ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪ್ಪಿನ ಕಾಯಿ ಎಂದರೆ ಸಾಕು ಬಾಯಲ್ಲಿ ನೀರೂರಿ ಬಿಡುತ್ತೆ ,ಅದರಲ್ಲೂ ಉಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು , ಊಟಕ್ಕೆ ತಕ್ಕ ಉಪ್ಪಿನಕಾಯಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಯಾವುದೇ ಸಮಾರಂಭ ಔತಣಕೂಟದ ಎಲೆಯಲ್ಲಿ ಊಟಕ್ಕೆ ಉಪ್ಪಿನ ಕಾಯಿ ಇಲ್ಲ ಅಂದ್ರೆ ಅ ಭೋಜನ ಅಸಂಪೂರ್ಣ ಎನ್ನಿಸುತ್ತದೆ.

ಉಪ್ಪಿನಕಾಯಿಯಲ್ಲಿ ಹಲವು ಬಗೆಗಳಿವೆ:-
ಮಾವಿನಕಾಯಿ, ಶುಂಠಿ, ನೆಲ್ಲಿಕಾಯಿ, ನಿಂಬೆಕಾಯಿ, ಎರಳಿಕಾಯಿ, ಬೆಳ್ಳುಳ್ಳಿ, ಹಾಗಲಕಾಯಿ, ಟೊಮೊಟೊ, ಮುಂತಾದವುಗಳಿಂದ ತಯಾರಿಸುವ ಉಪ್ಪಿನಕಾಯಿ ರುಚಿ ಅನುಭವಿಸಿದವರಿಗಷ್ಟೆ ತಿಳಿಯುತ್ತದೆ. ಯಾವುದೇ ಉಪ್ಪಿನಕಾಯಿ ತಿಂದರೂ ಪರವಾಗಿಲ್ಲ. ಆದರೆ ಹಿತಮಿತವಾಗಿರಬೇಕು. ಅತಿಯಾಗಿ ತಿಂದ್ರೆ ಆರೋಗ್ಯಕ್ಕೆ ಹಾನಿಯುಂಟಾಗಲಿದೆ.

ಭಾರತೀಯರು ಉಪ್ಪಿನಕಾಯಿ ಪ್ರಿಯರು:-
ದೇಶದ ಎಲ್ಲಾ ಭಾಗಗಳಲ್ಲೂ ಬಗೆಬಗೆಯ ಉಪ್ಪಿನಕಾಯಿಗಳು ಬಳಕೆಯಲ್ಲಿವೆ. ಅವರವರ ರುಚಿಗೆ ತಕ್ಕಂತೆ ತಯಾರಾಗುತ್ತವೆ. ಊಟಕ್ಕೆ ಮಾತ್ರ ಉಪ್ಪಿನಕಾಯಿ ಬಳಸುವುದಷ್ಟೆ ಅಲ್ಲ. ಯಾವುದೇ ತಿಂಡಿ ಜತೆಯಲ್ಲೂ ಬಳಸಬಹುದಾಗಿದೆ. ಇಡ್ಲಿ, ರೊಟ್ಟಿ, ದೋಸೆ, ಮುಂತಾದ ತಿಂಡಿಗಳ ಜತೆಯಲ್ಲೂ ತಿನ್ನಬಹುದು. ಎಷ್ಟೋ ಬಾರಿ ಚಟ್ನಿ ಬದಲಿಗೆ ಉಪ್ಪಿನಕಾಯಿ ತಿಂದರೆ ಒಳ್ಳೆಯದು. ಅದಕ್ಕಿಂತ ಹೆಚ್ಚು ತಿಂದರೆ ಅನಾಹುತಗಳಿಗೆ ಆಹ್ವಾನ ನೀಡಿದಂತೆಯೇ.

ಉಪ್ಪಿನಕಾಯಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಉಪ್ಪು, ಮಸಾಲೆಗಳಿರುತ್ತವೆ. ಉಪ್ಪಿನಕಾಯಿ ತಯಾರಿಸುವಾಗ ಅದು ಬಹಳ ದಿನ ಕೆಡದಂತಿರಲು ಹೆಚ್ಚಿನ ಪ್ರಮಣದಲ್ಲಿ ಎಣ್ಣೆ ಬಳಸುವುದುಂಟು. ಉಪ್ಪಿನಕಾಯಿ ಹೋಳುಗಳು ಎಣ್ಣೆಯನ್ನು ಹೀರಿಕೊಳ್ಳುತ್ತವೆ. ಪರಿಸ್ಥಿತಿ ಹೀಗಿರುವಾಗ ನಾವೇನಾದರೂ ಅತಿಯಾಗಿ ಉಪ್ಪಿನಕಾಯಿ ಸೇವಿಸಿದರೆ, ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಅಂಶಗಳು ದೇಹವನ್ನು ಸೇರಿ ಹೃದಯ ಮತ್ತು ರಕ್ತನಾಳಗಳ ಮೇಲಿನ ಒತ್ತಡ ಹೆಚ್ಚಾಗಲು ಕಾರಣವಾಗುತ್ತವೆ. ಉಪ್ಪಿನಕಾಯಿಯಲ್ಲಿ ಉಪ್ಪಿನಾಂಶವೂ ಅಧಿಕವಾಗಿರುತ್ತದೆ. ಇದೂ ಕೂಡ ಹೃದಯದೊತ್ತಡಕ್ಕೆ ಕಾರಣವಾಗುತ್ತದೆ.

