ಸಿನಿಮಾ

ಆಟೋ ಚಾಲಕನಿಂದ ಉಪ್ಪಿಗೆ ಬಂದ,ಈ ಪತ್ರದಲ್ಲಿ, ಇದ್ದ ಅಸಲಿ ವಿಷಯ ಏನು ಗೊತ್ತಾ..?ತಿಳಿಯಲು ಈ ಲೇಖನಿ ಓದಿ…

3244

ಕನ್ನಡ ಚಿತ್ರ ನಟ ಸೂಪರ್ಸ್ಟಾರ್ ಉಪೇಂದ್ರರವರು ಇತ್ತೀಚೆಗಷ್ಟೇ ಪ್ರಜಾಕೀಯ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಹಾಗಾಗಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹಾಗೂ ಸ್ವತಃ ಉಪೇಂದ್ರರವರ ಅಭಿಮಾನಿಯಾಗಿರುವರೊಬ್ಬರು, ಉಪೇಂದ್ರರವರ ರಾಜಕೀಯ ಮತ್ತು ಅವರ ಹೊಸ ಪಕ್ಷದ ಕುರಿತು ಪತ್ರವೊಂದನ್ನು ಬರೆದಿದ್ದಾರೆ.

ಆ ಪತ್ರದಲ್ಲಿ ಏನಿತ್ತು ಗೊತ್ತಾ? ಮುಂದೆ ಓದಿ…

ಗೌರವಾನ್ವಿತ ಉಪೇಂದ್ರರವರಿಗೆ,
ನಾನೊಬ್ಬ ಆಟೋ ಚಾಲಕ. ಬಸವನಗುಡಿಯಲ್ಲಿಯೇ ನಾನು ಆಟೋ ಚಾಲಕನಾಗಿರುವವನು. ನಿಮ್ಮ ಮನೆ ನನ್ನ ಆಟೋ ನಿಲ್ದಾಣಕ್ಕೆ ತೀರಾ ದೂರವಿಲ್ಲ. ನಾನೊಬ್ಬ ಕನ್ನಡದ ಅಭಿಮಾನಿ! ಶಂಕರ್ ನಾಗ್ ಹಾಗೂ ನಿಮ್ಮ ಚಿತ್ರವನ್ನು ಆಟೋದ ಹಿಂದೆ ಮುಂದೆ ಹಾಕಿಕೊಂಡಿದ್ದೇನೆ! ಕಾರಣ ನಿಮ್ಮ ಮೇಲಿನ ಅಭಿಮಾನದಿಂದಷ್ಟೇ.

ಒಟ್ಟಾರೆಯಾಗಿ ಹೇಳಬೇಕೆಂದರೆ ನಾನೊಬ್ಬ ನಿಮ್ಮ ಅಪ್ಪಟ ಅಭಿಮಾನಿ! ನಿಮ್ಮ ಸಿನಿಮಾಗಳನ್ನು ಅದೆಷ್ಟೋ ಸಲ ನೋಡಿದ್ದೇನೆ, ಒಂದೇ ಸಲಕ್ಕೆ ಅರ್ಥವಾಗದಿದ್ದರೂ ಎರಡು ಮೂರನೇ ಸಲ ನೋಡಿ ಅರ್ಥ ಮಾಡಿಕೊಂಡಿದ್ದೇನೆ! ಪೂರ್ತಿಯಾಗಿ ಅರ್ಥಾಗದೇ ಹೋದರೂ ಅದೇನೋ ಖುಷಿಯೊಂದು ನನ್ನಲ್ಲಿರುತ್ತದೆ.

ನೀವು ರಾಜಕೀಯವನ್ನು ‘ಪ್ರಜಾಕೀಯ’ ಮಾಡಲು ಹೊರಟಿದ್ದು ಬಹಳ ಸಂತೋಷವಾಗಿತ್ತು! ಒಬ್ಬ ನಾಯಕ ನಟನಾದ ನೀವು ಹೆಮ್ಮೆಯ ಪ್ರಧಾನಿ ಮೋದಿಯನ್ನು ಬೆಂಬಲಿಸಿದ್ದು ನೋಡಿ ನಮ್ಮ ಕರ್ನಾಟಕಕ್ಕೂ ಒಂದೊಳ್ಳೆಯ ನಾಯಕ ಸಿಗಬಹುದೆಂದು ಅಂದುಕೊಂಡಿದ್ದೆ! ನಿಮ್ಮ ಸುದ್ದಿಗೋಷ್ಠಿ ನೋಡಿದ ಮೇಲೆ ಕೇಳಲೇಬೇಕು ಎಂದೆನಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ.

