ಆರೋಗ್ಯ

ಅಶ್ವಗಂಧದ ರೋಗನಿರೋಧಕ ಶಕ್ತಿಯ ಉಪಯೋಗಗಳನ್ನು ತಿಳಿಯ ಬೇಕಾ …? ಹಾಗದ್ರೆ ಈ ಲೇಖನವನ್ನು ಓದಿ …

5822

ಪುರಾತನ ಕಾಲದಿಂದಲೂ ಆಯುರ್ವೇದ ಪದ್ದತಿಯಲ್ಲಿ ಹೆಚ್ಚು ಉಪಯೋಗಿಸಲ್ಟಡುತ್ತಿದ್ದ ಔಷದೀಯ ಸಸ್ಯ ಅಶ್ವಗಂಧ. ಈಗಲೂ ಅನೇಕ ಔಷಧಿಗಳಲ್ಲಿ ಅಶ್ವಗಂಧವನ್ನು ಉಪಯೋಗಿಸಲಾಗುತ್ತಿದೆ.

ಅಶ್ವಗಂಧಾ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ ‘ಹಿರೇಮದ್ದು’ ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ.


ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಉಂಟಾದರೆ ನೀವು ನೆನೆಸಿಕೊಳ್ಳಬೇಕಾದ ಮೊದಲ ಸಸ್ಯವೆಂದರೆ ಅಶ್ವಗಂಧ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಅಶ್ವಗಂಧದಲ್ಲಿ ಆರೋಗ್ಯಕ್ಕೆ ಹೇರಳವಾದ ಲಾಭವಿದೆ. ಕ್ಯಾನ್ಸರ್ ನಂತಹ ಅಪಾಯಕಾರಿ ರೋಗಗಳನ್ನು ತಡೆಯುವುದು ಅಶ್ವಗಂಧದಿಂದ ಸಾಧ್ಯವಾಗಲಿದೆ. ಅಶ್ವಗಂಧದಿಂದ ಆರೋಗ್ಯಕ್ಕೆ ಉಪಯೋಗ:

* ಬ್ಯಾಕ್ಟಿರಿಯಾ ವಿರುದ್ಧ ಹೋರಾಡಲು ಹೆಚ್ಚು ಪರಿಣಾಮಕಾರಿ

* ಉರಿ ನಿವಾರಕ

* ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

* ನಿದ್ರಾಹೀನತೆ, ಕ್ಯಾನ್ಸರ್, ಸಂಧಿವಾತ, ಮಧುಮೇಹ ಹತೋಟಿಗೆ ತರುತ್ತದೆ

* ನರಮಂಡಲವನ್ನು ಸಧೃಡವಾಗಿಡುತ್ತದೆ.

 

ಈ ಗಿಡಮೂಲಕೆಯಿಂದ ಲೈಂಗಿಕ ನಿಶ್ಶಕ್ತಿ ಹೋಗುವುದು ಮಾತ್ರವಲ್ಲ, ಪುರುಷರು ದೈಹಿಕವಾಗಿಯೂ ಸದೃಢರಾಗುತ್ತಾರೆ. ಇದು ಪುರುಷರಲ್ಲಿ ಖಿನ್ನತೆಯನ್ನು ದೂರ ಮಾಡುತ್ತದೆ, ಜೀವನಾವಧಿಯನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಶಕ್ತಿ ಪುಟಿದೇಳುವಂತೆ ಮಾಡುತ್ತದೆ.

ಇದನ್ನು ಬಳಸುವುದರಿಂದ ಇದ್ದಕ್ಕಿದ್ದಂತೆ ಪುರುಷತ್ವ ವಾಪಸ್ ಬಂದು ಕೆನೆಯುವ ಕುದುರೆಯಂತಾಗುವುದಿಲ್ಲ. ನಿಯಮಿತವಾಗಿ ಬಳಸುತ್ತಿದ್ದರೆ, ಹಂತಹಂತವಾಗಿ ನಿಮಿರು ದೌರ್ಬಲ್ಯ ಕಡಿಮೆಯಾಗಿ ನಿಮಿರುವಿಕೆ ಹತೋಟಿಗೆ ಬರುತ್ತದೆ, ಕಾಮಕೇಳಿಯ ಉತ್ಸಾಹ ಇಮ್ಮಡಿಯಾಗುವಂತೆ ಮಾಡುತ್ತದೆ.

