ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಂಡನನ್ನು ಕಳೆದುಕೊಂಡ ತಾಯಿಗೆ ಆಸರೆಯಾಗಿ ನಿಂತ 22 ವರ್ಷದ ಮಗಳು. ವಿಧವೆಯಾದ ತನ್ನ 53 ವರ್ಷಗಳ ತಾಯಿಗಾಗಿ ವರನನ್ನು ಹುಡುಕಿ ತಂದಳು. ಹತ್ತಿರದಲ್ಲೇ ಇದ್ದು ಮದುವೆ ಮಾಡಿಸಿದಳು. ಈ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ.
ಆ ಮಗಳ ಹೆಸರು ಸಂಹಿತಾ. ತಾಯಿ ಹೆಸರು ಗೀತಾ ಅಗರ್ವಾಲ್. ಶಾಲಾ ಶಿಕ್ಷಕಿ. 2016ರ ಮೇ ತಿಂಗಳಲ್ಲಿ ಹೃದಯಾಘಾತದಿಂದ ಗೀತಾ ಅಗರ್ವಾಲ್ ಗಂಡ ಮುಕೇಶ್ ಗುಪ್ತಾ ಮರಣಿಸಿದರು. ಇದರಿಂದ ಗೀತಾ ಅಗರ್ವಾಲ್ ಖಿನ್ನತೆಗೆ ಒಳಗಾಗಿದ್ದರು.
ಆಸ್ಪತ್ರೆಯ ಸುತ್ತ ಅಲೆದಾಡಬೇಕಾದ ಪರಿಸ್ಥಿತಿ ಬಂತು. ಗುರುಗಾವ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಕೆಲಸ ಮಾಡುತ್ತಿರುವ ಆಕೆಯ ಮಗಳು ಸಂಹಿತಾ… ತಾಯಿಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದರು.ಉದ್ಯೋಗಕೆ ರಾಜೀನಾಮೆ ನೀಡಿ ಜೈಪುರಕ್ಕೆ ಹೋದರು. ತಾಯಿಗೆ ಆಸೆಯಾಗಿ ನಿಂತರು. ತಾಯಿಗೆ ಹೇಗಾದರೂ ಮದುವೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದರು. ಆಕೆ ನಿರ್ಧಾರಕ್ಕೆ ಮನೆಯವರೆಲ್ಲಾ ವಿರೋಧ ವ್ಯಕ್ತಪಡಿಸಿದರು.
53 ವರ್ಷಗಳ ವಯಸ್ಸಲಿ ಮದುವೇನಾ ಎಂದು ಬಾಯಿಬಾಯಿ ಬಿಟ್ಟರು. ಆದರೂ ಸಂಹಿತಾ ತನ್ನ ನಿರ್ಧಾರ ಬದಲಾಯಿಸಲಿಲ್ಲ. ತನ್ನ ತಾಯಿಗೆ ಹೊಸ ಜೀವನ ಕೊಡಬೇಕೆಂದುಕೊಂಡರು.ಆಕೆಯ ಹುಡುಕಾಟ ಆರಂಭವಾಯಿತು. ವಿಧವೆಯರಿಗಾಗಿ ಇರುವ ಮ್ಯಾರೇಜ್ ಬ್ಯೂರೋಗಳಲ್ಲಿ, ವೆಬ್ಸೈಟ್ಗಳಲ್ಲಿ ಹುಡುಕಾಡಿದರು. ರಾಜಸ್ಥಾನದಲಿ ತಮಗೆ ಗೊತ್ತಿರುವ ಕುಟುಂಬಗಳನ್ನು ಭೇಟಿಯಾದರು.
ಕೊನೆಗೂ ಆಕೆಯ ಹುಡುಕಾಟಕ್ಕೆ ಪ್ರತಿಫಲ ಸಿಕ್ಕಿತು. ರಾಜಸ್ಥಾನದ ಬಾನ್ಸ್ವಾರ್ ನಗರದ 55 ವರ್ಷಗಳ ರೆವೆನ್ಯೂ ಇನ್ಸ್ಪೆಕ್ಟರ್ ಕೆಜಿ ಗುಪ್ತಾ ಆಸಕ್ತಿ ತೋರಿದರು. ಅವರು ಪತ್ನಿ 2010ರಲ್ಲಿ ಕ್ಯಾನ್ಸರ್ ಕಾರಣ ಮರಣಿಸಿದ್ದರು.