  1. ನಿಮ್ಮ ದೃಷ್ಟಿಯಲ್ಲಿ ಈಗಿರುವ ಪ್ರಜಾಕಾರಣಿ ಯಾರು? ಮತ್ತು ಯಾಕೆ?

2. ನೀವೇ ಹೇಳಿದಂತೆ, ಒಬ್ಬ ಪ್ರಜಾಕಾರಣಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಾರ್ಮಿಕನ ಹಾಗೆ ಕೆಲಸ ಮಾಡಬೇಕು ಎಂದಿರಿ. ಹಾಗಿದ್ದರೆ, ನರೇಂದ್ರ ಮೋದಿಯವರು ಬೆಳಗ್ಗಿನ ಜಾವ 4ರಿಂದ ರಾತ್ರಿ 12ರವರೆಗೂ ಬರೋಬ್ಬರಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಿಮ್ಮ ದೃಷ್ಟಿಯಲ್ಲಿ ಅವರು ಈ ಯಾವ ‘ಪ್ರಜಾಕಾರಣ’ದ ವರ್ಗಕ್ಕೆ ಸೇರುತ್ತಾರೆ?

3. ನೀವೇ ಹೇಳಿದಂತೆ, ಚುನಾವಣೆಯ ಪ್ರಚಾರಕ್ಕೆ ಫ್ಲೆಕ್ಸು, ಬ್ಯಾನರ್‌ಗಳನ್ನು ಹಾಕಿದರೆ ಸ್ವಚ್ಛ ಭಾರತದ ಕನಸು ಕನಸಾಗುಳಿದುಬಿಡುತ್ತೆ ಎಂದಿರಿ. ಆದರೆ ನಿಮ್ಮ ಯಾವುದೇ ಸಿನಿಮಾಗಳ ಬಿಡುಗಡೆ ನೋಡಿದರೂ ಪಟಾಕಿ, ಬ್ಯಾನರ್, ಪ್ಲೆಕ್ಸುಗಳಿಲ್ಲದೇ ನಡೆಯುವುದೇ ಇಲ್ಲ! ಆಗೆಲ್ಲಿತ್ತು, ಈ ಸ್ವಚ್ಛ ಭಾರತದ ಪರಿಕಲ್ಪನೆ?

ಹೂವಿನ ಹಾರ ಹಾಕುವುದು ತಪ್ಪು ಎನ್ನುವುದು ನಿಮ್ಮ ಸಿದ್ಧಾಂತವಾದರೆ, ನಿಮ್ಮ ಸಿನಿಮಾ ಬಿಡುಗಡೆಗಳಲ್ಲೇ ನಿಮ್ಮ ಅದೆಷ್ಟೋ ಉದ್ದದ ಪ್ರತಿಕೃತಿಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದ್ದನ್ನು ಸ್ವತಃ ನೋಡಿದ್ದೇನೆ. ಸ್ವತಃ ನಿಮಗೂ ಅಭಿಮಾನಿಗಳು ಹಾರ ಹಾಕಿದ್ದಾರೆ! ಆಗ್ಯಾಕೆ, ನೀವು ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಲಿಲ್ಲ? ಅದೇ ದುಡ್ಡನ್ನು ಇನ್ನೊಬ್ಬರಿಗೆ ದಾನ ಮಾಡಿ ಎಂದು ಘೋಷಿಸಲಿಲ್ಲ?

4. ಒಬ್ಬ ‘ಖಾಕಿ’ ಹಾಕಿಬಿಟ್ಟರೆ ಆತ ಕಾರ್ಮಿಕ ಹೇಗಾಗುತ್ತಾನೆ ಸ್ವಾಮಿ? ನೀವು ಖಾಕಿಗೆ ಬೆಲೆ ಕೊಡುವವರಾಗಿದ್ದಾರೆ ನಿಮ್ಮ ರೆಸಾರ್ಟಿನಲ್ಲಿ ನೀವು ಪ್ರೆಸ್ ಮೀಟ್ ಮಾಡುತ್ತಿರಲಿಲ್ಲ ಅಲ್ಲವೇ? ಕಾರ್ಮಿಕರಿರುವ ಸಾರ್ವಜನಿಕ ಸ್ಥಳಗಳಲ್ಲಿಯೇ ನಡೆಸುತ್ತಿದ್ದೀರಿ ಅಲ್ಲವೇ?

