ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮರಣಾ ನಂತರದ ದೇಹದ ವಿಸರ್ಜನ ಕ್ರಿಯೆಗೆ ಅಂತ್ಯೇಷ್ಟಿ ಅಥವಾ ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಅಂತ್ಯಸಂಸ್ಕಾರವು ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತದೆ.
ಆದರೆ ನಮ್ಮ ಪಕ್ಕದ ದೇಶವಾದ ಟಿಬೇಟಿನಲ್ಲಿ ವಿಚಿತ್ರ ರೀತಿಯ ಶವ ಸಂಸ್ಕಾರ ಮಾಡುತ್ತಾರೆ. ಸಾಮಾನ್ಯರು ಸತ್ತಾಗ ಹಳೆಯ ಟೈರು ಮತ್ತಿತರ ಉರಿಯುವ ವಸ್ತುಗಳನ್ನು ಉಪಯೋಗಿಸಿ ಶವದಹನ ಮಾಡುವ ಪದ್ಧತಿ ಇದು. ಎರಡನೆಯದು ಹೊಂಡ ತೆಗೆದು ಹೂಳುತ್ತಾರೆ.ಮೂರನೆಯದು ಸತ್ತ ಮೂರೂ ದಿನಗಳ ನಂತರ ಹೆಣವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಹಾಕುತ್ತಾರೆ.

ನಾಲ್ಕನೆಯ ಶವ ಸಂಸ್ಕಾರ ಮಾಡುವ ರೀತಿ ಕೇಳಿದ್ರೆ ನಿಮ್ಮ ಮೈ ಮನ ಜುಮ್ ಎನ್ನಿಸದೇ ಇರಲ್ಲ. ಈ ಭಯಂಕರ ಪದ್ಧತಿ ಏನು ಗೊತ್ತಾ?
ಈ ಪದ್ದತಿಯ ಪ್ರಕಾರ ಸತ್ತ ಹೆಣದ ದೇಹವನ್ನು ರಣಹದ್ದುಗಳಿಗೆ ಆಹಾರವಾಗಿ ಹಾಕುತ್ತಾರೆ. ಮನುಷ್ಯನಿಗೆ ದೇವರು ನೀಡಿದ ದೇಹ ಸತ್ತ ಮೇಲೂ ಪ್ರಾಣಿ ಪಕ್ಷಿಗಳ ಆಹಾರವಾದರೆ ಜನ್ಮ ಸಾರ್ಥಕವಾಗುತ್ತದೆಂದು ಇವರ ನಂಬಿಕೆ.

ಹೀಗೇಕೆ ಮಾಡುತ್ತಾರೆ ಗೊತ್ತಾ..? ಶಾಕ್ಯನೆಂಬ ಬೌದ್ಧ ಮುನಿ ಈ ವಿಧಾನವನ್ನು ಆರಂಭಿಸಿದನಂತೆ. ಆತ ತನ್ನ ದೇಹದ ಮಾಂಸವನ್ನು ಪಾರಿವಾಳಗಳಿಗೆ ಆಹಾರವಾಗಿ ನೀಡಿದನೆಂಬ ಕಥೆಯೇ ಇದಕ್ಕೆ ಪ್ರೇರಣೆಯಾಗಿದೆ.
ಈ ಶವ ಸಂಸ್ಕಾರದಲ್ಲೂ ಇದೆ ಹಲವು ನಿಯಮಗಳು!
ಇಂತಹ ಸಂಸ್ಕಾರವನ್ನು ಗರ್ಭಿಣಿಯರು, ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನವರು, ವ್ಯಾಧಿ ಮತ್ತು ಅಪಘಾತದಿಂದ ಸತ್ತವರ ದೇಹಗಳಿಗೆ ಮಾಡುವುದಿಲ್ಲ. ಇಂತಹ ಶವ ಸಂಸ್ಕಾರಕ್ಕೆ ಯಾವುದೇ ಬಲವಂತವಿರುವುದಿಲ್ಲ. ಸಾಯುವುದಕ್ಕೂ ಮೊದಲು ಆ ವ್ಯಕ್ತಿ ಯಾವ ರೀತಿ ಶವ ಸಂಸ್ಕಾರ ಬೇಕು ಎಂದು ಹೇಳಿರುತ್ತಾನೋ ಅದೇ ರೀತಿ ಶವ ಸಂಸ್ಕಾರ ಮಾಡಲಾಗುತ್ತದೆ.
