News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಭವಿಷ್ಯ

ಈ ದಿನದ ನಿಮ್ಮ ಭವಿಷ್ಯ ನೋಡಿ ತಿಳಿಯಿರಿ…

325

ಇಂದು ಭಾನುವಾರ , 25/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ನಿಮ್ಮ ಕಾರ್ಯಕ್ಷೇತ್ರದಲ್ಲಿ ಮುನ್ನುಗ್ಗುವ ಧೈರ್ಯ ಮಾಡಿ.ಆದಷ್ಟೂ ತಾಳ್ಮೆ ಇರಲಿ. ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ದೊರೆಯುವ ಸಂಭವವಿದ್ದು, ಗುರುವಿನ ಕೃಪೆ ಇದೆ.ರಂಗ ಚಲನ ಚಿತ್ರ ರಂಗದ ಕಲಾವಿದರುಗಳಿಗೆ ಎಲ್ಲಿಲ್ಲದ ಬೇಡಿಕೆ, ಗೌರವಾದರಗಳು ದೊರಕುವ ಸಂಭವವಿದೆ.

ವೃಷಭ:-

ನೀವು ನಿಮ್ಮದೆ ಆದ ತರ್ಕ ಕುತರ್ಕಗಳಿಂದ ಬಾಹ್ಯ ಜಗತ್ತಿನ ಜನರ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಮಕ್ಕಳ ಉದ್ಯೋಗಕ್ಕಾಗಿ ಶ್ರಮ ವಹಿಸಬೇಕಾದೀತು. ಸಣ್ಣಪುಟ್ಟ ವಿಷಯಗಳಿಗೆ ಸಂಶಯ ತಾಳುತ್ತಾ ಕೂತರೆ ಮಹತ್ತರವಾದ ಕಾರ್ಯ ಮಾಡಲು ಆಗುವುದಿಲ್ಲ.

ಮಿಥುನ:

ನಿಮ್ಮ  ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ. ಉದ್ಯೋಗ ಬದಲಾವಣೆಯ ಸಾಧ್ಯತೆ. ರಾಜಕೀಯ ವ್ಯಕ್ತಿಗಳೊಂದಿಗೆ ಸಮಾಲೋಚನೆ ಮಾಡುವಿರಿ.ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿ.

ಕಟಕ :-

ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿ ಸಂಭವ ಇದೆ.ನಿಮ್ಮ ಮನೆಯಲ್ಲಿ ನಿಮ್ಮ ಮಾತನ್ನು ಆಲಕ್ಷಿಸುವುದು, ನಿಮ್ಗೆ ನೋವು ತರಲಿದೆ.ಆದ್ದರಿಂದ ಆದಷ್ಟೂ ತಾಳ್ಮೆಯಿಂದ ಇರಿ. ಮನೆಯವರ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಿವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮೂಡಿ ಉನ್ನತಿಗೆ ಮಾರ್ಗವಾಗಲಿದೆ.

 ಸಿಂಹ:

ಬ್ಯಾಂಕ್ ವ್ಯವಹರಗಳಲ್ಲಿ ಕಾಳಜಿ ವಹಿಸಬೇಕು.ತಾಂತ್ರಿಕ ವಿದ್ಯೆಯಲ್ಲಿ ತೊಡಗಿಕೊಂಡವರಿಗೆ ಯಶಸ್ಸು. ಯಶಸ್ಸು ಸಿಗುವುದೇ ನಿಮಗೆ ಮರೀಚಿಕೆ ಆಗುತ್ತಿದೆ. ನಿಮ್ಮ ಯೋಜನೆಗಳಿಗೆ ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಒಂದು ದಿನ.ಬಿಡುವಿಲ್ಲದ ಕೆಲಸದಿಂದ ದೇಹಾಯಾಸ ಉಂಟಾಗಲಿದೆ. ಸರ್ಕಾರಿ ಕೆಲಸಗಳಿಗೆ ಅಲೆದಾಡುವ ಸಾಧ್ಯತೆ ಕಂಡುಬರುವುದು.

ಕನ್ಯಾ :-

ಕೆಲಸ ಕಾರ್ಯಗಳನ್ನು ಚುರುಕು ಮಾಡಬೇಕಾಗುವುದು. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮನ್ನು ಎಲ್ಲರೂ ಆದರಿಸುವರು. ಕುಟುಂಬದ ವಿಷಯಗಳ ಬಗ್ಗೆ ಹಿರಿಯರೊಂದಿಗೆ ಮಾತುಕತೆ ಸಾಧ್ಯತೆ.

