ವಿಸ್ಮಯ ಜಗತ್ತು

ಈ ನಗರಕ್ಕೆ ಬಂದವರಿಗೆ ಇಲ್ಲಿನ ಸರಕಾರ ನೀಡುತ್ತದೆ 38.7 ಲಕ್ಷ ರೂ.!ತಿಳಿಯಲು ಈ ಲೇಖನ ಓದಿ ..

615

ಸ್ವಿಟ್ಜರ್‌ಲ್ಯಾಂಡ್‌ನ ಈ ಪ್ರಕೃತಿ ಮನೋಹರ ಪಟ್ಟಣಕ್ಕೆ ವಲಸೆ ಬರುವವರಿಗೆ ಅಲ್ಲಿಯ ಸರಕಾರವೇ 60,000 ಡಾ.(ಸುಮಾರು 38.7 ಲ.ರೂ.) ನೀಡುತ್ತದೆ. ಸರಕಾರದ ಈ ಕೊಡುಗೆಗೆ ಕಾರಣವಿದೆ. ಈ ಪಟ್ಟಣದಲ್ಲಿ ಜನಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.

ಈ ಪಟ್ಟಣದ ಬಗ್ಗೆ ವಿವರಗಳಿಲ್ಲಿವೆ:-

ಅಲ್ಬಿನೆನ್ ಈ ಪಟ್ಟಣದ ಹೆಸರು. ಸಮುದ್ರ ಮಟ್ಟದಿಂದ 4265 ಅಡಿ ಎತ್ತರದಲ್ಲಿ ರಮಣೀಯ ಕಣಿವೆಯಲ್ಲಿದೆ. ಇದು ಪರ್ವತ ನಗರವಾಗಿದ್ದು, ತನ್ನದೇ ಆದ ಚರ್ಚ್ ಹೊಂದಿದೆ. ಇಲ್ಲಿ ಎಲ್ಲೆಲ್ಲಿಯೂ ಸಾಂಪ್ರದಾಯಿಕ ವಾಲೈಸ್ ವಾಸ್ತು ಸೌಂದರ್ಯ ರಾರಾಜಿಸುತ್ತಿದೆ.

ಈ ಪಟ್ಟಣವು ಪ್ರಶಾಂತ ವಾತಾವರಣ, ಅದ್ಭುತ ನೈಸರ್ಗಿಕ ದೃಶ್ಯಗಳು, ಶುದ್ಧ ಗಾಳಿ ಮತ್ತು ವರ್ಷದ ಹೆಚ್ಚಿನ ಸಮಯ ಹದವಾದ ಬಿಸಿಲಿನಿಂದ ಕೂಡಿದೆ. ಆದರೆ ಇಲ್ಲಿಯ ನಿವಾಸಿಗಳೆಲ್ಲ ವಾಸಕ್ಕಾಗಿ ದೊಡ್ಡ ನಗರಗಳಿಗೆ ತೆರಳುತ್ತಿರುವುದರಿಂದ ಇನ್ನು ಕೆಲವೇ ವರ್ಷಗಳಲ್ಲಿ ಇಲ್ಲಿ ಜನಸಂಖ್ಯೆಯಿಲ್ಲದೆ ಇಡೀ ಪಟ್ಟಣವೇ ಬಿಕೋ ಎನ್ನುವ ಬೆದರಿಕೆ ಸರಕಾರವನ್ನು ಕಾಡುತ್ತಿದೆ.

ಸದ್ಯ ಈ ಪಟ್ಟಣದಲ್ಲಿ ಕೇವಲ 240 ಜನರು ವಾಸವಾಗಿದ್ದಾರೆ. ಇವರ ಪೈಕಿ ಮಕ್ಕಳ ಸಂಖ್ಯೆ ಹೇಗೆ ಎಣಿಸಿದರೂ ಏಳನ್ನು ಮೀರುವುದಿಲ್ಲ. ಹೆಚ್ಚಿನ ಕುಟುಂಬಗಳೆಲ್ಲ ದೊಡ್ಡ ನಗರಗಳಿಗೆ ವಲಸೆ ಹೋದ ಬಳಿಕ ಈ ಊರಿನ ಶಾಲೆಯು ಬಾಗಿಲು ಹಾಕಿಕೊಂಡಿದ್ದರಿಂದ ಈ ಮಕ್ಕಳು ಬಸ್‌ನಲ್ಲಿ ಸಮೀಪದ ಪಟ್ಟಣದ ಶಾಲೆಗೆ ಹೋಗುತ್ತಾರೆ.

