ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ ಉಪೇಂದ್ರ ರಾಜಕೀಯಕ್ಕೆ ಬರುವ ವಿಷಯ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಉಪ್ಪಿ ರಾಜಕೀಯಕ್ಕೆ ಬರಲಿ ಎಂದು ಸ್ವಾಗತಿಸುತ್ತಿದ್ದರೇ, ಇನ್ನೂ ಕೆಲವರು ಇದು ಸಿನಿಮಾದಷ್ಟು ಸುಲಭವಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಉಪ್ಪಿ ರಾಜಕೀಯ ಪ್ರವೇಶದ ಬಗ್ಗೆ ಕೆಲ ಸಿನಿಮಾ ಮತ್ತು ರಾಜಕೀಯದ ಗಣ್ಯರು ಮಾತನಾಡಿದ್ದಾರೆ.

ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು ಇವತ್ತು ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದಾರೆ.
ಇವತ್ತು ರಾಜಕೀಯ ಪಕ್ಷದ ಹೆಸರು, ಸ್ವರೂಪ, ಪ್ರಣಾಳಿಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಶಿವಾನಂದ ಸರ್ಕಲ್ ಬಳಿಯ ಗಾಂಧಿಭವನದಲ್ಲಿ ಪಕ್ಷದ ಹೆಸರು ಘೋಷಣೆ ಮಾಡಿದ್ದಾರೆದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಪಾತ್ರ, ಕಾರ್ಯಕಾರಿ ಸಮಿತಿ ಮತ್ತು ಪಕ್ಷದ ಪ್ರಣಾಳಿಕೆಯನ್ನೂ ಉಪೇಂದ್ರ ಘೋಷಿಸಲಿದ್ದಾರೆ.
ಪಕ್ಷದ ಹೆಸರು:-
ಇತ್ತೀಚೆಗಷ್ಟೇ ಉಪೇಂದ್ರ ಅವರ ಪಕ್ಷದ ಹೆಸರು ಫೊಷಣೆಯಾಗಿದ್ದು, ಅವರ ಪಕ್ಷದ ಹೆಸರು ಪ್ರಜಾಕಾರಣ ಅಲ್ಲ, ಪ್ರಜಾಕೀಯವೂ ಅಲ್ಲ. ಬದಲಾಗಿ `ಉತ್ತಮ ಪ್ರಜಾ ಪಾರ್ಟಿ’ ಎಂದು ತಿಳಿಸಿದ್ದರು. ಸದಸ್ಯತ್ವ ನೋಂದಣಿ ಅರ್ಜಿಯಲ್ಲೂ ಉಪ್ಪಿ ಪಕ್ಷದ ಹೆಸರು ಬಹಿರಂಗವಾಗಿತ್ತು.

ಪ್ರಜಾಕೀಯ ಆಂದೋಲನದಿಂದ ಸುದ್ದಿ ಮಾಡುತ್ತಿರುವ ಉಪ್ಪಿಯ ಹೊಸ ರಾಜಕೀಯ ಪಕ್ಷದ ಹೆಸರು ತೀವ್ರ ಕುತೂಹಲವನ್ನು ಕೆರಳಿಸಿದೆ. ಈಗಾಗಲೇ ಸಿನಿಮಾ ರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ ಮತ್ತು ಬರಹಗಾರರಾಗಿ ಉಪ್ಪಿ ಸೇವೆ ಸಲ್ಲಿದ್ದಾರೆ. ಈಗ ಪ್ರಜಾ ಸೇವೆ ಮಾಡಲು ರಾಜಕೀಯಕ್ಕೆ ಬರುತ್ತಿದ್ದಾರೆ.
ಸಭೆ ನಡೆಸುತ್ತಿರುವ ಉಪೇಂದ್ರ:-
ಈಗಾಗಲೇ ತಮ್ಮ ಆಪ್ತರ ಜೊತೆ ಸರಣಿ ಸಭೆ ನಡೆಸುತ್ತಿರುವ ಉಪೇಂದ್ರ, ತಮ್ಮ ಹೊಸ ಪಕ್ಷದ ಸದಸ್ಯತ್ವ ಪಡೆಯಲು ಬಯಸುವವರಿಗೆ ಅರ್ಜಿ ರೆಡಿ ಮಾಡಿದ್ದಾರೆ. ಶೀಘ್ರವೇ ರಾಜ್ಯದ ವಿವಿಧೆಡೆ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹಿಸಲು ಉಪೇಂದ್ರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಉಪ್ಪಿ ಹೊಸ ಪಕ್ಷಕ್ಕೆ ಸೇರುವವರಿಗೆ ಅರ್ಜಿಗಳನ್ನೂ ಈಗಾಗಲೆ ಸಿದ್ಧಪಡಿಸಿಕೊಳ್ಳಲಾಗಿದೆ. ಉಪ್ಪಿ ತಮ್ಮ ರಾಜಕೀಯ ಪ್ರವೇಶ ಬಗ್ಗೆ ಪ್ರಕಟಿಸುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯೂ ನಡೆದಿತ್ತು. ಉಪ್ಪಿ ರಾಜಕೀಯ ಪ್ರವೇಶದ ಬಗ್ಗೆ ಅದ್ಭುತ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.
ಬದಲಾವಣೆ ತರಲು ಉಪ್ಪಿ:-
ರಾಜಕೀಯದಲ್ಲಿ ಬದಲಾವಣೆ ತರಲು ಜನರ, ಅಭಿಮಾನಿಗಳ ಸಲಹೆ ಸೂಚನೆಗಳನ್ನು ಪಡೆಯಲು ಉಪೇಂದ್ರ ಇ-ಮೇಲ್ ವಿಳಾಸಗಳನ್ನೂ ಕೊಟ್ಟಿದ್ದರು. ಅದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಇ-ಮೇಲ್‌ಗಳು ಹರಿದುಬಂದಿದ್ದವು.