ತುಲಾ:

ಪಿತ್ರಾರ್ಜಿತ ಆಸ್ತಿ ದೊರಕುವ ಸಂಭವ ಕಂಡುಬರುವುದು.ನಿಮಗೆ ಸ್ವಲ್ಪ ಆಲಸ್ಯವನ್ನು ತುಂಬುವರು. ಹಾಗಾಗಿ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. ವೃತ್ತಿ ಜೀವನದಲ್ಲಿ ಹೊಸ ತಿರುವು.

ವೃಶ್ಚಿಕ :-

ಸಾಕಷ್ಟು ಹಣ ಹೂಡಿಕೆಯಲ್ಲಿ ತೊಡಗಿಸಲು ಅತ್ಯಂತ ಪ್ರಶಸ್ತ ಕಾಲ. ಸದ್ಯದ ಗ್ರಹಸ್ಥಿತಿ ಅಷ್ಟೇನೂ ಉತ್ತಮವಿಲ್ಲ. ಖರ್ಚು ಮಾಡಲು ಮುಂದೆಹೋದಲ್ಲಿ ನೀವು ಖಾಲಿ ಜೇಬಿನಿಂದ ಮನೆ ಸೇರಬೇಕಾಗುತ್ತದೆ.ಬಾಳಸಂಗಾತಿಯೊಂದಿಗೆ ಅನವಶ್ಯಕ ಮನಸ್ತಾಪಗಳಿಗೆ ಅವಕಾಶ ಬೇಡ.ವ್ಯಾಪಾರ ವಹಿವಾಟಿನಿಂದಾಗಿ ಉತ್ತಮ ಲಾಭದ ಸಾಧ್ಯತೆ.

ಧನಸ್ಸು:

ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಯೋಜನೆಯನ್ನು ರೂಪಿಸಲು ಸಕಾಲ. ಹೂಡಿಕೆ ಮಾಡಲು ಮತ್ತು ಊಹಪೋಹಗಳಿಗೆ ಒಳ್ಳೆಯ ದಿನವಲ್ಲ. ನಿಮ್ಮ ಮನಸ್ಸಿನ ವಿಚಾರವನ್ನು ಸ್ನೇಹಿತರೆದುರು ಹೇಳಿಕೊಳ್ಳಿ. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ವಸ್ತುಗಳ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ.

ಮಕರ :-

ಅನಿರೀಕ್ಷಿತ ಬೆಳವಣಿಗೆಯಿಂದ ಉದ್ಯೋಗದಲ್ಲಿ ಹೆಚ್ಚಿನ ಅಧಿಕಾರ. ನ್ಯಾಯಾಲಯದಲ್ಲಿನ ವ್ಯವಹಾರಗಳಲ್ಲಿ ಸಕಾರಾತ್ಮಕ ನಿರ್ಣಯ ಹೊರಬೀಳುವುದು. ಕೋಪವನ್ನು ಬಿಟ್ಟುಬಿಡಿ. ಇದರಿಂದ ನಿಮ್ಮ ಕಾರ್ಯಗಳು ಸುಗಮವಾಗಿ ಆಗುವುದು. ಸ್ನೇಹಿತರು ಮತ್ತು ಅಪರಿಚಿತರಿಬ್ಬರ ಬಗೆಗೂ ಎಚ್ಚರದಿಂದಿರಿ.

ಕುಂಭ:-

ಮಕ್ಕಳೊಂದಿಗೆ ಸಂತಸದ ದಿನವಾಗಿರುವುದು. ಬಂಧು ಮಿತ್ರರ ಆಗಮನ ಸಾಧ್ಯತೆಯೂ ಕಂಡುಬರುವುದು. ಒಂದು ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ. ರಿಯಲ್‌ ಎಸ್ಟೇಟ್‌ ಸಂಬಂಧಿಸಿದ ವ್ಯವಹಾರದಲ್ಲಿ ಎಚ್ಚರದಿಂದ ಇರಿ. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ.

ಮೀನ:-

ಮೇಲಾಧಿಕಾರಿಗಳಿಂದ ಕಿರಿಕಿರಿಯ ಸಾಧ್ಯತೆ ಇದ್ದು, ದಿನದಾಂತ್ಯಕ್ಕೆ ತಿಳಿಗೊಳ್ಳುವುದು. ಕುಟುಂಬದಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯ ಆರೋಗ್ಯ ಸ್ವಲ್ಪ ಒತ್ತಡಕ್ಕೆ ಕಾರಣವಾಗಬಹುದು. ನಿಮ್ಮ ವೈಯಕ್ತಿಕ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಮಗನ ನೌಕರಿಯ ಬಗ್ಗೆ ಚಿಂತೆ ಕಾಡುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು

    ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಭಿಕ್ಷಾಟನೆ ಜಾಲದ ವಿರುದ್ಧ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 6 ಮಕ್ಕಳು ಹಾಗೂ 3 ಮಹಿಳೆಯರನ್ನು ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಶಾಲೆಗಳಿಗೆ ರಜೆ ಇದೆ ಎಂಬ ಕಾರಣವನ್ನು ಮುಂದಿಟ್ಟು ಕೆಲವು ತಾಯಂದಿರು ತಮ್ಮ ಮಕ್ಕಳನ್ನೇ ನಗರದ ಪ್ರಮುಖ ವೃತ್ತಗಳು, ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಭಿಕ್ಷೆ ಬೇಡಲು ಬಳಸುತ್ತಿದ್ದರೆಂಬುದು ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ. ಕಾರ್ಯಾಚರಣೆ…

  • ಸುದ್ದಿ

    ಗೊಂಬೆ ನಿವೇದಿತಾ ಗೌಡ ಹೊಸ ಕೆಲಸಕ್ಕೆ ಸೇರಿದ್ದೇಕೆ? ಅದು ಯಾವ ಕೆಲಸ ಗೊತ್ತಾ ?

    ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಪ್ರಣಯ ಜೋಡಿ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನವೇ ನಿವೇದಿತಾ ಗೌಡ ಗುಡ್ ನ್ಯೂಸ್ ನೀಡಿದ್ದಾರೆ. ಬಿಗ್‌ ಬಾಸ್‌ ಮನೆಯ ಬೇಬಿ ಡಾಲ್‌ ಎಂದೇ ಹೆಸರಾದ ನಿವೇದಿತಾ ಗೌಡರನ್ನು ಯಾರು ತಾನೇ ಮರೆಯುವುದುಂಟ ಹೇಳಿ. ತನ್ನ ಮುದ್ದು-ಮುದ್ದಾದ ಮಾತುಗಳನ್ನಾಡುತ್ತ ಸೋಷಿಯಲ್ ಮೀಡಿಯಾದಿಂದ ಬಿಗ್ ಬಾಸ್ ಮನೆಯ ತನಕ ಹೆಜ್ಜೆಯಿಟ್ಟ ಚೆಲುವೆ ನಿವೇದಿತಾ. ಬಿಗ್ ಬಾಸ್ ಮನೆಯಲ್ಲಿ ಕನ್ನಡದ ರ‍್ಯಾಪ್‌…

  • ಉಪಯುಕ್ತ ಮಾಹಿತಿ

    ಮಾರ್ಚ್ ಬಂತು.ಪರೀಕ್ಷೆ ಭಯವೇ..?ಭಯ ಬೇಡ?ಈ ಕ್ರಮಗಳನ್ನು ಅನುಸರಿಸಿ ಎಕ್ಸಾಮ್ ಭಯದಿಂದ ದೂರವಿರಿ…

    ಮಾರ್ಚ್ ಏಪ್ರಿಲ್ ಬಂತೆಂದರೆ ಸಾಕು ಮಕ್ಕಳಿಗೆ ಟೆನ್ಷನ್ ಶುರು…. ಮಕ್ಕಳಿಗೆ ಪರೀಕ್ಷೆಯ ಟೆನ್ಷನ್ ಆದರೆ ಪಾಲಕರಿಗೆ ಮಕ್ಕಳು ಪರೀಕ್ಷೆ ಹೇಗೆ ಬರೆಯುತ್ತಾರೆಂಬ ಟೆನ್ಷನ್. ನೆನಪಿಡಿ ಟೆನ್ಷನ್ ಮಾಡಿಕೊಂಡಷ್ಟು ವಸ್ತು ವಿಷಯಗಳು ಅಸ್ಪಷ್ಟವಾಗುತ್ತಾ ಹೋಗುತ್ತವೆ. ಮಕ್ಕಳು ಹಾಗೂ ಪೋಷಕರು ಕೆಲವು ಸುಲಭ ಸೂತ್ರಗಳನ್ನು ಅನುಸರಿಸಿದರೆ ಪರೀಕ್ಷೆ ಗಳನ್ನೂ ಎಂಜಾಯ್ ಮಾಡಬಹುದು.

