ದೇಶ-ವಿದೇಶ

ಇದು ಭಾರತದ ಮಿನಿ ಇಸ್ರೇಲ್! ಆದ್ರೆ ಇಲ್ಲಿ ನಮ್ಮ ಭಾರತೀಯರಿಗೆ ಪ್ರವೇಶವಿಲ್ಲ !!!

3935

ನಮ್ಮ ಭಾರತದಲ್ಲಿರುವ ವಿವಿಧ ರೀತಿಯ ಸಂಪ್ರಧಾಯಗಳು, ನಮ್ಮ ಆಹಾರ ಪದ್ಧತಿ, ನಮ್ಮ ವೇಷ ಭೂಷಣ ಹಾಗೂ ಇಲ್ಲಿರುವ ಪಾಕೃತಿಕ ಸೌಂದರ್ಯವನ್ನು ವೀಕ್ಷಿಸಲು ಹಾಗೂ ಅಧ್ಯನ ಮಾಡಲು ಅನೇಕ ಬೇರೆ ಬೇರೆ ದೇಶದ ವಿದೇಶಿಗರು  ಬರುತ್ತಿರುತ್ತಾರೆ.ಅವರಲ್ಲಿ ಇಸ್ರೇಲಿಗರು ಕೂಡ ಸೇರಿದ್ದಾರೆ. ನಮ್ಮ ಪ್ರಧಾನಿಗಳು ಕೂಡ ಇಸ್ರೇಲ್ ಪ್ರವಾಸ ಮುಗಿಸಿ ಬಂದಿದ್ದಾರೆ. ಆದರೆ ಭಾರತದಲ್ಲಿಯೇ ಒಂದು ಇಸ್ರೇಲ್ ಇದೆ. ದಿಲ್ಲಿಗೆ ಸಮೀಪದಲ್ಲಿ, ಅಲ್ಲಿಂದ 512 ಕಿಲೋಮೀಟರ್ ದೂರಕ್ಕೆ ಹೋದರೆ ಭಾರತದಲ್ಲಿ ಇಸ್ರೇಲ್ ದೇಶ ಕಂಡು ಬರುತ್ತದೆ. ಅಂದರೆ ನೀವು ದಿಲ್ಲಿಯಿಂದ ಹಿಮಾಚಲ ಪ್ರದೇಶದ ಕಸೋಲಾಕ್ಕೆ ಹೋಗಬೇಕು. ಅಲ್ಲಿ ನೀವು ಇಸ್ರೇಲ್‌ನ್ನು ನೋಡುವಿರಿ.

ಕಸೋಲ್ ಭಾರತದ ಮಿನಿ ಇಸ್ರೇಲ್ ಆಗಿ ಹೋಗಿದೆ:-

ಹಿಮಾಚಲ ಪ್ರದೇಶದಲ್ಲಿರುವ ಕಸೋಲ್ ಕಾಡಿನ ನಡುವಿನ, ಪರ್ವತ ಮತ್ತು ನದಿ ದಡದ ಒಂದು ಪ್ರದೇಶವಾಗಿದೆ. ಇಲ್ಲಿನ ಜನಸಂಖ್ಯೆ ಬಹಳ ಹೆಚ್ಚಿಲ್ಲ. ಜೊತೆಗೆ ಶಾಂತ ಮತ್ತು ತಣ್ಣಗಿನ ವಾತಾವರಣ ಇಲ್ಲಿದೆ. ಈ ಪ್ರದೇಶ, ದೇಶಿ-ವಿದೇಶಿ ಪ್ರತಿಯೊಬ್ಬರನ್ನೂ ತಮ್ಮೆಡೆಗೆ ಸೆಳೆಯುತ್ತದೆ. ಅಂತಹ ಸೌಂದರ್ಯ ಈ ಹಳ್ಳಿಯದ್ದಾಗಿದೆ. ಇಲ್ಲಿಗೆ ಇಸ್ರೇಲಿ ಪ್ರವಾಸಿಗರು ಹೆಚ್ಚು ಬರುವುದರಿಂದ ಮಿನಿ ಇಸ್ರೇಲ್ ಎಂದು ಕರೆಯಲಾಗುತ್ತಿದೆ. ಇಲ್ಲಿಗೆ ಇಸ್ರೇಲಿಗರು ಮಾತ್ರವಲ್ಲ ಬೇರೆಯವರು ಕೂಡಾ ಬರುತ್ತಾರೆ. ಅದರೆ ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲಿಯನ್ನರು ಬರುತ್ತಾರೆ. ದೇಶದ ವಿದೇಶಗಳ ಮೂಲೆ ಮೂಲೆಗಳಿಂದ ಇಲ್ಲಿಗೆ ಬರುತ್ತಾರೆ.