ಈ ಸುಂದರವಾದ ತಾಣದಲ್ಲಿ ವಾಸವಾಗಲು ಬರುವವರಿಗೆ 60,000 ಡಾ.ಗಳ ಕೊಡುಗೆಯನ್ನು ಸರಕಾರವು ಘೋಷಿಸಿದೆ. ಇದರಿಂದಾಗಿ ಅವರು ಇಲ್ಲಿ ತಮ್ಮದೇ ಆದ ಮನೆಗಳನ್ನು ಖರೀದಿಸಬಹುದಾಗಿದೆ. 45 ವರ್ಷದೊಳಗಿನ, ಎರಡು ಮಕ್ಕಳಿರುವ ದಂಪತಿಗಳಿಗೆ ಮಾತ್ರ ಈ ಕೊಡುಗೆ ಮುಕ್ತವಾಗಿದೆ.

ಅಂದ ಹಾಗೆ ಈ ಕೊಡುಗೆಯೊಂದಿಗೆ ಒಂದು ಷರತ್ತೂ ಇದೆ. 60,000 ಡಾ.ಗಳನ್ನು ಪಡೆದುಕೊಂಡು ಇಲ್ಲಿ ನೆಲೆಸುವ ದಂಪತಿಗಳು ಈ ಊರನ್ನು ತೊರೆಯಲು ನಿರ್ಧರಿಸಿದರೆ ಸರಕಾರಕ್ಕೆ ಅಷ್ಟೂ ಹಣವನ್ನು ಹಿಂದಿರುಗಿಸಬೇಕಾಗುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ, ಸಿನಿಮಾ

    ರಾತ್ರೋರಾತ್ರಿ ಮಂಡ್ಯದಲ್ಲಿದ್ದ ಮನೆಯನ್ನು ನಟಿ ರಮ್ಯಾ ಖಾಲಿ ಮಾಡಿದ್ದೇಕೆ ಗೊತ್ತಾ..?

    ಅಂಬಿ ಅಂತಿಮ ದರ್ಶನಕ್ಕೆ ಬಾರದೇ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ, ತಮ್ಮ ರಾಜಕೀಯ ಕಾರ್ಯಕ್ಷೇತ್ರ ಮಂಡ್ಯದಲ್ಲಿ ಮಾಡಿದ್ದ ಬಾಡಿಗೆ ಮನೆಯನ್ನು ರಾತ್ರೋ ರಾತ್ರಿ ಖಾಲಿ ಮಾಡೋ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದರೇ ಎನ್ನುವ ಪ್ರಶ್ನೆ ಎದ್ದಿದೆ.ಹಾಗೂ ಖಾಲಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದಾರೆ. ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯ ನಗರದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಜನರ ಕಷ್ಟಕ್ಕೆ…

  • ರಾಜಕೀಯ

    ರಾಜ್ಯದಲ್ಲಿ ಲೋಕಸಭಾ ಫಲಿತಾಂಶ 4 ಗಂಟೆ ವಿಳಂಬ!

    ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ 40 ವಿವಿ ಪ್ಯಾಟ್ ಮತ ಯಂತ್ರಗಳ ಎಣಿಕೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ 4 ಗಂಟೆ ತಡವಾಗಿ ಪ್ರಕಟವಾಗಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 23(ನಾಳೆ)ರಂದು ಬೆಳಗ್ಗೆ 8 ಗಂಟೆಗೆ ಮೊದಲು ರಿಟರ್ನಿಂಗ್ ಅಧಿಕಾರಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ಬಳಿಕ ಇವಿಎಂಗಳಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ ಎಂದು ತಿಳಿಸಿದರು. ಹಿಂದೆ…

  • ಸುದ್ದಿ

    ರೈಲಿನ ಪ್ರಯಾಣದ ಮಧ್ಯೆ ಹೆರಿಗೆ ಮಾಡಿಸಿದ ಧರಣಿಗೆ ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರು.!