  • ಸಿನಿಮಾ

    ಯಶ್ ಚಿತ್ರ KGFಗೆ ಬ್ಯಾನರ್ ಹಾಕಿ ಬೆಂಬಲ ಕೊಟ್ಟ ಡಿ ಬಾಸ್ ಫ್ಯಾನ್ಸ್..ಕಡೆಗೂ ಒಂದಾದ್ರು ಯಶ್ ಮತ್ತು ದರ್ಶನ್ ಫ್ಯಾನ್ಸ್…

    ವಿಶ್ವಾದ್ಯಂತ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್’ ಇಂದು ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರಕ್ಕಾಗಿ ಅಣ್ತಮ್ಮಾಸ್ ಫ್ಯಾನ್ಸ್ ಒಂದಾಗಿದ್ದಾರೆ. ಚಂದನವನದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಯಶ್ ಚಿತ್ರಕ್ಕೆ ಶುಭ ಕೋರಿದ್ದಾರೆ. ನಗರದಾದ್ಯಂತ ಹಲವೆಡೆ ದರ್ಶನ್ ಅಭಿಮಾನಿಗಳು ಕೆಜಿಎಫ್ ಚಿತ್ರದ ಬ್ಯಾನರ್ ಹಾಕಿ ವಿಶೇಷವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಕೆಜೆಎಫ್ ಚಿತ್ರ ಸ್ಟಾರ್ ಅಭಿಮಾನಿಗಳ ಬಣವನ್ನು ಒಗ್ಗೂಡಿಸಿದ ಕನ್ನಡದ ಹೆಮ್ಮೆಯ ಚಿತ್ರ ಎಂದು ಹೇಳಲಾಗುತ್ತಿದೆ. ಕನ್ನಡದ ಚಿತ್ರ ವಿಶ್ವಾದ್ಯಂತ…

  • ಸಿನಿಮಾ

    ಕನ್ನಡದಲ್ಲಿ ಆರ್ಭಟಿಸುತ್ತಿರುವ ಕಾಲೇಜ್ ಕುಮಾರ್ ಟ್ರೈಲರ್..!ತಿಳಿಯಲು ಈ ಲೇಖನ ಓದಿ..

    ಕನ್ನಡದ ಸಿನಿಮಾ ಯಾರಿಗೇನು ಕಡಿಮೆ ಇಲ್ಲದಂತೆ ಒಂದರ ಮೇಲೊಂದು ಹಿಟ್ ಆಗುತ್ತಲೇ ಇವೆ.. ಕಿರಿಕ್ ಪಾರ್ಟಿ, ರಾಜಕುಮಾರ, ಹೆಬ್ಬುಲಿ, ತಾರಕ್, ಈಗ ಇದೇ ಲಿಸ್ಟ್ ಗೆ ಸೇರ್ಪಡೆಯಾಗಲು ಯೂತ್ಸ್ ಸಿನಿಮಾ #ಕಾಲೇಜ್ ಕುಮಾರ್ ಬರುತ್ತಿದೆ.

  • ಸುದ್ದಿ

    31ನೇ ವರ್ಷಕ್ಕೆ ಕಾಲಿಟ್ಟ ಕ್ಯಾಪ್ಟನ್ ವಿರಾಟ್​ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ..!

    ಶ್ರದ್ಧೆ ಹಾಗೂ ಬದ್ಧತೆಗೆ ಹೆಸರಾಗಿರುವ ಆಟಗಾರ ವಿರಾಟ್ ಕೊಹ್ಲಿ. ಕ್ರಿಕೆಟ್ ಲೋಕದ ಹಲವು ಶ್ರೇಷ್ಠ ಆಟಗಾರರಿಂದ ‘ಕಿಂಗ್ ಕೊಹ್ಲಿ’ ಎಂದು ಕರೆಸಿಕೊಳ್ಳುತ್ತಿರುವ ವಿರಾಟ್​ ಕೊಹ್ಲಿ, ಸಚಿನ್ ನಿರ್ವಿುಸಿದ್ದ ದಾಖಲೆಗಳನ್ನು ಒಂದೊಂದಾಗಿ ಹಿಮ್ಮೆಟ್ಟಿಸುತ್ತ ಸಾಗುತ್ತಿದ್ದಾರೆ. ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತೆ ಮಾಡಿರುವ ಕಿಂಗ್ ಕೊಹ್ಲಿ ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ. ಟೆಸ್ಟ್ ನಾಯಕತ್ವ ಮತ್ತು ಬ್ಯಾಟಿಂಗ್​​​ನಲ್ಲಿ ಯಶಸ್ಸು ಕಂಡಿರುವ ವಿರಾಟ್​ ಕೊಹ್ಲಿ, ಸದ್ಯ ಕ್ರಿಕೆಟ್​​ನಿಂದ ಬಿಡುವು ಪಡೆದಿದ್ದು, ಪತ್ನಿ ಅನುಷ್ಕಾ ಶರ್ಮಾ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಇಂದು 31ನೇ ವರ್ಷದ ಜನ್ಮ…