5. ನೀವೇ ಕೆಲವು ವರ್ಷಗಳ ಹಿಂದೆ ಹೇಳಿದಂತೆ, ನೀವು ರಾಜಕೀಯಕ್ಕೆ ಇಳಿಯುವ ಮುನ್ನ ಮೊದಲು ಕುಟುಂಬವನ್ನು ಆರ್ಥಿಕವಾಗಿ ರಕ್ಷಿಸಿರಬೇಕು, ನ್ಯಾಯ ಒದಗಿಸಿರಬೇಕು ಎಂದಿದ್ದಿರಿ. ಹಲವು ವರ್ಷಗಳ ಹಿಂದೆಯೇ ನೀವು ಮೂರು ಕೋಟಿಯ ಮನೆ ಕಟ್ಟಿಸಿ, ಬೇಕಾದಷ್ಟು ಆಸ್ತಿ ಮಾಡಿ ನಿಮ್ಮ ಕುಟುಂಬವನ್ನು ತುಂಬಾ ಚೆನ್ನಾಗಿಯೇ ನೋಡಿಕೊಂಡಿರಿ ಮತ್ತು ನ್ಯಾಯ ಒದಗಿಸಿದಿರಿ. ಹಾಗಾದರೆ, ಬರುವ ಪ್ರತಿಯೊಬ್ಬ ಕಾರ್ಯಕರ್ತನೂ (ಅಥವಾ ಪ್ರಜಾಕೀಯದ ಪ್ರಾಯಕರ್ತನೋ?) ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿ ಪ್ರಾಯ ಮುಗಿದ ನಂತರವೇ ನಿಮ್ಮ ಪಕ್ಷ ಸೇರಿದ್ದಲ್ಲಿ ನಿಮಗೆ ಅಭ್ಯಂತರವಿದೆಯೇ?

6. ಇಷ್ಟು ದಿನವೂ ಸುಮ್ಮನಿದ್ದ ನೀವು ಅಮಿತ್ ಷಾ ಬರುವ ದಿನವೇ ನಿಮ್ಮ ಪ್ರಜಾಕೀಯದ ಪಾದಾರ್ಪಣೆಯನ್ನು ಘೋಷಿಸಿದಿರಿ. ಪರಿಣಾಮ ಅತ್ಯಂತ ಅಗತ್ಯವಾಗಿದ್ದ ಅವರ ಪ್ರವಾಸ ಕಾರ್ಯಕ್ರಮವೊಂದು ಅಂದುಕೊಂಡಷ್ಟು ಯಶಸ್ವಿಯಾಗಲೇ ಇಲ್ಲ. ಈ ಲಾಜಿಕ್ಕುಗಳ ಹಿಂದೆ ನೀವೇ ಇದ್ದದ್ದೋ ಅಥವಾ ಕಾಣದ ಕೈಗಳ ‘ಕೈ’ ಅಡಗಿದೆಯೋ?

7. ಅಚ್ಚರಿಯೆನ್ನಿಸಿದ್ದು ನಿಮ್ಮ ಹಣವಿಲ್ಲದ ಪ್ರಜಾಕೀಯ! ಒಂದು ರುಪಾಯಿ ಹಾಕೊಲ್ಲ, ತೆಗೆಯೊಲ್ಲ ಅಂದಿರಿ. ಆದರೆ, ಚುನಾವಣೆಗೆ ಅದರದೇ ಆದ ಖರ್ಚುಗಳಿದ್ದೇ ಇರುತ್ತದೆ. ಪ್ರಚಾರಕ್ಕೆ, ಪತ್ರಕ್ಕೆ ಇತ್ಯಾದಿ. ಪ್ರಚಾರಕ್ಕೆ ಹಣವೇ ನಾ ನೀಡೋದಿಲ್ಲ ಎಂದಿರಿ. ಮುಂದೆ ಇದಕ್ಕೆ ನೀಡುವ ಹಣ ನಿಮ್ಮ ಕುಟುಂಬದ ಸದೃಢತೆಯದೋ ಅಥವಾ ಯಾರಾದರಿಂದಲೂ ತೆಗೆದುಕೊಳ್ಳುವಿರೋ?