1990ರಿಂದಲೂ  ಇಸ್ರೇಲಿ ಪ್ರವಾಸಿಗರು ಈ ಗ್ರಾಮಕ್ಕೆ ಬರುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ಈ ಗ್ರಾಮದ ಸಂಸ್ಕೃತಿಯಲ್ಲಿ ಇಸ್ರೇಲಿನ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೈನ್ಯದ ತರಬೇತಿ ಪಡೆದ ಬಳಿಕ ಇಸ್ರೇಲ್ ನಾಗರಿಕರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಅಲ್ಲಿನೋಡಿದರೆ ಇದು ಯಾವುದೊ ಇಸ್ರೇಲಿ ಊರಾಗಿದೆಯೇ ಎಂದು ಅನಿಸುತ್ತದೆ. ಇಲ್ಲಿ ಓದಿ:-ಈ ಪುಟ್ಟ ರಾಷ್ಟ್ರವನ್ನು ಕಂಡ್ರೆ, ಸುತ್ತ ಮುತ್ತಲಿರುವ ದೇಶಗಳಿಗೆ ಭಯ!

ಇಸ್ರೆಲಿಗರು ಮತ್ತು ಈ ಪ್ರದೇಶಕ್ಕೂ ಸಾಂಸ್ಕೃತಿಕವಾಗಿ ಸಂಬಂಧ ಇರುವುದರಿಂದ, ಇಲ್ಲಿಗೆ ಇಸ್ರೇಲಿಗರು ಬರುತ್ತಾರೆ. ಇಲ್ಲಿ ಇಸ್ರೆಲಿಗರು ಹೆಚ್ಚಾಗಿ ಕಂಡುಬರುವುದರಿಂದ ಇಲ್ಲಿ ಅವರ ಹೀಬ್ರೂ ಭಾಷೆಯೇ ಪ್ರಧಾನವಾಗಿ ಹೋಗಿದೆ. ಹಾಗಾಗಿ ಇಲ್ಲಿ ಎಲ್ಲಿ ನೋಡಿದರೂ ಈ ಭಾಷೆಯ ಪೋಸ್ಟರ್’ಗಳೆ ಕಾಣಿಸುತ್ತವೆ. ಹೊಟೇಲುಗಳ ಹೆಸರು ಹೀಬ್ರೂ ಭಾಷೆಯಲ್ಲಿದೆ. ಮತ್ತು ಮೆನು ಕೂಡಾ ಆಹಾರದ ಪಟ್ಟಿಕೂಡಾ ಹೀಬ್ರೂ ಭಾಷೆಯಲ್ಲಿರುತ್ತದೆ. ಸ್ಥಳೀಯರು ಮತ್ತು ಕೆಲವು ಹೊಟೇಲು ಮಾಲಿಕರು ಹೀಬ್ರೂ ಭಾಷೆಯನ್ನುಸ್ವಲ್ಪಸ್ವಲ್ಪ ಕಲಿತುಕೊಂಡಿದ್ದಾರೆ. ಇಲ್ಲಿ ಇಸ್ರೇಲ್‌ನ ಬಾವುಟ ಕೂಡಾ ಕಂಡುಬರುತ್ತದೆ.

