ಜ್ಯೋತಿಷ್ಯ

ಇಂದು ಶನಿವಾರ 10/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

208

ಇಂದು ಶನಿವಾರ 10/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಇಂದಿನ ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಶನಿವಾರ, ಜ್ಯೇಷ್ಠ ನಕ್ಷತ್ರ

ಮೇಷ:

ನಿಮ್ಮ ಆರೋಗ್ಯದ ಮೇಲೆ ನೀವು ಮೊದಲ ಆದ್ಯತೆ ನೀಡಬೇಕು.ಕೈಗೆ ಎಟುಕದೆ ಇಷ್ಟು ದಿನ ಕಾಡುತ್ತಿದ್ದ ಕಾರ್ಯವೊಂದು ದಿಢೀರನೆ ನಿಮ್ಮ ಪ್ರಯತ್ನದಿಂದ ಸಿದ್ಧಿಸುವುದು. ಪ್ರವಾಸ ಮನರಂಜನೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇಂದು ನಿಮ್ಮ ಕಾರ್ಯಸೂಚಿಯಲ್ಲಿರುತ್ತವೆ.

ವೃಷಭ:-

ಆರೋಗ್ಯದ ಕಡೆ ಗಮನ ಇರಲಿ.ಇಂದು, ನೀವು ನಿಮ್ಮ ಪ್ರಿಯತಮೆ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿದುಕೊಳ್ಳುತ್ತೀರಿ.ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಡ್ಡದಾರಿಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಅವರು ಮಾನಸಿಕವಾಗಿ ಅಸ್ಥಿರವಾಗುತ್ತಾರೆ.  ಆಂಜನೇಯ ಸ್ತೋತ್ರ ಪಠಿಸಿ.

ಮಿಥುನ:

ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ.ಮಕ್ಕಳು ತುಂಟತನ ಮಾಡುತ್ತಾರೆ ಮತ್ತು ಅವರನ್ನು ನೀವು ಉತ್ತಮ ದಿಕ್ಕಿಗೆ ಮಾರ್ಗದರ್ಶಿಸಬೇಕು.ಕುಟುಂಬದ ಕಾರ್ಯಕ್ರಮದಲ್ಲಿ ಹೊಸ ಸ್ನೇಹಿತರು ಕಾಣುತ್ತಾರೆ. ಆದರೆ ನಿಮ್ಮ ಆಯ್ಕೆಯಲ್ಲಿ ಎಚ್ಚರಿಕೆಯಿಂದಿರಿ. ಒಳ್ಳೆಯ ಸ್ನೇಹಿತರು ನೀವು ಯಾವಾಗಲೂ ಉಳಿಸಿಕೊಳ್ಳಬಯಸುವ ನಿಧಿಯಂತೆ.ಹಣಕಾಸು ವ್ಯವಹಾರ ಅಥವಾ ಲೇವಾದೇವಿ ವ್ಯವಹಾರದಲ್ಲಿ ಸೂಕ್ತ ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಹಿ ಮಾಡಿ. ಇಲ್ಲದೆ ಇದ್ದಲ್ಲಿ ನೀವು ಅನಗತ್ಯ ತೊಂದರೆಗೆ ಸಿಲುಕಿಕೊಳ್ಳುವಿರಿ.

ಕಟಕ :-

ಯಾವುದೇ ಈಡೇರದ ಪ್ರಯಾಣ ಈ ಅವಧಿಯಲ್ಲಿ ನಡೆಯಬಹುದಾಗಿದೆ.ಹಣಕಾಸು ಲಾಭ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಬರುತ್ತದೆ.ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಬಾಳಸಂಗಾತಿಯು ನಿಮಗೆ ಎಲ್ಲ ದೃಷ್ಟಿಯಿಂದಲೂ ನೆರವಾಗುತ್ತಾರೆ.ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವರು. ಆರ್ಥಿಕ ಸ್ಥಿತಿ ಉತ್ತಮವಾಗಿದೆ.

 ಸಿಂಹ:

ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಇಂದು ಖರೀದಿಸಲು ಪ್ರಯತ್ನಿಸಿ. ಮಕ್ಕಳು ನಿಮ್ಮ ಭಾವನೆಗಳಿಗೆ ಸ್ಪಂದಿಸದೆ ಇರುವುದು ನಿಮಗೆ ಬೇಸರವನ್ನುಂಟು ಮಾಡುತ್ತದೆ. ನೀವು ನಿಮ್ಮ ಮೇಲೆ ನಿಯಂತ್ರಣ ಹೊಂದಿರಬೇಕು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸವಾಲಿನ ವಿಷಯವಾಗಿರುತ್ತದೆ.

