ಗ್ಯಾಜೆಟ್

ಇದು ಸೆಲ್ಫಿ ಯುಗ,ಸೆಲ್ಫಿ ತೆಗೆಯುವ ಮುನ್ನ ಈ ಸುದ್ದಿಯನ್ನು ಓದಿ…

133

ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ ನಡೆಯುತ್ತಿರುವ ಸಾವಿನಲ್ಲಿ ಶೇಕಡಾ 60ರಷ್ಟು ಪಾಲು ಭಾರತದ್ದಿದೆ. ಕಳೆದ ಎರಡು ವರ್ಷಗಳ ಅಂಕಿ-ಅಂಶ ಇದನ್ನು ಸ್ಪಷ್ಟಪಡಿಸಿದೆ.

ಹೊಸ ವರ್ಷಕ್ಕೆ ಇನ್ನೆರೆಡೇ ದಿನ ಬಾಕಿ ಇದೆ. ಹೊಸ ವರ್ಷದ ಪಾರ್ಟಿಗೆ ಎಲ್ಲ ತಯಾರಿ ಶುರುವಾಗಿದೆ. ಡ್ರೆಸ್, ಆಹಾರ, ಪಾರ್ಟಿ ಹಾಲ್ ಎಲ್ಲ ಬುಕ್ ಆಗ್ತಿದೆ. ಎಲ್ಲವೂ ಪರ್ಫೆಕ್ಟ್ ಆಗಿರಬೇಕೆನ್ನುವವರು ಫೋಟೋಗ್ರಫಿ ಬಗ್ಗೆಯೂ ಹೆಚ್ಚು ಗಮನ ನೀಡಬೇಕಾಗುತ್ತದೆ. ಪಾರ್ಟಿ ಎಂಜಾಯ್ ಮಾಡಿದ ಫೋಟೋ ಚೆನ್ನಾಗಿ ಬರಲಿಲ್ಲವೆಂದ್ರೆ ಮೂಡ್ ಹಾಳಾಗೋದು ನಿಶ್ಚಿತ. ಹಾಗಾಗಿ ಸೆಲ್ಫಿ ತೆಗೆಯುವ ಮುನ್ನ ಕೆಲವೊಂದು ವಿಷ್ಯದ ಬಗ್ಗೆ ಗಮನವಿರಲಿ.

ಈ ಮಧ್ಯೆ ನಡೆದ ಸಂಶೋಧನೆಯೊಂದು ಸೆಲ್ಫಿಯನ್ನು ಮಾನಸಿಕ ಸಮಸ್ಯೆ ಎಂದು ಘೋಷಣೆ ಮಾಡಿದೆ. ಯುಕೆ ನ ನಾಟ್ಟಿಂಗ್ಹ್ಯಾಮ್ ಟ್ರೆಂಟ್ ಯುನಿವರ್ಸಿಟಿ ಮಧುರೈನ ತ್ಯಾಗರಾಜ್ ಮ್ಯಾನೇಜ್ಮೆಂಟ್ ಸ್ಕೂಲ್ನಲ್ಲಿ ಈ ಅಧ್ಯಯನ ನಡೆಸಿದೆ.

ಅಗತ್ಯಕ್ಕಿಂತ ಹೆಚ್ಚು ಸೆಲ್ಫಿ ತೆಗೆಯುವುದು ಹಾಗೂ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದು ಒಂದು ರೋಗ. ಇದನ್ನು ಸೆಲ್ಫಿಟಿಸ್ ಎಂದು ಕರೆಯಲಾಗುತ್ತದೆ. ಸೆಲ್ಫಿಟಿಸ್ ಅನೇಕ ವರ್ಷಗಳಿಂದ ಕೇಳಿ ಬರ್ತಿರುವ ಶಬ್ಧ. ಆದ್ರೆ ಇದಕ್ಕೆ ತಜ್ಞರು ಈಗ ಮಾನಸಿಕ ರೋಗದ ರೂಪ ನೀಡಿದ್ದಾರೆ.