ಇಲ್ಲಿಗೆ ಇಸ್ರೇಲಿಗರಿಗೆ ಅವರದೇ ರೀತಿಯಲ್ಲಿ ಆಹಾರಸಿಗುತ್ತದೆ. ಭಾಷೆ ಮಾತಾಡುವವರು ಇರುತ್ತಾರೆ. ಹೀಗೆ ಎಲ್ಲವೂ ಸಿಗುವುದರಿಂದ ಅವರು ಇಲ್ಲಿಗೆ ಬರುತ್ತಾರೆ. ಈ ಜನರು ತಾವಿರುವಲ್ಲಿ ಯಾವುದೇ ಭಾರತೀಯನನ್ನು ನೋಡಲು ಬಯಸುವುದಿಲ್ಲ.

ತಮ್ಮದೇ ದೇಶದಲ್ಲಿ ಭಾರತೀಯರಿಗೆ ನಿಷೇಧ:

ಹೌದು, ಈ ಸತ್ಯ ನಂಬಲೇಬೇಕು. ನೀವು ಅಲ್ಲಿಗೆ ಹೋದರೆ ನಿಮಗೆ ಅಲ್ಲಿಗೆ ಪ್ರವೇಶ ಸಿಗಲಾರದು. ಕಸೋಲ್ ನಲ್ಲಿ ಹೀಬ್ರೂ ಭಾಷೆಯಲ್ಲಿ ಬೋರ್ಡ್ ಇರುತ್ತದೆ. ಅಲ್ಲಿ ಒಂದು ರೆಸ್ಟಾರೆಂಟ್‌ನಲ್ಲಿ ಭಾರತೀಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬ್ರಹ್ಮಾವರದಲ್ಲಿ ಮಹಾಮಳೆಯ ಅಬ್ಬರ : ಜನಜೀವನ ಅಸ್ತವ್ಯಸ್ತ…..!

    ಬ್ರಹ್ಮಾವರ ತಾಲೂಕಿನೆಲ್ಲೆಡೆ ಕುಂಭ ದ್ರೋಣ ಮಳೆಯ ಅಬ್ಬರ ಜೋರಾಗಿದ್ದು, ಮಂಗಳವಾರ ಬೆಳಗ್ಗಿನಿಂದಲೇ ಸುರಿದ ಮಳೆಯಿಂದಾಗಿ ಹಲವೆಡೆಗಳಲ್ಲಿ ನೆರೆ ಆವರಿಸಿದೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. ಬ್ರಹ್ಮಾವರ ಪರಿಸರದ ಮಟಪಾಡಿ, ನೀಲಾವರ, ನಂದನಕುದ್ರು, ರಾಮನಕುದ್ರು, ಬಲ್ಜಿ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು ಇದರಿಂದಾಗಿ ವಾಹನ ಸವಾರರು ಕೂಡ ಸಮಸ್ಯೆಯನ್ನು ಅನುಭವಿಸಿದರು. ಅನೇಕ ಕಡೆಗಳಲ್ಲಿ ಭತ್ತದ ಕೃಷಿ ಬೆಳೆದಿರುವ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ….

  • ಜ್ಯೋತಿಷ್ಯ

    ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ನಿಮ್ಮ ರಾಶಿಯಲ್ಲೇನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(11 ಏಪ್ರಿಲ್, 2019) ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ಇಂದು…

  • ಮನರಂಜನೆ

    ಕಿಶನ್ ಕಣ್ಣೀರು ಹಾಕ್ತಿದ್ದಂತೆ, ವೇದಿಕೆ ಮೇಲೆ ಸ್ಪೆಷಲ್ ಗಿಫ್ಟ್ ನೀಡಿದ ಕಿಚ್ಚ.

    ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಡ್ಯಾನ್ಸರ್ ಕಿಶನ್ ವೇದಿಕೆಯ ಮೇಲೆ ಕಣ್ಣೀರು ಹಾಕಿದ ತಕ್ಷಣ ನಟ ಸುದೀಪ್ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಗಿಫ್ಟ್ ಆಗಿ ಕೊಟ್ಟಿದ್ದಾರೆ. ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್‍ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಈ ವೇಳೆ ಕಿಶನ್ ವೇದಿಕೆಯಲ್ಲಿ ತಮ್ಮ ಬಿಗ್‍ಬಾಸ್ ಜರ್ನಿಯ ವಿಡಿಯೋವನ್ನು ನೋಡಿದ್ದಾರೆ. ಅದನ್ನು ನೀಡಿದ ತಕ್ಷಣ ಕಿಶನ್ ಕಣ್ಣೀರು ಹಾಕಿದ್ದಾರೆ….

