ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಾವುದೇ ಒಂದು ಕಂಪನಿಯಲ್ಲಿ ನೌಕರಿ ಮಾಡುತ್ತಿರುವವರು ನಿವೃತ್ತಿ ಹೊಂದುವ ವೇಳೆ ಅಥವಾ ಮತ್ತೊಂದು ಕಂಪನಿಗೆ ಸೇರ್ಪಡೆಗೊಳ್ಳಲು ರಾಜೀನಾಮೆ ನೀಡುವ ಸಂದರ್ಭ ಎದುರಾದಾಗ ತಮ್ಮ ಸಹೋದ್ಯೋಗಿಗಳನ್ನು ನೆನಪಿಸಿಕೊಂಡು ಭಾವುಕರಾಗುವುದು ಸಹಜ.ಆದರೆ ಇಲ್ಲೊಬ್ಬ ಬ್ಯಾಂಕ್ ಉದ್ಯೋಗಿ ತನ್ನ ಕೆಲಸದ ಕಡೆ ದಿನ ಸ್ಪೈಡರ್ ಮ್ಯಾನ್ ವೇಷ ಧರಸಿ ಆಫೀಸ್ ಗೆ ಹೋಗಿದ್ದಾರೆ.

ಈ ಘಟನೆ ಬ್ರೆಜಿಲ್ ನ ಸಾವೋ ಪಾಲೊದಲ್ಲಿ ನಡೆದಿದ್ದು,ಇಡೀ ದಿನ ಸ್ಪೈಡರ್ ಮ್ಯಾನ್ ವೇಷದಲ್ಲಿ ತನ್ನ ಕೆಲಸ ಮಾಡಿದ್ದಾನೆ. ಈ ದೃಶ್ಯಗಳನ್ನು ಸೆರೆ ಹಿಡಿದ ಸಹೋದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅದೀಗ ವೈರಲ್ ಆಗಿದೆ. ಉದ್ಯೋಗಿ ತನ್ನ ಕಡೆಯ ಕೆಲಸದ ದಿನ ಜೀವತಾವಧಿಯಲ್ಲಿ ಸದಾ ನೆನಪಿರಬೇಕು ಎಂದು ಈ ರೀತಿಯ ವೇಷದಲ್ಲಿ ಹೋಗಿದ್ದಾನೆ.

ಫೋಟೋ ಮತ್ತು ವಿಡಿಯೋದಲ್ಲಿ, ಉದ್ಯೋಗಿ ತನ್ನ ಜಾಗದಲ್ಲಿ ಕುಳಿತು ಅದೇ ವೇಷದಲ್ಲಿ ಕೆಲಸ ಮಾಡುತ್ತಿರುವುದು. ಜೊತೆಗೆ ಕಿವಿಗೆ ಹೆಡ್ಫೋನ್ ಹಾಕಿರುವುದು ಮತ್ತು ತನ್ನ ಸಹೋದ್ಯೋಗಿಗೆ ಸಲಹೆ ಕೊಡುತ್ತಿರುವುದನ್ನು ನೋಡಬಹುದಾಗಿದೆ. ಇನ್ನೂ ವಿಡಿಯೋದಲ್ಲಿ ತನ್ನ ಸಹೋದ್ಯೋಗಿಗಳಿಗೆ ಕಡೆದ ದಿನದ ಹಿನ್ನೆಲೆಯಲ್ಲಿ ಸ್ವೀಟ್ ನೀಡುತ್ತಿರುವುದನ್ನು ನೋಡಬಹುದಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಲೆ ಹೊಟ್ಟಿನ (Dandruff) ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ವೇಳೆ ಕಾಡಿಯೇ ಕಾಡುತ್ತೆ. ಇದಕ್ಕಿದೆ ಸರಳ ಪರಿಹಾರ. ಮೆಂತ್ಯಪುಡಿಯನ್ನು ತುಸು ಕಾಲ ನೆನೆಸಿಟ್ಟು, ನೆಲ್ಲಿಕಾಯಿ ಪುಡಿಯೊಂದಿಗೆ ಕಲೆಸಿ, ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ನಂತರ ತೊಳೆದುಕೊಳ್ಳಿ. ಲೋಳೆಸರದ ಬಿಳಿ ತಿರುಳನ್ನು ನೆನೆಸಿ, ದಾಸವಾಳದ ಎಲೆಯೊಂದಿಗೆ ರುಬ್ಬಿ ಹಚ್ಚಿಕೊಳ್ಳಿ. ಮೊಸರಿನೊಂದಿಗೆ ಹಚ್ಚಿಕೊಂಡರೆ ಮೆಹಂದಿಯೂ ಪರಿಣಾಮಕಾರಿ. ಕಡಲೆಹಿಟ್ಟು ಸೀಗೆಯೊಂದಿಗೆ ನಂತರ ತಲೆ ತೊಳೆದುಕೊಳ್ಳಬೇಕು. ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ಸುಟ್ಟು, ತಿರುಳನ್ನು ತೆಗೆದು ರುಬ್ಬಿ ಕೂದಲಿನ ಬುಡಕ್ಕೆ ಲೇಪಿಸಿಕೊಳ್ಳಿ. ಕೊಬ್ಬರಿ ಎಣ್ಣೆ…
ಬಡವರ ಬಾದಾಮಿ ಎಂದೇ ಕರೆಯುವ ಕಡಲೆಕಾಯಿಯಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಸದಾ ನೀವು ಯಂಗ್ ಆಗಿ ಕಾಣುವಂತೆ ಮಾಡುವುದಲ್ಲದೆ, ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತೆ. ಹಾಗಾದ್ರೆ ಕಡಲೆ ಕಾಯಿಯನ್ನು ತಿನ್ನುವುದರಿಂದ ಇನ್ನು ಹಲವಾರು ಪ್ರಯೋಜನಗಳಿವೆ.. *ಪ್ರತಿದಿನ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಗ್ಯಾಸ್ ಮತ್ತು ಎಸಿಡಿಟಿ ಸಮಸ್ಯೆ ಶಮನವಾಗುತ್ತದೆ.ಜೊತೆಗೆ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. *ದಿನಾಲೂ ಪುರುಷ ಹಾಗೂ ಮಹಿಳೆ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಹಾರ್ಮೋನುಗಳು ಸಮತೋಲನದಲ್ಲಿದ್ದು ಅವರ ಲೈಂಗಿಕ…