ಸಂಶೋಧನೆ ಇದನ್ನು ಸೆಲ್ಫಿಟಿಸ್ ಬಿಹೇವಿಯರ್ ಸ್ಕೇಲ್ ಎಂದು ಕರೆದಿದೆ. ಇದ್ರಲ್ಲಿ ಮೂರು ಹಂತವಿರುತ್ತದೆ. ಆರಂಭದಲ್ಲಿ ಈ ರೋಗಿಗಳು ದಿನದಲ್ಲಿ ಮೂರು ಬಾರಿ ಮಾತ್ರ ಫೋಟೋ ತೆಗೆಯುತ್ತಾರೆ. ಆದ್ರೆ ಸಾಮಾಜಿಕ ಜಾಲತಾಣಕ್ಕೆ ಹಾಕುವುದಿಲ್ಲ. ಎರಡನೇ ಹಂತದಲ್ಲಿ ಸೆಲ್ಫಿ ತೆಗೆಯುವ ಪ್ರಮಾಣ ಹೆಚ್ಚಾಗುವ ಜೊತೆಗೆ ಸಾಮಾಜಿಕ ಜಾಲತಾಣಕ್ಕೆ ಫೋಟೋ ಹಾಕುವ ಪ್ರಕ್ರಿಯೆ ಶುರುವಾಗುತ್ತದೆ. ದಿನದಲ್ಲಿ ಹೆಚ್ಚೆಚ್ಚು ಫೋಟೋ ಹಾಕಲು ಮನಸ್ಸು ಹಾತೊರೆಯುತ್ತದೆ. ಈ ಕ್ರಿಯೆ ಮಿತಿ ಮೀರಿದಲ್ಲಿ ಅದನ್ನು ಕೊನೆಯ ಹಂತವೆಂದು ಪರಿಗಣಿಸಲಾಗುತ್ತದೆ.

ಸೆಲ್ಫಿ ಹುಚ್ಚಿಗೆ ಬಲಿಯಾಗುತ್ತಿರುವ ಪ್ರಕರಣವನ್ನು ಅನೇಕ ದೇಶಗಳು ಗಂಭೀರವಾಗಿ ತೆಗೆದುಕೊಂಡಿವೆ. ಈ ಬಗ್ಗೆ ಅನೇಕ ಜಾಗೃತಿಗಳು ನಡೆಯುತ್ತಿವೆ. ಆದ್ರೆ ಅಷ್ಟೊಂದು ಸೆಲ್ಫಿ ಹುಚ್ಚಿಗೆ ಸರಿಯಾದ ಕಾರಣ ಪತ್ತೆಯಾಗಿಲ್ಲ. ಆತ್ಮವಿಶ್ವಾಸದ ಕೊರತೆ, ಗಮನ ಸೆಳೆಯಲು, ಬೇರೆಯವರಿಗಿಂತ ಮುಂದಿರಲು ಬಯಸುವವರು ಈ ಹುಚ್ಚು ಹಚ್ಚಿಕೊಳ್ತಾರೆ ಎಂದು ನಂಬಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಇಲ್ಲಿದೆ ನೋಡಿ ಯಶ್ ರಾಧಿಕಾ ಪಂಡಿತ್ ರವರ ಮುದ್ದು ಮಗಳ ಫೋಟೋ…

    ನಟ ರಾಕಿಂಗ್ ಸ್ಟಾರ್ ಯಶ್ ರವರಿಗೆ ಅವರು ಅಂದುಕೊಂಡಂತೆ ಪತ್ನಿ ರಾಧಿಕಾ ಪಂಡಿತ್ ರವರಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ.ತಮ್ಮ ಮುದ್ದಿನ ಮಗಳು ಕೈ ಬೆರಳನ್ನು ಬಿಗಿದಪ್ಪಿದ್ದ ವೇಳೆ ಪುಳಗೊಂಡಿರುವ ನಟ ಯಶ್, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾದ ಯಶ್ ಮಗಳ ಬಗ್ಗೆ, “ನನ್ನ ಬೆರಳುಗಳನ್ನು ಬಿಗಿಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ! ಯಾರನ್ನಾದರೂ ಕನಿಷ್ಠ ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವ. ಇನ್ನು ಅವಳನ್ನು ಕಣ್ತುಂಬಿಕೊಂಡ…

  • ಹಣ ಕಾಸು

    ಜಿಎಸ್‍ಟಿ ತೆರಿಗೆ(ನಾಳೆ ಜುಲೈ1)ರಿಂದ ಈ ಸೇವೆಗಳು ದುಬಾರಿಯಾಗಲಿವೆ!

    ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್‍ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ

  • ಉಪಯುಕ್ತ ಮಾಹಿತಿ

    ನಿಮ್ಮ ವಾಹನದ ಸಂಖ್ಯೆ ಯಾವ ಜಿಲ್ಲೆಗೆ ಸೇರಿದ್ದು ಅನ್ನೋದು ನಿಮ್ಗೆ ಗೊತ್ತಾ..?ನೋಡೋದು ಹೇಗೆ ಮುಂದೆ ಓದಿ ತಿಳಿಯಿರಿ…

