ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪ್ರಮುಖ ಬಸ್ ನಿಲ್ದಾಣಗಳು ಮತ್ತು 350 ಹವಾನಿಯಂತ್ರಿತ ವೋಲ್ವೊ ಬಸ್‌ಗಳಲ್ಲಿ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಆ ಮೂಲಕ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸಲು ಕಸರತ್ತು ನಡೆಸುತ್ತಿದೆ.
ಡಿಜಿಟಲ್ ಯುಗಕ್ಕೆ ತೆರೆದುಕೊಂಡಿರುವ ರಾಜಧಾನಿಯಲ್ಲಿ ಓಡಾಡುವ ಬಸ್‌ಗಳಲ್ಲಿ ಈವರೆಗೆ ವೈಫೈ ಸೇವೆ ಲಭ್ಯವಿರಲಿಲ್ಲ. ಕೆಲ ವರ್ಷಗಳಿಂದೀಚೆಗೆ ಲಗ್ಗೆ ಇಟ್ಟ ಟ್ಯಾಕ್ಸಿಗಳು ಗ್ರಾಹಕರಿಗೆ ಉಚಿತ ವೈಫೈ ಸೇವೆ ಒದಗಿಸಿ, ವೋಲ್ವೊ ಬಸ್‌ಗಳಿಗೆ ತೀವ್ರ ಪೈಪೋಟಿಯೊಡ್ಡಿವೆ. ಹೀಗಾಗಿ, ಬಿಎಂಟಿಸಿಯು ಪ್ರಯಾಣಿಕರಿಗೆ ಬೆರಳ ತುದಿಯಲ್ಲೇ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಡುತ್ತಿದೆ.
ಉಚಿತ ಅಂತರ್ಜಾಲ ಸೇವೆ ಮತ್ತು ಆಕರ್ಷಕ ಪ್ರಯಾಣ ದರಕ್ಕೆ ಮಾರು ಹೋಗಿರುವ ಐಟಿ-ಬಿಟಿ ಉದ್ಯೋಗಿಗಳು ವೋಲ್ವೊ ಬಸ್‌ಗಳನ್ನು ಬಿಟ್ಟು, ಟ್ಯಾಕ್ಸಿ ಏರುತ್ತಿದ್ದಾರೆ. ಪರಿಣಾಮ, ವೋಲ್ವೊ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಸಂಸ್ಥೆಯು ನಷ್ಟ ಅನುಭವಿಸುವಂತಾಗಿದೆ.
350 ಬಸ್‌ಗಳಲ್ಲಿ ವೈಫೈ ಸೇವೆ:-
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತಿರುವ 75 ವಾಯುವಜ್ರ ಬಸ್‌ಗಳೂ ಸೇರಿದಂತೆ ಐಟಿ ಕಾರಿಡಾರ್‌ಗಳಿಗೆ ಸಂಚರಿಸುವ 350 ವೋಲ್ವೊ ಬಸ್‌ಗಳಲ್ಲಿ ವೈಫೈ ಸೇವೆ ಒದಗಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 200 ಬಸ್‌ಗಳಲ್ಲಿ ವೈಫೈ ಸೌಲಭ್ಯ ಅಳವಡಿಸಲು ಅನುಮತಿ ನೀಡಲಾಗಿದೆ.
12 ನಿಲ್ದಾಣಗಳಲ್ಲಿ ವೈಫೈ ಜಾಲ:-
ನಗರದ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಶಾಂತಿನಗರ, ಕೆಂಗೇರಿ, ವೈಟ್‌ಫೀಲ್ಡ್, ಬನಶಂಕರಿ, ಜಯನಗರ, ಬನ್ನೇರುಘಟ್ಟ, ವಿಜಯನಗರ, ದೊಮ್ಮಲೂರು, ಯಲಹಂಕ, ಯಶವಂತಪುರ ನಿಲ್ದಾಣಗಳು ವೈಫೈ ಸೇವಾ ಜಾಲವನ್ನು ಹೊಂದಿರಲಿವೆ. ವೈಫೈ ಅಳವಡಿಕೆಗೆ ಖಾಸಗಿ ಸಂಸ್ಥೆಯೊಂದಕ್ಕೆ ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಮುಂದಿನ 15-20 ದಿನಗಳಲ್ಲಿ ಪ್ರಯಾಣಿಕರಿಗೆ ವೈಫೈ ಸೌಲಭ್ಯ ಸಿಗಲಿದೆ.
30 ಎಂಬಿ ಬಳಕೆಗೆ ಅವಕಾಶ:-
ವೋಲ್ವೊ ಬಸ್‌ಗಳು ಮತ್ತು ನಿಲ್ದಾಣಗಳಲ್ಲಿ ಲಭಿಸುವ ವೈಫೈ ಮೂಲಕ ಅಂತರ್ಜಾಲದ ಸಂಪರ್ಕ ಪಡೆದು, 30 ಎಂಬಿ ಯಷ್ಟು ಡಾಟಾ ಬಳಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ಸಮಯದ ಮಿತಿ ಇರುವುದಿಲ್ಲ. 30 ಎಂಬಿ ಮಿತಿ ದಾಟಿದಾಕ್ಷಣ ಸಂಪರ್ಕ ಕಡಿತಗೊಳ್ಳುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಲ್ಲಿಯವರೆಗೆ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ, ಕಾರಣ ಇಸ್ರೇಲ್’ಗೆ ಭೇಟಿ ಕೊಟ್ಟರೆ, ಎಲ್ಲಿ ತಮ್ಮ ದೇಶದ ಮುಸಲ್ಮಾನರ ಹಾಗೂ ಅರಬ್ ದೇಶಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತೋ ಅಂತ ಇಲ್ಲಿಯವರೆಗೂ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ಕೊಟ್ಟಿರಲಿಲ್ಲ.