ಕಂಪ್ಯೂಟರ್ಗಳು, ಕಂಪನಿಯ ಸರ್ವರ್ಗಳನ್ನು ಹ್ಯಾಕ್ ಮಾಡುವುದನ್ನು ಕೇಳಿದ್ದೇವೆ. ಆದರೆ ಸೂರತ್ನಲ್ಲಿ ಕಂಡುಕೇಳರಿಯದ ಪ್ರಕರಣವೊಂದು ವರದಿಯಾಗಿದೆ. ಮನೆಯೊಂದರ ಬೆಡ್ರೂಂನಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್ ಟೀವಿಯನ್ನು ಹ್ಯಾಕ್ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯಗಳನ್ನು ಸೆರೆ ಹಿಡಿದು, ಅಶ್ಲೀಲ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿರುವ ಘಟನೆ ನಡೆದಿದೆ. ತನ್ನದೇ ವಿಡಿಯೋ ಆನ್ಲೈನ್ ಅಶ್ಲೀಲ ಜಾಲತಾಣದಲ್ಲಿರುವುದನ್ನು ಪತಿ ನೋಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಇದು ಸ್ಮಾರ್ಟ್ ಟೀವಿ ಬಳಕೆದಾರರಿಗೆ ಎಚ್ಚರಿಕೆ ಗಂಟೆಯಾಗಿದೆ. ಪೊಲೀಸರಿಗೆ ದೂರು ನೀಡಿದರೆ ಮುಜುಗರಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಈ…
ಕನ್ನಡ ಚಿತ್ರಗಳಿಗೆ ಎಸಿ ಹಾಕೋಲ್ಲ. ಫಿಲ್ಮ್ ನೋಡೋರಿದ್ರೆ ನೋಡ್ಬಹುದು, ಇಲ್ಲ ಎದ್ದು ಹೋಗ್ಬಹುದು. ಇದು ಬೆಂಗಳೂರಿನ ಎಲಿಮೆಂಟ್ಸ್ ಮಾಲ್ ಸಿಬ್ಬಂದಿಯ ಉದ್ಧಟತನದ ಮಾತುಗಳು. ನಾಗವಾರ ಬಳಿ ಇರೋ `ಎಲಿಮೆಂಟ್ಸ್ ಮಾಲ್’ನ ಪಿವಿಆರ್ನಲ್ಲಿ ರಾಜಕುಮಾರ ಚಿತ್ರ ಪ್ರದರ್ಶನ ನಡೀತಿತ್ತು. ಚಿತ್ರ ಪ್ರಾರಂಭವಾಗಿ ಅರ್ಧ ತಾಸು ಕಳೆದ್ರೂ ಥಿಯೇಟರ್ನಲ್ಲಿ ಎಸಿ ಆನ್ ಆಗಿರಲಿಲ್ಲ. ಸೆಕೆಯಿಂದ ಬೇಸರಗೊಂಡ ಪ್ರೇಕ್ಷಕರು ಎಸಿ ಆನ್ ಮಾಡುವಂತೆ ಮಾಲ್ ಸಿಬ್ಬಂದಿಯನ್ನ ಕೇಳಿದ್ದಾರೆ. ಆದ್ರೆ ಎಸಿ ಆನ್ ಮಾಡುವ ಬದಲಿಗೆ ಮಾಲ್ನವವರು ಉದ್ಧಟತನದಿಂದ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಚಲನಚಿತ್ರಗಳಿಗೆಲ್ಲಾ ಎಸಿ…
ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಇಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಭೇಟಿ ಮಾಡಿ ಮಂಡ್ಯ ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆದ ಗೊಂದಲಗಳ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಮಾಹಿತಿ ತಿಳಿದುಕೊಳ್ಳಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾಗಿ ಅವರು ಹೇಳಿದ್ದಾರೆ ನಮಗೆ ರಾತ್ರಿ 9.30 ಕ್ಕೆ ಪ್ರಚಾರ ನಿಲ್ಲಿಸುವಂತೆ ಚುನಾವಣಾ ಅಧಿಕಾರಿಗಳು ಒತ್ತಡ ಹಾಕುತ್ತಾರೆ….