ನಾವು ಕಟ್ಟುವ ತೆರಿಗೆ ಹಣವನ್ನು ಪ್ರಜಾಪ್ರತಿನಿಧಿಗಳು ಸಮರ್ಥವಾಗಿ ಬಳಕೆ ಮಾಡಬೇಕು. ಅಂತಹವನ್ನು ನಾವು ಆಯ್ಕೆ ಮಾಡಬೇಕಾಗಿದೆ ಎಂದಿದ್ದರು ಉಪ್ಪಿ. ಸ್ವಚ್ಛಭಾರತದ ತರಹ ತಳಮಟ್ಟದಿಂದ ಈ ಕಾರ್ಯ ಆರಂಭವಾಗಬೇಕು ಎಂದಿರುವ ಉಪೇಂದ್ರ ತಮ್ಮ ಪಕ್ಷಕ್ಕೆ ಸೇರುವ ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2018ನೇ ಸಾಲಿನ ಬಜೆಟ್’ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.ಅಬಕಾರಿ ಸುಂಕದ ಏರಿಕೆಯ ಕಾರಂ ಈ ಬಜೆಟ್’ನಲ್ಲಿ ಆಮದುಗೊಂಡಿರುವ ಉತ್ಪನ್ನಗಳ ಮೇಲೆ ಬೆಲೆ ಏರಿಕೆಯಾಗಲಿದ್ದು, ಮತ್ತಷ್ಟು ಹಲವು ಉತ್ಪನ್ನಗಳ ಮೇಲಿನ ಬೆಲೆ ಇಳಿಕೆಯಾಗಲಿದೆ.
ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಬೇರೆ ದಾರಿ ಇದೆ ಎಂದು ನಮ್ಮ ಪುರಾಣದಲ್ಲಿ ತಿಳಿಸಲಾಗಿದೆ. ಆದರೆ ಅದು ಎಲ್ಲಿದೆ? ಹೇಗಿದೆ ಅನ್ನೋದು ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಂದು ನಾವು ನಿಮಗೊಂದು ರಸ್ತೆಯ ಬಗ್ಗೆ ಹೇಳುತ್ತೇವೆ. ಅದರ ವಿಶೇಷತೆ ಬಗ್ಗೆ ನೀವು ತಿಳಿದುಕೊಂಡರೆ ಇದೇ ಸ್ವರ್ಗಕ್ಕೆ ಹೋಗುವ ರಸ್ತೆ ಎನ್ನುವಿರಿ…!
ಇಂದು ಬುಧವಾರ, 28/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಚೀನದ ಜಿಯಾಂಗ್ಸಿ ಪ್ರಾಂತ್ಯದಲ್ಲಿನ ಗ್ವಾಂಗ್ಝೋ ನಗರ ಡೈನೋಸಾರ್ಗಳ ತವರು ಎಂದೇ ಖ್ಯಾತವಾಗಿದ್ದು ಈಚೆಗೆ ಇಲ್ಲಿ ಈಚೆಗೆ ಡೈನೋಸಾರ್ಗಳ ಪಳೆಯುಳಿಕೆ ರೂಪದಲ್ಲಿರುವ ಸುಮಾರು 30 ಮೊಟ್ಟೆಗಳು ಪತ್ತೆಯಾಗಿವೆ. ಪರಿಣತರು ಈ ಮೊಟ್ಟೆಗಳು ಸುಮಾರು 130 ದಶಲಕ್ಷ ವರ್ಷಗಳಷ್ಟು ಹಿಂದಿನವು ಎಂದು ಅಂದಾಜಿಸಿದ್ದಾರೆ.
17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ದಿನಗಳು ಕಳೆದಂತೆ ಬಿಸಿಲು ಜಾಸ್ತಿ ಆಗುತ್ತಾ ಹೋಗುತ್ತಿದೆ. ಇದರಿಂದ ಕೆಲವರಿಗೆ ದೇಹ ತುಂಬಾ ಹಿಟ್ ಆಗುತ್ತದೆ. ಈ ಸಮಯದಲ್ಲಿ ಖಾರದ ಪದಾರ್ಥಗಳು ಸೇವಿಸಿದರೆ ಹಾಗೂ ಉಷ್ಣತೆಯನ್ನು ಹೆಚ್ಚಿಸುವ ಪದಾರ್ಥಗಳನ್ನು ತಿಂದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ ಅಲ್ಲದೆ ಇದರಿಂದ ನಮ್ಮ ದೇಹ ಅನಾರೋಗ್ಯ ಸ್ಥಿತಿಗೆ ಕೊಂಡೈಯುತ್ತದೆ ಉರಿಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊಬ್ಬೆ ಏಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದನ್ನು ಕಾಪಾಡಿಕೊಳ್ಳಲು ಸುಲಭ ಉಪಾಯ ಏನೆಂದರೆ ನಾವು ದೇಹದ…