ಬೆಂಗಳೂರಿನಲ್ಲಿ ಜಿಮ್ ಗೆ ಬರುವವರಿಗೆ ಹಾನಿಕಾರಕ ಔಷಧ ಕೊಡುತ್ತಿದ್ದ ಜಿಮ್ ಟ್ರೈನರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ 4 ನೇ ಮುಖ್ಯರಸ್ತೆಯಲ್ಲಿರುವ ಜಿಮ್ ನಲ್ಲಿ ಫಿಟ್ನೆಸ್ ಗಾಗಿ ಬರುತ್ತಿದ್ದವರಿಗೆ ದೇಹ ಹುರಿಗೊಳಿಸಲು ಮತ್ತು ತೆಳ್ಳಗಾಗಲು ಜಿಮ್ ಟ್ರೈನರ್ ನಿಷೇಧಿತ ಔಷಧ ಕೊಡುತ್ತಿದ್ದ. ನಿಷೇಧಿತ ಡ್ರಗ್ಸ್ ಗಳನ್ನು ಬೇರೆ ಕಡೆಯಿಂದ ತರಿಸಿ ಕೊಡುತ್ತಿದ್ದ. ಜಿಮ್ ಗೆ ಬರುತ್ತಿದ್ದ ಕೆಲವರಿಗೆ ಈ ನಿಷೇಧಿತ ಔಷಧ ಸೇವಿಸಿದ್ದರಿಂದ ಆರೋಗ್ಯದ ಸಮಸ್ಯೆ ಎದುರಾಗಿದೆ. ಕೆಲವರಿಗೆ ಪುರುಷತ್ವ ಕಡಿಮೆಯಾಗಿದೆ ಎನ್ನಲಾಗಿದೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡವರಿಗೆ…
ಮನುಷ್ಯತ್ವ ಮರೆತು ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದು ಅಮಾನುಷವಾಗಿ ಹಲ್ಲೆ ಮಾಡಿ ಕೊಂದಿದ್ದ ಆರೋಪಿ ಪವನ್ ಬಂಗಾರ್ ಗೆ ಕೋರ್ಟ್ ಎರಡು ಬಾರಿ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹಾಲು ಒಡೆದು ಹೋಗುವುದು ಸಾಮಾನ್ಯ ಸಂಗತಿ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಹಾಲು ಒಡೆಯುತ್ತಲೇ ಇರುತ್ತದೆ. ಒಡೆದ ಹಾಲನ್ನು ಬಿಸಾಡುವುದೇ ಹೆಚ್ಚು. ಆದರೆ ಈ ಒಡೆದ ಹಾಲಿನಲ್ಲಿ ಪೋಷಕಾಂಶಗಳು ಹೆಚ್ಚು. ಹಾಗೇ ಅದರಿಂದ ಏನೇನು ಪ್ರಯೋಜನವಿದೆ ಎಂದು ನೋಡೋಣ. * ಒಡೆದ ಹಾಲಿನ ನೀರಿನಲ್ಲಿ ಪ್ರೊಟೀನುಗಳ ಪ್ರಮಾಣ ಹೆಚ್ಚು. ಈ ನೀರಿನಿಂದ ಸ್ನಾಯುವಿನ ಶಕ್ತಿ ಹೆಚ್ಚಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. * ಒಡೆದ ಹಾಲಿನ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು….
ಫೇಸ್ಬುಕ್ನಲ್ಲಿ ಪ್ರೊಫೈಲ್ ಚಿತ್ರವನ್ನು ನಾವು ಹಾಕುವುದಕ್ಕೆ ಮುಂಚೆ ಹಿಂಜರಿಯುವುದು ಸಹಜ.ನಿಮಗೆಲ್ಲಾ ಗೊತ್ತಿರುವ ಹಾಗೆ ಕೆಲವರು ಪ್ರೊಫೈಲ್ ಫೋಟೋಗಳನ್ನು ದುರುಪಯೋಗ ಮಾಡಿಕೊಳ್ಳುವ ತುಂಬಾ ಘಟನೆಗಳು ನಡೆಯುತ್ತಿರುತ್ತವೆ.
ದಿನಬೆಳಗಾದ್ರೆ ನಾವು ಕನ್ನಡಿಗರು ನಮ್ಮ ಕರ್ನಾಟಕ, ಭಾಷೆ ಕನ್ನಡದ ಬಗ್ಗೆ ಹಾಗೆ ಹೀಗೆ ಅಂತ ಮಾತನಾಡುತ್ತೇವೆ. ಆದ್ರೆ ಕನ್ನಡಿಗರಾಗಿ ನಮ್ಮ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ.