ದೇಶ-ವಿದೇಶ

ಉಗ್ರ ಸಂಘಟನೆಯ ಮುಕಂಡನನ್ನು ಅಟ್ಟಾಡಿಸಿ ಕೊಂದ ನಮ್ಮ ಹೆಮ್ಮೆಯ ಭಾರತೀಯ ಸೇನೆ

662

ಭಾರತೀಯ ಸೇನೆ ಶನಿವಾರ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‍ ಮುಜಾಹಿದ್ದೀನ್ ಮುಖಂಡ ಸಬ್ಜಾರ್‍ ಅಹ್ಮದ್‍ ಸೇರಿದಂತೆ 7 ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ. ಬುಹ್ರಾನ್‍ ವಾನಿ ನಂತರ ಸಬ್ಜಾರ್ ಅಹ್ಮದ್‍ ಹಿಜ್ಬುಲ್‍ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಎಂದು ಸೇನಾ ಮೂಲಗಳು ಹೇಳಿವೆ.

ಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‍ನ ಮನೆಯೊಂದರಲ್ಲಿ ಸಜ್ಬಾರ್‍ ಅಹ್ಮದ್ ಅಲಿಯಾಸ್‍ ಅಬು ಜರ್ರಾರ್ ಅವಿತಿರುವ ಮಾಹಿತಿ ಪಡೆದ ಸೇನಾ ಪಡೆ ಸುತ್ತುವರಿದಿದೆ. ಸಜ್ಬಾರ್ ಜೊತೆ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಸೇರಿದಂತೆ ಇಬ್ಬರು ಇದ್ದು, ಅವರ ಬಗ್ಗೆ ಸ್ಪಷ್ಟ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸೇನೆ ಸುತ್ತುವರಿದಿರುವುದನ್ನು ಮನಗಂಡ ಸಬ್ಜಾರ್‍ ಮತ್ತು ಸಂಗಡಿಗರು ಗುಂಡಿನ ದಾಳಿ ನಡೆಸಿದ್ದರಿಂದ ಕೆಲವು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಅಂತಿಮವಾಗಿ ಸೇನೆ ಯಶಸ್ಸು ಸಾಧಿಸಿತು.

ಇತ್ತೀಚೆಗಷ್ಟೇ ಶ್ರೀನಗರಕ್ಕೆ ಸಬ್ಜಾರ್ ಬೇಟಿ ನೀಡಿದ್ದು, ಹುರಿಯತ್ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಭಾರೀ ಪ್ರಮಾಣದ ದಾಳಿಗೆ ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ.

ಕಳೆದ ಜುಲೈನಲ್ಲಿ ಬುಹ್ರಾನ್‍ ವಾನಿ ಹತ್ಯೆಯಾದ ನಂತರ ಹಿಜ್ಬುಲ್‍ ಮುಜಾಹಿದ್ದೀನ್ ಸಂಘಟನೆಯ ನೇತೃತ್ವವನ್ನು ಮುಸಾ ವಹಿಸಿಕೊಂಡಿದ್ದ. ಆದರೆ ಮೇ 13ರಂದು ಮುಸಾ ಉಗ್ರರ ಗುಂಪು ನೆರೆದಿದ್ದ. ಇದರಿಂದಾಗಿ ಸಬ್ಜಾರ್ ಸಂಘಟನೆಯ ಸಾರಥ್ಯ ವಹಿಸಿಕೊಂಡಿದ್ದ ಎಂದು ಮೂಲಗಳು ವಿವರಿಸಿವೆ.

ಇದೇ ವೇಳೆ ಶನಿವಾರ ನಡೆದ ಇತರೆ ಕಾರ್ಯಾಚರಣೆಯಲ್ಲಿ 7 ಉಗ್ರರನ್ನು ಹತ್ಯೆ ಮಾಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • govt

    2000 ರೂ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಿದ ರಿಸರ್ವ್ ಬ್ಯಾಂಕ್,..!ಯಾಕೆ ಗೊತ್ತಾ,.??

