ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನ ವಿಫಲವಾಯಿತು. ಆದರೆ ಕೋಟೆನಾಡಿನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠ ಮಾತ್ರ ಮೌಢ್ಯ ನಿಷೇಧದ ವಿಚಾರದಲ್ಲಿ ತನ್ನ ಗುರಿಯನ್ನು ಮೊಟಕುಗೊಳಿಸದೇ ಆಷಾಢದಲ್ಲೂ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮೌಢ್ಯಾಚರಣೆ ವಿರುದ್ಧ ಸಮರ ಸಾರಿದೆ.
ಮುರುಘಾ ಮಠದ ಆಶ್ರಯದಲ್ಲಿ ಅಲ್ಲಮಪ್ರಭು ಭವನದಲ್ಲಿ ಆಯೋಜಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಆಷಾಢ ಶುಕ್ರವಾರವಾದರೂ ಸಹ ಮುರುಘಾಮಠ ನುಡಿದಂತೆ ನಡೆಯುತ್ತಿದೆ. ಮೌಢ್ಯಾಚರಣೆ ನಿಷೇಧಕ್ಕಾಗಿ ಟೊಂಕಕಟ್ಟಿ ನಿಂತಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಸಾಮೂಹಿಕ ವಿವಾಹ ನೆರವೇರಿಸಿದ್ದಾರೆ. ಈ ಕಲ್ಯಾಣೋತ್ಸವದಲ್ಲಿ 32 ನವಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.
ಈ ವಿವಾಹ ಮಹೋತ್ಸವದಲ್ಲಿ ಅಂತರ್‌ಧರ್ಮ ವಿವಾಹವಾದ ಹಿಂದೂ ಹಾಗೂ ಇಸ್ಲಾಂ ಧರ್ಮದ ಒಂದು ಜೋಡಿಯು ಎಲ್ಲರ ಗಮನ ಸೆಳೆಯಿತು. ಅಲ್ಲದೇ ಸಾಮೂಹಿಕ ವಿವಾಹದಲ್ಲಿ ಅಂತರ್ ಧರ್ಮ ವಿವಾಹದ ಮೂಲಕ ನವಜೀವನಕ್ಕೆ ಪಾದಾರ್ಪಣೆ ಮಾಡಿದ ಹಸೀನ ಕೂಡ ತಮ್ಮ ಜೀವನಕ್ಕೆ ಬಸವತತ್ವವನ್ನು ಅಳವಡಿಸಿಕೊಂಡಿದ್ದಾರೆ.
ಸಮಾಜ ಪರಿವರ್ತನೆಗಾಗಿ ಅಂತರ್ಜಾತಿ ಹಾಗೂ ಅಂತರ್‌ಧರ್ಮ ವಿವಾಹಗಳಿಂದಾದರೂ ಈ ಮೌಢ್ಯ ನಿಷೇಧವಾಗಬೇಕೆಂದು ನೂತನ ವಧು ಹಸೀನ ಹೇಳಿದ್ದಾರೆ.ಮುರುಘಾ ಮಠದಲ್ಲಿ ನಡೆದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಜಾತಿ ಧರ್ಮಗಳನ್ನು ಮೀರಿ ನಿಂತಿದೆ. ಆಷಾಢ ಶುಕ್ರವಾರ ಅನ್ನೋದನ್ನೂ ಲೆಕ್ಕಿಸದೇ 32 ನವಜೋಡಿಗಳು ನವಜೀವನಕ್ಕೆ ಕಾಲಿಡುವ ಮೂಲಕ ಮೌಢ್ಯ ನಿಷೇಧಕ್ಕೆ ಪ್ರೇರಣೆಯಾದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ಕಾರಿ ಒಡೆತನದ ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.
