ರಾಜಕೀಯ

ಈ ಸಮೀಕ್ಷೆಯ ಪ್ರಖಾರ ದೇಶದ ಅತ್ಯಂತ ಜನಪ್ರಿಯ ವ್ಯಕ್ತಿ ಮತ್ತು ರಾಜಕಾರಣಿ ಯಾರು ಗೊತ್ತಾ..?

413

ಇನ್ನೇನು ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ.

ಇದೇ ಸಮಯದಲ್ಲಿ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ ಯಾರೆಂದು ಸಮೀಕ್ಷೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಜನರ ಅಭಿಪ್ರಾಯವಾಗಿದೆ.

 

ರಾಜಕೀಯ ತಂತ್ರರೂಪಕ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ನಡೆಸಿದ ಸಮೀಕ್ಷೆಯಲ್ಲಿ ದೇಶದ 712 ಜಿಲ್ಲೆಗಳ 57 ಲಕ್ಷ ಮಂದಿ ಮತ ನೀಡಿದ್ದು ಪ್ರಧಾನಿ ಮೋದಿ ಅತಿ ಜನಪ್ರಿಯ ಮತ್ತು ಸಮರ್ಥ ರಾಜಕಾರಣಿ ಎಂದು ಶೇಕಡ 48 ಮಂದಿ ಹೇಳಿದ್ದಾರೆ.

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುಲು ಮತ್ತು ದೂರದರ್ಶಿತ್ವ ಹೊಂದಿರುವ ನಾಯಕರಾಗಿ ನರೇಂದ್ರ ಮೋದಿ ಉತ್ತಮ ಆಯ್ಕೆ ಎಂದು ಸಮೀಕ್ಷೆಯಲ್ಲಿ ಪಾಲ್ಗೋಂಡ ಜನರು ಹೇಳಿದ್ದಾರೆ.

ಪ್ರಧಾನಿ ಮೋದಿ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಥಾನ ಪಡೆದಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಶೇ. 11 ಮಂದಿ ಮತ ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ 9.3 ಮತ. ಅಖಿಲೇಶ್ ಯಾದವ್ 7 ಮತ, ಮಮತಾ ಬ್ಯಾನರ್ಜಿ 4.2 ಮತ, ಮಾಯಾವತಿ 3.1 ಮತ ನೀಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