ಹಣ ಕಾಸು

‘ಎಟಿಎಂ’ಗಳಲ್ಲಿ ‘2000ರೂ’ ನೋಟು ಸಿಗೋದು ಕಡಿಮೆಯಾಗಿದೆ! ಏನಾಗುತ್ತೆ ಅಂತ ನಿಮಗೇನಾದ್ರು ಗೊತ್ತಾ???

1197

ನೋಟ್ ಬ್ಯಾನ್ ಬಳಿಕ ಬಿಡುಗಡೆಯಾದ 2000 ರೂ ಮುಖಬೆಲೆಯ ನೋಟುಗಳನ್ನು ಸ್ವಲ್ಪ ದಿನಗಳಲ್ಲೇ ಬ್ಯಾನ್ ಮಾಡುತ್ತಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದನ್ನು ಆರ್‍ಬಿಐ ಅಲ್ಲಗಳೆದಿತ್ತು. ಆದರೆ ಈದೀಗ ಕೆಲವು ವರದಿಗಳ ಪ್ರಕಾರ, 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಆರ್‍ಬಿಐ ನಿಲ್ಲಿಸಿದೆ ಎಂದು ವರದಿಯಾಗಿದೆ.

ಆರ್‍ಬಿಐ ಮೂಲಗಳನ್ನು ಆಧಾರಿಸಿ ವರದಿ ಪ್ರಕಟವಾಗಿದ್ದು, 2000 ರೂ. ನೋಟು ಬದಲಿಗೆ 200 ರೂ. ನೋಟ್ ಗಳನ್ನು ಬಿಡುಗಡೆ ಮಾಡಲು ಆರ್‍ಬಿಐ ಮುಂದಾಗುತ್ತಿದ್ದು, ಈ ನೋಟುಗಳು ಆಗಸ್ಟ್ ತಿಂಗಳಲ್ಲಿ ಚಲಾವಣೆಗೆ ಬರುವ ಸಾಧ್ಯತೆಯಿದೆ.

ಮೈಸೂರಿನಲ್ಲಿರುವ ಆರ್ ಬಿಐ ಮುದ್ರಣ ಸಂಸ್ಥೆಯಲ್ಲಿ ಈಗಾಗಲೇ 200 ರೂ. ನೋಟುಗಳ ಮುದ್ರಣ ಪ್ರಾರಂಭವಾಗಿದ್ದು, ಮುಂದಿನ ತಿಂಗಳಿನಿಂದ ಚಲಾವಣೆಗೆ ಬರಬಹುದೆಂದು ಮೂಲಗಳು ಹೇಳಿವೆ.

2 ಸಾವಿರ ರೂ. ನೋಟುಗಳ ಚಲಾವಣೆ ಹಂತ ಹಂತವಾಗಿ ಕಡಿಮೆ ಮಾಡುತ್ತಿರುವುದರಿಂದ ಜನರ ವ್ಯವಹಾರದ ಸಮಸ್ಯೆ ಆಗದೇ ಇರಲು ಮತ್ತು ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲು 200 ರೂ. ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಇದಕ್ಕೆ ನಿದರ್ಶನ ಎಂಬಂತೆ, ಎಟಿಎಂಗಳಲ್ಲಿ 2000ರೂ ಮುಖಬೆಲೆಯ ನೋಟುಗಳಿಗಿಂತ ಹೆಚ್ಚಾಗಿ, ನಮಗೆ 500ರೂ ಮುಖಬೆಲೆಯ ನೋಟುಗಳು ಸಿಗುತ್ತಿವೆ. ಈ ಅನುಭವ ನಿಮಗೂ ಆಗಿರಬೇಕು.

ವರದಿಗಳ ಪ್ರಕಾರ ಆರ್‍ಬಿಐ ಈಗ ಹೆಚ್ಚಾಗಿ 500ರೂ ನೋಟುಗಳನ್ನು ಬ್ಯಾಂಕ್ ಗಳಿಗೆ ಪೊರೈಕೆ ಮಾಡುತ್ತಿದ್ದು, 2 ಸಾವಿರ ರೂ. ನೋಟುಗಳನ್ನು ಕೌಂಟರ್ ಗಳಲ್ಲಿ ಮಾತ್ರ ವಿತರಣೆಯಾಗುತ್ತಿವೆ.

ಮೂಲ:

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