ಅಂದಿನಿಂದ ಅವರು ಸಹ ಒಂಟಿ ಜೀವನ ನಡೆಸುತ್ತಿದ್ದಾರೆ. ಗೀತಾ ಅಗರ್ವಾಲ್ರನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಅವರು ಸಂಹಿತಾರನ್ನು ಸಂಪರ್ಕಿಸಿದರು. ಸುಮ್ಮನೆ ಕುರುಡು ಕುರುಡಾಗಿ ಮದುವೆ ಮಾಡಲಿಲ್ಲ ಆಕೆ. ಎಲ್ಲಾ ಸಂಗತಿಗಳ ಬಗ್ಗೆ ತಿಳಿದುಕೊಂಡರು ಮದುವೆಯಾದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಇಡೀ ದೇಶದಲ್ಲಿ ಪ್ರಖರವಾದ ಭಾಷಣ ಮಾಡಿ ಜನರನ್ನ ಸೆಳೀತಿದ್ದ ವ್ಯಕ್ತಿ ಅಂದ್ರೆ ಪ್ರಧಾನಿ ನರೇಂದ್ರ ಮೋದಿ. ತಮ್ಮ ಮೊನಚು ಮಾತುಗಳಿಂದಲೇ ಜನರ ಮನ ಗೆದ್ದು ತಮ್ಮ ಬಹುಮತದಿಂದ, ಯಾವ ಪಕ್ಷಗಳ ಸಹಾಯವಿಲ್ಲದೆ ಅಧಿಕಾರದ ಗದ್ದುಗೆ ಏರಿದ ಜಾದುಗಾರ
ಈಗಂತೂ ಮನೆ ಖರ್ಚುಗಳನ್ನು ಸರಿದೂಗಿಸಲು ಏನೇನೋ ಪ್ಲಾನ್’ಗಳನ್ನೂ ಮಾಡ್ತಾರೆ. ತಿಂಗಳು ಮುಗಿಯಿತು ಎಂದರೆ ಬಿಲ್’ಗಳ ಕಾಟ ಹೆಚ್ಚಾಗುತ್ತದೆ.ಕೇಬಲ್ ಬಿಲ್,ಕರೆಂಟ್ ಬಿಲ್.ವಾಟರ್ ಬಿಲ್ ಹೀಗೆ ಹಲವಾರು ಬಿಲ್’ಗಳು ಸಾಲಾಗಿ ಬಂದು ನಿಮ್ಮ ನಿಮ್ಮ ಮನೆಯ ಬಾಗಿಲಿನಲ್ಲಿ ಬೀಳುತ್ತವೆ. ಸ್ಯಾಲರಿ ಪಡೆದು ಬಡ್ಜೆಟ್ ಮೂಲಕ ಸಂಸಾರ ನೀಗಿಸುವವರಿಗೆ ಇದರ ಪ್ರಾಮುಖ್ಯತೆ ಏನೆಂಬುದು ತಿಳಿದಿರುತ್ತದೆ..ಬರುವ ಬಿಲ್ ನಲ್ಲಿ ನಾವು ಕಡಿಮೆ ಮಾಡಬಹುದಾದದ್ದು ಎಂದರೆ ಅದು ಕರೆಂಟ್ ಬಿಲ್.. ಹೌದು ಕರೆಂಟ್ ಬಿಲ್ ಕಡಿಮೆ ಬರಲು ಈ ಕೆಳಗಿನ ಕ್ರಮಗಳನ್ನು ಪಾಲಿಸಿ.. 1.ಮನೆಯಲ್ಲಿ…
ಈಗಂತೂ ರಾಜಕಾರಣಿಗಳು ತಾವು ಗೆಲ್ಲುವುದಕ್ಕಾಗಿ ಏನು ಬೇಕೋ ಮಾಡುತ್ತಾರೆ, ಹೇಗೆಂದರೆ ಹಾಗೆ ಮಾತನಾಡುತ್ತಾರೆ ಕೂಡ. ಕೊನೆಗೂ ರಾಜಕೀಯಕ್ಕೆ ದೇವರನ್ನು ಎಳೆದು ತಂದು ದೇವರಿಗೂ ಜಾತಿಯ ಪಟ್ಟಿಯನ್ನು ಕಟ್ಟಿಬಿಟ್ಟಿದ್ದಾರೆ. ಹನುಮಂತ ಅರಣ್ಯವಾಸಿ. ಆತ ದಲಿತ ವರ್ಗಕ್ಕೆ ಸೇರಿದ್ದವನೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಳಿಕ ಈ ಕುರಿತು ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ. ಆದಿತ್ಯನಾಥ್ ಅವರ ಹೇಳಿಕೆಗೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗಿದ್ದು, ಯೋಗಿ ಹೇಳಿಕೆಯನ್ನು ಖಂಡಿಸಿದ್ದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಈಗ ಪಕ್ಷ ತೊರೆದಿದ್ದಾರೆ….
