ಮಾಡಿರುವ ಕೇಂದ್ರ ಸರ್ಕಾರ ಈಗ ವಾಷಿಂಗ್ಮೆಷಿನ್, ಫ್ರಿಜ್ನಂಥ ಗೃಹೋಪಯೋಗಿ ಸಾಧನಗಳ ಸುಂಕ ಕಡಿಮೆ ಮಾಡಲು ಚಿಂತನೆ ನಡೆಸಿದೆ.
ಥೈಲ್ಯಾಂಡ್ ನ ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗುವ ವ್ಯಕ್ತಿಗೆ ಅನನ್ಯ ಮತ್ತು ಆಸಕ್ತಿದಾಯಕ ಷರತ್ತು ವಿಧಿಸಿದ್ದಾನೆ. ಈತನ ಮಗಳನ್ನು ಮದುವೆಯಾದ್ರೆ 2 ಕೋಟಿ ರೂಪಾಯಿ ಹಣವನ್ನು ತಂದೆ ನೀಡಲಿದ್ದಾನಂತೆ. ಥೈಲ್ಯಾಂಡ್ ನ ಶ್ರೀಮಂತ ವ್ಯಕ್ತಿ, ಮಗಳ ಸುರಕ್ಷತೆ ಜವಾಬ್ದಾರಿಯನ್ನು ಹೊತ್ತಿದ್ದಾನೆ. ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಆಪರ್ ನೀಡಿದ್ದಾನೆ. ತಂದೆಯ ಪ್ರಕಟಣೆ ನಂತ್ರ ಅನೇಕ ಯುವಕರು ಮದುವೆಯಾಗಲು ಮುಂದೆ ಬಂದಿದ್ದಾರೆ. ಈವರೆಗೆ 10,000 ಹುಡುಗ್ರು ಮದುವೆಯಾಗಲು ಆಸಕ್ತಿ ತೋರಿಸಿದ್ದಾರಂತೆ. 58 ವರ್ಷದ ತಂದೆ ಮಿಸ್ಟರ್ ರಾತೊಂಗ್ ನನ್ನು…