ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪ್ಪು ತುಂಬಾನೇ ಅಗ್ಗದ ವಸ್ತು ಆದ್ರೂ ಉಪ್ಪಿಗಿಂತ ರುಚಿಯಿಲ್ಲ ಅನ್ನೋದು ತುಂಬಾ ಸತ್ಯ . ಈಗ ನಾವು ಇಲ್ಲಿ ಹೇಳೋ ವಿಷಯಗಳನ್ನ ಕೇಳಿದರೆ ನಿಮಗೆ ಉಪ್ಪನ್ನ ಎಷ್ಟು ಹೊಗಳಿದ್ರೂ ಸಾಲ್ದು ಅನ್ನಿಸೋದ್ರಲ್ಲಿ ಆಶ್ಚರ್ಯ ಇಲ್ಲ.

1.ನಿಮ್ಮ ಕರ್ಟನ್ ಮೇಲೆ ಯಾವತ್ತೂ ಫಂಗಸ್ ಕೂರ್ದೆ ಇರಕ್ಕೆ ಕರ್ಟನ್ ತಂದ ತಕ್ಷಣ ಉಪ್ಪು ನೀರಲ್ಲಿ ಒಗೆದು ನಂತರ ಉಪ್ಯೋಗ್ಸಿ.

2.ಸೊಳ್ಳೆ ಕಚ್ಚಿದ ಜಾಗದಲ್ಲಿ ತುರಿಕೆ ಆಗ್ಬಾರ್ದು ಅಂದ್ರೆ, ಒದ್ದೆ ಬೆರಳನ್ನ ಉಪ್ಪಿಗೆ ಹಚ್ಕೊಂಡು, ತುರಿಕೆ ಆಗ್ತಿರೋ ಜಾಗದಲ್ಲಿ ಹಚ್ಚಿ.
3.ತಾಮ್ರದ ಪಾತ್ರೆ ಫಳಫಳ ಹೊಳೆಯೋಹಾಗೆ ಮಾಡೋಕೆ ಸ್ವಲ್ಪ ವಿನೆಗರ್, ಮೈದಾ ಹಿಟ್ಟು ಹಾಗು ನಿಂಬೆರಸದ ಜೊತೆ ಉಪ್ಪು ಮಿಕ್ಸ್ ಮಾಡಿ ಪಾತ್ರೆ ಉಜ್ಜಿ.

4.ಬಾಣಲೀಲಿ ನೀವು ಹುರಿಯೋ ಪದಾರ್ಥದಿಂದ ಎಣ್ಣೆ ಸಿಡಿಯದ ಹಾಗೆ ನೋಡಿಕೊಳ್ಳೋಕೆ ಮೊದಲು ಒಂದೆರಡು ಚಿಟಿಕೆ ಉಪ್ಪು ಹಾಕಿಡಿ.
5.ಕ್ಯಾಂಡಲ್ಲಿಂದ ಮೇಣ ಸೋರ್ಬಾರ್ದು ಅಂದ್ರೆ, ಕ್ಯಾಂಡಲ್ ಹಚ್ಚೋಕೆ ಮುಂಚೆ ಸಾಕಷ್ಟು ಹೊತ್ತು ಉಪ್ಪು ನೀರಲ್ಲಿ ಅದನ್ನ ನೆನೆಸಿಟ್ಟು ಒಣಗಿಸಿ ನಂತರ ಬಳಸಿ.

6.ನಿಮ್ಮ ಶೂ ವಾಸನೆ ಬರ್ತಿದ್ರೆ, ಒಂದು ಸಣ್ಣ ಬಟ್ಟೇಲಿ ಉಪ್ಪು ತುಂಬಿ ವಾಸನೆ ಇರೋ ಶೂನಲ್ಲಿಟ್ಟು ಸ್ವಲ್ಪ ಹೊತ್ತಿನ ನಂತರ ತೆಗೀರಿ, ವಾಸನೆ ಹೋಗಿರುತ್ತೆ!
7.ನಿಮ್ಮ ಮನೆಯಲ್ಲಿ ಇರುವೆ ಕಾಟ ಜಾಸ್ತೀನ? ಹಾಗಿದ್ದರೆ ಒಂದು ಭಾಗ ಉಪ್ಪಿಗೆ ನಾಲ್ಕು ಭಾಗ ನೀರನ್ನ ಹಾಕಿ ಮಿಕ್ಸ್ ಮಾಡಿ ಅದನ್ನ ಇರುವೆ ಇರೋ ಜಾಗದಲ್ಲಿ ಚಿಮುಕಿಸಿ.

