ಸುದ್ದಿ

ಆಧಾರ್ ಕಾರ್ಡ್ನಲ್ಲಿ ನಿಮ್ ಫೋಟೊ ಬದಲಾಯಿಸಬೇಕೆ….ತಕ್ಷಣ ಇದನ್ನು ಓಧಿ

81

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಿಸಲು ಅಥವಾ ನವೀಕರಿಸಲು ಬಯಸುತ್ತಿರುವವರಲ್ಲಿ ನೀವು ಒಬ್ಬರಾಗಿದ್ದರೆ, ಇಲ್ಲಿದೆ ನಿಮಗೊಂದು ಸಂತೋಷದ ವಿಷಯ. ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ..ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿಕೊಡಿ.ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಆಧಾರ್ ಅಪ್ ಡೇಟ್ ಪಾರಂ ಅಥವಾ ತಿದ್ದುಪಡಿ ಅರ್ಜಿಯನ್ನು ಕೇಳಿ ಪಡೆಯಿರಿ. ಮತ್ತು ಆ ಅರ್ಜಿಯಲ್ಲಿ ನಿಮ್ಮ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿನಂತರ ಅವರು ನಿಮ್ಮ ಬಯೋಮೆಟ್ರಿಕ್(ಬೆರಳಚ್ಚು ಮತ್ತು ಕಣ್ಣಿನ ಪಾಪೆ) ಸ್ಕ್ಯಾನ್ ಮಾಡಿ ಮಾಹಿತಿಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಪುನಃ ಹೊಸದಾಗಿ ಫೋಟೋ ತೆಗೆದುಕೊಳ್ಳುತ್ತಾರೆ. ಅಲ್ಲಿ ತೆಗೆದುಕೊಂಡ ಫೋಟೋವನ್ನು ತೋರಿಸುವಂತೆ ಕ್ಯಾಮರಾಮನ್ ಬಳಿ ಕೇಳಿ, ಚನ್ನಾಗಿಲ್ಲದಿದ್ದರೆ ಮತ್ತೊಮ್ಮೆ ಬೇರೆ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಿ.. ಇದು ಕ್ಯಾಮರಾಮ್ಯಾನ್ ನ ವರ್ತನೆಗೆ ಅವಲಂಭಿತವಾಗಿರುತ್ತದೆ.

ವಿವರಗಳನ್ನು ಪಡೆದನಂತರ ಅವನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಯುಐಡಿಎಐನ ಡೇಟಾ ಸೆಂಟರ್ ಕಳುಹಿಸಲಾಗುವುದು ಮತ್ತು 2 ವಾರಗಳ ನಂತರ ನೀವು ಅದೇ 12-ಅಂಕಿಯ ವಿಶಿಷ್ಟ ಸಂಖ್ಯೆಯೊಂದಿಗೆ ಆದರೆ ಬೇರೆ ಫೋಟೋವಿರುವ ಆಧಾರ್ ಕಾರ್ಡ್ ನಿಮ್ಮ ವಿಳಾಸಕ್ಕೆ ಅಂಚೆಮೂಲಕ ಬರುತ್ತದೆ. ಅಗತ್ಯವಿದ್ದವರು ಅದರ ಅನ್ನು ಆನ್ಲೈನ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು.ಆದರೆ ನೀವು ಈ ಸಂಪೂರ್ಣ ಕಾರ್ಯವಿಧಾನಕ್ಕೆ ರೂ. 15 /-ಅನ್ನು ಪಾವತಿಸಬೇಕು ಏಕೆಂದರೆ ಆಧಾರ್ ಕಾರ್ಡ್ ಗೆ ದಾಖಲಾತಿ ಮಾಡಲು ಕೇವಲ ಮೊದಲ ಬಾರಿ ಮಾತ್ರ ಉಚಿತವಾಗಿರುತ್ತದೆ.. ಒಂದಕ್ಕಿಂತ ಹೆಚ್ಚು ಬಾರಿ ತಿದ್ದುಪಡಿ ಮಾಡಿಸಲು ಮುಂದಾದರೆ ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.

ಸೂಚನೆ:ದುರದೃಷ್ಟವಶಾತ್ ನಿಮ್ಮ ಆಧಾರ್ ಕಾರ್ಡ್ ನ ಫೋಟೋವನ್ನು ಆನ್ ಲೈನ್ ಇಂಟರ್ನೆಟ್ ಮೂಲಕ ಚೇಂಜ್ ಮಾಡುವುದಕ್ಕೆ ಯಾವುದೇ ಅವಾಕಾಶಗಳಿರುವುದಿಲ್ಲ. ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಆಧಾರ್ ಧಾಖಲಾತಿ ಕೇಂದ್ರಕ್ಕೆ ಭೇಟಿ ನೀಡಲೇಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