ಇಲ್ಲಿನ ಪದ್ಧತಿ ಪ್ರಕಾರ ಯಾವುದೇ ವ್ಯಕ್ತಿ ಸತ್ತಾಗ ಮೃತ ದೇಹವನ್ನು ಮೂರೂ ದಿನಗಳವರೆಗೆ ಹಾಗೆಯೇ ಇಡುತ್ತಾರೆ. ಕಾರಣ ಆತ್ಮವು ಮತ್ತೆ ಅವನ ದೇಹ ಪ್ರವೇಶಿಸಿ ಅವನು ಬದುಕಬಹುದೆಂಬ ನಂಬಿಕೆ ಅವರಲ್ಲಿದೆ. ನಂತರ ನಾಲ್ಕನೆಯ ದಿನ ಶವ ಸಂಸ್ಕಾರದ ವಿಧಿ ವಿಧಾನಗಳು ನೆರವೇರಿದ ಬಳಿಕ, ಶವದ ಮಂಡಿಗಳನ್ನು ಮತ್ತು ಕೈಗಳನ್ನು ಹಿಂಭಾಗಕ್ಕೆ ಜೋಡಿಸಿ ಕಟ್ಟಿ ಬಿಳಿ ಬಣ್ಣದ ಬಟ್ಟೆಯಲ್ಲಿ ಬಿಗಿದು ಹೆಗಲಿನಲ್ಲಿ ಹೊತ್ತು, ಮೃತನ ಮಕ್ಕಳು ಅಥವಾ ಬಂಧುಗಳು ಬೆಟ್ಟದಲ್ಲಿರುವ ಕಲ್ಲುಬಂಡೆಯ ಮೇಲೆ ಅದನ್ನು ಕೆಳಗಿಳಿಸಿದ ಬಳಿಕ ಹಿಂತಿರುಗಿ ನೋಡದೆ ಮರಳುತ್ತಾರೆ.

ನಂತರ ಲಾಮಾ ಗುರುಗಳು ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತ ಕೈಯಲ್ಲಿರುವ ಕಂಚಿನ ಗಂಟೆಯನ್ನು ಬಡಿಯಲಾರಂಭಿಸುತ್ತಾರೆ. ರಣಹದ್ದುಎಷ್ಟೇ ದೂರದಲ್ಲಿದ್ದರೂ ಈ ಗಂಟೆಯ ನಾದ ಕೇಳಿದ ಕೂಡಲೇ ಅಲ್ಲಿಗೆ ಧಾವಿಸಿ, ಶವದ ಸುತ್ತಲೂ ಹಾರಾಡಿ ಮೃತ ದೇಹವನ್ನು ತಿನ್ನುತ್ತವೆ.ಇವರ ಪ್ರಕಾರ ರಣ ಹದ್ದುಗಳು ತಿಂದ ವ್ಯಕ್ತಿಯ ಆತ್ಮ ನೇರವಾಗಿ ಸ್ವರ್ಗಕ್ಕೆ ಹೋಗುತ್ತದಂತೆ.ಅವರಿಗೆ ಮರು ಜನ್ಮವಿರುದಿಲ್ಲವಂತೆ.

ಕೆಲವೇ ನಿಮಿಷಗಳಲ್ಲಿ ಸಣ್ಣ ಸಣ್ಣ ಮೂಳೆಯ ಚೂರುಗಳು, ಕೂದಲು, ಚರ್ಮದ ಚಿಕ್ಕತುಂಡುಗಳ ಹೊರತು ಉಳಿದುದೆಲ್ಲವನ್ನೂ ಹದ್ದುಗಳು ತಿಂದು ಮುಗಿಸುತ್ತವೆ. ಬಳಿಕ ಅಸ್ಥಿಪಂಜರವನ್ನು ಸುತ್ತಿಗೆಯಿಂದ ಗುದ್ದಿ ಹುಡಿ ಮಾಡಿ ಹುರಿದ ಬಾರ್ಲಿಯ ಹಿಟ್ಟು, ಯಾಕ್ ಬೆಣ್ಣೆ, ಹಾಲು ಈ ಯಾವುದಾದರೊಂದನ್ನು ಬೆರೆಸಿ ಹದ್ದುಗಳಿಗೆಸೆದಾಗ ಅದನ್ನೂ ಖಾಲಿ ಮಾಡುತ್ತವೆ.
