ಸುದ್ದಿ

ಈಗಾಗಲೇ ಉಗ್ರರ ದಾಳಿಯಲ್ಲಿ ಒಬ್ಬ ಮಗನನ್ನು ಕಳೆದುಕೊಂಡಿದ್ದರೂ, ಸೇನೆಗೆ ಇನ್ನೊಬ್ಬ ಮಗನನ್ನು ಕಳುಹಿಸುವೆ ಎಂದ ಹುತಾತ್ಮ ಯೋಧನ ತಂದೆ..!

216

ಪುಲ್ವಾಮ ಉಗ್ರರ ದಾಳಿಯಲ್ಲಿ 40 ಸೈನಿಕರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ , ಹುತಾತ್ಮ ಯೋಧನ ತಂದೆಯ ಮಾತುಗಳು ಎಲ್ಲರ ಹೃದಯ ಸ್ಪರ್ಶಿಸುತ್ತಿವೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಯೋಧರೊಬ್ಬರ ತಂದೆ ಮಗನ ಸಾವಿನ ನೋವಿನಲ್ಲೂ ದೇಶದ ಮೇಲೆ ತಮಗಿರುವ ಪ್ರೀತಿಯನ್ನು ತೋರಿಸಿದ್ದಾರೆ.

ಗುರುವಾರ ಸಂಜೆ ಸಿಆರ್‌ಪಿಎಫ್ ಯೋಧ ರತನ್ ಠಾಕೂರ್ ಜೈಶ್-ಇ-ಮೊಹಮ್ಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಿಂದ ಹುತಾತ್ಮರಾಗಿದ್ದಾರೆ. ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧನ ಅಂತ್ಯ ಈ ರೀತಿ ಆಗುತ್ತದೆ ಎಂದು ಯಾರು ಯೋಚಿಸಲು ಸಾಧ್ಯವಿರಲಿಲ್ಲ.

ನಾನು ಒಬ್ಬ ಮಗನನ್ನು ಕಳೆದುಕೊಂಡಿದ್ದೇನೆ, ನನಗೆ ಇನ್ನೊಬ್ಬ ಮಗನಿದ್ದು ಆತನನ್ನು ಭಾರತ ಮಾತೆಯ ಸೇವೆಗಾಗಿ ಮುಡಿಪಿಡುವೆ, ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಬಿಹಾರ ಮೂಲದ ಹುತಾತ್ಮ ಯೋಧ ರತನ್ ಠಾಕೂರ್ ತಂದೆ ಹೇಳಿದ್ದಾರೆ.

ರತನ್ ಠಾಕೂರ್ ಅವರು ಮೂಲತಃ ಬಿಹಾರದ ಭಾಗಲ್‍ಪುರದವರು. ಮಗನನ್ನು ಕಳೆದುಕೊಂಡು ನೋವಿನಲ್ಲಿರುವ ತಂದೆ, ದೇಶಕ್ಕಾಗಿ ಓರ್ವ ಮಗನನ್ನು ಅರ್ಪಿಸಿದ್ದೇನೆ. ಈಗ ಇರುವ ಇನ್ನೊಬ್ಬ ಮಗನನ್ನೂ ಉಗ್ರರ ವಿರುದ್ಧ ಹೋರಾಡಲು ಕಳುಹಿಸಲು ಸಿದ್ಧನಿದ್ದೇನೆ. ಯೋಧರನ್ನು ಬಲಿಪಡೆದಿರುವ ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕು ಎಂದು ಠಾಕೂರ್ ಅವರ ತಂದೆ ಕಣ್ಣೀರಿಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