8. ಈ ಹಿಂದೆಯೂ ಕೂಡ ತೆಲುಗಿನ ನಟ ಚಿರಂಜೀವಿ ‘ಪ್ರಜಾರಾಜ್ಯಂ’ ಎಂಬ ಪಕ್ಷ ಸ್ಥಾಪಿಸಿ ನಿಮ್ಮಂತೆಯೇ ತತ್ತ್ವ ಸಿದ್ಧಾಂತಗಳನ್ನು ಮಂಡಿಸಿ, ಎಷ್ಟೋ ಜನರ ತಲೆಕೆಡಿಸಿ, ನಂತರ ತನಗೆ ಸ್ಥಾನ ಸಿಕ್ಕ ನಂತರ ಪರ ಪಕ್ಷಕ್ಕೆ ಹಾರಿ, ಕಾರ್ಯಕರ್ತರನ್ನೆಲ್ಲ ನಡು ನೀರಿನಲ್ಲಿ ಕೈ ಬಿಟ್ಟರು. ನೀವು ಚಿರಂಜೀವಿ, ಕೇಜ್ರಿವಾಲ್ ತರಹ ಮುಂದೆ ಹೀಗೆ ವರ್ತಿಸುವುದಿಲ್ಲವೆಂಬ ಯಾವ ಗ್ಯಾರಂಟಿ?

9. ಪ್ರಜಾಕೀಯ ಕೇವಲ ಪದಗಳ ಆಟವಲ್ಲವಷ್ಟೇ? ರಾಜಕೀಯವನ್ನು ಪ್ರಜಾಕೀಯ ಅಂದ ತಕ್ಷಣ ಚುನಾವಣಾ ವ್ಯವಸ್ಥೆ ಬದಲಾಗದು. ಲೋಕಸಭಾ ಚುನಾವಣೆಯಿಂದ ಗ್ರಾಮಪಂಚಾಯತ್ ವರೆಗೆ ವ್ಯವಸ್ಥೆ ಹಾಗೆಯೇ ಮುಂದುವರಿಯುತ್ತದೆ. ಇದನ್ನು ನೀವು ಹೇಗೆ ಬದಲಾಯಿಸುವಿರಿ?

ನಾನೊಬ್ಬ ಸಾಮಾನ್ಯ ಕಾರ್ಮಿಕ! ನನಗೆ ಈ ಪ್ರಜಾಕೀಯವೆನ್ನುವುದೆಲ್ಲ ತೀರಾ ತಿಳಿಯದ ವಿಷಯಗಳಾದರೂ ಒಂದಷ್ಟು ಸಾಮಾನ್ಯ ಜ್ಞಾನವಂತೂ ಇರುವುದರಿಂದ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಇದಕ್ಕೆ ನಿಮ್ಮಿಂದ ಉತ್ತರವನ್ನೂ ನಿರೀಕ್ಷಿಸುತ್ತಿದ್ದೇನೆ.

ನಿಮ್ಮ ಉತ್ತರಗಳು ಸಮರ್ಪಕವಾಗಿದ್ದರೆ ನಾನು ನನ್ನೆಲ್ಲ ಕೆಲಸ ಕಾರ್ಯಗಳನ್ನೂ ಬಿಟ್ಟು ನಿಮ್ಮ ‘ಸ್ವಚ್ಛ’ ಪ್ರಜಾಕೀಯದ ಪ್ರಚಾರಕ್ಕೆ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತೇನೆ. ನಿಮ್ಮ ಉತ್ತರಗಳು ನಿಮ್ಮ ಸಿನಿಮಾ ನೋಡಿ ಸಿಕ್ಕಿದ ಖುಷಿಯ ಅರ್ಧವಾದರೂ ಇರಲಿ ಎಂಬ ನಂಬಿಕೆ ಅಷ್ಟೇ. ನಿಮಗೆ ಮೇಲ್ ಕೂಡ ಮಾಡಿದ್ದೇನೆ. ಉತ್ತರ ಮೇಲ್‌ನಲ್ಲಿ ಕೊಟ್ಟರೂ ಸರಿಯೇ.
ಕೃಪೆ: ಶಂಕರ ಕಾಳೇಗೌಡ

ಮೂಲ

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ.! ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ? ಪರಿಹಾರ ತಿಳಿಯಿರಿ.

    ಪಂಡಿತ್ ರಾಘವೇಂದ್ರ ಸ್ವಾಮಿಗಳು ಗಳು ಶ್ರೀ ಸ್ವಾಮಿ9901077772 ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) call/ whatsapp 9901077772 ಮನೆ ಮುಂದೆ ನಿಂಬೆಕಾಯಿ,…

  • ಆಧ್ಯಾತ್ಮ

    ಹಿಂದೂ ಧರ್ಮದಲ್ಲಿ ಯಾರಾದ್ರು ಸತ್ತಾಗ ಕೇಶ ಮುಂಡನ ಮಾಡುತ್ತಾರೆ, ಏಕೆ ಗೊತ್ತಾ?