  • ಸುದ್ದಿ

    ಮೊದಲ ಬಾರಿ ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ. ಇದರ ಹಿನ್ನೆಲೆಯೇನು.

    ರಾಜಕಾರಣಿಗಳಾಯಿತು ಇದೀಗ ಐಪಿಎಸ್ ಅಧಿಕಾರಿಯ ಸರದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ರವಿ ಡಿ ಚನ್ನಣ್ಣನವರ್ ಇದೇ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವಿರುವ ಹಿನ್ನೆಲೆಯಲ್ಲಿ ರವಿ ಚನ್ನಣ್ಣನವರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕೋಮು ಗಲಭೆ ತಡೆಯಲು ಈ ಪ್ರಯತ್ನ ಮಾಡಲಾಗಿದ್ದು, ಅವರಿಗಾಗಿ ಶಾಲೆಯಲ್ಲಿ ಬೆಡ್, ಬೆಡ್ ಶೀಟ್, ಇನ್ನಿತರ ವಸ್ತುಗಳ ಸಿದ್ಧತೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ…

  • ಉಪಯುಕ್ತ ಮಾಹಿತಿ

    ಈಗ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಹೈ ಸ್ಪೀಡ್ ಬ್ರಾಡ್ ಬಾಂಡ್ ಸೇವೆ..!ತಿಳಿಯಲು ಈ ಲೇಖನ ಓದಿ ..

    ಭಾರತ್ ನೆಟ್ ಯೋಜನೆಯ ಎರಡನೇ ಹಾಗೂ ಅಂತಿಮ ಹಂತವನ್ನು ಇಂದು ದೂರಸಂಪರ್ಕ ಇಲಾಖೆ ಸಚಿವ ಮನೋಜ್ ಸಿನ್ಹಾ, ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಉದ್ಘಾಟಿಸಲಿದ್ದಾರೆ.

  • ದೇವರು-ಧರ್ಮ

    ಹಾಸನಾಂಬೆಯ ಕಾಣಿಕೆ ಹುಂಡಿ ಎಣಿಕೆ ವೇಳೆ ಸಿಕ್ಕಿದ್ದೇನು ಗೊತ್ತಾ..?

    ಹಾಸನಾಂಬೆಯ ದೇವಾಲಯ ಬಾಗಿಲು ಬುಧವಾರ ಮುಚ್ಚಲಾಗಿದ್ದು, 13 ದಿನಗಳ ದರ್ಶನ ನಂತರ ನಿನ್ನೆ ಮಧ್ಯಾಹ್ನ 1.20 ಕ್ಕೆ  ದೇವಾಲಯದ ಬಾಗಿಲು ಮುಚ್ಚಲಾಗಿದೆ. ಇಂದು ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ಹಾಸನಾಂಬೆಗೆ ಭಕ್ತರಿಂದ ವಿಶಿಷ್ಟ ಮನವಿ ಪತ್ರಗಳು ಬಂದಿದ್ದು, ಹಲವು ಬೇಡಿಕೆಗಳನ್ನು ಭಕ್ತರು ಪತ್ರದಲ್ಲಿ ನಮೂದಿಸಿದ್ದಾರೆ, ಹಳೇ ನೋಟುಗಳು ಸಿಕ್ಕಿದೆ. ಅದರಲ್ಲೂ ಬ್ಯಾನ್ ಆಗಿರುವ ಹಳೆಯ ಸಾವಿರ ರೂಪಾಯಿ ಮುಖಬೆಲೆಯುಳ್ಳ ನೋಟುಗಳು ಜಾಸ್ತಿ ಪತ್ತೆಯಾಗಿದೆ. ಅಲ್ಲದೇ, ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಬರೆದು ವೆರೈಟಿ ವೆರೈಟಿ ಪತ್ರಗಳು, ಲವ್…