    ರಿಸರ್ವ್  ಬ್ಯಾಂಕ್  ಆಫ್ ಇಂಡಿಯಾ 2 ಸಾವಿರರೂಪಾಯಿ ಮುಖಬೆಲೆಯ ನೋಟು ಮುದ್ರಣವನ್ನು ಸ್ಥಗಿತಗೊಳಿಸಿದೆ.ಪ್ರಸಕ್ತ ವರ್ಷ ನೋಟು ಮುದ್ರಣಇಲಾಖೆ 2 ಸಾವಿರ ಮುಖಬೆಲೆಯ ಒಂದುನೋಟನ್ನೂ ಮುದ್ರಿಸಿಲ್ಲ ಎಂದು ಆರ್​ಬಿಐಆರ್​ಟಿಐ ಅರ್ಜಿಗೆ ನೀಡಿರುವಉತ್ತರದಲ್ಲಿ ಸ್ಪಷ್ಟಪಡಿಸಿದೆ. ಆದರೆ ಹಾಲಿ ಇರುವ ನೋಟುಗಳ ಚಲಾವಣೆಗೆ ಸಮಸ್ಯೆಯೇನಿಲ್ಲ. ಆರ್​ಬಿಐ ಮಾಹಿತಿ ಪ್ರಕಾರ ನೋಟು ಮುದ್ರಣ ಇಲಾಖೆ 2016-17ನೇ ಹಣಕಾಸು ವರ್ಷದಲ್ಲಿ 2 ಸಾವಿರ ಮುಖಬೆಲೆಯ ಒಟ್ಟು 3,54,29,91,000 ನೋಟುಗಳನ್ನು ಮುದ್ರಣ ಮಾಡಿತ್ತು. 2017-18 ರಲ್ಲಿ 11,15,07,000 ನೋಟು ಹಾಗೂ 2018-19ನೇ ಸಾಲಿನಲ್ಲಿ ಕೇವಲ4,66,90,000 ನೋಟುಗಳನ್ನು…

  • ಸುದ್ದಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ :ಅಂಬರೀಶ್ ನಂತರ ಶಿವಣ್ಣರಿಗೆ ಅಪ್ಪಾಜಿ ಸ್ಥಾನ ಕೊಟ್ಟಿದ್ಯಾಕೆ? ದರ್ಶನ್ ಹೇಳಿದ ಈ ಮಾತುಗಳನ್ನು ಕೇಳಿ,

    ಸ್ಯಾಂಡಲ್ ವುಡ್ ದಿಗ್ಗಜ ನಟರಿಬ್ಬರು (ದರ್ಶನ್ ಮತ್ತು ಶಿವಣ್ಣ) ಒಂದೇ ವೇದಿಕೆಯಲ್ಲಿ ಇಂದು ಸಿನಿಮಾ ಒಂದರ ಮೂಹೂರ್ತದಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಣ್ಣಾವ್ರ ಸಂಬಂಧಿಕರು ಪಾರ್ವತಮ್ಮ ರಾಜಕುಮಾರ್ ಸಹೋದರಿಯ ಮಗ ಆಗಿರುವ ಧ್ರುವನ್ ಅವರ ಚಿತ್ರಕ್ಕೆ  ಕಂಠೀರವ ಸ್ಟುಡಿಯೋದಲ್ಲಿ ಇಂದು ಮುಹೂರ್ತ ನಡೆದಿದ್ದು ಅಲ್ಲಿ ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹಾಗೂ ಡಿ ಬಾಸ್ ದರ್ಶನ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ನೋಡುಗರನ್ನು ಅಚ್ಚರಿ ಪಡುವಂತೆ ಮಾಡಿತು.‌ ಧ್ರುವನ್ ಅವರು‌…

  • ಉಪಯುಕ್ತ ಮಾಹಿತಿ

    ಹದವಾದ ಸಿಹಿ ಪೊಂಗಲ್ ಸಂಕ್ರಾಂತಿ ಹಬ್ಬದ ವಿಶೇಷ ರೆಸಿಪಿ ಹುಗ್ಗಿ ಮಾಡುವ ವಿಧಾನ.

    ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ… ಬೇಕಾಗುವ ಸಾಮಗ್ರಿಗಳು:1. ಹೆಸರುಬೇಳೆ 1 ಕಪ್2. ಅಕ್ಕಿ 1 ಕಪ್3. ಪುಡಿ ಮಾಡಿದ ಬೆಲ್ಲ, ಸಕ್ಕರೆ 1 ಕಪ್4. ಏಲಕ್ಕಿ – 45. ದ್ರಾಕ್ಷಿ , ಗೋಡಂಬಿ 50 ಗ್ರಾಂ6. ತುಪ್ಪ 4 ಚಮಚ ಮಾಡುವ ವಿಧಾನಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು…

  • ಸುದ್ದಿ

    ಕಾಡಂದಿಯ ಹೊಟ್ಟೆಯಲ್ಲಿ ಸಿಕ್ಕ ಈ ವಸ್ತುವಿನಿಂದ ಕೋಟ್ಯಾಧಿಪತಿ ಆದ ರೈತ, ಅದು ಹೇಗೆ?