    ನೋಡಿ, ನಾವು ದಿನಾಲೂ ನೋಡುವ ಬಳಸುವ ವಸ್ತುಗಳ ಬಗ್ಗೆ ಮಾಹಿತಿಯೇ ಗೊತ್ತಿರೋದಿಲ್ಲ.ಯಾಕಂದ್ರೆ ನಾವು ಅದು ಏನು,ಎತ್ತ ಅಂತ ತಿಳ್ಕೊಲ್ಲೋ ಗೊಡವೆಗೆ ಹೋಗೋದಿಲ್ಲ. ಅದರಲ್ಲಿ ಒಂದನ್ನು ಹೇಳಬೇಕಂದ್ರೆ ನಮ್ಮ ವಾಹನದ ರಿಜಿಸ್ಟ್ರೇಷನ್ ಸಂಖ್ಯೆ. ಏನಪ್ಪಾ ನಾವು ಹೊಸ ಗಾಡಿ ತಂಡ ಮೇಲೆ ಅರ್ ಟಿ ಓ ಗೆ ಹೋಗ್ತೀವಿ.ರಿಜಿಸ್ಟ್ರೇಷನ್ ಮಾಡಿಸ್ಕೊಂಡು ಬರ್ತೀವಿ.ಮತ್ತೆ ಬೇರೆ ಉಸಾಬರಿ ನಮಗೆತಕ್ಕೆ ಅಂತ ಅನ್ಕೊಳ್ತಿವಿ.ಆದ್ರೆ ಆದಷ್ಟೂ ನಾವು ಉಪಯೋಗಿಸುವ ಯಾವುದೇ ವಸ್ತುಗಳಾಗಲಿ,ವಾಹನಗಲಾಗಲಿ ಅದರ ಬಗ್ಗೆ ನಾವು ತಿಳಿದಿರ್ಲೆಬೇಕು.

  • ಸುದ್ದಿ

    ಸೀಮಂತ ಸಂಭ್ರಮದಲ್ಲಿ ಸಿಂಡ್ರೆಲ್ಲಾರಂತೆ ಸ್ಯಾಂಡಲ್ ವುಡ್ ರಾಧಿಕಾ….!

    ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ಸೀಮಂತ ಮಾಡಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ್ದಾರೆ.ರಾಕಿಂಗ್ ಸ್ಟಾರ್ ಪತ್ನಿ ಸೀಮಂತ ಸಂಭ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಅಂತಾನೆ ಖ್ಯಾತಿಗಳಿಸಿರುವ ರಾಧಿಕಾ ಸೀಮಂತ ಸಂಭ್ರಮದಲ್ಲಿ ಸಿಂಡ್ರೆಲ್ಲಾ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. ಇತ್ತೀಚಿಗೆ ರಾಧಿಕಾ ಪಂಡಿತ್ ಸ್ನೇಹಿತರು ರಾಧಿಕಾಗೆ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ. ಈ ಬಗ್ಗೆ ರಾಧಿಕಾ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ನನ್ನ ಸ್ನೇಹಿತರು ನನಗೆ ಅದ್ಭುತವಾದ ಬೇಬಿ ಶವರ್…

  • ವಿಸ್ಮಯ ಜಗತ್ತು

    ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿದ್ದ ಈ ವೃದ್ದ ಮಹಿಳೆ,ಅದೇ ದೇವಸ್ಥಾನಕ್ಕೆ ಕೊಟ್ಟ ಹಣ ಎಷ್ಟು ಗೊತ್ತಾ?ಈ ಲೇಖನ ಓದಿ ಶಾಕ್ ಆಗ್ತೀರಾ…

    ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ದೇವಸ್ಥಾನದ ನವೀಕರಣಕ್ಕಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿ ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಮೈಸೂರು ಅರಮನೆಯ
    ಮುಂಭಾಗದಲ್ಲಿರುವ ಪ್ರಸಿದ್ದ ಪ್ರಸನ್ನ ಅಂಜನೇಯ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾ, ದೇವಸ್ಥಾನದ ನವೀಕರಣಕ್ಕೆ ದೇಣಿಗೆ ನೀಡಿದ ಮಹಾನ್ ಭಕ್ತೆ.

  • Law

    ಚಿನ್ನದ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್..! ಶಾಕ್ ಆಗ್ಬೇಡಿ! ಈ ಲೇಖನಿ ಓದಿ…

    ಯಾಕೆಂದ್ರೆ ಇನ್ನು ಮುಂದೆ ಎಲ್ಲಾ ಬಗೆಯ ಚಿನ್ನದ ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯವಾಗಿದೆ. ಹೌದು, ಎಲ್ಲಾ ರೀತಿಯ ಚಿನ್ನದ ವಹಿವಾಟುಗಳಿಗೆ ಪಾನ್ ಸಂಖ್ಯೆ ನಮೂದಿಸುವುದನ್ನು ಕೇಂದ್ರ ಸರ್ಕಾರ  ಕಡ್ಡಾಯ ಮಾಡಿದೆ.