ಸುದ್ದಿ

ಉಡುಪಿಯ ಅರಬ್ಬೀ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ…..ಕಾರಣ?

206

ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ.

ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ ಬಳಿಯ ಕಡಲು ಸಂಪೂರ್ಣ ಕದಡಿಹೋಗಿದೆ.

ನದಿ ನೀರು ಸಮುದ್ರ ಸೇರುವ ಉಡುಪಿಯ ಪಡುಕೆರೆ, ಕೋಡಿ ಬೆಂಗ್ರೆ, ಗಂಗೊಳ್ಳಿ, ಪಡುಬಿದ್ರೆಯಲ್ಲಿ ಈ ದೃಶ್ಯ ಈಗ ಸಾಮಾನ್ಯವಾಗಿದೆ. ನಿಜವಾಗಿ ಸಮುದ್ರದ ತೀವ್ರತೆ ಮತ್ತು ಭೋರ್ಗರೆತ ಕಣ್ತುಂಬಿಕೊಳ್ಳಬೇಕಾದರೆ ಈಗ ಅರಬ್ಬೀ ಸಮುದ್ರವನ್ನು ನೋಡಬೇಕು.

ಮಾಮೂಲಿಯಾಗಿ ಸಮುದ್ರದ ನೀರು ತಿಳಿಯಾಗಿರುತ್ತದೆ. ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಪಶ್ಚಿಮ ಘಟ್ಟದ ತಪ್ಪಲು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುಗಿರುವುದಿಂದ ಭಾರೀ ಪ್ರಮಾಣದ ನೀರು ಸಮುದ್ರದತ್ತ ಧುಮ್ಮುಕ್ಕುತ್ತಿದೆ. ಹೀಗಾಗಿ ಸಮುದ್ರ ಪುಡಿಯಾಗಿದೆ. ಹರಿಯುವ ನದಿ ಖನಿಜ, ಲವಣಾಂಶ, ಕೊಳೆತ ತರಗೆಲೆ, ಮರ, ಮಣ್ಣು ಎಲ್ಲವನ್ನೂ ತಂದಿದೆ. ಸಮುದ್ರದ ಉಪ್ಪು ನೀರಿನ ಜೊತೆ ನದಿಯ ಕೆನ್ನೀರು ಸೇರಿ ಕಡಲು ಬಣ್ಣ ಬದಲಿಸಿದೆ.

ನಿಜಾರ್ಥದ ಸಮುದ್ರ ನೋಡುವ ಮನಸ್ಸಿದ್ದವರು ಸಮುದ್ರದ ವೈಭವ ನೋಡುವ ಆಸೆಯಿರುವವರು ಈಗ ಉಡುಪಿಗೆ ಬರಬೇಕು. ಸಮುದ್ರಕ್ಕಿಳಿದು ಆಡುವ ಅವಕಾಶ ಇಲ್ಲದಿದ್ದರೂ ಕಡಲಿನ ಅಬ್ಬರವನ್ನು ಕಣ್ತುಂಬಿಕೊಳ್ಳಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಒಂದು ತುಂಡು ಬೆಲ್ಲ ತಿಂದ್ರೆ ಸಾಕು ಈ ಎಲ್ಲಾ ಕಾಯಿಲೆಗಳು ಮಂಗಮಾಯ !

    ಒಂದೊಂದು ಬಗೆಯ ಆಹಾರಗಳು ಒಂದೊಂದು ಸೀಸನ್ ಗೆ ಸೀಮಿತವಾಗಿರುತ್ತವೆ. ಕೆಲವೊಂದು ಆಹಾರ ಪದಾರ್ಥಗಳು ಒಂದು ಕಾಲಮಾನದಲ್ಲಿ ಬೆಳೆಯಲ್ಪಟ್ಟು ಜನರಿಗೆ ಸಹಾಯಕವಾದರೆ, ಕೆಲವೊಂದು ಪದಾರ್ಥಗಳು ನಿರ್ದಿಷ್ಟ ಕಾಲಮಾನದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಎಂಬ ಭಾವನೆ ಮನೆ ಮಾಡಿದೆ. ನಾವು ಇತ್ತೀಚಿನ ದಿನಗಳಲ್ಲಿ ಸೀಸನಲ್ ಫ್ರೋಟ್ ಹಾಗೂ ತರಕಾರಿಗಳಿಗೆ ಮಾರು ಹೋಗುತ್ತೇವೆ. ಅಂದರೇ ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣು ಗಳನ್ನು ಬಿರು ಬಿಸಿಲಿನ ಬೇಸಿಗೆಯ ಕಾಲದಲ್ಲಿ ಸೇವಿಸುತ್ತವೆ. ಅದಕ್ಕೆ ಕಾರಣ ಇದರಲ್ಲಿ ಹೆಚ್ಚಿನ ನೀರಿನ ಮಟ್ಟವಿದ್ದು ಅದು ನಮ್ಮ ದೇಹವನ್ನು…

  • ವಿಚಿತ್ರ ಆದರೂ ಸತ್ಯ

    ಈ ಕೋತಿ ಮಾಡಿದ ವಿಚಿತ್ರ ಚೇಷ್ಟೆಯ ಬೆಲೆ ಲೀಟರ್‌ಗೆ 70 ರೂ..!ಮಂಗಗಳು ಹೀಗೂ ಮಾಡ್ತವೆ…

    ಕೋತಿ ಚೇಷ್ಟೆ ಬಗ್ಗೆ ನಿಮಗೆ ಹೆಚ್ಚು ಹೇಳಬೇಕಿಲ್ಲ. ಅದು ಚೇಷ್ಟೆಯಿಂದಲೇ ಗುರುತಿಸಿಕೊಳ್ಳುವಂತಹ ಪ್ರಾಣಿ. ತನ್ನ ಆಹಾರಕ್ಕಾಗಿ ಅಂಗಡಿಗಳಿಗೆ ನುಗ್ಗುವುದು, ಸಿಕ್ಕ ಸಿಕ್ಕ ಜನರ ಕೈಲಿರುವ ಆಹಾರ ಪೊಟ್ಟಣಗಳನ್ನು ಕಿತ್ತುಕೊಳ್ಳುವುದು ಮಾಡುತ್ತದೆ.

  • ಸುದ್ದಿ

    ಫಿಕ್ಸ್ ಆಯ್ತು ಲೋಕಸಭಾ ಎಲೆಕ್ಷನ್ ದಿನಾಂಕ?ಕರ್ನಾಟಕದಲ್ಲಿ ಯಾವಾಗ ಗೊತ್ತಾ ಎಲೆಕ್ಷನ್?ಈ ಸುದ್ದಿ ನೋಡಿ

    2019 ರ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಮಾ.10 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದಿನಾಂಕ ಘೋಷಿಸಿದ್ದು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ದೆಹಲಿ ವಿಜ್ಞನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, 2019 ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ. ದೇಶಾದ್ಯಂತ ಒಟ್ಟಾರೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ.23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ಏ. ರಂದು 11 ಮೊದಲ ಹಂತದ ಮತದಾನ…

  • ಸುದ್ದಿ

    ಎಚ್ಚರಿಕೆ ಕಾವೇರಿ ನೀರು ಬಿಟ್ಟರೆ ಜನ ದಂಗೆ ಏಳ್ತಾರೆ: ಮಾದೇಗೌಡ ……!

    ತಮಿಳುನಾಡಿಗೆ ನೀರು ಬಿಡುವಂತೆ ಕೇಂದ್ರ ಜಲ ಆಯೋಗ ಆದೇಶಿಸಿರುವ ಬೆನ್ನಲ್ಲೇ, ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಆದೇಶ ಹೊರಬೀಳುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ರೈತರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ರೈತಸಂಘ, ಕನ್ನಡಸೇನೆ ಕಾರ್ಯಕರ್ತರು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ನಾಲೆಗಳಿಗೆ ನೀರು ಬಿಡದೆ ಬೆಳೆದ ಬೆಳೆಗಳು ಒಣಗುತ್ತಿವೆ. ಬೆಂಗಳೂರಿಗೆ ಕುಡಿಯುವ ನೀರು ಹರಿಸಲು ಸಹ ಇರುವ ಸಂಗ್ರಹದಲ್ಲಿರುವ ನೀರು ಸಾಲುವುದಿಲ್ಲ. ಪರಿಸ್ಥಿತಿ…

  • ಉಪಯುಕ್ತ ಮಾಹಿತಿ

    ದಯವಿಟ್ಟು ಊಟ ತಿಂದ ತಕ್ಷಣ ಈ 5 ತಪ್ಪುಗಳನ್ನು ಮಾಡಲೇಬೇಡಿ..ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಊಟ ಆದ ತಕ್ಷಣ ಮಲ್ಕೋಳ್ಳೋ ಅಭ್ಯಾಸ ನಮ್ಮಲ್ಲಿ ತುಂಬಾ ಜನ್ರಿಗೆ ಇದ್ದೇ ಇರತ್ತೆ. ಹಾಗಂತ ಇದು ಒಳ್ಳೆ ಅಭ್ಯಾಸ ಅನ್ಕೊಂಡ್ರಾ? ಖಂಡಿತ ಇಲ್ಲ.ಆರೋಗ್ಯದ ವಿಷ್ಯಕ್ಕೆ ಬಂದಾಗ ಈ ಅಭ್ಯಾಸದ ಜೊತೆಗೆ ಇನ್ನೂ ಹಲವು ವಿಷ್ಯಗಳು ಊಟವಾದ ತಕ್ಷಣ ಮಾಡೋದು ಒಳ್ಳೇದಲ್ಲ .

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಶಿಕ್ಷೆ

    ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೆಜಿಎಫ್ ಟೌನ್, ರಾಬರ್ಟ್ಸನ್ ಪೇಟೆಯ ವಾಸಿ ಉಮೇಶ್ ಬಿನ್ ಪಿ.ರಾಜಾ ಎಂಬುವರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿರುವ ಅರೋಪದ ಮೇಲೆ ಬಂಗಾರಪೇಟೆ ಪೋಲಿಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ವೃತ್ತ ನಿರೀಕ್ಷಕರಾದ ಸುನೀಲ್ ಕುಮಾರ್ ರವರು ತನಿಖೆ ನೆಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಕರಣದ ಸಂಖ್ಯೆ : ಎಸ್.ಸಿ.11/2021ರ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನಿ ರವರು ಆರೋಪ ರುಜುವಾತಾದ ಹಿನ್ನಲೆ ಪೋಕ್ಸೊ…