ವೀರ್ಯವಂತರಾಗಲು ಇದನ್ನು ಪರಿಣಾಮಕಾರಿಯಾಗಿ ಮತ್ತು ಹೆಚ್ಚಿನ ಲಾಭ ಪಡೆಯಲು ಬಳಸಿಕೊಳ್ಳುವುದು ಹೇಗೆ, ನಂತರ ಶಯನಗೃಹದಲ್ಲಿ ಸಂಗಾತಿಯೊಡನೆ ಸ್ವರ್ಗ ಸುಖ ಕಾಣುವುದು ಹೇಗೆ ಎಂಬ ಬಗ್ಗೆ ಸ್ಥೂಲವಾದ ವಿವರಗಳಿವೆ.

ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇ ರಸದೊಂದಿಗೆ ಹಚ್ಚಲು ಉಪಯೋಗಿಸುತ್ತಾರೆ. ಆಯುರ್ವೇದಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ನೀಡಿದ ಹೆಸರು ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಇತ್ಯಾದಿ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದಂತಹ ವಾಸನೆ ಹೊರಡುತ್ತದೆಯಾದ್ದರಿಂದ ಅಲ್ಲದೆ ಇದರ ಬೇರನ್ನು ಸ್ವಚ್ಚಗೊಳಿಸಿ ಪುಡಿ ಮಾಡಿ ಸೇವಿಸಿದರೆ ಅಶ್ವದಂತೆ ಶಕ್ತಿಬಲ-ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂಬ ನಾಮವು ಬಂದಿದೆ. ಇಂಗ್ಲೀಷ್ ನಲ್ಲಿ ಇದಕ್ಕೆ ವಿಂಟರ್ಚೆರ್ರಿ ಎನ್ನುತ್ತಾರೆ.

ಸೊಲನೇಸೀ ಕುಟುಂಬಕ್ಕೆ ಸೇರಿದ, ಔಷಧೀಯ ಮಹತ್ತ್ವವುಳ್ಳ ಸಸ್ಯ (ಪಿಂಟರ್ ಚೆರ್ರಿ). ಕನ್ನಡದಲ್ಲಿ ಹಿರೇಮದ್ದಿನ ಗಿಡ ಎಂಬ ಹೆಸರೂ ಇದಕ್ಕಿದೆ. ಇದರ ವೈಜ್ಞಾನಿಕ ಹೆಸರು ವಿತಾಸಿಯ ಸಾಮ್ನಿಫೆರ. ಸು. 1 ಮೀ ಎತ್ತರಕ್ಕೆ ಬೆಳೆಯುವ ಮೂಲಿಕೆ. ಆಫ್ರಿಕ, ಮೆಡಿಟರೇನಿಯನ್ ಪ್ರದೇಶ ಹಾಗೂ ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಅಶ್ವಗಂಧ ಬೆಳೆಯಿಂದ ದೊರೆಯುವ ಆಲ್ಕಲಾಯ್ಡ್‌ಗಳಲ್ಲಿ ಮಿಥಾನಿನ್ ಮತ್ತು ಸಾಮ್ನಿಫೆರಿನ್ ಸಸ್ಯಕ್ಷಾರ ಮುಖ್ಯವಾದುವು. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ.