ಪೇಟಿಮ್ ಬಂದ ಮೇಲೆ ಬೇರೆ ಬೇರೆ ಡಿಜಿಟಲ್ ಪೇಮೆಂಟ್ ಆಪ್ ಗಳು ಪ್ರಾರಂಭಿಸಿದವು. ಸಾಮಾಜಿಕ ಜಾಲತಾಣದ ದೈತ್ಯ ವಾಟ್ಸಪ್ ಸದ್ಯದಲ್ಲೇ ಡಿಜಿಟಲ್ ಪೇಮೆಂಟ್ ಶುರು ಮಾಡಲು ಹೊರಟಿದೆ. ಪ್ರಪಂಚದಲ್ಲಿ ಭಾರತದಲ್ಲೇ ಈ ರೀತಿಯ ಮೊದಲ ಹೆಜ್ಜೆ ಇಡುತ್ತಿರುವುದು.
ಇತ್ತೀಚಿನ ವೇಗದ ಜೀವನ ಶೈಲಿಯಲ್ಲಿ ಬಹಳಷ್ಟು ಜನರಿಗೆ ಮಾರುಕಟ್ಟೆಗಳಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಲು ಸಮಯವಿಲ್ಲ, ಅಷ್ಟೆ ಯಾಕೆ ತಾವು ತಮ್ಮ ಕೆಲಸ ಮುಗಿಸಿ ಮನೆಗೆ ಬಂದರೆ ತಮ್ಮ ಹೊಟ್ಟೆಗೆ ಊಟ ಮಾಡಿಕೊಂಡು ತಿನ್ನಲು ಸಹ ಸಮಯವಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂಬಂತೆ ಹಲವಾರು ಆನ್ಲೈನ್ ಶಾಪಿಂಗ್ (ಅಂತರ್ಜಲ ಮಾರುಕಟ್ಟೆ) ವೆಬಸೈಟ್ಗಳು ಪ್ರಾರಂಭವಾಗಿವೆ. ಇದರೊಂದಿಗೆ ಊಟವನ್ನು ಸಹ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಹ ನಾವು ಕಾಣಬಹುದು. ಆದರೆ ಇವುಗಳೆಲ್ಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ…
ಮಿಳುನಾಡಿನಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಎಂಥವರೂ ಶಾಕ್ ಆಗುತ್ತಾರೆ. ಭಿಕ್ಷೆ ಬೇಡುವವರನ್ನು ಕಂಡರೆ ಸಾಮಾನ್ಯವಾಗಿ ಜನರು ಮುಖ ಕಿವುಚುತ್ತಾರೆ. ಕೈಯಲ್ಲಿರುವ ಎರಡು ಮೂರು ರೂಪಾಯಿ ಕೊಟ್ಟು ಮುಂದೆ ಹೋಗುತ್ತಾರೆ. ಹೀಗೆ ಪಡೆದ ಭಿಕ್ಷೆಯ ಹಣವೇ ಇಲ್ಲೊಬ್ಬಮಹಿಳೆಯನ್ನು ಲಕ್ಷಾಧೀಶೆಯನ್ನಾಗಿ ಮಾಡಿದೆ. ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಪಾರ್ವತಮ್ಮ(70)ಎಂದು ಗುರುತಿಸಲಾಗಿದೆ. ಪ್ರತಿ…