ಕನ್ಯಾ :-

ಹಣಕಾಸಿನ ಚಿಂತೆ ಇರುವುದಿಲ್ಲ.ಅತಿಯಾದ ಕೆಲಸ ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಕೆಲಸದ ಸ್ಥಳದಲ್ಲಿ, ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಹೆಚ್ಚುವರಿ ಪ್ರಯತ್ನ ಹಾಕುವುದರಲ್ಲಿ ನೀವು ನಂಬಿಕೆ ಇರಿಸಬೇಕು.ಭೂಮಿ ಸಂಬಂಧವಾದ ಕಾಗದ ಪತ್ರಗಳು ಕೈಸೇರುವ ಸಾಧ್ಯತೆ ಇರುತ್ತದೆ ಮತ್ತು ಕೆಲವು ವಿಚಾರಗಳಲ್ಲಿ ಹಿರಿಯರ ಮಧ್ಯಸ್ಥಿಕೆಯಿಂದ ಕೆಲಸವು ಸುಗಮವಾಗಿ ಆಗುತ್ತದೆ.ನೀವು ನಿಮ್ಮ ಸಂಗಾತಿಯೊಂದಿಗೆ ಇಂದು ಏನನ್ನೂ ಹಂಚಿಕೊಳ್ಳಲು ಮರೆಯುವುದರಿಂದ ಅವರು ಇಂದು ನಿಮ್ಮ ಜೊತೆ ಜಗಳವಾಡಬಹುದು.ಹಣಕಾಸಿನ ಚಿಂತೆ ಇರುವುದಿಲ್ಲ.

ತುಲಾ:

ಪರಸ್ಪರರು ಉತ್ತಮವಾಗಿ ಅರ್ಥ ಮಾಡಿಕೊಳ್ಳಬೇಕಿರುತ್ತದೆ.ವಿವಾದಗಳನ್ನು ದಾಟಿ ಹೊರ ಬಂದಿರುವಿರಿ. ಹಲವು ರೀತಿಯ ಕಾರ್ಯಗಳು ನಿಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲಿವೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಬೇಕು.ಹಲವು ರೀತಿಯ ಕಾರ್ಯಗಳು ನಿಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲಿವೆ. ಮಕ್ಕಳು ಸ್ವಲ್ಪ ಕಿರಿಕಿರಿ ಅನುಭವಿಸುತ್ತಾರೆ.ನಿಮ್ಮ ದುಡುಕಿನ ವರ್ತನೆಯಿಂದಾಗಿ ಕುಟುಂಬದ ಸದಸ್ಯರು ನಿಮ್ಮ ಜೊತೆ ಅಸಮಾಧಾನ ಹೊಂದಿರುತ್ತಾರೆ

ವೃಶ್ಚಿಕ :-

ಗುರುಗಳ ದೇವಸ್ಥಾನಕ್ಕೆ ಭೇಟಿ ಕೊಡಿ. ನಿಮ್ಮ ಬಾಳಿನಲ್ಲಿ ಬೆಳಕು ಮೂಡುವುದು.ನಿಮ್ಮ ಪತ್ನಿಯೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸುವ ಒಂದು ದಿನ. ಕುಟುಂಬದಲ್ಲಿರುವ ಇಬ್ಬರೂ ಅವರ ಸಂಬಂಧದಲ್ಲಿ ಪ್ರೀತಿ ಮತ್ತು ನಂಬಿಕೆಯನ್ನು ಹೆಚ್ಚಾಗಿ ಅವಲಂಬಿಸಬೇಕು.ನಿಮ್ಮ ಬಾಳಸಂಗಾತಿಯಲ್ಲಿ ಕೆಲವು ಅನಾರೋಗ್ಯ ಅಥವಾ ವಾಗ್ವಾದಗಳು ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿರುವವರು ಹೆಚ್ಚು ಗಮನ ಕೇಂದ್ರೀಕರಿಸಬೇಕಾಗುತ್ತದೆ.ನಿಮ್ಮ ವ್ಯವಹಾರಕ್ಕೆ ಅನುಕೂಲವಾಗುವಂತೆ ಸಹಾಯ ಸಿಗುವುದು.