ಮಾಂಸ ಭಕ್ಷಣೆಯಿಂದ ಪವಿತ್ರ ಹದ್ದುಗಳಿಗೆ ಯಾವ ವ್ಯಾಧಿಯೂ ಬರದಿರಲಿ ಎಂದು ಇಂಥ ಮಿಶ್ರಣ ಮಾಡುವರಂತೆ. ಹದ್ದುಗಳು ಶವ ಭಕ್ಷಿಸದಿದ್ದರೆ ಅಪಶಕುನವೆಂದು ನಂಬುತ್ತಾರೆ. ಈ ಹದ್ದುಗಳು ಮಾನವ ಶವದ ಹೊರತು ಬೇರೆ ಯಾವ ಆಹಾರವನ್ನೂ ತಿನ್ನುವುದಿಲ್ಲವಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892Raghavendrastrology@gmail.com ಮೇಷ(11 ಡಿಸೆಂಬರ್, 2018) ಸಾಮಾಜಿಕ ಚಟುವಟಿಕೆಗಳು ಆನಂದಮಯವಾಗಿದ್ದರೂ ನೀವು ಇತರರೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬಾರದು. ಆಕಾಶ ಪ್ರಕಾಶಮಾನವಾಗಿಕಾಣುತ್ತದೆ, ಹೂಗಳು ಹೆಚ್ಚು ವರ್ಣರಂಜಿತವಾಗಿ ತೋರುತ್ತದೆ, ನಿಮ್ಮ ಸುತ್ತಲೂ ಎಲ್ಲವೂಮಿನುಗುತ್ತದೆ;…
ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಈ ಕಾಯಿಲೆಗೆ ಕಾರಣಗಳು:- ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ,ದೀರ್ಘಕಾಲದ ಮಲಬದ್ಧತೆ,ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು, ಹಾಗೂ ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ…
ನೀವು ಪ್ರವಾಸಕ್ಕಾಗಲಿ, ಬ್ಯುಸಿನೆಸ್ ಕಾರಣಕ್ಕಾಗಲಿ ಬೇರೆ ಊರಿಗೆ ಅಥವಾ ವಿದೇಶಕ್ಕೆ ಹೋದಾಗ, ಅಲ್ಲಿ ಉಳಿದುಕೊಳ್ಳಲು ಸಾಕಷ್ಟು ಖರ್ಚು ಮಾಡ್ಬೇಕಾಗುತ್ತೆ. ಯಾವುದೇ ಹೋಟೆಲ್ಗಳಲ್ಲಿ ಉಳಿದುಕೊಂಡ್ರು, ಬಿಲ್ ಸಾವಿರಗಟ್ಟಲೆ ಆಗುತ್ತೆ. ಜಪಾನ್ನ ಫುಕುಯೋಕಾದಲ್ಲಿರುವ ಅಸಾಹಿ ರ್ಯೋಕನ್ ಎಂಬ ಹೊಟೆಲ್ನಲ್ಲಿ ಒಂದು ದಿನಕ್ಕೆ ಕೇವಲ 100 ಎನ್ಗೆ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಜಸ್ಟ್ 66 ರೂಪಾಯಿಗೆ ರೂಂ ನೀಡಲಾಗುತ್ತೆ. ಆದ್ರೆ ಎಲ್ಲಾ ರೂಂಗಳಿಗೂ ಇದೇ ರೇಟ್ ಅಲ್ಲ. ಹೊಟೆಲ್ನ 8ನೇ ನಂಬರಿನ ರೂಂಗೆ ಮಾತ್ರ ಈ 100 ಎನ್ ಫಿಕ್ಸ್ ಮಾಡಲಾಗಿದೆ….
ಇವರು ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಿ ಸತಿ-ಪತಿಗಳಾಗಬೇಕಿತ್ತು.ಆದ್ರೆ ಪ್ರಧಾನಿ ನರೇಂದ್ರ ಮೋದಿ ವಿಚಾರವಾಗಿ ಇವರಿಬ್ಬರಲ್ಲಿ ಚರ್ಚೆಯಾಗಿದ್ದು, ಇವರ ವಾದ ಪ್ರತಿವಾದಗಳು ತಾರಕಕ್ಕೇರಿ, ಜಗಳದಲ್ಲಿ ಕೊನೆಯಾಗಿ ಇವರ ಮದುವೆಯೇ ರದ್ದಾಗಿದೆ.
2 ವರ್ಷದಲ್ಲಿ ಜಾರಿಯಾದ ಕೇ೦ದ್ರ ಸರಕಾರದ ಯೋಜನೆಗಳು:
ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಚೆನ್ನೈನಲ್ಲಿ ಶುರುವಾಗಿದೆ. ಇಲ್ಲಿ ವೇಟರ್ ಬದಲು ರೋಬೋಟ್ ಆಹಾರ ಒದಗಿಸುವ ಕೆಲಸ ಮಾಡುತ್ತದೆ. ಈ ರೆಸ್ಟೋರೆಂಟ್ ಚೆನ್ನೈನ ಮಹಾಬಲಿಪುರಂ ರಸ್ತೆಯಲ್ಲಿದೆ. ಥಾಯ್ ಹಾಗೂ ಚೈನೀಸ್ ಆಹಾರ ಗ್ರಾಹಕರಿಗೆ ಸಿಗಲಿದೆ.