8.ನಿಮ್ಮ ಮಕ್ಕಳಿಗೆ ಪೈಂಟಿಂಗ್ ಮಾಡೋವಾಗ ಅದು ಬಾಯಿಗೆ ಹೋಗಿ ಏನಾದ್ರೂ ಆಗ್ಬೋದು ಅನ್ನೋ ಭಯ ಇದ್ರೆ, ಒಂದು ಬಟ್ಟಲಲ್ಲಿ ಮೈದಾ ಮತ್ತು ಉಪ್ಪು ನೀರು ಹಾಕಿ ಅದಕ್ಕೆ ಫುಡ್ ಕಲರ್ ಬೆರೆಸಿ ಕೊಡಿ. ಮನೇಲೇ ಪೈಂಟ್ ರೆಡಿ!
9.ಅಪಲ್ ತರದ ಹಣ್ಣು ಮತ್ತು ತರಕಾರಿ ಕತ್ತರಿಸಿದಾಗ ಕಪ್ಪಾಗದ ಹಾಗೆ ನೋಡಿಕೊಳ್ಳೋಕೆ ಅದನ್ನ ಕತ್ತರಿಸಿದ ನಂತರ ಉಪ್ಪು ನೀರಲ್ಲಿ ನೆನೆಸಿಡಿ.