ಹೆಚ್ಚು ಉಪ್ಪು ದೇಹಕ್ಕೆ ಸೇರಿದಲ್ಲಿ ಉರಿಯೂತ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳಲು ಆಸ್ಪದವಾಗಿ ಹಲವು ತೊಂದರೆಗಳಿಗೀಡು ಮಾಡುತ್ತದೆ. ಹೃದಯ ಸಂಬಂಧಿ ಖಾಯಿಲೆ ಗಳಿದ್ದವರು, ಉಪ್ಪಿನಕಾಯಿ ಸೇವನೆ ಕುರಿತು ಎಚ್ಚರದಿಂದಿರಬೇಕು. ಹೃದಯದ ಒತ್ತಡದ ಸಮಸ್ಯೆಗಳಿರುವವರು ಇದರ ಬಳಕೆಯಿಂದ ದೂರ ಉಳಿದರೂ ಒಳ್ಳೆಯ ದಾಗುತ್ತದೆ. ಉಪ್ಪಿನಕಾಯಿಯಲ್ಲಿರುವ ಸೋಡಿಯಂ ಲವಣ, ಹೊಟ್ಟೆಯುಬ್ಬರಿಕೆಗೂ ದಾರಿ ಮಾಡಿಕೊಡುತ್ತದೆ. ಈ ಲವಣಾಂಶದಿಂದ ಹೊಟ್ಟೆಯಲ್ಲಿ ನೀರು ಉಳಿದು ಕೊಳ್ಳಲು ಸಾಧ್ಯವಾಗಿ ಕೆಲವು ಆಮ್ಲೀಯ ವಾಯುಗಳು ಉತ್ಪತ್ತಿಯಾಗುತ್ತವೆ.

ಉಪ್ಪಿನಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಮೂತ್ರಪಿಂಡಗಳ ಕಾರ್ಯದ ಮೇಲೂ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಉಪ್ಪಿನ ಕಾಯಿಯಲ್ಲಿರುವ ಕೆಲವು ಲವಣಗಳು ಮೂತ್ರಪಿಂಡಗಳ ಕೆಲಸ ಹೆಚ್ಚುವಂತೆ ಮಾಡುವುದರಿಂದ ಅಡ್ಡ ಪರಿಣಾಮಗಳಾಗುತ್ತವೆ. ಆದ್ದರಿಂದ ಉಪ್ಪಿನಕಾಯಿಯನ್ನು ಮಿತವಾಗಿ ಸೇವಿಸಿ, ಆರೋಗ್ಯದ ಸುಧಾರಣೆಗೆ ಗಮನ ಹರಿಸಿ. ಊಟಕ್ಕೆ ತಕ್ಕ ಉಪ್ಪಿನಕಾಯಿಯಷ್ಟೆ ಇರಲಿ.ಹಾಗಿದ್ದಾಗ ಊಟದ ರುಚಿ, ದೈಹಿಕ ಆರೋಗ್ಯವೂ ಚೆಂದವಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪೇಟಿಮ್ ಬಂದ ಮೇಲೆ ಬೇರೆ ಬೇರೆ ಡಿಜಿಟಲ್ ಪೇಮೆಂಟ್ ಆಪ್ ಗಳು ಪ್ರಾರಂಭಿಸಿದವು. ಸಾಮಾಜಿಕ ಜಾಲತಾಣದ ದೈತ್ಯ ವಾಟ್ಸಪ್ ಸದ್ಯದಲ್ಲೇ ಡಿಜಿಟಲ್ ಪೇಮೆಂಟ್ ಶುರು ಮಾಡಲು ಹೊರಟಿದೆ. ಪ್ರಪಂಚದಲ್ಲಿ ಭಾರತದಲ್ಲೇ ಈ ರೀತಿಯ ಮೊದಲ ಹೆಜ್ಜೆ ಇಡುತ್ತಿರುವುದು.
ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.
ನಿಮ್ಮ ಗುರಿಯನ್ನು ತಲುಪಲು ಶ್ರಮ ಪಡಬೇಕು. ಶ್ರಮ ಪಟ್ಟಾಗಲೇ ಅದಕ್ಕೆ ಪ್ರತಿಫಲ ಸಿಗುವುದು. ಗಂಡ ಇಲ್ಲದ ಈ 22 ವರ್ಷದ ಹೆಣ್ಣು ತಾನು ಆಟೋ ಓಡಿಸಿ ತನ್ನ ಚಿಕ್ಕ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದಾಳೆ .
ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ಸಿನಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 25 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಕೆಜಿಎಫ್ ಚಿತ್ರ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಚಿತ್ರ…
ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ.. ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿಕೊಡಿ. ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಆಧಾರ್ ಅಪ್ ಡೇಟ್ ಪಾರಂ ಅಥವಾ ತಿದ್ದುಪಡಿ…
ಶುಕ್ರವಾರ, 06/04/2018 ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ಇವರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಸೂರ್ಯೋದಯ : 06:16 ಸೂರ್ಯಾಸ್ತ : 18:28 ಪಕ್ಷ : ಕೃಷ್ಣ ಪಕ್ಷ ತಿಥಿ : ಷಷ್ಠೀ ನಕ್ಷತ್ರ : ಜ್ಯೆಷ್ಟ್ಯ ಯೋಗ : ವರಿಯಾನ್ ಪ್ರಥಮ ಕರಣ :…