ಧನಸ್ಸು:

ನಿಮ್ಮ ಮನೆಯ ಪರಿಸರದಲ್ಲಿ ಒಳ್ಳೆಯ ಬದಲಾವಣೆಗಳನ್ನು ಮಾಡುತ್ತೀರಿ. ಪ್ರೀತಿಯ ಸಂತೋಷವನ್ನು ಅನುಭವಿಸಬಹುದು.ಅನಾರೋಗ್ಯದಿಂದ ದೂರವಿರುತ್ತೀರಿ. ಹಿರಿಯರು ನಿಮ್ಮನ್ನು ಮೆಚ್ಚುತ್ತಾರೆ.ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ಈ ದಿನ ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಬಾಂಧವ್ಯದ ಭಾವ ಮೂಡುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆಯಿಂದ ವ್ಯವಹಾರ ಮಾಡಿ. ನಗದು ವ್ಯವಹಾರಕ್ಕೆ ಉತ್ತಮ ದಿನ.

ಮಕರ :-

ಖರ್ಚಿನ ದಾರಿಗಳು ಅನೇಕ ರೀತಿಯಲ್ಲಿ ತೆರೆದುಕೊಳ್ಳುವುದು. ಹಾಗಾಗಿ ಕೂಡಿಟ್ಟ ಹಣವು ನೀರಿನಂತೆ ಖರ್ಚಾಗುವುದು.ದೀರ್ಘ ಪ್ರಯಾಣದ ಸಾಧ್ಯತೆಯಿದೆ. ನೀವು ಉತ್ತಮ ಹಾಗೂ ಉತ್ಪಾದಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅನಗತ್ಯ ವಸ್ತುಗಳ ಖರೀದಿಯನ್ನು ಮಾಡದಿರುವುದು ಕ್ಷೇಮ.ನಿಮ್ಮ ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ.ನೀವು ಕೆಲಸದಲ್ಲಿ ಇಂದು ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳುತ್ತೀರಿ. ಈ ದಿನ ನಿಜವಾಗಿಯೂ ಕಷ್ಟಕರವಾಗಿದೆ.

ಕುಂಭ:-

ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ.ನಿಮ್ಮ ಪ್ರೀತಿಪಾತ್ರರು ಇಂದು ಅತಿಯಾದ ಬೇಡಿಕೆಗಳನ್ನಿಡುವುದರಿಂದ ಪ್ರಣಯದಲ್ಲಿ ಹಿನ್ನೆಡೆಯಿರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.ಇಂದು ತುಂಬಾ ನಿರೀಕ್ಷೆಗಳು ನಿಮ್ಮ ವೈವಾಹಿಕ ಜೀವನವನ್ನು ದುಃಖದೆಡೆಗೆ ನಡೆಸಬಹುದು.ಕುಲದೇವತೆಯ ಆರಾಧನೆಯನ್ನು ತಪ್ಪದೆ ಮಾಡಿ.

ಮೀನ:-

ನಿಮ್ಮ ಸಮರ್ಪಣೆ ಮತ್ತು ಶ್ರಮವನ್ನು ಗಮನಿಸಲಾಗುತ್ತದೆ ಮತ್ತು ಇಂದು ನಿಮಗೆ ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ.ಇದನ್ನು ನೀವು ನಿವಾರಿಸಬೇಕು.ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ನಿಮಗೆ ಪ್ರೋತ್ಸಾಹ ನೀಡುತ್ತಾರೆ.ಮಕ್ಕಳ ಅಸಹಕಾರವು ನಿಮಗೆ ಮುಜುಗರವನ್ನುಂಟು ಮಾಡುವುದು. ಪ್ರೀತಿಯ ಭಾವಪರವಶತೆಯನ್ನು ಅನುಭವಿಸಲು ಯಾರಾದರೂ ದೊರಕಬಹುದು. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ಒದಗಿಸುತ್ತಾರೆ.ವೈವಾಹಿಕ ಜೀವನದಲ್ಲಿ ಕೆಲವು ತಪ್ಪುಗ್ರಹಿಕೆಗಳು ಕಂಡುಬರಬಹುದು. ಇದನ್ನು ನೀವು ನಿವಾರಿಸಬೇಕು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಎನ್ ಡಿಎ 2.0 ತನ್ನ ಮೊದಲ ಐದು ವರ್ಷಗಳ ಆರ್ಥಿಕ ಕಾರ್ಯತಂತ್ರ ಯೋಜನೆ ಜಾರಿಗೆ ತರಲಿ: ಕಿರಣ್ ಮಜುಂದಾರ್ ಶಾ ಹೆಳಿಕೆ…..

    ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬ ಘೋಷವಾಕ್ಯದಡಿ 2014ರ ಲೋಕಸಭೆ ಚುನಾವಣೆಯನ್ನು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಎದುರಿಸಿತ್ತು. ಆಂತರಿಕ ಆರ್ಥಿಕ ಬೆಳವಣಿಗೆಯ ಭರವಸೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನತೆಗೆ ನೀಡಿತ್ತು. ಇದೀಗ ಎನ್ ಡಿಎ ಸರ್ಕಾರ ಮತ್ತೊಂದು ಬಾರಿ 5 ವರ್ಷಗಳ ಅವಧಿಗೆ ಅಧಿಕಾರದ ಗದ್ದುಗೆ ಏರಲು ಹೊರಟಿದೆ. ಈ ಸಂದರ್ಭದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ಬಯೋಕಾನ್ ಅಧ್ಯಕ್ಷೆ…

  • ಕಾಯಿಲೆ

    19 ನೇ ಶತಮಾನದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಿತು

    1800 ರ ಉತ್ತರಾರ್ಧದಲ್ಲಿ ಮತ್ತು 1900 ರ ದಶಕದ ಆರಂಭದಲ್ಲಿ ಜಗತ್ತನ್ನು ಧ್ವಂಸಗೊಳಿಸಿದ ಮೂರನೇ ಪ್ಲೇಗ್ ಸಾಂಕ್ರಾಮಿಕವು ಇಂದಿನ COVID-19 ಸಾಂಕ್ರಾಮಿಕ ರೋಗಕ್ಕೆ ಹೋಲುತ್ತದೆ. ಇದು 1860 ರ ದಶಕದಲ್ಲಿ ಚೀನಾದಲ್ಲಿ ತನ್ನ ಕೊಳಕು ತಲೆಯನ್ನು ಬೆಳೆಸಿತು, 1894 ರಲ್ಲಿ ಹಾಂಗ್ ಕಾಂಗ್, ಆಗಸ್ಟ್ 1896 ರಲ್ಲಿ ಮುಂಬೈ, ಡಿಸೆಂಬರ್ 1897 ರಲ್ಲಿ ಹುಬ್ಬಳ್ಳಿ ಮತ್ತು ಆಗಸ್ಟ್ 1898 ರಲ್ಲಿ ಬೆಂಗಳೂರು ತಲುಪಿತು.

  • ಸುದ್ದಿ

    ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ ದರ್ಶನ್ ಈಗ ಮಾಲಿವುಡ್​ನಲ್ಲಿ ತೆರೆಕಾಣಲಿದ್ದಾರೆ,…

    ಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಅಂದರೆ ಯಾರಿಗೆ  ತಾನೇ ಇಷ್ಟ ಇರಲ್ಲ ಹೇಳಿ, ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದವರು. ಈಗ ಅವರು ಮಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಹಾಗಂತ ಅವರು ಯಾವುದೇ ಮಲಯಾಳಂ ಸಿನಿಮಾ ಮಾಡುತ್ತಿದ್ದಾರೆ ಅಂತ ಅಲ್ಲ , ಅವರು ಯಾವ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲ . ಅಸಲಿ ವಿಚಾರ ಏನೆಂದರೆ, ‘ಕುರಕ್ಷೇತ್ರ’ ಸಿನಿಮಾ ಮಲಯಾಳಂನಲ್ಲಿ ನಾಳೆ ತೆರೆಕಾಣುತ್ತಿರುವ  ಕಾರಣಕ್ಕಾಗಿ ಈ ಸಮಾಚಾರ ಹುಟ್ಟುಹಾಕಿದೆ. ದರ್ಶನ್​, ಹಿರಿಯ ನಟ ಅಂಬರೀಶ್​, ನಟ ನಿಖಿಲ್​ ಕುಮಾರಸ್ವಾಮಿ, ರವಿಚಂದ್ರನ್​ ಸೇರಿ ಅನೇಕರು ಈ…

  • ಉಪಯುಕ್ತ ಮಾಹಿತಿ

    ಭಾರತೀಯರು ಉಪಾಹಾರಕ್ಕೆ ಬದಲಾಗಿ ಇವನ್ನು ಶೇ. 67 ರಷ್ಟು ಸೇವಿಸುತ್ತಾರೆ ತಿಳಿಯಲು ಈ ಲೇಖನ ಓದಿ….

