ವಿಶೇಷ ಲೇಖನ

ಆ ದಿನ ಕೇವಲ ಮೂರೂವರೆ ನಿಮಿಷಗಳಲ್ಲಿ ಇಡೀ ಅಮೆರಿಕಾ ದೇಶವೇ ಈ ವೀರ ಹಿಂದೂ ಸನ್ಯಾಸಿಯ ಮಾತಿಗೆ ತಲೆಬಾಗಿತ್ತು..!ತಿಳಿಯಲು ಈ ಲೇಖನ ಓದಿ…

1535

ವ್ಯಕ್ತಿ ತಾನು ದುರ್ಬಲನೆಂದು ಭಾವಿಸಬಾರದು. ಏಕೆಂದರೆ ದೌರ್ಬಲ್ಯವೇ ಪಾಪ, ದೌರ್ಬಲ್ಯವೇ ಮರಣ. ತನ್ನ ದೌರ್ಬಲ್ಯವನ್ನು ಗೆಲ್ಲುವುದರಿಂದ ಎಲ್ಲವನ್ನೂ ಸಾಧಿಸಬಹುದು. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಲ್ಲಬೇಕು, ತನ್ನೊಳಗಿರುವ ದೈವಿಕತೆಯನ್ನು ಹೊರಚಿಮ್ಮಬೇಕು…” ಇಂಥ ಘೋಷಣೆಯೊಂದಿಗೆ ದೇಶದ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಮಹಾನ್‌ ವ್ಯಕ್ತಿಗಳೇ ಸ್ವಾಮಿ ವಿವೇಕಾನಂದರು.

ಇಂದು ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ  ಜನ್ಮದಿನ.ಇದೇ ಹಿನ್ನೆಲೆಯಲ್ಲಿ ಜ.12ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ.ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ.

 

ವಿವೇಕಾನಂದ ಹೆಸರೇ ಅದ್ಭುತ! ಬಹುಷ: ಸ್ವಾಮಿ ವಿವೇಕಾನಂದರ ಹೆಸರು ಮಾಡಿರುವಷ್ಟು ಪರಿಣಾಮವನ್ನು ಬೇರೆ ಯಾವುದೇ ಹೆಸರು ಮಾಡಿರಲು ಸಾಧ್ಯವಿಲ್ಲ! ದೇಶದ ಹಿತಕ್ಕಾಗಿ, ದೇಶದ ಕೀರ್ತಿಯನ್ನು ಸನಾತನ ಧರ್ಮವಾದ ಹಿಂದೂ ಧರ್ಮದ ಮಹತ್ವನ್ನು ವಿದೇಶಿ ರಾಷ್ಟ್ರಗಳಿಗೆ ತಿಳಿಸಲು ತಮ್ಮ ಜೀವನವನ್ನೇ ಮುಡಿಪಿಟ್ಟ ವಿವೇಕಾನಂದರು.

ನರೇಂದ್ರನಿಂದ ಹಿಡಿದು ವಿವೇಕಾನಂದರವರಿಗೆ :- 

ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863 ಜನವರಿ 12ರಂದು ಕಲ್ಕತ್ತೆಯಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ‘ವಿವೇಕಾನಂದ’ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ‍

ಕ್ರಿಶ್ಚಿಯನ್ನರ ನಾಡಿನಲ್ಲಿ ವಿವೇಕಾನಂದ :-

ಅಮೇರಿಕಾದ ಚಿಕಾಗೋದಲ್ಲಿ ನಡೆದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮೌಲ್ಯ’ದ ಪರಿಚಯ ಮಾಡಿಕೊಟ್ಟ ವಿವೇಕಾನಂದರ ಭಾಷಣ ವಿಶ್ವ ವಿಖ್ಯಾತವಾಗಿದೆ. ‘ಅಮೇರಿಕಾದ ಸಹೋದರ ಸಹೋದರಿಯರೇ’ ಎಂಬ ಸಂಬೋಧನೆಯೊಂದಿಗೆ ಪ್ರಾರಂಭವಾದ ವಿವೇಕಾನಂದ ಭಾಷಣ ಅಲ್ಲಿನ ವಿಜ್ಞಾನಿಗಳು, ಪಂಡಿತರು, ಅಲ್ಲಿ ನೆರೆದಿದ್ದ ಅನ್ಯ ಧರ್ಮೀಯರೆಲ್ಲರೂ ತಲೆದೂಗುವಂತೆ ಮಾಡಿಬಿಟ್ಟರು.

ಆ ದಿನ ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ ನಿಮಿಷಗಳಲ್ಲಿ  ಇಡೀ ಅಮೆರಿಕಾ ದೇಶವನ್ನೇ ಇವರ ತುಪಾಕಿಯಂತ ಮಾತಿನ ಮೋಡಿಗೆ ತಲೆ ಬಾಗುವಂತೆ ಮಾಡಿದ್ರು.ಪಾಶ್ಚಾತ್ಯರಿಂದ ‘ವಿಚಿತ್ರ ಧರ್ಮ’ ಎಂದು ಕರೆಯಿಸಿಕೊಂಡಿದ್ದ ಹಿಂದೂ ಧರ್ಮದ ನಿಜವಾದ ಅರ್ಥವನ್ನು,ಸಿದ್ಧಾಂತಗಳನ್ನು ಪಾಶ್ಚಾತ್ಯರಿಗೆ ಮನದಟ್ಟು ಮಾಡುವಲ್ಲಿ ಸ್ವಾಮಿ ವಿವೇಕಾನಂದ ಯಶಸ್ವಿಯಾದರು.

ಭಾರತದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಯೋಗಿ ಸ್ವಾಮಿ ವಿವೇಕಾನಂದರ ಮಾತುಗಳು ಎಂದೆಂದಿಗೂ ಯುವ ಪೀಳಿಗೆಗೆ ಆದರ್ಶದ ನುಡಿಮುತ್ತುಗಳು.

  • ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.
  • ಏಳಿರಿ,ಕಾರ್ಯೋನ್ಮುಖರಾಗಿರಿ ಈ ಬದುಕಾದರೂ ಎಷ್ಟು ದಿನ,ಮಾನವರಾಗಿ ಹುಟ್ಟಿದ ಮೇಲೆ ಎನನ್ನಾದರೂ ಸಾಧಿಸಿ.
  • ನಾವು ಏನನ್ನು ಮಾಡುವುದಿಲ್ಲ.ಯಾರಾದರೂ ಮಾಡಿದರೆ ಅವರಲ್ಲಿ ತಪ್ಪು ಕಂಡು ಹಿಡಿಯುತ್ತೇವೆ.ಇದು ನಮ್ಮ ಯುವಜನಾಂಗದ ಅಶಾಂತಿಗೆ ಕಾರಣ.ಅದನ್ನು ಬಿಡಿ ಎಲ್ಲರಿಗೂ ಅವಕಾಶವಿರಲಿ ಎಂಬ ಮನೋಭಾವ ತಾಳಿರಿ.
  • ನಮ್ಮ ಪ್ರಥಮ ಕರ್ತವ್ಯವೇ ನಮ್ಮಲ್ಲಿ ಆತ್ಮನಂದನೆ ಇರಕೂಡದು.ನಾವು ಬದುಕಿನಲ್ಲಿ ಮುಂದುವರಿಯಬೇಕಾದರೆ ಮೊದಲು ನಮ್ಮಲ್ಲಿ ಆತ್ಮಶೃದ್ದೆ ಇರಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