ಅಶ್ವಗಂಧ ಕಫ ನಿವಾರಕ, ಶ್ವೇತ ಕುಷ್ಠ ನಿವಾರಕ, ಕ್ಷಯರೋಗ ನಿವಾರಕ ಮತ್ತು ವಾಯು ವಿಕಾರಗಳನ್ನು ಗುಣಪಡಿಸುವ ಕಾಮೋದ್ದೀಪಕ ಗುಣವುಳ್ಳ ಅಶ್ವಗಂಧದ ಪುಡಿಯನ್ನು ಲೈಂಗಿಕ ದೌರ್ಬಲ್ಯ ನಿವಾರಿಸುವ ಎಲ್ಲ ಔಷಧಿಗಳಲ್ಲಿ ಬಳಸುತ್ತಾರೆ. ಔಷಧಿಯಾಗಿದೆ. ಧಾತು ದೌರ್ಬಲ್ಯ, ಯೋನಿ ಶೂಲ, ಕೈಕಾಲುಗಳಲ್ಲಿನ ಸೆಳೆತ, ಆಮವಾತ, ಜ್ವರ, ದಾಹ, ಕೀಲುನೋವು, ಶ್ವಾಸರೋಗ, ಗರ್ಭಾಶಯ ದೌರ್ಬಲ್ಯ, ತಲೆನೋವು, ನಿದ್ರಾಹೀನತೆ, ಆಯಾಸ, ವೃದ್ಧಾಪ್ಯದ ದೌರ್ಬಲ್ಯ, ರೋಗ ಗುಣಮುಖವಾದ ನಂತರ ಬರುವ ದೌರ್ಬಲ್ಯ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ. ಅಶ್ವಗಂಧ ನಮಗೆ ಪುಡಿ ಮತ್ತು ಬೇರು ಎರಡು ರೂಪದಲ್ಲೂ ದೊರೆಯುತ್ತದೆ. ಬೇರಿನ ರೂಪದ ಅಶ್ವಗಂಧಕ್ಕೆ ಬೆಲೆ ಕಡಿಮೆ. ಅದನ್ನು ಮನೆಯಲ್ಲಿ ಕುಟ್ಟಿ ಪುಡಿ ಮಾಡಿ ಬಟ್ಟೆಯಿಂದ ಸೋಸಿದಾಗ ನುಣುಪಾದ ಪುಡಿ ದೊರಕುತ್ತದೆ. ಅದನ್ನು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಂಡು ನಿಯಮಿತವಾಗಿ ಸೇವಿಸಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲು ಹಿರಿಯರೊಬ್ಬರ ಸಹಾಯ ಮತ್ತು ಸಹಕಾರ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕ ಅಗತ್ಯ. ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಎದುರಿಸುವಿರಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • ವ್ಯಕ್ತಿ ವಿಶೇಷಣ

    ಹುಟ್ಟಿದು ಹಿಟ್ಲರ್ ನೆಲದಲ್ಲಿ,ಕೊಟ್ಟಿದ್ದು ಕನ್ನಡ ಕೊಡುಗೆ..! ತಿಳಿಯಲು ಲೇಖನ ಓದಿ…

    ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ ‘ಅವಿಸ್ಮರಣೀಯರಾಗಿರುವುದು’ ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ – ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು ‘ಬಾಸೆಲ್ ಮಿಶನ್’ ನವರು ಪ್ರಕಟಿಸಿದರು.

  • ಸುದ್ದಿ

    ಬೆಲ್ಲ ತಿನ್ನುವುದರಿಂದ ಋತುಸ್ರಾವದ ವೇಳೆ ಏನಾಗುತ್ತೆ ಗೊತ್ತ…?

    ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಕಾರಣ ಋತುಸ್ರಾವದ ನೋವಿಗೆ ಇದು ಉಪಶಮನ. ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್‍ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್‍ಗಳು ದೇಹಕ್ಕೆ ಆರಾಮ ಕೊಡುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಪೋಲೆಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮ. ಬೆಲ್ಲದಲ್ಲಿ ಮೆಗ್ನೀ ಷಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16…

  • ಕವಿ

    ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡಿಗರಿಗೆ ಒಂದು ಆದರ್ಶ..!ತಿಳಿಯಲು ಈ ಲೇಖನ ಓದಿ..

    ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.

  • ಸುದ್ದಿ

    ಅಪರೂಪದ ದೃಶ್ಯ ಪ್ರತಿನಿತ್ಯ ಬೆಕ್ಕಿನ ಮರಿಗೆ ಹಾಲುಣಿಸುತ್ತಿರುವ ನಾಯಿ.

    ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ನಾಯಿ ಬೆಕ್ಕಿನ ಮರಿಗೆ ಹಾಲುಣಿಸಿ ತಾಯಿಯ ಪ್ರೀತಿಯನ್ನು ತೋರಿಸುತ್ತಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನೆಮ್ಮಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಚೆಟ್ಟಂಗಡ ಗಿಣಿ ತಿಮ್ಮಯ್ಯ ಅವರ ಮನೆಯಲ್ಲಿ ಈ ಅಪರೂಪದ ದೃಶ ಕಂಡು ಬಂದಿದೆ. ಈ ನಾಯಿ ಪ್ರತಿನಿತ್ಯ ಬೆಕ್ಕಿನಮರಿಗೆ ಹಾಲು ನೀಡುತ್ತಿದೆ. ಈ ನಾಯಿ ಬೆಕ್ಕಿನ ಮರಿಗಳಿಗೆ ಪ್ರತಿದಿನ ಹಾಲನ್ನು ಕುಡಿಸುತ್ತದೆ. ತಾಯಿಯ ಮಮತೆಯನ್ನು ಬಯಸಿ ಬರುವ ಬೆಕ್ಕಿನ ಮರಿಗೆ…