    ನಮ್ಮ ಹಿಂದೂ ಧರ್ಮದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆ ಯಾವುದೇ ಧರ್ಮದಲ್ಲಿ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಹುಟ್ಟಿನಿಂದ ಸಾವಿನ ತನಕ ಹಿಂದೂಗಳು ಹಲವಾರು ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಹುಟ್ಟಿದ ಮಗುವಿಗೆ ನಾಮಕರಣದಿಂದ ಹಿಡಿದು ಸತ್ತ ವ್ಯಕ್ತಿಗೆ ಪಿಂಡ ಬಿಡುವ ತನಕ ಪ್ರತಿಯೊಂದು ಸಂಪ್ರದಾಯಗಳು ಹಿಂದೂಗಳಲ್ಲಿ ಇದೆ.

  • Uncategorized, ಆರೋಗ್ಯ

    ಏಲಕ್ಕಿಯಲ್ಲಿರುವ ಆರೋಗ್ಯಾಕಾರಿ ಲಾಭಗಳನ್ನು ತಿಳಿಯಲು…! ತಿಳಿಯಲು ಇದನ್ನು ಓದಿರಿ…

    ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ ಪರಿಮಳದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ.

  • ಸ್ಪೂರ್ತಿ

    ರಿಕ್ಷಾ ಚಾಲಕನ ಮಗ ಐಎಎಸ್ ಅಧಿಕಾರಿಯಾಗಿದ್ದು ಹೇಗೆ ಗೋತ್ತಾ..?ತಿಳಿಯಲು ಈ ಲೇಖನ ಓದಿ..

    ಜೀವನದ ಪಾಠವನ್ನು ಹಸಿವು ಅನ್ನೊದ್ದು ಅತಿ ಬೇಗನೆ ಕಲಿಸಿ ಕೊಡುತ್ತದೆ ಅನ್ನಬಹುದು. ಬಡತನದಲ್ಲಿ ಬೆಂದು ನೊಂದು ಹಲವರ ಬಾಯಲ್ಲಿ ಬೋಯಿಸಿಕೊಂಡು ಜೀವನವನ್ನು ಸಾಗಿಸುತ್ತ, ಇವುಗಳ ಮದ್ಯೆ ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಕನಸನ್ನು ಹೊತ್ತು ಶ್ರಮ ಪಟ್ಟ ಆ ಶ್ರಮ ಜೀವಿಗೆ ಆ ದೇವರು ಪ್ರತಿ ಫಲವನ್ನು ಕೊಟ್ಟಿದ್ದಾನೆ.

  • ಸಿನಿಮಾ, ಸುದ್ದಿ

    ಶ್ರೀಲಂಕಾದಲ್ಲಿ ಆದ ಬಾಂಬ್ ಸ್ಪೋಟದಲ್ಲಿ ಸ್ವಲ್ಪದರಲ್ಲೇ ಪಾರಾದ್ಲು ಈ ನಟಿ..!

    ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 290ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 500 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಚ್ಚಿ ಬೀಳಿಸಿದ ಸರಣಿ ಬಾಂಬ್ ಸ್ಫೋಟದ ಅವಘಡದಲ್ಲಿ ಬಹುಭಾಷಾ ನಟಿ ರಾಧಿಕಾ ಶರತ್ ಕುಮಾರ್ ಸ್ವಲ್ಪದರಲ್ಲೇ ಪಾರಾಗಿ ಬಂದಿದ್ದಾರೆ. ಕೊಲಂಬೋಕ್ಕೆ ತೆರಳಿದ್ದ ರಾಧಿಕಾ ಶರತ್ ಕುಮಾರ್, ಭಾನುವಾರ ಬೆಳಿಗ್ಗೆ ಸಿನ್ನಾಮನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಕೆಲಸ ಮುಗಿಸಿಕೊಂಡು ಹೊರ ಬಂದ ಕೆಲವೇ ನಿಮಿಷಗಳಲ್ಲಿ ಸ್ಪೋಟ ಸಂಭವಿಸಿದೆ. ಈ ಸಂಗತಿಯನ್ನು ರಾಧಿಕಾ ಶರತ್ ಕುಮಾರ್…

  • ಆಧ್ಯಾತ್ಮ

    ಈ 5 ವಸ್ತುಗಳಿಂದ ಭಗವಾನ್ ಶಿವ ಲಿಂಗವನ್ನು ಎಂದಿಗೂ ಪೂಜಿಸಬಾರದು..!

    ಭಗವಾನ್ ಶಿವ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು, ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ. ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.