    ಸಾಮಾನ್ಯವಾಗಿ ರೈತರು ಮನೆಯಲ್ಲೇ ರಾಗಿ, ಭತ್ತ ಹಾಗೆ ಇತರೆ ತರಕಾರಿಗಳನ್ನ ಬೆಳೆಯುತ್ತಾರೆ ಮತ್ತು ಮನೆಗಳಲ್ಲಿ ಕುರಿ ಮತ್ತು ಕೋಳಿಗಳನ್ನ ಸಾಕಿ ಜೀವನವನ್ನ ಮಾಡುತ್ತಾರೆ ಹಾಗೆ ಊರಿನ ಹಬ್ಬದ ಇದೆ ಕೋಳಿ ಮತ್ತು ಕುರಿಯನ್ನ ಕಡಿದು ಅಡುಗೆಯನ್ನ ಮಾಡಿ ಊಟ ಮಾಡುತ್ತಾರೆ. ಇನ್ನು ಚೀನಾ ದೇಶದಲ್ಲಿ ರೈತರು ಊರು ಹಬ್ಬದ ದಿನ ಬೇಟೆಯಾಡಿ ತಂದ ಮಾಂಸವನ್ನ ಅಡುಗೆ ಮಾಡಿ ಊರಿಗೆಲ್ಲ ಬಡಿಸುತ್ತಾರೆ, ಇನ್ನು ಇದೆ ರೀತಿಯಾಗಿ ಉಹಾನ್ ಅನ್ನುವ ರೈತ ಬೇಟೆಗಾಗಿ ಕಾಡಿಗೆ ಹೋಗಿ ಕಾಡಿನಲ್ಲಿ ಹಂದಿಯನ್ನ ಬೇಟೆಯಾಡಿ…

  • ರಾಜಕೀಯ

    ಇಲ್ಲಿದೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ…ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಕರ್ನಾಟಕ ವಿಧಾನಸಭೆ ಚುನಾವಣೆ 2018ರ, ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು,72 ಅಭ್ಯರ್ಥಿಗಳ ಮೊದಲ ಪಟ್ಟಿ ಬಹಿರಂಗಗೊಂಡಿದೆ. ಇಲ್ಲಿದೆ ಬಿಜೆಪಿಯ 72 ಅಭ್ಯರ್ಥಿಗಳ ಮೊದಲ ಪಟ್ಟಿ… ರಾಯಚೂರು ಗ್ರಾಮಾಂತರ– ತಿಪ್ಪರಾಜು, ರಾಯಚೂರು– ಡಾ.ಶಿವರಾಜ ಪಾಟೀಲ. ದೇವದುರ್ಗ– ಶಿವನಗೌಡ ನಾಯಕ್‌, ಲಿಂಗಸುಗೂರು– ಮಾನಪ್ಪ ವಜ್ಜಲ್‌, ಕುಷ್ಠಗಿ– ದೊಡ್ಡನಗೌಡ ಪಾಟೀಲ, ಧಾರವಾಡ– ಅಮೃತ್‌ ದೇಸಾಯಿ, ನಿಪ್ಪಾಣಿ– ಶಶಿಕಲಾ ಜೊಲ್ಲೆ, ಅಥಣಿ– ಲಕ್ಷ್ಮಣ ಸವದಿ, ಕಾಗವಾಡ- ಭರಮಗೌಡ ಕಾಗೆ, ಕುಡಚಿ- ಪಿ.ರಾಜೀವ್, ರಾಯಭಾಗ- ದುರ್ಯೋಧನ ಐಹೊಳೆ, ಹುಕ್ಕೇರಿ- ಉಮೇಶ್ ಕತ್ತಿ, ಅರಬಾವಿ- ಬಾಲಚಂದ್ರ ಜಾರಕಿಹೊಳಿ,…

  • ಸುದ್ದಿ

    ಡೈನೋಸಾರ್ ಯುಗದ ತಿಮಿಂಗಿಲ ಪತ್ತೆ..!ಈ ವಿಚಿತ್ರ ಜೀವಿಯ ಬಗ್ಗೆ, ವಿಶ್ವದಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ…

    ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.