    ಅನಿರ್ಧಿಷ್ಟಾವಧಿ ಧರಣಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯೊಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿ ಗೀತಾ ಎಂಬುವರು ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದವರು.  ಬೆಂಗಳೂರಿಗೆ ಪತಿ ಜೊತೆ ಹೊರಟಿದ್ದ ಗೀತಾ ಅವರಿಗೆ ಪ್ರಯಾಣದ ಮಧ್ಯೆ ಹೆರಿಗೆ ನೋವು ಕಾಣಿಸಿತ್ತು.‌ ಚಿತ್ತಾಪುರ ತಾಲೂಕು ನಾಲವಾರದ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ, ಹಾಲಾಬಾಯಿ ಮತ್ತಿತರರು ಸುಲಭ ಹೆರಿಗೆ ಮಾಡಿಸಿದ್ದಾರೆ. ವಿಷಯ ತಿಳಿದ ಕಾರ್ಯಕರ್ತೆಯರು ಗೀತಾ ಅವರಿಗೆ ಸುಲಭ ಹೆರಿಗೆ ಮಾಡಿಸಿದರು.  ರಾಯಚೂರು…

  • ಸುದ್ದಿ

    ದಾಖಲೆಯ ಬೆಲೆಗೆ ಸೇಲಾಯ್ತು ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ವಿತರಣೆ ಹಕ್ಕು…!

    ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ತೆಲುಗು ಚಿತ್ರ ‘ಸೈರಾ ನರಸಿಂಹ ರೆಡ್ಡಿ’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಜಗಪತಿಬಾಬು, ಅನುಷ್ಕಾ ಶೆಟ್ಟಿ, ನಯನ ತಾರಾ, ತಮನ್ನಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ರಾಮ್ ಚರಣ್ ತೇಜ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸುಧೀಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ಈಗಾಗಲೇ ‘ಸೈರಾ ನರಸಿಂಹ…

  • ಆರೋಗ್ಯ

    ಈ ಕಾರಣಗಳಿಂದ ಮೈಗ್ರೇನ್‌ ತಲೆನೋವು ಬರುತ್ತದೆ..!ಇದರ ನಿವಾರಣೆ ಹೇಗೆ?ತಿಳಿಯಲು ಈ ಲೇಖನ ಓದಿ…

    ಮೈಗ್ರೇನ್‌ ಅನ್ನುವುದು ಒಂದು ಸಾಮಾನ್ಯ ರೀತಿಯ ತಲೆನೋವು. ವಾಕರಿಕೆ, ವಾಂತಿ ಅಥವಾ ಬೆಳಕಿಗೆ ಸಂವೇದನಾಶೀಲತೆ ಇರುವುದು ಇತ್ಯಾದಿ ರೋಗಲಕ್ಷಣಗಳ ಜತೆಗೆ ಇದು ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ ತಲೆಯ ಒಂದೇ ಬದಿಯಲ್ಲಿ ಇರಿಯುವಂತಹ ನೋವು ಕಾಣಿಸಿಕೊಳ್ಳಬಹುದು.

  • ರಾಜಕೀಯ

    ರಾಜ್ಯದಲ್ಲಿ ಯಾವ ಯಾವ ಪಕ್ಷ ಮುನ್ನಡೆ…?

    ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಆರಂಭಿಕ ಮತ ಎಣಿಕೆಯಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದ್ದರೆ ಯುಪಿಎ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಬಲ ಪಡೆದಿರುವ ರಾಜ್ಯಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರ ಪ್ರದೇಶದ 54 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ 27, ರಾಜಸ್ತಾನದಲ್ಲಿ 23 ಹಾಗೂ ಬಿಹಾರದಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ 40, ಗುಜರಾತಿನಲ್ಲಿ ಬಿಜೆಪಿ 26, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುನ್ನಡೆ…