    ನೀಲ್ಸನ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಅನ್ವಯ 3೦,೦೦೦ ನಗರದ ಗ್ರಾಹಕರು ಅಂದರೆ ಶೇ.67 ರಷ್ಟು ಭಾರತೀಯರು ಉಪಾಹಾರಕ್ಕೆ ಬದಲಾಗಿ ಈ ತಿಂಡಿಗಳನ್ನು ಸೇವಿಸುತ್ತಿದ್ದರು. ಶೇ.56ರಷ್ಟು ಮಂದಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲು ಈ ತಿಂಡಿಗಳನ್ನು ಸೇವಿಸುತ್ತಿದ್ದಾರೆ ಇದಕ್ಕೆ ತಜ್ಞರು ಏನು ಹೇಳುತ್ತಾರೆ ನೋಡಿ.

  • ಸುದ್ದಿ, ಸ್ಪೂರ್ತಿ

    ಒಂದು ದಿನದ ಮಟ್ಟಿಗೆ DCPಯಾಗಿ, ತನ್ನ ತಂದೆಗೆ ಆದೇಶ ನೀಡಿದ ವಿಧ್ಯಾರ್ಥಿನಿ..!ಈಕೆ ಡಿಸಿಪಿ ಆಗಿದ್ದು ಹೇಗೆ ಗೊತ್ತಾ..?

    ಐಎಸ್​​ಸಿ ಪರೀಕ್ಷೆಯಲ್ಲಿ ದೇಶಕ್ಕೆ 4ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಒಬ್ಬಳಿಗೆ ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಡಿಸಿಪಿ ಆಗುವ ಯೋಗ ಒದಗಿ ಬಂದಿದೆ. ಈ ಸಾಧನೆ ಮಾಡಿರುವ ವಿಧ್ಯಾರ್ಥಿನಿಯ ಹೆಸರು ರೀಚಾ ಸಿಂಗ್ ಎಂದು. ಈ ಪ್ರತಿಭಾನ್ವಿತ ವಿಧ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸುವ ಸಲುವಾಗಿ ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಉಪ ಪೊಲೀಸ್​ ಕಮಿಷನರ್​​ ಆಗುವ ಅವಕಾಶ ನೀಡಲಾಗಿತ್ತು.  ಕೊಲ್ಕತ್ತಾದ ಜಿ.ಡಿ. ಬಿರ್ಲಾ ಸೆಂಟರ್​ ಫಾರ್​ ಎಜುಕೇಷನ್​ನಲ್ಲಿ ವಿಧ್ಯಾಭ್ಯಾಸ ಮಾಡಿರೋ ರಿಚಾ, ಪ್ಲಸ್​​ 2 ಪರೀಕ್ಷೆಯಲ್ಲಿ ಶೇ. 99.25…

  • ಉಪಯುಕ್ತ ಮಾಹಿತಿ

    ಮಕರ ಸಂಕ್ರಾಂತಿ ಹಬ್ಬಕ್ಕೆ ಸರಿಯಾದ ಕ್ರಮದಲ್ಲಿ ಎಳ್ಳು ಬೆಲ್ಲ ಮಾಡುವ ವಿಧಾನ.

    ಎಳ್ಳು ಬೆಲ್ಲ ತಿಂದು, ಒಳ್ಳೆಯ ಮಾತನಾಡಿ’ ಎಂಬ ಗಾದೆ ಇದೆ. ಅದರಂತೆಯೇ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ ತಿಂದು ಹೊಸ ವರ್ಷದ ಮೊದಲ ಹಬ್ಬವನ್ನು ಸಿಹಿಯಾಗಿ ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ. ಮಾಡುವ ವಿಧಾನಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ.ಕೊಬ್ಬರಿ ಕಪ್ಪು ಭಾಗವನ್ನು…