10.ನಿಮ್ಮ ಕೈಯಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿ ವಾಸನೆ ಇದ್ರೆ, ಉಪ್ಪಿಂದ ಕೈ ತೊಳ್ಕೊಳಿ. ವಾಸ್ನೆ ಓಡಿ ಹೋಗತ್ತೆ!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿನನಿತ್ಯ ಅಡುಗೆ ಮಾಡುವುದು ಸಾಮಾನ್ಯ. ಅದರಲ್ಲೂ ನಾವು ತಿನ್ನುವ ಪ್ರಮುಖ ಅಡುಗೆ ಪದಾರ್ತವೆಂದರೇ ಅಕ್ಕಿ. ನಮ್ಮ ದೇಹದ ಪೌಷ್ಟಿಕತೆಗೆ ಬೇಕಾದ ಅಕ್ಕಿಯನ್ನು ಅನ್ನ ಮಾಡುವಾಗ ಅದನ್ನು ಚೆನ್ನಾಗಿ ತೊಳೆದು ಬಳಸುತ್ತೇವೆ. ಆ ನೀರನ್ನು ಚೆಲ್ಲುತ್ತೇವೆ. ಆದರೆ ಚೆಲ್ಲುವ ಮುನ್ನ ಈ ಸುದ್ದಿಯತ್ತ ಗಮನಿಸಿ. ನಮ್ಮ ಸಧೃಡ ಕೂದಲಿಗೆ ವಿಧ-ವಿಧವಾದ ಎಣ್ಣೆ, ಶ್ಯಾಂಪೂ, ಹೇರ್ ಪ್ಯಾಕ್ ಬಳಸುತ್ತೇವೆ. ಅದರಲ್ಲೂ ಕೂದಲು ಉದುರುವ ಸಮಸ್ಯೆ ಇದ್ದರಂತೂ ಎಲ್ಲರ ಸಲಹೆ ಪಡೆದು ದಿನಕ್ಕೊಂದು ಮನೆ ಮದ್ದು ಮಾಡುತ್ತೇವೆ. ಆದರೆ ಇಷ್ಟೆಲ್ಲ ಮಾಡುವ…
ಕಣ್ಣೀರು ಹೆಣ್ಮಕ್ಕಳ ಅಸ್ತ್ರ ಅಂತಾರಲ್ಲಾ! ವಿಷ್ಯ ಏನಪ್ಪಾ ಅಂದ್ರೆ ಹೆಂಗಸ್ರು ಒಂದ್ ವರ್ಷಕ್ಕೆ ಸರಾಸರಿ 30 ರಿಂದ 64 ಸಲ ಕಣ್ಣೀರಿಡ್ತಾರಂತೆ. ಆದ್ರೆ ಗಂಡಸ್ರು 6 ರಿಂದ 17 ಸಲ ಅತ್ರೆ ಹೆಚ್ಚೆಚ್ಚು.
ಈಗ ಕರ್ನಾಟಕ ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಕೆಜಿಎಫ್ ಸಿನಿಮಾದ್ದೇ ಸೌಂಡ್. ಇದೀಗ ಮುಂಬೈನಲ್ಲೂ ರಾಕಿ ಭಾಯ್ ಹವಾ ಶುರುವಾಗಿದೆ. ಕೆಜಿಎಫ್ ಹಿಂದಿ ಅವತರಣಿಕೆ ಸಿನಿಮಾ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಹಿಂದಿ ಪ್ರಮೋಷನ್ ಕೂಡ ಭರದಿಂದ ಸಾಗುತ್ತಿದ್ದು, ಮುಂಬೈನ ಪ್ರಮುಖ ಸ್ಥಳಗಳಲ್ಲಿ ಯಶ್, ಪೋಸ್ಟರ್ಸ್ ಗಳು ರಾರಾಜಿಸುತ್ತಿವೆ. ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರಕ್ಕಾಗಿ ರಿಕ್ರಿಯೇಟ್…
ಕರ್ನಾಟಕದ ಮಾಜಿ ಮುಖ್ಯಮಂತ್ರಿ, 80 ವರ್ಷದ ಧರಂಸಿಂಗ್’ರವರು ಉಸಿರಾಟದ ತೊಂದರೆ, ಅಸ್ತಮಾ, ಮಧುಮೇಹ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ
ಇನ್ನೇನು ಸ್ವಲ್ಪ ದಿನಗಳಲ್ಲೇ ತನ್ನ ಬಹುಕಾಲದ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಆ್ಯಕ್ಷನ್ ಪ್ರಿನ್ಸ್, ಸಿನಿಮಾದಲ್ಲಿ ವಿಲನ್ ಗಳ ಎದುರು ಖಡಕ್ ಆಗಿಯೇ ಡೈಲಾಗ್ ಹೇಳುವ ನಟ ಈಗ ವಾಸ್ತು ದೋಷಕ್ಕೆ ಹೆದರಿ ಮನೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಈಗ ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತ್ತಿದೆ. ಡಿಸೆಂಬರ್ 9ರ ನಿಶ್ಚಿತಾರ್ಥದ ನಂತರ ಧ್ರುವ ತಮ್ಮ ಮನೆ ಶಿಫ್ಟ್ ಮಾಡಲಿದ್ದಾರೆ ಎನ್ನಲಾಗಿದ್ದು, ಈಗ ನಟ ಧ್ರುವ ಸರ್ಜಾ ಬನಶಂಕರಿಯ ಕೆ.ಆರ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ವಾಸ್ತು ದೋಷದಿಂದ ಬನಶಂಕರಿಯ…
ಕಡಲೆಯಿಂದ ನಾವು ಅನೇಕ ಅಡುಗೆಗಳನ್ನು ಮಾಡುತ್ತೇವೆ. ಇದರಲ್ಲಿ ಪಲ್ಯ ಮಾಡುತ್ತೇವೆ. ಕಾಳಿನಂತೆ ಬೇಯಿಸಿಕೊಂಡು ತಿನ್ನುತ್ತೇವೆ. ಹಲವು ಖಾದ್ಯಗಳನ್ನು ಮಾಡುತ್ತಾರೆ. ಅದೆಷ್ಟೋ ಆಹಾರದಲ್ಲಿ ಕಡಲೆ ಬಳಸುತ್ತಾರೆ. ಕಡಲೆ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ ಎಂಬುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತು. ದುಬಾರಿ ಬೆಲೆಯ ಬಾದಾಮಿ, ಒಣ ಹಣ್ಣುಗಳಿಗಿಂತ ಇದು ಬಹಳ ಒಳ್ಳೆಯದು. ನೆನಸಿದ ಕಡಲೆ ಕಾಳಿನಲ್ಲಿ ಪ್ರೋಟೀನ್, ಫೈಬರ್, ಮಿನರಲ್ ಹಾಗೂ ವಿಟಮಿನ್ ಬಹಳ ಪ್ರಮಾಣದಲ್ಲಿರುತ್ತದೆ. ನೆನಸಿದ ಕಡಲೆಕಾಳು ಸೇವನೆ ಮಾಡುವುದರಿಂದ ಅನೇಕ ರೋಗಗಳು ದೂರವಾಗುವ ಜೊತೆಗೆ ದೇಹಕ್ಕೆ ಹೆಚ್ಚಿನ…