ದೇಶದ 7 ರಾಜ್ಯಗಳಲ್ಲಿ ಈಗ ಜಲಕಂಟಕ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ, ಗುಜರಾತ್‌ನಲ್ಲಿ ಪ್ರವಾಹ ತಲೆದೋರಿದೆ. ಪ್ರವಾಹ ಹಾಗೂ ಭೂ ಕುಸಿತಕ್ಕೆ ಊರಿಗೆ ಊರುಗಳೇ ನಾಶವಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತ ಶಿಬಿರ ಸೇರಿರುವ ಸಂತ್ರಸ್ತರ ಗೋಳು ಹೇಳತೀರದು. ಕೇರಳದಲ್ಲಿ ಭಾರೀ ಭೂಕುಸಿತ : ಈ ಬಾರಿಯೂ ಭಾರೀ ಮಳೆ ಮತ್ತು ಭೂಕುಸಿತಕ್ಕೆ ತುತ್ತಾಗಿರುವ ಕೇರಳದಲ್ಲಿ ಇಲ್ಲಿವರೆಗೆ 30 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು ಒಂದೇ ದಿನ…
ಇದು ಒಂದೆಡೆ ಕೆಐಡಿಬಿ ಹುಚ್ಚಾಟಕ್ಕೆ ಹಿಡಿದ ಕೈಗನ್ನಡಿಯಾದರೆ ಮತ್ತೊಂದೆಡೆ ಇದು ಮನಬಂದಂತೆ ಭೂಮಿ ಕೊಟ್ಟವರು ಈಗ ಕೈ ಕೈ ಹಿಸುಕಿಕೊಳ್ಳುವಂತ ಪರಿಸ್ಥಿತಿ.
ನಂಜನಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಒಂದು ಕಾಲದಲ್ಲಿ ಜಮೀನ್ದಾರರೆನಿಸಿಕೊಂಡವರಿಗೆ ಇಂದು ತಮ್ಮ ಕುಟುಂಬದವರ ಶವಸಂಸ್ಕಾರ ಮಾಡಲು ಯೋಚಿಸಬೇಕಾದ ದುರ್ಗತಿ ಒದಗಿಬಂದಿದೆ.
ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ. ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ…
ಚಿತ್ರ ರಂಗದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಅವರಿದ್ದ ಜಾಗಕ್ಕೆ ಇವರು ಕಾಲಿಡುವುದೂ ಇಲ್ಲ. ವೃತ್ತಿ ಮತ್ಸರದಿಂದ ಬದುಕುವವರೇ ಜಾಸ್ತಿ ಅಂತ ನಾವೆಲ್ಲರೂ ಮಾತನಾಡುತ್ತೇವೆ ಮತ್ತು ಅವರು ಸಹ ಹಾಗೆಯೇ ಇರುತ್ತಾರೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಚಿತ್ರರಂಗ ವಲಯದಿಂದ ಸಹ ಮಾತುಗಳು ಕೇಳಿಬರುತ್ತವೆ. ಆದರೆ, 80ರ ದಶಕದ ತಾರೆಯರು ಈ ಮಾತನ್ನು ಸುಳ್ಳು ಮಾಡಿದ್ದಾರೆ. ಇದಕ್ಕೆ ಸಾಕ್ಷಿ ‘ಮೆಗಾ ಸ್ಟಾರ್’ ಚಿರಂಜೀವಿ, ಅವರ ಮನೆಯಲ್ಲಿ ನಡೆದ ಪಾರ್ಟಿಯೇ ಸಾಕ್ಷಿ. ಪ್ರತಿವರ್ಷ 80ರ ದಶಕದ ದಕ್ಷಿಣ…
ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿದ್ದಾರೆ. ಮತ್ತೆ ಕೆಲ ಹುಡುಗಿಯರು ದುರಾದೃಷ್ಟಕ್ಕೆ ಕಣ್ಣೀರು ಹಾಕ್ತಾರೆ. ಅದೃಷ್ಟವಂತರಾಗಲು ಅವ್ರ ಜನ್ಮ ದಿನಾಂಕ ಕಾರಣ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗೂ ಹುಡುಗಿಯರ ಅದೃಷ್ಟ, ದುರಾದೃಷ್ಟದ ಬಗ್ಗೆ ವಿವರಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 5 ನೇ ತಾರೀಕಿನಂದು ಜನಿಸಿದ ಹುಡುಗಿಯರು ಅದೃಷ್ಟವಂತರಾಗಿರುತ್ತಾರೆ. ಈ ದಿನ ಗ್ರಹದಲ್ಲಿ ಬದಲಾವಣೆಯಾಗುತ್ತದೆ. ಈ ದಿನ ಹುಟ್ಟಿದ ಹುಡುಗಿಯರು ಸುಲಭವಾಗಿ ಯಶಸ್ಸು ಗಳಿಸ್ತಾರೆ. ಸಾಧನೆ ಶಿಖರಕ್ಕೇರುತ್ತಾರೆ. ಸುಖ-ಸಮೃದ್ಧಿ ನೆಲೆಸಿರುತ್ತದೆ. ಎಲ್ಲ ಕೆಲಸ ಯಶಸ್ವಿಯಾಗಿ…